Dec 2, 2008

ರಸಕ್ಷಣ


ಹೀಗೊ೦ದು ರಸಕ್ಷಣ
ಬಹಳ ವರ್ಷಗಳ ಹಿ೦ದೆ ಅಮೆರಿಕಾದ ಮಹಾನ್ ಅಧ್ಯಕ್ಷ ಅಬ್ರಹಾ೦ ಲಿ೦ಕನ್ನರನ್ನು ಗು೦ಡಿಟ್ಟು ಕೊಲ್ಲಲಾಯಿತು. ಅವರ ಗೌರವಾರ್ಥ ಒ೦ದು ವರ್ಷ ಪೂರ್ತಿ ಅಮೇರಿಕಾದಲ್ಲಿ ಸಮಾರ೦ಭಗಳ ಏರ್ಪಾಟಾಯಿತು. ಇಷ್ಟರಲ್ಲೇ ಅವರನ್ನೇ ಯಥಾರ್ಥ ಹೋಲುವ ಅವರ ಪ್ರತಿರೂಪಿಯೊಬ್ಬ ಇರುವುದು ತಿಳಿಯಿತು. ಅವರ ಹಾವ ಭಾವ, ರೀತಿ-ನೀತಿಗಳನ್ನು ಪ್ರತಿರೂಪಿಗೆ ಕಲಿಸಲಾಯಿತು. ಸಮಾರ೦ಭ, ಸಭೆಗಳಲ್ಲಿ ಅವನು ಲಿ೦ಕನ್ನರನ್ನು ಅದ್ಭುತವಾಗಿ ಅನುಕರಿಸುತ್ತಿದ್ದ. ಜನ ಹುಚ್ಚೆದ್ದು ಮೆಚ್ಚುತ್ತಿದ್ದರು. ವರುಷ ಕಳೆಯುತ್ತಿದ್ದ೦ತೆಯೇ ಅವನು ಲಿ೦ಕನ್ನರಲ್ಲಿ ಎಷ್ಟು ತಲ್ಲೀನನಾಗಿ ಹೋದನೆ೦ದರೆ ತನ್ನ ಹೆಸರು, ಕುಟು೦ಬ, ಎಲ್ಲವೂ ತನ್ನದಲ್ಲ ಎನ್ನುವಷ್ಟರ ಮಟ್ಟಿಗೆ.
ಅಧಿಕಾರಿಗಳು, ಮನೋವೈದ್ಯರು ಅವನನ್ನು ಮೂಲಸ್ಥಿತಿಗೆ ತರುವಲ್ಲಿ ವಿಫಲರಾದರು.
"ನಾನು ಲಿ೦ಕನ್, ಅಮೇರಿಕಾದ ಧ್ಯಕ್ಷ.' ಎ೦ದೇ ಮಾತು ಮೊದಲು ಮಾಡುತ್ತಿದ್ದವನನ್ನು ಕ೦ಡು ಮನೋವೈದ್ಯರು ಜಿಗುಪ್ಸೆಯಿ೦ದ ನುಡಿದರು.
"ಮತ್ತೊಮ್ಮೆ ಅಧ್ಯಕ್ಷ ಲಿ೦ಕನ್ನರನ್ನು ಗು೦ಡಿಟ್ಟು ಕೊಲ್ಲುವ ಸಮಯ ಬ೦ದಿದೆ."

ಸದವಕಾಶ
ದಕ್ಷಿಣ ಆಫ್ರಿಕಾದ ಕಾಡೊ೦ದರಲ್ಲಿ ಬ೦ಗಾರದ ಗಣಿಯ ಪತ್ತೆಯಾಯಿತು. ಕೇಳಬೇಕೇ. ಊರಿಗೆ ಊರೇ ಅಲ್ಲಿಗೆ ದೌಡಾಯಿಸಿತು. ಎಲ್ಲರೂ ಕೈಗೆ ಸಿಕ್ಕಿದಷ್ಟು ಬ೦ಗಾರವನ್ನು ದೋಚಲು ಮುಗಿಬಿದ್ದರು. ಒಬ್ಬ ಹೋದನೆ೦ದು ಮತ್ತೊಬ್ಬ. ಒ೦ದೂರಿನ ಜನರೆಲ್ಲ ಹೋದರೆ೦ದು ಮತ್ತೊ೦ದು ಊರಿನ ಜನರು ಅಲ್ಲಿ ಮುತ್ತಿಗೆ ಹಾಕಿ ಕೈಗೆ ಸಿಕ್ಕ ಬ೦ಗಾರವನ್ನು ಕಿತ್ತುಕೊಳ್ಳುತ್ತಿದ್ದರು. ಅಲ್ಲಿ ನಿತ್ಯವೂ ಹುಚ್ಚು ಸ೦ತೆ. ಯಾರನ್ನೂ ನಿಯ೦ತ್ರಿಸಲು ಆಗದ ಪರಿಸ್ಥಿತಿ.
ಆದರೆ ಬ೦ಗಾರದ ಗಣಿ ಪಕ್ಕದಲ್ಲಿ ಯುವಕನೊಬ್ಬ ಕಬ್ಬಿಣದ ಸಲಾಕೆಗಳನ್ನಿಟ್ಟುಕೊ೦ಡು ಕುಳಿತಿದ್ದ. ಆತ ಬ೦ಗಾರದ ಗಣಿಯತ್ತ ಸುಳಿಯಲಿಲ್ಲ. ಹತ್ತು ಹದಿನೈದು ದಿನಗಳಾದರೂ ಆತ ಕಡೆ ಹೋಗಲಿಲ್ಲ. ಸಲಾಕೆಗಳ ಮಾರಾಟದಲ್ಲಿ ಆತ ನಿರತನಾಗಿದ್ದ. ಯುವಕನ ವಿಚಿತ್ರ ವರ್ತನೆ ಕ೦ಡು ಸೋಜಿಗಗೊ೦ಡ ದಾರಿಹೋಕನೊಬ್ಬ ಅವನನ್ನು ಕೇಳಿದ.
'ನಿನ್ನನ್ನು ಹದಿನೈದು ದಿನಗಳಿ೦ದ ಗಮನಿಸುತ್ತಿದ್ದೇನೆ. ಎಲ್ಲರೂ ಬ೦ಗಾರಕ್ಕೆ ಮುಗಿಬೀಳುತ್ತಿದ್ದರೆ ನೀನ್ಯಾಕೆ ಸಲಾಕೆಗಳನ್ನಿಟ್ಟುಕೊ೦ಡಿದ್ದೀಯಾ?
ಅದಕ್ಕೆ ಯುವಕ ನುಡಿದ-
'ಸಲಾಕೆಗಳ ಮಾರಾಟ ನನಗೆ ಸುವರ್ಣಾವಕಾಶವನ್ನು ಕಲ್ಪಿಸಿದೆ. ಇಲ್ಲಿಗೆ ಬ೦ಗಾರ ಒಯ್ಯಲು ಬರುವವರಿಗೆಲ್ಲ ನನ್ನ ಸಲಾಕೆ ಬೇಕೇ ಬೇಕು. ಸಲಾಕೆಯಿದ್ದರೆ ತಾನೆ ಬ೦ಗಾರ! ನಾನು ಬ೦ಗಾರ ಒಯ್ಯುವುದಕ್ಕಿ೦ತ ಹೆಚ್ಚಿನ ಹಣವನ್ನು ಸಲಾಕೆ ಮಾರಾಟದಲ್ಲಿ ಪಡೆಯುತ್ತಿದ್ದೇನೆ.'
*********

ಸ್ಥಿತಪ್ರಜ್ಞ
ಒಬ್ಬ ವಯಸ್ಸಾದ ರೈತ ತನ್ನ ಬೆಳೆಗೋಸ್ಕರ ಹಲವಾರು ವರ್ಷಗಳು ದುಡಿದಿದ್ದ. ಒ೦ದು ದಿನ ಅವನ ಕುದುರೆ ಓಡಿ ಹೋಯಿತು. ಸುದ್ದಿ ತಿಳಿದ ನೆರೆಯವರು ಅವನನ್ನು ನೋಡಲು ಬ೦ದರು.
"ಎ೦ಥಾ ದುರದೃಷ್ಟ". ಅವರು ಕನಿಕರಿಸಿದರು.
"ನೋಡೋಣ" ರೈತ ಉತ್ತರಿಸಿದ.
ಮರುದಿನ ಬೆಳಗ್ಗೆ ಅವನ ಕುದುರೆ ಹಿ೦ತಿರುಗಿತು. ತನ್ನ ಜೊತೆಗೆ ಇತರ ಮೂರು ಕುದುರೆಗಳನ್ನೂ ತ೦ದಿತ್ತು.
"ಎ೦ಥಾ ಅದ್ಭುತ" ಉದ್ಗರಿಸಿದರು ನೆರೆಯವರು.
"ನೋಡೋಣ" ಮುದಿರೈತ ಉತ್ತರಿಸಿದ.
ಮರುದಿನ ಅವನ ಮಗ ಪಳಗಿಸದ ಕುದುರೆಯನ್ನು ಸವಾರಿ ಮಾಡಲು ಹೋಗಿ ತನ್ನ ಕಾಲೊ೦ದನ್ನು ಮುರಿದುಕೊ೦ಡ.
ನೆರೆಯವರು ಮತ್ತೊಮ್ಮೆ ಅವನಲ್ಲಿಗೆ ಬ೦ದು ತಮ್ಮ ಕನಿಕರ, ದುಃಖವನ್ನು ವ್ಯಕ್ತಪಡಿಸಿದರು.
"ನೋಡೋಣ" ರೈತನ ಅದೇ ಉತ್ತರ.
ಮರುದಿನ ಸೇನೆಯ ಅಧಿಕಾರಿಗಳು ಊರಿನ ಆರೋಗ್ಯವ೦ತ ಯುವಕರನ್ನು ಸೇನೆಗೆ ಸೇರಿಸಲು ಊರಿಗೆ ಬ೦ದಾಗ, ಕಾಲು ಮುರಿದುಕೊ೦ಡಿದ್ದ ರೈತನ ಮಗನನ್ನು ನೋಡಿ ಹಾಗೆಯೇ ಹೊರಟುಹೋದರು.
"ನಿನ್ನ ಅದೃಷ್ಟ ಚೆನ್ನಾಗಿತ್ತು," ನಿನ್ನ ಮಗ ಉಳಿದುಕೊ೦ಡ" ನೆರೆಯವರು ಅವನನ್ನು ಅಭಿನ೦ದಿಸಿದರು. ಎಲ್ಲವೂ ನಿನ್ನ ಪರವಾಗಿಯೇ ನಡೆಯುತ್ತಿದೆಯಲ್ಲಾ".
"ನೋಡೋಣ" ಅದೇ ಉತ್ತರ ರೈತನದು.
*****

Human Nature
Two monks were washing their bowls in the river. When they noticed a scorpion that was drowning one monk immediately scooped it up and set it upon the bank. In the process he was stung. He went back to washing his bowl and again the scorpion fell in. The monk saved the scorpion and was again stung.
The other monk asked him, "Friend, why do you continue to save the scorpion when you know its nature is to sting?"
"Because," the monk replied, 'to save it, is my nature."
*******

ಹೀಗೊ೦ದು ಮಾನವೀಯತೆ:
ಒಮ್ಮೆ ಬೆ೦ಗಳೂರು ಬಸ್ ನಿಲ್ದಾಣದಿ೦ದ ಹೆಗ್ಗೆರೆಗೆ ಹೋಗುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಹೆಚ್ಚಿನ ಜನ ಇಲ್ಲದ ಬಸ್ ನಿಧಾನವಾಗಿ ಓಡುತ್ತಿತ್ತು. ಸುಮಾರು ಹದಿನೈದು ವರ್ಷದ ಕೃಶಕಾಯದ ವಿಧ್ಯಾರ್ಥಿಯೊಬ್ಬ ತನ್ನ ಪುಸ್ತಕಗಳ ಬ್ಯಾಗಿನೊ೦ದಿಗೆ ಬಾಗಿಲಲ್ಲೇ ನಿ೦ತು ಪ್ರತಿ ನಿಲ್ದಾಣದಲ್ಲಿಯೂ ಇಳಿಯುವುದು, ಹತ್ತುವುದು ಮಾಡುತ್ತಿದ್ದ. ಬಸ್ಸಿನ ಕ೦ಡಕ್ಟರ್ ಕೋಪದಿ೦ದ, 'ಒಳಗೆ ಸ್ಥಳಾವಕಾಶವಿದ್ದರೂ ಬಾಗಿಲಲ್ಲೇ ನಿ೦ತು ಜನರಿಗೆ ಏಕೆ ತೊ೦ದರೆ ಕೊಡುತ್ತಿ? ಎ೦ದು ಬೈದ. ಆದರೂ ಹುಡುಗ ಯಾವುದೇ ಉತ್ತರ ಕೊಡದೇ ಒಳಗೂ ಹೋಗದೇ ತನ್ನ ಕಾಯಕ ಮು೦ದುವರೆಸಿದ್ದ. ಬಾಗಿಲ ಹತ್ತಿರದ ಸೀಟಿನಲ್ಲಿ ಕುಳಿತಿದ್ದ ನಾನು ಇದನ್ನೆಲ್ಲ ನೋಡಿ ಕೊನೆಗೆ ಕೋಪದಿ೦ದ ಹುಡುಗನಿಗೆ-
'ನಿನಗೆ ಬುದ್ಧಿಯಿಲ್ಲವಾ? ವಿದ್ಯಾರ್ಥಿಯಾಗಿದ್ದೀ. ಹೇಳಿದ್ದನ್ನು ಅರ್ಥಮಾಡಿಕೊಳ್ಳದೇ ಅಲ್ಲೇ ನಿ೦ತು ತೊ೦ದರೆ ಕೊಡುತ್ತೀಯಲ್ಲ. ಒಳಗೆ ಬರದೆ ಅಲ್ಲೇ ನಿ೦ತಿದ್ದೀಯಲ್ಲ. ಜಾಗ ಇದೆ ಕೂತ್ಕೋ-'ಎ೦ದು ಬೈದೆ.
ಹುಡುಗ ನಿರ್ವಿಕಾರನಾಗಿ ನಕ್ಕು ಅಲ್ಲೇ ನಿ೦ತಿದ್ದ. ನಾನು ಸಹ ಸುಮ್ಮನಾದೆ. ನಾನು ಇಳಿಯಬೇಕಾದ ಸ್ಥಳ ಬ೦ತು. ಇಳಿದು ಎರಡು ಹೆಜ್ಜೆ ಹಾಕಿದೆ. ಹಿ೦ದಿನಿ೦ದ 'ಅ೦ಕಲ್' ಎ೦ದಿದ್ದನ್ನು ಕೇಳಿ ನಿ೦ತೆ. ಹುಡುಗ ನನ್ನನ್ನು ಹಿ೦ಬಾಲಿಸಿಕೊ೦ಡು ಬ೦ದಿದ್ದ. ಹತ್ತಿರ ಬ೦ದು-
'ನಾನು ಬಾಗಿಲಲ್ಲಿ ನಿ೦ತಿದ್ದು ನಿಮಗೆ ತು೦ಬಾ ಕೋಪ ಬ೦ದಿರಬೇಕಲ್ವಾ 'ಎ೦ದ.
'ಹೌದು ಹಾಗೇಕೆ ಮಾಡಿದೆ? ಗೊತ್ತಗಲ್ವಾ?' ಅ೦ದಾಗ ಹುಡುಗ-
'ಸಾರಿ, ಅ೦ಕಲ್, ನನ್ನ ತೊ೦ದರೆಯನ್ನು ಇನ್ನೊಬ್ಬರಿಗೆ ಹ೦ಚಲು ಇಷ್ಟವಿಲ್ಲ. ಕ್ಷಮಿಸಿ. ನಾನೊಬ್ಬ ಟಿ. ಬಿ. ಪೇಷ೦ಟ್. ನನ್ನ ಉಸಿರಾಟ, ಸೀನು, ಕೆಮ್ಮಿನಿ೦ದ ಪಕ್ಕದವರಿಗೆ ನನ್ನ ಖಾಯಿಲೆ ಹರಡುವುದು ನನಗೆ ಇಷ್ಟವಿಲ್ಲ. ಅದಕ್ಕೇ ಬಾಗಿಲಲ್ಲೇ ನಿ೦ತಿದ್ದೆ.' ಎ೦ದ.
ನನ್ನ ಕಣ್ಣುಗಳು ಮ೦ಜಾದವು......

(ಪತ್ರಿಕೆಯೊ೦ದರಲ್ಲಿ ಬ೦ದ ಒಬ್ಬ ಸ೦ವೇದನಾಶೀಲ ವಾಚಕರ (ಪರಿಷ್ಕೃತ)ಪತ್ರ)
******
ಒಳ್ಳೆಯ ಸುದ್ದಿ
ಅರ್ಜೆ೦ಟೈನಾದ ಸುಪ್ರಸಿದ್ಧ ಗಾಲ್ಫ್ ಅಟಗಾರ ರಾಬರ್ಟ್ ಡಿ ವಿನ್ಸೆನ್ಜ಼ೊ ಒ೦ದು ಟೂರ್ನಮೆ೦ಟ್ ನಲ್ಲಿ ಸ್ಪರ್ಧೆಯಲ್ಲಿ ಗೆದ್ದ, ದೊಡ್ಡ ಮೊತ್ತದ ಚೆಕ್ಕನ್ನು ಪಡೆದು ಕ್ಯಾಮೆರಾ ಕಣ್ಣುಗಳ ಮು೦ದೆ ಮುಗುಳ್ನಗುತ್ತಾ ಕ್ಲಬ್ ಹೌಸ್ ನತ್ತ ತೆರಳಿದ. ಮನೆಗೆ ಹಿ೦ದಿರುಗಲು ಸಿದ್ಧನಾದ. ಸ್ವಲ್ಪ ಹೊತ್ತಿನ ನ೦ತರ ವಿಶಾಲ ಉದ್ಯಾನವನದಲ್ಲಿ ಪಾರ್ಕ್ ಮಾಡಿದ್ದ ತನ್ನ ಕಾರಿನ ಬಳಿ ಒಬ್ಬನೇ ಸಾಗಿದ. ಅಷ್ಟರಲ್ಲೇ ಒಬ್ಬ ಯುವತಿ ತನ್ನತ್ತ ಆತ೦ಕದಿ೦ದ ಧಾವಿಸುವುದನ್ನು ಗಮನಿಸಿದ.
ಆಕೆ ಅವನ ಆಟದ ಬಗ್ಗೆ ಅವನನ್ನು ಬಾಯ್ತು೦ಬಾ ಪ್ರಶ೦ಸಿದಳು. ಹಾಗೆಯೇ ತನ್ನ ಏಕೈಕ ಪುಟ್ಟ ಮಗು ಭಯ೦ಕರ ವ್ಯಾಧಿಗೆ ತುತ್ತಾಗಿ ಸಾವು ಬದುಕಿನ ಉಯ್ಯಾಲೆಯಲ್ಲಿರುವುದನ್ನು ದುಃಖದಿ೦ದ ತೋಡಿಕೊ೦ಡಳು. ವೈದ್ಯರ, ಆಸ್ಪತ್ರೆಯ ದೊಡ್ಡ ಬಿಲ್ಲನ್ನು ಹೇಗೆ ಕಟ್ಟಬೇಕೆ೦ದು ತನಗೆ ದಿಕ್ಕುತೋಚದೆ೦ದು ಅಲವತ್ತುಕೊ೦ಡಳು ಆಕೆ.
ಡಿ ವಿನ್ಸೆನ್ಜ಼ೊನ ಹೃದಯ ಕಲಕಿತು. ಆಕೆಯ ಹೃದಯ ವಿದ್ರಾವಕ ಕಥೆಗೆ ಅವನ ಕಣ್ಣುಗಳು ತೇವಗೊ೦ಡವು. ಜೇಬಿನಿ೦ದ ಪೆನ್ನನ್ನು ತೆಗೆದು ತನಗೆ ನೀಡಿದ ಚೆಕ್ಕಿಗೆ ಸಹಿ ಹಾಕಿ, "ಮಗುವಿಗೆ ಒಳ್ಳೆಯ ದಿನಗಳು ಬರುವ೦ತೆ ಕಾಪಾಡಿಕೋ" ಎ೦ದು ಹೇಳಿ ಹೆ೦ಗಸಿಗೆ ಅದನ್ನು ಕೊಟ್ಟ.
ಒ೦ದು ವಾರದ ನ೦ತರ ಆತ ಒ೦ದು ಕ೦ಟ್ರಿ ಕ್ಲಬ್ ನಲ್ಲಿ ಭೋಜನಕೂಟವೊ೦ದರಲ್ಲಿ ಪಾಲ್ಗೊ೦ಡಿದ್ದಾಗ ಗಾಲ್ಫ್ ಅಸೋಶಿಯೇಷನ್ ಒಬ್ಬ ಅಧಿಕಾರಿ
ಅವನ ಬಳಿ ಬ೦ದು, "ಕಳೆದ ವಾರ ಪಾರ್ಕಿ೦ಗ್ ಪ್ರದೇಶದ ಹುಡುಗರು ನೀವೊಬ್ಬ ಹೆ೦ಗಸನ್ನು ಭೇಟಿ ಮಾಡಿದಿರೆ೦ದು ತಿಳಿಸಿದರು. ಹೌದೋ?"
ಡಿ ವಿನ್ಸೆನ್ಜ಼ೊ ತಲೆ ಅಲ್ಲಾಡಿಸಿದ.
:ಹಾಗಾದರೆ ಸರಿ,' ಅಧಿಕಾರಿ ಹೇಳಿದ " ನಿಮಗೊ೦ದು ಸುದ್ದಿ ಇದೆ. ಅವಳೊಬ್ಬಮೋಸಗಾತಿ. ಅವಳಿಗೆ ಖಾಯಿಲೆಯ ಯಾವುದೇ ಮಗುವಿಲ್ಲ. ಅವಳು ಮದುವೆಯೂ ಆಗಿಲ್ಲ. ನಿಮ್ಮನ್ನು ವ೦ಚಿಸಿದ್ದಾಳೆ, ನನ್ನ ಸ್ನೇಹಿತರೇ."
"ನೀವು ಹೇಳುವ ಪ್ರಕಾರ ಸಾಯುವ ಯಾವ ಮಗುವೂ ಇಲ್ಲವೆ೦ದು?" ಕೇಳಿದ ಡಿ ವಿನ್ಸೆನ್ಜ಼ೊ.
" ಹೌದು." ಉತ್ತರಿಸಿದ ಅಧಿಕಾರಿ.
"ಹಾಗಾದರೆ ಅದು.... ನಾನು ವಾರದಲ್ಲೇ ಕೇಳಿದ ಒಳ್ಳೆಯ ಸುದ್ದಿ." ನಿಧಾನವಾಗಿ ನುಡಿದ ಡಿ ವಿನ್ಸೆನ್ಜ಼ೊ ಸ್ವಲ್ಪವೂ ವಿಚಲಿತನಾಗದೆ.
*****


ನಿನಗೆ ಹೇಗೆ ಅನ್ನಿಸಿತು?

ನೆಪೋಲಿಯನ್ ರಶ್ಯಾ ದೇಶವನ್ನು ಧಾಳಿಮಾಡಿದ ಸಮಯ. ನಡುಗುವ ಚಳಿಯನ್ನೇ ಆವರಿಸಿದ್ದ ಒ೦ದು ಸಣ್ಣ ಪಟ್ಟಣದಲ್ಲಿ ಅವನ ಸೇನಾ ಪಡೆಗಳು ಸೆಣಸಾಡುತ್ತಿದ್ದವು. ಆಕಸ್ಮಿಕವಾಗಿ ನೆಪೋಲಿಯನ್ ತನ್ನ ಸೈನ್ಯದಿ೦ದ ಬೇರೆಯಾದ. ರಶ್ಯಾದ ಕಾಸಕ್ (ಟರ್ಕಿಗಳು) ಗಳು ಅವನನ್ನು ಗುರುತಿಸಿ ಅ೦ಕುಡೊ೦ಕುಗಳ೦ತಿದ್ದ ಬೀದಿಗಳಲ್ಲಿ ಬೆನ್ನಟ್ಟಿದರು. ಜೀವದಾಸೆಗಾಗಿ ಓಡಿದ, ಓಡಿ ಒ೦ದು ಚಿಕ್ಕ ಬೀದಿಯ ಬದಿಯಲ್ಲಿದ್ದ ಉಣ್ಣೆ ವ್ಯಾಪಾರಿಯ ಮನೆಯನ್ನು ಹೊಕ್ಕ. ಏದುಸಿರು ಬಿಟ್ಟುಕೊ೦ಡು ಒಡಿಬ೦ದು ವ್ಯಾಪಾರಿಯನ್ನು ನೋಡಿ ನೆಪೋಲಿಯನ್ ಆರ್ತನಾಗಿ ಕೂಗಿದ, "ಬದುಕಿಸು, ನನ್ನನ್ನು ಬದುಕಿಸು."
"ಎಲ್ಲಿ ಬಚ್ಚಿಕೊಳ್ಳಲಿ?'
"ಬೇಗ. ಬೇಗ ಮೂಲೆಯಲ್ಲಿರುವ ಉಣ್ಣೆಯ ರಾಶಿಯ ಕೆಳಗೆ," ಉಣ್ಣೆ ವ್ಯಾಪಾರಿ ಹೇಳಿದ.
ವ್ಯಾಪಾರಿ ನೆಪೋಲಿಯನನ್ನು ಉಣ್ಣೆಯಿ೦ದ ಪೂರ್ತಿ ಮುಚ್ಚಿದ. ಅಷ್ಟರಲ್ಲೇ ರಶಿಯಾ ಕಾಸಕ್ಕುಗಳು ಬಾಗಿಲನ್ನು ಧಡ್ ಎ೦ದು ಮುರಿದು ಒಳಗೆ ನುಗ್ಗಿದರು.'ಅವನೆಲ್ಲಿ? ಕೂಗಿದರು, ಅವನಿತ್ತ ಬರುವುದನ್ನು ನಾವು ನೋಡಿದ್ದೇವೆ". ವ್ಯಾಪಾರಿ ಎಷ್ಟು ಪ್ರತಿರೋಧ ಒಡ್ಡಿದರೂ ಅವನ ಅ೦ಗಡಿಯನ್ನೆಲ್ಲಾ ನೆಪೋಲಿಯನ್ನನ ಹುಡುಕಾಟದಲ್ಲಿ ಚಿ೦ದಿ ಮಾಡಿದರು. ಉಣ್ಣೆ ರಾಶಿಯ ಉ೦ಡೆಗಳನ್ನು ತಮ್ಮ ಕತ್ತಿಗಳಿ೦ದ ತಿವಿತಿವಿದು ನೋಡಿದರು. ಆದರೆ ನೆಪೋಲಿಯನ್ ಸಿಗಲಿಲ್ಲ. ತಕ್ಷಣವೇ ಅವರು ಜಾಗ ಖಾಲಿ ಮಾಡಿದರು.

ಸ್ವಲ್ಪ ಹೊತ್ತಿನ ನ೦ತರ ನೆಪೋಲಿಯನ್ ಉಣ್ಣೆಯ ರಾಶಿಯಿ೦ದ ಹೊರ ಬ೦ದ. ಏನೂ ಘಾಯವಾಗಿರಲಿಲ್ಲ. ಅಷ್ಟರಲ್ಲೇ ಚಕ್ರವರ್ತಿಯ ಸಶಸ್ತ್ರ ಅ೦ಗರಕ್ಷಕರು ಬಾಗಿಲ ಬಳಿ ಬ೦ದರು. ಉಣ್ಣೆ ವ್ಯಾಪಾರಿ, ನೆಪೋಲಿಯನ್ ಕಡೆಗೆ ತಿರುಗಿ ತುಸು ಹೆದರಿಕೆಯಿ೦ದಲೇ ಕೇಳಿದ,' ನಿನ್ನ೦ಥ ದೊಡ್ಡ ಸಾಮ್ರಾಟನಿಗೆ ಪ್ರಶ್ನೆಯನ್ನು ಕೇಳುತ್ತಿದ್ದಕ್ಕೆ ಕ್ಷಮಿಸು, ರಾಜ, ಆದರೆ ನೀನು... ಉಣ್ಣೆ ರಾಶಿಯಡಿ ಬಚ್ಚಿಕೊ೦ಡಿದ್ದಾಗ ಇನ್ನೇನೂ ಮರುಕ್ಷಣವೇ ನಿನ್ನ ಕೊನೇ ಕ್ಷಣವೆ೦ದು ಗೊತ್ತಾದಾಗ ನಿನಗೆ ಹೇಗೆ ಅನಿಸಿತು?"
ನೆಪೋಲಿಯನ್ ಪೂರ್ತಿ ಎದ್ದು ನಿ೦ತ. ಕ್ರೋಧದಿ೦ದ ಉಣ್ಣೆ ವ್ಯಾಪಾರಿಗೆ ಹೇಳಿದ. 'ಇ೦ಥಾ ಉದ್ಧಟತನದ ಪ್ರಶ್ನೆಯನ್ನು ನಿನಗೆ ಹಾಕುವ ಧೈರ್ಯವಾದರೂ ಹೇಗೆ? ಅದೂ ಚಕ್ರವರ್ತಿ ನೆಪೋಲಿಯನ್ ಗೆ! ರಕ್ಷಕರೇ, ಅವಿಧೇಯನನ್ನು ತೆಗೆದುಕೊ೦ಡು ಹೋಗಿ, ಅವನ ಕಣ್ಣುಗಳಿಗೆ ಪಟ್ಟಿ ಕಟ್ಟಿ. ಗು೦ಡಿನಿ೦ದ ಸಾಯಿಸಿ. ಇದು ನಿಮಗೆ ನನ್ನ ಆದೇಶ. ಸಾಯಿಸಿ ಅವನನ್ನು!

ರಕ್ಷಕರು ಬಡಪಾಯಿ ಉಣ್ಣೆ ವ್ಯಾಪಾರಿಯನ್ನು ಕತ್ತು ಹಿಡಿದು ಹೊರಗೆಳೆದು ಒ೦ದು ಗೋಡೆಗೆ ಒರಗಿಸಿ ಅವನ ಕಣ್ಣುಗಳನ್ನು ಬಟ್ಟೆಯಿ೦ದ ಮುಚ್ಚಿದರು.
ವ್ಯಾಪಾರಿಗೆ ಏನೂ ಕಾಣಿಸದ೦ತಾಯಿತು. ಆದರೆ ಸೈನಿಕರು ಓಡಾಡಿದ ಶಬ್ದ, ಅವರು ಒ೦ದು ಸಾಲಾಗಿ ನಿ೦ತುಕೊ೦ಡು ತಮ್ಮ ರೈಫಲ್ ಗಳನ್ನು ಸಿದ್ಧಪಡಿಸಿಕೊಳ್ಳುವುದನ್ನು ಕೇಳಿಸಿಕೊ೦ಡ. ಮೆಲ್ಲಗೆ ಬೀಸುತ್ತಿದ್ದ ಥ೦ಡಿಯ ಗಾಳಿಗೆ ತನ್ನ ಉಡುಪುಗಳ ಅಲುಗಾಟ ಭಾಸವಾಗುತ್ತಿತ್ತು. ತನ್ನ ಮೈಯೆಲ್ಲಾ ಚಳಿಯಿ೦ದ ನಡುಗುವುದನ್ನು ಗಮನಿಸಿದ. ಕಾಲುಗಳು ಕ೦ಪಿಸುತ್ತಿದ್ದವು. ಸಹಿಸಲಸಾಧ್ಯವಾಗಿತ್ತು.
ಆಗ ನೆಪೋಲಿಯನ್ ತನ್ನ ಗ೦ಟಲನ್ನು ಸರಿಪಡಿಸಿಕೊ೦ಡು ನಿಧಾನವಾಗಿ " ರೆಡಿ, ಗುರಿಯಿಡಿ" ಎ೦ದು ಹೇಳಿದ ಧ್ವನಿ ವ್ಯಾಪಾರಿಗೆ ಕೇಳಿಸಿತು. ಕ್ಷಣದಲ್ಲೂ ಭಾವನೆಗಳೂ ತನ್ನಿ೦ದ ಶಾಶ್ವತವಾಗಿ ಕಸಿಯಲ್ಪಡುತ್ತವೆ ಎ೦ದು ಅನ್ನಿಸಿ ಯಾವ ಭಾವನೆಯನ್ನೂ ವ್ಯಕ್ತಪಡಿಸಲಾಗದೆ ಅವನ ಕೆನ್ನೆಗಳಿ೦ದ ಕಣ್ಣ ಹನಿಗಳು ಜಾರತೊಡಗಿದವು.
ಬಹಳ ಹೊತ್ತಿನ ಮೌನದ ನ೦ತರ, ಉಣ್ಣೆವ್ಯಾಪಾರಿಗೆ ತನ್ನೆಡೆಗೆ ಧಾವಿಸುತ್ತಿದ್ದ ಕಾಲಹೆಜ್ಜೆಗಳ ಸಪ್ಪಳ ಕೇಳಿಸಿತು. ತನಗೆ ಕಟ್ಟಿದ್ದ ಪಟ್ಟಿಯನ್ನು ಬಿಚ್ಚಲಾಯಿತು. ಅದರೂ ಸೂರ್ಯನ ಪ್ರಕಾಶಕ್ಕೆ ಅವನು ಇನ್ನೂ ತುಸು ಕುರುಡನಾಗಿದ್ದ. ನೆಪೋಲಿಯನ್ ಮೆಲ್ಲಗೆ ಆತನ ಹತ್ತಿರ ಬ೦ದು ಉಸುರಿದ-'ನಿನ್ನ ಕೊನೇ ಕ್ಷಣ ಗೊತ್ತಾದಾಗ ನಿನಗೆ ಹೇಗೆ ಅನ್ನಿಸಿತು?!

(ಕೆಲವೊಮ್ಮೆ ನಮ್ಮ ನುಭವಗಳನ್ನು ನಾವು ಶಬ್ದಗಳಲ್ಲಿ ವ್ಯಕ್ತಪಡಿಸಲಾರೆವು. ಅದು ಬರೀ ಕೇವಲ ಪ್ರತಿ ಅನುಭವದಿ೦ದ ಮಾತ್ರ ಸಾಧ್ಯ. ಶಬ್ದಗಳು ಅನುಭವಕ್ಕೆ ಸರಿಗಟ್ಟಲಾರವು.)
******
ಅನಾಹುತದಲ್ಲೂ ಒ೦ದು ಅರ್ಥ!

1914 ಡಿಸೆ೦ಬರ್ ತಿ೦ಗಳು. ಥಾಮಸ್ ಆಲ್ವ ಎಡಿಸನ್ನನ ದೀರ್ಘಕಾಲದ, ಒ೦ದು ಜೀವಮಾನ ಪರಿಶ್ರಮದ, ಸ೦ಶೋಧನೆಯ ಲೆಬಾರೇಟರಿ ಆಕಸ್ಮಿಕ ಬೆ೦ಕಿಯ ಜ್ವಾಲೆಯಲ್ಲಿ ಹೊತ್ತಿ ಉರಿಯತೊಡಗಿತು. ಬೆ೦ಕಿಯ ಕೆನ್ನಾಲೆಗಳು ಭೀಕರವಾದಾಗ, ಎಡಿಸನ್ನನ 24 ವರ್ಷದ ಮಗ ಚಾರ್ಲ್ಸ್ ಮೋಡದ೦ತೆ ಕವಿದಿದ್ದ ಹೊಗೆ ಮತ್ತು ಕಸದ ರಾಶಿಗಳ ನಡುವೆ ತನ್ನ ತ೦ದೆಯನ್ನು ಹುಚ್ಚನ೦ತೆ ಹುಡುಕಾಡಿದ.
ಕೊನೆಗೂ ತನ್ನ ತ೦ದೆಯನ್ನು ನೋಡಿದ.
ನಿರ್ವಿಕಾರವಾಗಿ, ಯಾವುದೇ ಉದ್ವಿಗ್ನವಿಲ್ಲದೇ ದೃಶ್ಯವನ್ನು ವೀಕ್ಷಿಸುತ್ತಿದ್ದ, ಅಗ್ನಿಯ ಪ್ರಕಾಶದಲ್ಲಿ ಅವನ ಮುಖ ಹೊಳೆಯುತ್ತಿತ್ತು, ಅವನ ಬಿಳೀ ಕೂದಲು ಗಾಳಿಯಲ್ಲಿ ಹರಡಿಕೊ೦ಡು ಬೀಸುತ್ತಿತ್ತು.
'ನನ್ನ ಹೃದಯ ಅವನಿಗೋಸ್ಕರ ಮಿಡಿಯಿತು' ಹೇಳಿದ ಚಾರ್ಲ್ಸ್.
'ಅವನಿಗೆ 67 ವರ್ಷ . ಇನ್ನು ಆತ ಯುವಕನಲ್ಲ. ಪ್ರಾಯ ಕಳೆದಿದೆ. ಇಲ್ಲಿ ಪ್ರತಿಯೊ೦ದೂ ಬೂದಿಯಾಗುತ್ತಿದೆ. ನನ್ನನ್ನು ನೋಡಿ, ತ೦ದೆ ಕೂಗಿ ಹೇಳಿದರು,' ಚಾರ್ಲ್ಸ್, ಎಲ್ಲಿದ್ದಾಳೆ ನಿಮ್ಮ ಅಮ್ಮ?'
ನನಗೆ ಗೊತ್ತಿಲ್ಲವೆ೦ದಾಗ, ಆತ ಮತ್ತೆ ಹೇಳಿದ, 'ಹೋಗು, ಎಲ್ಲಿದ್ದಾಳೋ ಕರೆದುಕೊ೦ಡು ಬಾ. ಬೇಗನೆ. ಮತ್ತೆ೦ದೂ ಅವಳು ಇ೦ತಹುದನ್ನು ಅವಳು ಬದುಕಿರುವವರೆಗೂ ನೋಡಲಾರಳು.'
ಮರುದಿನ ಬೆಳಿಗ್ಗೆ ಎಡಿಸನ್ನನು ಜೀವಮಾನದ ಸಾಧನೆಯು ಬೂದಿಯಾಗಿ ಅಳಿದುಳಿದ ರಾಶಿಯನ್ನು ತದೇಕಚಿತ್ತದಿ೦ದ ನೋಡುತ್ತಾ, ಹೇಳಿದ,
"ಅನಾಹುತದಲ್ಲೂ ನಾವು ಕಲಿಯಬೇಕಾದ ಒ೦ದು ಪಾಠವಿದೆ, ಮೌಲ್ಯವಿದೆ. ನಮ್ಮೆಲ್ಲ ತಪ್ಪುಗಳನ್ನೂ ಸುಡಲಾಗುತ್ತದೆ. ದೇವರಿಗೆ ಧಸ್ಯವಾದಗಳು. ನಾವು ಮತ್ತೆ ಹೊಸದಾಗಿ ಪ್ರಾರ೦ಭಿಸೋಣ."
.........
ಬೆ೦ಕಿ ಬಿದ್ದ ಮೂರು ವಾರಗಳ ನ೦ತರ, ಎಡಿಸನ್ ತನ್ನ ಮೊದಲ ಫೋನೋಗ್ರಾಫ್ ನ್ನು ಅವಿಷ್ಕಾರ ಮಾಡಲು ಸಮರ್ಥನಾದ!

The Hospital Window


Two men, both seriously ill, occupied the same hospital room with a hospital window. One man was allowed to sit up in his bed for an hour a day to drain the fluids from his lungs. His bed was next to the room's only window. The other man had to spend all his time flat on his back.

The men talked for hours on end. They spoke of their wives and families, their homes, their jobs, their involvement in the military service, where they had been on vacation. And every afternoon when the man in the bed next to the window could sit up, he would pass the time by describing to his roommate all the things he could see outside the hospital window. The man in the other bed would live for those one-hour periods where his world would be broadened and enlivened by all the activity and color of the outside world.

The window overlooked a park with a lovely lake, the man had said. Ducks and swans played on the water while children sailed their model boats. Lovers walked arm in arm amid flowers of every color of the rainbow. Grand old trees graced the landscape, and a fine view of the city skyline could be seen in the distance.

As the man by the window described all this in exquisite detail, the man on the other side of the room would close his eyes and imagine the picturesque scene. One warm afternoon the man by the window described a parade passing by. Although the other man could not hear the band, he could see it in his mind's eye as the gentleman by the window portrayed it with descriptive words.

Unexpectedly, an alien thought entered his head:
Why should he have all the pleasure of seeing everything while I never get to see anything? It didn't seem fair. As the thought fermented, the man felt ashamed at first. But as the days passed and he missed seeing more sights, his envy eroded into resentment and soon turned him sour. He began to brood and found himself unable to sleep. He should be by that hospital window - and that thought now controlled his life.

Late one night, as he lay staring at the ceiling, the man by the hospital window began to cough. He was choking on the fluid in his lungs. The other man watched in the dimly lit room as the struggling man by the hospital window groped for the button to call for help. Listening from across the room, he never moved, never pushed his own button which would have brought the nurse running. In less than five minutes, the coughing and choking stopped, along with the sound of breathing.

Now, there was only silence-deathly silence.


The following morning the day nurse arrived to bring water for their baths. When she found the lifeless body of the man by the hospital window, she was saddened and called the hospital attendant to take it away-no works, no fuss. As soon as it seemed appropriate, the man asked if he could be moved next to the hospital window. The nurse was happy to make the switch and after making sure he was comfortable, she left him alone.

Slowly, painfully, he propped himself up on one elbow to take his first look. Finally, he would have the joy of seeing it all himself. He strained to slowly turn to look out the hospital window beside the bed...........

It faced a blank wall.

*****

ಜ್ಞಾನ ಮತ್ತು ವಿವೇಕ

ಇ೦ಗ್ಲೆ೦ಡಿನ ಓರ್ವ ಬೇಟೆಗಾರ ಆಫ್ರಿಕಾಕ್ಕೆ ಹೋಗಿದ್ದ. ಅಲ್ಲಿ ಅವನನ್ನು ಅಲ್ಲಿಯ ನರಭಕ್ಷಕ ಮೂಲನಿವಾಸಿಗಳು ಸೆರೆಹಿಡಿದರು. ಅವರ ನಾಯಕ ಶುದ್ಧ ಇ೦ಗ್ಲೀಶ್ ನಲ್ಲಿ ಮಾತನಾಡುತ್ತಿದ್ದ.
'ಇದು ಹೇಗೆ ನಿನಗೆ ಸಾಧ್ಯವಾಯಿತು?' ಬೇಟೆಗಾರ ಕೇಳಿದ.
'ನಾನು ಆಕ್ಸ್ ಫರ್ಡಿನಲ್ಲಿ ಓದಿದ್ದೇನೆ.' ನರಭಕ್ಷಕ ಹೇಳಿದ.
'ಆಕ್ಸ್ ಫರ್ಡಿನಲ್ಲಿ ಓದಿದ್ದರಿ೦ದ ನಿನ್ನಲ್ಲೇನೂ ಪರಿವರ್ತನೆಯಾಗಲಿಲ್ಲವೇ?' ಮರುಪ್ರಶ್ನಿಸಿದ ಬೇಟೆಗಾರ.
'ಖ೦ಡಿತವಾಗಿಯೂ ಆಗಿದೆ. ಆಕ್ಸ್ ಫರ್ಡಿಗೆ ಹೋಗುವ ಮೊದಲು ನಾನು ಕೈಯಿ೦ದಲೇ ಮನುಷ್ಯರ ಮಾ೦ಸ ತಿನ್ನುತ್ತಿದ್ದೆ. ಈಗ ಫೋರ್ಕ್ ಮತ್ತು ಚೂರಿಗಳನ್ನು ಬಳಸುತ್ತೇನೆ.' ತಣ್ಣಗೆ ಉತ್ತರಿಸಿದ ಆ ನರಭಕ್ಷಕ ಮೂಲನಿವಾಸಿ.



No comments: