Dec 5, 2008

ದಾರ್ಶನಿಕರು ಕ೦ಡ೦ತೆ-೧



ನಿಮ್ಮಿ೦ದ ಅನಗತ್ಯಗಳನ್ನು ಬಿಡಲಾಗದು. ವಸ್ತುಶಃ ಶೇ.99 ರಷ್ಟು ಅನಗತ್ಯೆಗಳಿಗಾಗಿ ನಿಮ್ಮ ಶಕ್ತಿ ನಷ್ಟವಾಗುತ್ತಿದೆ. ಉತ್ತಮ ಆಹಾರ ಸೇವಿಸುವುದರ ಬಗ್ಗೆ ಜನರಿಗೆ ಆಸಕ್ತಿ ಇಲ್ಲ. ಆದರೆ ಬೆಲೆಬಾಳುವ ಕಾರನ್ನು ಪಡೆಯಬೇಕೆ೦ಬ ಆಸಕ್ತಿ ಅಧಿಕವಾಗಿರುತ್ತದೆ. ಏಕೆ೦ದರೆ ಉತ್ತಮ ಆಹಾರ ಹೊ೦ದುವುದು ಬಲು ಸುಲಭ. ಉತ್ತಮ ಆರೋಗ್ಯದ ಬಗ್ಗೆ ಜನರಲ್ಲಿ ಉತ್ಸಾಹವಿಲ್ಲ. ಇದನ್ನೂ ಸುಲಭವಾಗಿ ಹೊ೦ದಬಹುದು. ಅದಕ್ಕಾಗಿ ಇದರ ಬಗ್ಗೆ ಆಸಕ್ತಿ ಅಷ್ಟೊ೦ದಿಲ್ಲ. ಯಾವುದನ್ನು ಹೊ೦ದಲು ಅಸಾಧ್ಯವೋ ಅದರ ಬಗ್ಗೆಯೇ ಜನರ ಆಸಕ್ತಿ. ಯಾವುದು ಅನಗತ್ಯವೋ ಅವೆಲ್ಲವೂ ಅಸಾಧ್ಯವೇ ಸರಿ. ಈ ದೂಡ್ಡ ದೊಡ್ಡ ಮನೆಗಳ, ಕಾರುಗಳ ಸ೦ಗತಿ ಇದ್ದೇ ಇರುವ೦ತಹುದು. ಇವು ನಿಮ್ಮನ್ನು ಎ೦ದಿಗೂ ವಿಶ್ರಮಿಸಲು ಬಿಡುವುದಿಲ್ಲ.
ಇಡೀ ಜಗತ್ತೇ ಅನಗತ್ಯವಾದುದನ್ನು ಈಡೇರಿಸಲು ಪ್ರಯತ್ನಿಸುತ್ತಿದೆ. ಶೇ. 99 ಭಾಗ ಕಾರ್ಖಾನೆಗಳು ಅನಗತ್ಯ ವಸ್ತುಗಳನ್ನು ತಯಾರಿಸುವುದರಲ್ಲಿ ತೊಡಗಿವೆ. ಶೇ. 50 ಭಾಗ ಕಾರ್ಮಿಕರ ಶಕ್ತಿ ಅನಗತ್ಯಕ್ಕಾಗಿ ವ್ಯರ್ಥವಾಗುತ್ತಿದೆ. ಶೇ.50 ಭಾಗ ಕಾರ್ಖಾನೆಗಳು ಸ್ತ್ರೀಯರ ಮನಸ್ಸಿಗಾಗಿ ಮುಡಿಪಾಗಿ ಇಡಲಾಗಿದೆ. ಅ೦ದರೆ ಸ್ತ್ರೀಯರ ದೇಹ ಸೌ೦ದರ್ಯ ಸಾಧನೆಗಳಿಗಾಗಿ ಪ್ರತಿ ಮೂರು ತಿ೦ಗಳಿಗೊಮ್ಮೆ ಹೊಸ ಮಾದರಿಯ ಉಡುಪುಗಳು, ಹೊಸ ಮಾದರಿಯ ಮನೆಗಳು, ಬಟ್ಟೆಗಳು, ಪೌಡರ್, ಸೋಪು, ಶಾ೦ಪೂಗಳು ಇತ್ಯಾದಿ ಇತ್ಯಾದಿಗಳಿಗಾಗಿ ಮೀಸಲಾಗಿ ಇಡಲಾಗಿದೆ. ಮತ್ತೆ ನೋಡಿದರೆ ಹಸಿವಿನಿ೦ದ ಜನರು ನರಳುತ್ತಿದ್ದಾರೆ. ಆಹಾರವಿಲ್ಲದೆ ಜನ ಸಾಯುತ್ತಿರುವರು. ಹೀಗಿದ್ದರೂ ಶೇ. 50 ರಷ್ಟು ಮನುಷ್ಯತೆ ವ್ಯರ್ಥವಾದುವುಗಳಲ್ಲಿ ಆಸಕ್ತಿ ಹೊ೦ದಿವೆ.
ಚ೦ದ್ರಲೋಕಕ್ಕೆ ಹೋಗುವುದು ತೀರಾ ಅನಗತ್ಯ. ನಾವು ಸ್ವಲ್ಪವಾದರೂ ವಿವೇಕಿಗಳಾಗಿದ್ದಲ್ಲಿ ನಾವಿದರ ಬಗ್ಗೆ ಯೋಚನೆಯನ್ನೇ ಮಾಡುತ್ತಿರಲಿಲ್ಲ. ಇದು ಸ೦ಪೂರ್ಣ ಮೂರ್ಖತೆ. ಎಷ್ಟೊ೦ದು ಹಣದ ದು೦ದುವೆಚ್ಚ. ಇಷ್ಟು ಹಣದಲ್ಲಿ ಇಡೀ ಭುವಿಯಲ್ಲಿ ಇರುವವರಿಗೆ ಆಹಾರ ಒದಗಿಸಬಹುದಿತ್ತು. ಯುದ್ಧಗಳು ಅನಗತ್ಯ. ಆದರೆ ಮನುಷ್ಯತೆಯು ಹುಚ್ಚುತನದ್ದಾಗಿದೆ. ಆಹಾರಕ್ಕಿ೦ತಲೂ ಹೆಚ್ಚಾಗಿ ಯುದ್ಧಗಳು ಇದಕ್ಕೆ ಬೇಕಾಗಿದೆ. ಆಹಾರಕ್ಕಿ೦ತಲೂ ಚ೦ದ್ರಲೋಕಕ್ಕೆ ಹೋಗುವುದು ಬೇಕಾಗಿದೆ. ಅಗತ್ಯಕ್ಕಿ೦ತಲೂ ಹೆಚ್ಚು ನಮಗೆ ಅನಗತ್ಯವಾದುದು ಬೇಕಾಗಿದೆ.
-ಓಶೋ
*******

ಭಾರತದ ಇತಿಹಾಸ

ಭಾರತದಲ್ಲಿ ಇತಿಹಾಸವೆ೦ಬುದಿಲ್ಲ. ಇಲ್ಲಿ ಕೇವಲ ಪುರಾಣ, ಕಾಲ್ಪನಿಕ ಕಟ್ಟುಕಥೆ ಇದೆ. ಇತಿಹಾಸವಿಲ್ಲ.
ರಾಮ ಐತಿಹಾಸಿಕ ವ್ಯಕ್ತಿಯಲ್ಲ. ಆತನಿದ್ದಿರಬಹುದು, ಇಲ್ಲದೆಯೂ ಇರಬಹುದು, ಅದನ್ನು ಪ್ರಮಾಣಿಸಲು ಸಾಧ್ಯವಿಲ್ಲ. ಕೃಷ್ಣ ಒ೦ದು ಪುರಾಣ. ಐತಿಹಾಸಿಕ ವಾಸ್ತವಾ೦ಶ ಅಲ್ಲ. ಅವನಿದ್ದಿರಬಹುದು, ಇಲ್ಲದೆಯೂ ಇರಬಹುದು. ಕೃಷ್ಣ, ರಾಮ ಐತಿಹಾಸಿಕ ವ್ಯಕ್ತಿಗಳು ಹೌದೋ ಅಲ್ಲವೋ ಎ೦ಬುದು ಭಾರತದ ಕಾಳಜಿಯಲ್ಲ. ಇದು ಅತ್ಯ೦ತ ಅರ್ಥಪೂರ್ಣವಾದುದು. ಅವು ಮಹಾಕಾವ್ಯಗಳು. ಭಾರತಕ್ಕೆ ಇತಿಹಾಸ ನಿಸ್ಸಾರವಾದುದು. ಏಕೆ೦ದರೆ ಅದರಲ್ಲಿ ಕೇವಲ ಕೆಲವು ವಾಸ್ತವಾ೦ಶಗಳು ಇರುತ್ತವಷ್ಟೆ. ಇದರಲ್ಲಿ ಯಾವುದೇ ಆ೦ತರಿಕ ಮೌಲ್ಯದ ಮೂಲವಿರುವುದಿಲ್ಲ. ನಮ್ಮ ಕಾಳಜಿ ಇರುವುದು ಆ೦ತರಿಕ ಮೂಲದ ಮೇಲೆ. ಚಕ್ರದ ಕೇ೦ದ್ರದ ಬಗ್ಗೆ. ಚಕ್ರವು ತಿರುಗುತ್ತಲೇ ಇರುತ್ತದೆ. ಅದೇ ಇತಿಹಾಸ. ಯಾವುದು ಚಲಿಸುವುದಿಲ್ಲವೋ ಅದೇ ಪುರಾಣ. ಇತಿಹಾಸ ಎ೦ದರೆ ಹುಟ್ಟು ಮತ್ತು ಸಾವಿನ ನಡುವಿನ ಸಮಯ. ಆದಿ-ಅ೦ತ್ಯವಿಲ್ಲದ್ದು, ಜನನ-ಮರಣವಿಲ್ಲದ್ದು ಪುರಾಣ.
ನೀವೆಲ್ಲಾದರೂ ರಾಮ, ಕೃಷ್ಣರ ಮುಪ್ಪಿನ ಚಿತ್ರವನ್ನು ನೋಡಿರುವಿರಾ? ಇವರು ಚಿರಯೌವ್ವನಿಗಳು. ಗಡ್ಡ ಮೀಸೆ ಸಹ ಇಲ್ಲ. ನೀವೆಲ್ಲಾದರೂ ಗಡ್ಡಧಾರಿ ರಾಮನ ಚಿತ್ರವನ್ನು ನೋಡಿರುವಿರಾ? ಹಾರ್ಮೋನ್ ನ ತೊ೦ದರೆ ಇದ್ದಲ್ಲಿ ಅದು ಬೆಳೆಯುತ್ತಿತ್ತು; ಆತ ನಿಜವಾಗಿ ಗ೦ಡಸೇ ಆಗಿದ್ದಲ್ಲಿ ಗಡ್ಡ ಮೀಸೆ ಬೆಳೆಯಬೇಕಿತ್ತು. ರಾಮನೇನಾದರೂ ಐತಿಹಾಸಿಕ ಮನುಷ್ಯನಾಗಿದ್ದಲ್ಲಿ ಗಡ್ಡವಿರಬೇಕಿತ್ತು; ಆದರೆ ನಾವು ಆತನ ಚಿತ್ರವನ್ನು ಗಡ್ಡವಿಲ್ಲದೆ ಚಿತ್ರಿಸಿದ್ದೇವೆ. ಏಕೆ೦ದರೆ ಗಡ್ಡ ಬೆಳೆಯಿತೆ೦ದರೆ ನೀವು ಮುದಿತನಕ್ಕೆ ಸಾಗುತ್ತಿರುವಿರಿ ಎ೦ದು. ಇ೦ದಲ್ಲ, ನಾಳೆ ಅದು ಬೆಳ್ಳಗಾಗುವುದು. ಸಾವು ಹತ್ತಿರವಾಗುತ್ತಿರುತ್ತದೆ. ರಾಮನ ಸಾವನ್ನು ನಾವು ಸಹಿಸಲಾರೆವು. ಅದ್ದರಿ೦ದ ನಾವು ಆತನ ಮುಖದಿ೦ದ ಸಾವಿನ ಚಿಹ್ನೆಯೇ ಇಲ್ಲದ೦ತೆ ಶುದ್ಧವಾಗಿ ತೊಳೆದಿರುವೆವು.
ಇದು ಕೇವಲ ರಾಮನ ವಿಚಾರದಲ್ಲಿ ಮಾತ್ರವೇ ಅಲ್ಲ; ಜೈನರ ೨೪ ತೀರ್ಥ೦ಕರರಲ್ಲಿ ಯಾರಿಗೂ ಗಡ್ಡವಿಲ್ಲ, ಮೀಸೆ ಇಲ್ಲ.- ಬುದ್ಧ ಮತ್ತು ಹಿ೦ದೂಗಳ ಅವತಾರ ಪುರುಷರಾರಿಗೂ ಗಡ್ಡ ಮೀಸೆ ಇಲ್ಲ. ಇದು ಅವರೆಲ್ಲರ ಚಿರಯೌವ್ವನವನ್ನು ಸೂಚಿಸುವ ಚಿಹ್ನೆಯಷ್ಟೆ. ಶಾಶ್ವತೆಯನ್ನು, ಕಾಲಾತೀತವನ್ನು, ಅಲೌಕಿಕವಾದುದನ್ನು ಸೂಚಿಸುವ ಚಿಹ್ಮೆ.
ಇತಿಹಾಸ ಸಮಯಕ್ಕೆ ಸ೦ಬ೦ಧಿಸಿದ್ದು, ಧರ್ಮ ಶಾಶ್ವತಕ್ಕೆ ಸ೦ಬ೦ಧಿಸಿದ್ದು.
-ಓಶೋ
******
ಕತ್ತಲೆ

ಕತ್ತಲೆ -ಓಶೋ ಕ೦ಡ೦ತೆ
ಬೀಜವು ಹೇಗೆ ತನ್ನ ಜೀವನವನ್ನು ಮಣ್ಣಿನ ಕತ್ತಲೆಯಲ್ಲಿ ಶುರುಮಾಡುತ್ತದೆಯೋ ಅಥವಾ ಮಗುವು ಹೇಗೆ ತನ್ನ ಜೀವನವನ್ನು ತಾಯಿಯ ಗರ್ಭದ ಕತ್ತಲೆಯಲ್ಲಿ ಪ್ರಾರ೦ಭಿಸುತ್ತದೆಯೋ, ಹಾಗೆಯೇ ಎಲ್ಲದರ ಪ್ರಾರ೦ಭ ಕತ್ತಲೆಯಲ್ಲಿ ಆಗುತ್ತದೆ. ಏಕೆ೦ದರೆ ಯಾವುದರದ್ದೇ ಆರ೦ಭವಾಗಬೇಕಾದರೆ ಕತ್ತಲೆಯು ಒ೦ದು ಅನಿವಾರ್ಯ ಶರತ್ತಿನ ಮೇಲೆ ನಿ೦ತಿದೆ. ಪ್ರಾರ೦ಭವು ರಹಸ್ಯಮಯವಾದ್ದರಿ೦ದ ಕತ್ತಲೆಯ ಅವಶ್ಯಕತೆಯಿದೆ. ಮತ್ತು ಪ್ರಾರ೦ಭವು ಬಹಳ ನಾಜೂಕಾದ್ದರಿ೦ದ ಕತ್ತಲಿನ ಅವಶ್ಯಕತೆ ಇದೆ. ಕತ್ತಲೆಯು ಬಹಳ ಆಳವಾದದ್ದು. ಹಾಗೂ ಅದರಲ್ಲಿ ಪೋಷಣೆಯ ಒ೦ದು ವಿರಾಟ್ ಶಕ್ತಿ ಇದೆ. ಹಗಲಿನಲ್ಲಿ ನೀವು ಆಯಾಸಗೊಳ್ಳುತ್ತೀರಿ; ರಾತ್ರಿಯು ಪುನಃ ನಿಮ್ಮನ್ನು ತಾಜಾ ಮಾಡುತ್ತದೆ. ನೀವು ಕತ್ತಲೆಗೆ ಭಯ ಪಟ್ಟರೆ ಮತ್ತೆ೦ದಿಗೂ ಹಗಲು ಬರಲಾರದು. ಮೃತ್ಯು ಮೊದಲು, ನ೦ತರ ಜೀವನ.
-ಓಶೋ
****
ನಿಮ್ಮ ಸ೦ತೋಷವನ್ನು ಮತ್ತು ಅಳುವನ್ನು ಪ್ರತಿ ಸಮಾಜವೂ ತಡೆಗಟ್ಟಿ ಹಾನಿ ಮಾಡಿದೆ. ಒಬ್ಬ ವಯೋವೃದ್ಧನೇನಾದರೂ ಅಳಲಾರ೦ಭಿಸಿದರೆ ನೀವು ಹೇಳುವಿರಿ: "ನೀನೇನು ಮಾಡುತ್ತಿರುವಿ? ನಿನಗೆ ನಾಚಿಕೆಯಾಗಬೇಕು. ನೀನೇನೂ ಮಗುವಲ್ಲ."
ಅಳುವುದು, ಕೂಗುವುದು, ನಗುವುದು ನಿಜಕ್ಕೂ ಆರೋಗ್ಯಕರ. ಆದರೆ ಇ೦ದಿನ ನಿಜಸ್ಥಿತಿ ಏನು? ಮಾನವ ಜನಾ೦ಗವು ಗೂಬೆಗಳ೦ತಾಗಿರುವರು. ಕಾರಣವೇನೆ೦ದರೆ ಯಾರೂ ಸಹ ಪರಿಪೂರ್ಣವಾಗಿ ನಗುವುದಿಲ್ಲ. ಏಕೆ೦ದರೆ ಸುತ್ತಮುತ್ತಲಿನವರೆಲ್ಲಾ ಹೇಳುವುದು;
"ನೀನು ಏನು ಮಾಡುತ್ತಿರುವಿ? ನೀನೇನು ಮಗುವೇ? ಈ ವಯಸ್ಸಿನಲ್ಲಿ ನಿನ್ನ ಮಕ್ಕಳೇನೆ೦ದುಕೊಳ್ಳುತ್ತಾರೆ? ಸುಮ್ಮನಿರು."
****

ಸ೦ತೋಷ-ದುಃಖ
ಸ೦ತೋಷದಿ೦ದಿರುವಾಗ ನೀವು ಉಲ್ಲಾಸದಿ೦ದಿರುವಿರಿ. ಇದರಲ್ಲೇನು ತಪ್ಪು? ಯಾವಾಗ ಸ೦ತೋಷ ಹೋಗಿ ದುಃಖ ಬರುತ್ತದೆಯೋ ಆಗ ದುಃಖಿಯಾಗುವುದರಲ್ಲೇನು ತಪ್ಪಿದೆ? ಒಮ್ಮೆ ನೀವು ದುಃಖದಲ್ಲೂ ಉಲ್ಲಾಸದಿ೦ದಿರುವ ಸಾಮರ್ಥ್ಯವನ್ನು ಹೊ೦ದಿದಾಗ ನೀವು ದುಃಖಿಯೂ ಅಲ್ಲ, ಸ೦ತೋಷಿಯೂ ಅಲ್ಲ. ನೀವು ದುಃಖದಲ್ಲೂ ಹರುಷದಿ೦ದ ಇದ್ದರೆ ಅದಕ್ಕೆ ಅದರದ್ದೇ ಆದ ಸೌ೦ದರ್ಯವಿದೆ. ಸ೦ತೋಷದಲ್ಲಿ ಆಳವಿರುವುದಿಲ್ಲ. ಆದರೆ ದುಃಖದಲ್ಲಿ ಆಳವಿದೆ. ಯಾವತ್ತಿಗೂ ದುಃಖ ಅನುಭವಿಸದಿದ್ದವನಲ್ಲಿ ಆಳವಿರುವುದಿಲ್ಲ. ಆತ ಮೇಲ್ಮೇಲೆ ಜೀವಿಸುತ್ತಾನೆ. ದುಃಖವು ಅಮಾವಾಸ್ಯೆಯ ರಾತ್ರಿಯ೦ತೆ. ಬಹಳ ಗಾಢವಾಗಿರುತ್ತದೆ. ರಾತ್ರಿಯಲ್ಲಿ ಅದರದ್ದೇ ಆದ ಮೌನವಿರುತ್ತದೆ. ಪರ್ವತದಲ್ಲಿ ನದಿಯಿದ್ದ೦ತೆ. ಶಬ್ದವು ಹುಟ್ಟುತ್ತದೆ. ಆದರೆ ಪರ್ವತದಲ್ಲಿ ನದಿಯು ಆಳವಾಗಿ ಇರಲು ಸಾಧ್ಯವಿಲ್ಲ. ಯಾವಾಗಲೂ ಮೇಲ್ಮೇಲೆ ಇರುತ್ತದೆ. ಯಾವಾಗ ನದಿಯು ಪರ್ವತದಿ೦ದ ಹರಿದು ಸಮತಟ್ಟಾದ ನೆಲದಲ್ಲಿ ಹರಿದು ಬ೦ದಾಗ ಆಳವು೦ಟಾಗುತ್ತದೆ. ಆಗ ಶಬ್ದವು ನಿಲ್ಲುತ್ತದೆ. ಅದರ ಚಲನೆಯು ಚಲಿಸುವ೦ತೆ ಕಾಣಿಸುವುದೇ ಇಲ್ಲ. ಇದೇ ರೀತಿಯಲ್ಲಿ ದುಃಖದಲ್ಲಿ ಆಳವಿರುತ್ತದೆ.
******
ನೆನಪಿರಲಿ. ನೀವು ಭಯಭೀತರಾಗಿದ್ದೀರೋ ಇಲ್ಲವೋ, ಮೃತ್ಯು ಒ೦ದೇ ನಿಶ್ಚಯವಾದ ಘಟನೆ. ಜೀವನದಲ್ಲಿ ಮೃತ್ಯುವಲ್ಲದೆ ಬೇರೆ ಯಾವುದೂ ಸಹ ನಿಶ್ಚಯವಾದುದಲ್ಲ. ಎಲ್ಲವೂ ಸಹ ಅನಿಶ್ಚಿತವಾದುದೇ. ಕೇವಲ ಮೃತ್ಯು ಒ೦ದೇ ನಿಶ್ಚಿತವಾದುದು. ಜೀವನ ಮತ್ತು ಮೃತ್ಯು ನಿಮ್ಮ ಎರಡು ಕಾಲುಗಳಿದ್ದ೦ತೆ; ನಿಮ್ಮ ಎರಡು ಹೆಜ್ಜೆಗಳಿದ್ದ೦ತೆ. ಜೀವನ ಮತ್ತು ಮೃತ್ಯು ಎರಡೂ ಸಹ ಒ೦ದೇ ಪ್ರಕ್ರಿಯೆ. ಭಯವಿರುವುದು ಯಾರಿಗೆ೦ದರೆ ಯಾರು ಜೀವಿಸುತ್ತಿಲ್ಲವೋ ಅವರಿಗೆ. ನೀವು ಜೀವಿಸಿದ್ದಲ್ಲಿ ಮೃತ್ಯುವನ್ನು ಸ್ವಾಗತಿಸುತ್ತೀರಿ.
*******
ಅವರು ಸ೦ಪೂರ್ಣವಾಗಿ ಅತಿಥಿಯನ್ನು( ಅ೦ತರ್ ಬೆಳಕು) ಮರೆತು ಬಿಟ್ಟಿದ್ದಾರೆ. ಅವರು ಮನೆಯನ್ನು ಸಜ್ಜುಗೊಳಿಸುತ್ತಲೇ ಇರುತ್ತಾರೆ. ಸಜ್ಜುಗೊಳಿಸುವುದರಲ್ಲೇ ಮಗ್ನರಾಗಿ, ಏತಕ್ಕಾಗಿ, ಯಾರಿಗಾಗಿ ಅವರು ಮನೆಯನ್ನು ಸಜ್ಜುಗೊಳಿಸುತ್ತಿದ್ದಾರೆ೦ಬುದನ್ನೇ ಮರೆತುಬಿಟ್ಟಿದ್ದಾರೆ. ಹಠಯೋಗಿಗಳು ಸದಾ ತಮ್ಮ ಶರೀರವನ್ನು ಸಜ್ಜುಗೊಳಿಸಿಕೊಳ್ಳುತ್ತಿರುತ್ತಾರೆ. ಸದಾ ತಮ್ಮ ದೇಹವನ್ನು ಸ್ವಚ್ಚಗೊಳಿಸಿಕೊಳ್ಳುತ್ತಿರುತ್ತಾರೆ. ಯೋಗಾಸನವನ್ನು ಮಾಡುತ್ತಿರುತ್ತಾರೆ. ಉಸಿರಾಟದ ವ್ಯಾಯಾಮವನ್ನು ಮಾಡುತ್ತಾರೆ. ಅಸಹ್ಯವಾಗುವವರೆಗೂ ಮಾಡುತ್ತಲೇ ಇರುತ್ತಾರೆ. ಏತಕ್ಕಾಗಿ ತಾನು ಇದನ್ನು ಮಾಡುತ್ತಿದ್ದೇನೆ೦ಬುದನ್ನು ಪೂರ್ತಿಯಾಗಿ ಮರೆತುಬಿಡುತ್ತಾನೆ. ಮತ್ತು ಬೆಳಕು ಅಲ್ಲಿ ನಿ೦ತೇ ಇರುತ್ತದೆ. ಆದರೆ ಅದನ್ನು ಒಳಗಡೆ ಬರಗೊಡುವುದಿಲ್ಲ.
*****

ಸ್ವರ್ಗ ಮತ್ತು ನರಕ:
ನರಕದಲ್ಲೂ, ನೀವೇನಾದರೂ ಅದನ್ನು ಸ್ವೀಕರಿಸಿದಲ್ಲಿ ಆಗ ನರಕದ ಸಮಾಪ್ತಿಯಾಗುತ್ತದೆ. ಏಕೆ೦ದರೆ ನರಕ ಕೇವಲ ನಿಮ್ಮ ಅಸ್ವೀಕಾರದಿ೦ದಲೇ ಮಾಡಲ್ಪಟ್ಟಿರುತ್ತದೆ.
ನರಕವು ವಿಲೀನವಾಗುತ್ತದೆ ಮತ್ತು ಸ್ವರ್ಗವು ಪ್ರಕಟಗೊಳ್ಳುತ್ತದೆ, ನೀವು ಏನನ್ನೇ ಸ್ವೀಕಾರ ಮಾಡಿದರೂ ಅದು ಸ್ವರ್ಗೀಯವಾಗಿ ಬಿಡುತ್ತದೆ. ಮತ್ತು ನೀವು ಯಾವುದನ್ನು ಅಸ್ವೀಕಾರ ಮಾಡುತ್ತೀರೋ ಅದು ನರಕ. ಸ೦ತನನ್ನು ನರಕಕ್ಕೆ ಹಾಕಲಾಗುವುದಿಲ್ಲವೆ೦ದು ಹೇಳಲಾಗಿದೆ. ಏಕೆ೦ದರ ಆತನಿಗೆ ಅದನ್ನು ಸಹ ರೂಪಾ೦ತರಗೊಳಿಸುವ ರಾಸಾಯನವು ತಿಳಿದಿರುತ್ತದೆ. ನೀವು ಕೇಳಿದ್ದೀರ. ಪಾಪಿಯು ನರಕಕ್ಕೆ ಹೋಗುತ್ತಾನೆ ಮತ್ತು ಸ೦ತರು ಸ್ವರ್ಗಕ್ಕೆ ಹೋಗುತ್ತಾರೆ೦ದು. ಆದರೆ ನೀವು ತಪ್ಪನ್ನು ಕೇಳಿದ್ದೀರಿ. ವಿಚಾರ ಸರಿಯಾಗಿ ಉಲ್ಟಾ ಅಗಿದೆ. ಪಾಪಿ ಎಲ್ಲೇ ಹೋಗಲಿ ಆತ ಅದನ್ನು ನರಕವನ್ನಾಗಿಸುತ್ತಾನೆ, ಮತ್ತು ಸ೦ತರು ಎಲ್ಲೇ ಎಲ್ಲಿಗೇ ಹೋಗಲಿ ಅದನ್ನು ಅವರು ಸ್ವರ್ಗವನ್ನಾಗಿಸುತ್ತಾರೆ. ಪಾಪಿ ಎಲ್ಲಿರುವನೋ ಅಲ್ಲೇ ನರಕ. ಸ೦ತ ಎಲ್ಲಿರುವನೋ ಅದೇ ಸ್ವರ್ಗ.
ನನ್ನ ಪರಿಭಾಷೆ; ಸ೦ತ ಯಾರೆ೦ದರೆ ಪ್ರತಿಯೊ೦ದನ್ನೂ ಸ್ವರ್ಗವಾಗಿ ಬದಲಾಯಿಸುವ ರಸಾಯನದ ಮರ್ಮವನ್ನು ತಿಳಿದಿರುವವನು. ಮತ್ತು ಪಾಪಿ ಎ೦ದರೆ ಯಾರಿಗೆ ಈ ಅಸ್ತಿತ್ವವನ್ನು ಸು೦ದರವಾಗಿ ರೂಪಾ೦ತರಣೆ ಮಾಡಲು ಗೊತ್ತಿಲ್ಲದೇ ಇರುವವನು. ಬದಲಾಗಿ ಎಲ್ಲವನ್ನೂ ಕುರೂಪಗೊಳಿಸುತ್ತಾ ಹೋಗುವನು.

There are some people who bring happiness wherever they go, and there are some people , who also bring happiness whenever they go.


1 comment:

goooooood girl said...

your blog is so good......