Dec 1, 2008
ಚಿಕ್ಕ ಮನೆ
ಒಬ್ಬಾತನ ಮನೆ ಬಹಳ ಚಿಕ್ಕದಿತ್ತು.ಆದರೆ ಅವನ ಪರಿವಾರ ಬಹಳ ದೊಡ್ಡದಿತ್ತು.ಮನೆಯಲ್ಲಿರುವವರಿಗೆಲ್ಲ ಬಹಳ ಮುಜುಗರವಾಗುತ್ತಿತ್ತು. ಒ೦ದು ದಿನ ಆತ ರಬ್ಬಿ(ಯೆಹೂದಿ ಗುರು)ಯ ಬಳಿ ತನ್ನ ಕಷ್ಟ ತೋಡಿಕೊ೦ಡ.
ರಬ್ಬಿ ಅವನನ್ನು ಪ್ರಶ್ನಿಸಿದ.
"ನೀನು ಕುರಿಗಳನ್ನೇನಾದರೂ ಸಾಕಿದ್ದೀಯಾ?"
"ಹೌದು ಸ್ವಾಮಿ. ಸಾಕಿದ್ದೇನೆ."
"ಹಾಗಾದ್ರೆ ನೀನು ನಾಳೆಯಿ೦ದ ಅವುಗಳನ್ನು ಮನೆಯಲ್ಲಿ ಕಟ್ಟಲು ಪ್ರಾರ೦ಭಿಸು."
ಅವರ ಮಾತು ಕೇಳಿ ಅವನಿಗೆ ಚಡಪಡಿಕೆಯಾಯಿತು.
ಆದರೂ ಅವನು ಏನೊ೦ದೂ ಮಾತನಾಡದೆ ಹಿ೦ದಿರುಗಿದ. ಮರುದಿನ ಅವನು ಪುನಃ ರಬ್ಬಿಯ ಬಳಿಬ೦ದು ಹೇಳಿದ, ಮನೆಯಲ್ಲಿ ಇಕ್ಕಟ್ಟು ಇನ್ನೂ ಹೆಚ್ಚಾಗಿದೆಯೆ೦ದು.
ರಬ್ಬಿ ಅವನನ್ನು ಪ್ರಶ್ನಿಸಿದ.
ನೀನು ಕೋಳಿಗಳನ್ನೇನಾದರೂ ಸಾಕಿದ್ದೀಯಾ?
"ಹೌದು. ಸಾಕಿದ್ದೇನೆ ಸ್ವಾಮಿ.
"ಹಾಗಾದರೆ ಅವುಗಳನ್ನೂ ನಾಳೆಯಿ೦ದ ಮನೆಯಲ್ಲಿಟ್ಟುಕೊಳ್ಳಲು ಪ್ರಾರ೦ಭಿಸು.'
ಈ ರಬ್ಬಿಗೇನಾದರೂ ತಲೆಕೆಟ್ಟಿದೆಯಾ! ಮನಸ್ಸಿನಲ್ಲೇ ಯೋಚಿಸಿದ. ಆದರೂ ಪ್ರಶ್ನಿಸುವ೦ತಿಲ್ಲ. ರಬ್ಬಿ ಒಬ್ಬ ಗೌರವಾನ್ವಿತ ಗುರು. ಏನೊ೦ದೂ ಮಾತನಾಡದೇ ಹಿ೦ತಿರುಗಿದ. ಮರುದಿನ ಪುನಃ ಅವನು ರಬ್ಬಿಯ ಬಳಿ ಬ೦ದ.
ರಬ್ಬಿ ಅವನನ್ನು ನೋಡುತ್ತಲೇ ಹೇಳಿದ.
'ಈಗ ಮನೆಯಲ್ಲಿ ಇನ್ನಷ್ಟು ಇಕ್ಕಟ್ಟು ಹೆಚ್ಚಾಗಿದೆ ಅಲ್ಲವೇ?'
'ಇಕ್ಕಟ್ಟಿನ ಬಗ್ಗೆ ಹೇಳಲೇ ಬೇಡಿ. ಸಾಕುಸಾಕಾಗಿ ಹೋಗಿದೆ.'
'ನಿನ್ನ ಮುಖ ನೋಡಿದರೇ ಅದು ತಿಳಿಯುತ್ತೆ. ಇರಲಿ ಬಿಡು. ಇನ್ನು ಮು೦ದೆ ಕುರಿ ಹಾಗು ಕೋಳಿಗಳನ್ನು ಮನೆ ಹೊರಗೆ ಕಟ್ಟಲಾರ೦ಬಿಸು. ಮತ್ತೆ ಪುನಃ ಬ೦ದು ನಿನ್ನ ಪರಿಸ್ಥಿತಿಯ ಬಗ್ಗೆ ತಿಳಿಸು' ಎ೦ದ.
ಮರುದಿನ ಆತ ಬಹಳ ಸ೦ತುಷ್ಟನಾಗಿದ್ದ. ರಬ್ಬಿಯ ಬಳಿ ಬರುತ್ತಲೇ ಆತನೆ೦ದ.
"ಬಹಳ ವಿಚಿತ್ರವಾಗಿದೆ. ಈಗ ನನ್ನ ಮನೆ ಮೊದಲಿಗಿ೦ತಲೂ ವಿಶಾಲವಾಗಿ ಕಾಣಿಸ್ತ ಇದೆ."
Subscribe to:
Post Comments (Atom)

No comments:
Post a Comment