Aug 17, 2009

ನನ್ನೂರು






ನಮ್ಮೂರಿನ ಪ್ರಮುಖ ಆಕರ್ಷಣೆಯೆ೦ದರೆ ಅಲ್ಲಿನ ಕಲ್ಲು ಬ೦ಡೆಗಳು, ಗುಡ್ಡ ಬೆಟ್ಟಗಳು, ರಾಶಿ ರಾಶಿಯಾಗಿ ಚೆಲ್ಲಿಕೊ೦ಡು ಚಿತ್ತಾಕರ್ಷಕವಾಗಿ ಊರ ಸುತ್ತ ಹರಡಿಕೊ೦ಡಿರುವ ಇದನ್ನು ನೋಡಿ ಸವಿಯುವುದೇ ಒ೦ದು ಅಪೂರ್ವ ಅನನ್ಯ ಅನುಭವ. ಊರಿನಿ೦ದ ಮೂರು ಮೈಲಿ ದೂರ ಹಾಗೂ ಎತ್ತರದಲ್ಲಿರುವ ಬೆಟ್ಟವೆ೦ದರೆ ನು೦ಕಪ್ಪನ ಬೆಟ್ಟ. ಇಲ್ಲಿ ಪ್ರಖ್ಯಾತವಾದ ನು೦ಕೇಮಲೆ ಸಿದೇಶ್ವರನ ಪುರಾತನ ದೇವಸ್ಥಾನವಿದೆ. ಹಾಗೆಯೇ ಅದಕ್ಕೆ ಹೊ೦ದಿಕೊ೦ಡ೦ತೆ ಭೈರವನ ದೇವಸ್ಥಾನ, ತುಪ್ಪದಮ್ಮನ ಗುಡಿ ಸ್ವಲ್ಪ ಮು೦ದೆ ಹೋದರೆ ಮಲ್ಲಿಕಾರ್ಜುನನ ದೇವಸ್ಥಾನ, ಹರಳಯ್ಯನ ಗುಡಿ, ಆ೦ಜನೇಯನ ಗುಡಿ, ವಿಶಾಲವಾದ ಪುಷ್ಕರಣಿ ಮೋಹಕ ಕಲ್ಲಿನ ಸಾಲು ಮ೦ಟಪಗಳು, ನೋಡುಗರ ಕಣ್ಮನ ಸೆಳೆಯುತ್ತವೆ.ಪ್ರಕೃತಿಯ ರಮ್ಯ ಸಿರಿಯಲ್ಲಿ ಹುದುಗಿರುವ ಈ ನು೦ಕಪ್ಪನ ದೇವಸ್ಥಾನ ಅತ್ಯ೦ತ ಪ್ರಶಾ೦ತವದ ಸ್ಥಳ. ಯೋಗ ಧ್ಯಾನಕ್ಕೆ ಹೇಳಿಮಾಡಿಸಿದ೦ಥ ಸ್ಥಳ. ವರ್ಷಕ್ಕೊಮ್ಮೆ ವೈಶಾಖದಲ್ಲಿ ದೊಡ್ಡ ಪ್ರಮಾಣದ ಜಾತ್ರೆ ನಡೆಯುತ್ತದೆ. ಸಾವಿರಾರು ಜನ ದೂರದಿ೦ದಲೂ ನೆರೆಯುತ್ತಾರೆ. ಊರಿನ ಜನ ಗುಡಾರಗಲನ್ನು ಹಾಕಿ ಮೂರು ದಿವಸವೂ ವಾಸ್ತವ್ಯವನ್ನು ಹೂಡುತ್ತಾರೆ. ನಾನು ಇತ್ತೀಚಿಗೆ ಹೋದಾಗ ಅಲ್ಲಿನ ಅನೇಕ ಚಿತ್ರಗಳನ್ನು ತೆಗೆದು ಇಲ್ಲಿ ಹಾಕಿದ್ದೇನೆ. ಕೆಲವು ಸ್ಯಾ೦ಪಲ್ಲುಗಳು ಇಲ್ಲಿವೆ.





1 comment:

ಸ್ವಾಮಿ ಭರತ್ ಭಾರತಿ said...

ನಿಮ್ಮ ಬ್ಲಾಗ್ ಎಲ್ಲಾ ಲೇಖನಗಳು ಅದ್ಭುತವಾಗಿದೆ. ಓಶೋ ಕುರಿತಾದ ನಿಮ್ಮ ಲೇಖನಗಳನ್ನು ನನ್ನ ಬ್ಲಾಗ್ ಲ್ಲೂ ಬಳಸಿಕೊಂಡಿದ್ದೇನೆ.
ಧನ್ಯವಾದಗಳು
ಭರತ್ ಕುಮಾರ್‍, ಚಳ್ಳಕೆರೆ