ವಯಸ್ಸಾಗುತ್ತ ಹೋದಂತೆ ಈ ಮೂರು ಘಟನೆಗಳು ಜರುಗುತ್ತವೆ. ಮೊದಲನೆಯದಾಗಿ ನಿಮ್ಮ ಸ್ಮರಣ ಶಕ್ತಿ ಹೋಗುತ್ತದೆ, ಮತ್ತು .... ಕ್ಷಮಿಸಿ ಇನ್ನೂ ಎರಡು ನೆನಪಾಗ್ತಾ ಇಲ್ಲ...
— ಸರ್ ನಾರ್ಮನ್ ವಿಸ್ಡಮ್
ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ.
— ಚೀನೀ ಗಾದೆ
ನಿದ್ದೆ ಒಳ್ಳೆಯದು, ಸಾವು ಉತ್ತಮ, ಹುಟ್ಟದಿರುವುದು ಅತ್ತ್ಯುತ್ತಮ.
-ಹೆನ್ರಿಚ್ ಹೈನ್ (ಜರ್ಮನಿಯ ಕವಿ)
-We spend our days waiting for the ideal path to appear infront of us. But what we forget is that paths are made by walking, not by waiting.
-Anonymous.
ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.
— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ
Simple formula for good life:
Love and leave Anger
Work and leave Hunger
Laugh and live Longer
ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.
— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್
Remember, growing older is mandatory, growing up is optional.
We make a Living by what we get;We make a Life by what we give.
ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.
— ಜಾನ್ ಅಶ್‌ಬೆರಿ
ಹತ್ತಾರು ವರುಷ
ನೆರಳಾಗಿ ನಿ೦ತ ಮರ
ತೊಲೆಯಾಗಿ ಉಳಿಯಿತು
ನೂರಾರು ವರುಷ.
ನೂರು ವರುಷ
ಅಳಿದ ಅರಸ
ಹೆಣವಾಗಿ ಉಳಿಯಲಿಲ್ಲ
ಮೂರು ದಿವಸ.
ಮನುಷ್ಯನ ಕ್ಷುದ್ರತೆ :
ಎದುರುಗಡೆಯಿ೦ದ ಮೇಕೆಗೆ ಭಯಪಡು; ಹಿ೦ಬದಿಯಿ೦ದ ಕುದುರೆಗೆ ಭಯಪಡು; ಹಾಗೆಯೇ ಮನುಷ್ಯನಿಗೆ ಎಲ್ಲಾ ಕಡೆಯಿ೦ದಲೂ ಭಯಪಡು.
-ರಶಿಯನ್ ಗಾದೆ
ಮಾನವರು ಏಕೆ ದುಷ್ಟರು ಎ೦ದು ನಾನೆ೦ದೂ ಆಶ್ಚರ್ಯಪಡುವುದಿಲ್ಲ. ಆದರೆ ಅದರ ಬಗ್ಗೆ ಅವರೇಕೆ ನಾಚಿಕೆ ಪಡುವುದಿಲ್ಲ ಎ೦ಬುದರ ಬಗ್ಗೆ ನಾನು ಅನೇಕ ಬಾರಿ ಚಕಿತಗೊಳ್ಳುತ್ತೇನೆ.
-ಜೋನಾಥನ್ ಸ್ವಿಫ್ಟ್.
ಫ್ರೆಡ್ರಿಕ್ ನೀತ್ಸೆ ಒ೦ದು ಕಡೆ ಹೀಗೆ ಹೇಳುತ್ತಾನೆ.
ಆದರ್ಶವಾದಿ ತನಗೇ ಸುಳ್ಳು ಹೇಳಿಕೊಳ್ಳುತ್ತಾನೆ. ಸುಳ್ಳುಗಾರ ಇತರರಿಗೆ ಸುಳ್ಳು ಹೇಳುತ್ತಾನೆ.
ಈ ಹೇಳಿಕೆ ಎಷ್ಟು ನಿಜ? ಎಷ್ಟು ಅಪ್ರಾಮಾಣಿಕ?
The visionary lies to himself, the liar only to others.
"I decline to accept the end of men...I believe that man will not merely endure, he will prevail. He is immortal not because he alone among creatures has an inexhaustible voice but because he has a soul, a spirit capable of compassion and sacrifice and endurance."
(ಮನುಷ್ಯನ ಅವನತಿ ಖ೦ಡಿತ ಎ೦ಬ ನಿರಶಾವಾದವನ್ನು ನಾನು ತಿರಸ್ಕರಿಸುತ್ತೇನೆ. ನನಗೆ ಅಚಲವಾದ ನ೦ಬಿಕೆಯಿದೆ. ಮನುಷ್ಯ ಕೇವಲ ಬಾಳುವುದೊ೦ದೇ ಅಲ್ಲ.... ಅ೦ತ್ಯದಲ್ಲಿ ಅವನಿಗೇ ಜಯ. ಅವನು ಅಮರ. ಆದರೆ ಪ್ರಪ೦ಚದಲ್ಲಿರುವ ಸಮಸ್ತ ಜೀವರಾಶಿಗಳಲ್ಲಿ ಅವನೊಬ್ಬನಿಗೇ ದಣಿವಾಗದ ಧ್ವನಿ ಇದೆ ಎನ್ನುವ ಕಾರಣಕ್ಕೆ ಅಲ್ಲ. ಆದರೆ ಅವನಿಗೆ ಒ೦ದು ಆತ್ಮವಿದೆ. ಅನುಕ೦ಪ, ತ್ಯಾಗ ಮತ್ತು ಸಹಿಷ್ಣುತೆಯ ಸಾಮರ್ಥ್ಯವುಳ್ಳ ಚೇತನ ಇದೆಯೆ೦ಬ ಕಾರಣಕ್ಕೆ ಮಾತ್ರ...........)
-ನೋಬೆಲ್ ಪ್ರಶಸ್ತಿ ವಿಜೇತ ವಿಲಿಯಮ್ ಫಾಕ್ನರ್

No comments:
Post a Comment