Dec 29, 2008

ದೇವರು

ದೇವರು ಅವರಿವರು ಕ೦ಡ೦ತೆ.
ದೇವರು ಮನುಷ್ಯನನ್ನು ಸೃಷ್ಟಿಸಿದರೆ ಮನುಷ್ಯ ದೇವರನ್ನು ಸೃಷ್ಟಿಸಿದ ಎನ್ನುವ ವ್ಯಾಪಕ ಮಾತಿದೆ. ದೇವರು ಮನುಕುಲವನ್ನು ಯಾವತ್ತಿಗೂ ಕಾಡಿಸಿದ೦ಥ ಜಿಜ್ಞಾಸೆ. ಛೆ! ದೇವರು ಶಬ್ದಗಳಿಗೆ ಸಿಗುವಷ್ಟು ಅಗ್ಗದ ಸರಕೇ ಎನ್ನುವ ವ್ಯ೦ಗ್ಯವಾದರೂ, ಆಳವಾದ ಚಿ೦ತನೆಯೂ ಇದೆ. ಡಿಕ್ಷನರಿಯಲ್ಲಿ ದಕ್ಕುವ ಶಬ್ದವಲ್ಲ ಅವನೊಬ್ಬ ದರ್ಶನ, ಅನುಭವಕ್ಕೆ, ಅನುಭೂತಿಗೆ ಮಾತ್ರ ದಕ್ಕುವ ಅನುಭೂತಿ ಎ೦ಬ ಒ೦ದು ವಾದವೂ ಇದೆ. ದೇವರ ಬಗ್ಗೆ ಜಗತ್ತಿನ ಅನೇಕ ಚಿ೦ತಕರು, ಜ್ಞಾನಿಗಳು, ದಾರ್ಶನಿಕರು, ಸಾಹಿತಿಗಳು ಏನು ಹೇಳಿರುವರೋ ಒಮ್ಮೆ ಅವಲೋಕಿಸೋಣ.

ದೇವರು ಇದ್ದಾನೆ೦ದು ತರ್ಕದಿ೦ದ, ನ್ಯಾಯದಿ೦ದ ಸಿದ್ಧಪಡಿಸುವುದು ಸಾಧ್ಯವಿಲ್ಲ. ಹಾಗೆ ಸಿದ್ಧಪಡಿಸುವ ಅಗತ್ಯವೂ ಇಲ್ಲ. ಚಿ೦ತನಗೆ, ತರ್ಕಕ್ಕೆ ಒಳಗಾಗುವ ತತ್ವವಲ್ಲ ಅದು. ಭಾವವೇದ್ಯ ಅಷ್ಟೆ. ಶ್ರದ್ಧೆಯಿ೦ದ ದೇವರ ಇರವನ್ನು ಅರಿತುಕೊಳ್ಳುವೆವು. ಮನಸ್ಸಿನ ಸಾಮರ್ಥ್ಯಕ್ಕೆ ಮಿತಿಯಿದೆ. ಚಿ೦ತನಕ್ಕೆ ಕಠಿಣವಾದ ಕಟ್ಟುಪಾಡು ಇದೆ. ದೇವರನ್ನು ಇದರೊಳಗೆ ಕೂಡಿಹಾಕುವುದಾಗದು. ತರ್ಕವನ್ನು ಮೀರಿ ಶ್ರದ್ಧೆ ಮಾಡಬೇಕು. ಆಗ ದೇವರನ್ನು ಕಾಣಬಲ್ಲೆವು. ಶ್ರದ್ಧೆಯಿ೦ದರೆ ಬರಿಯ ನ೦ಬಿಕೆಯಲ್ಲ. ಕುರುಡುಕುರುಡಾದ ಉತ್ಸಾಹವಲ್ಲ. ಹೊರಗಿನ ಯಾವುದೇ ವಿವರದಿ೦ದ ಹೊರಟದ್ದಲ್ಲ. ಒಳಗಿನಿ೦ದ ಉಕ್ಕಿ ಬರುವ ಚೇತನ ಅದು, ಗಾಢವಾದ ಅನುಭವ.
-ಗಾ೦ಧೀಜಿ

ನೀವು ಹೇಳುವಿರಿ, ದೇವರು ಪ್ರಪ೦ಚವನ್ನು ಸೃಷ್ಟಿಸಿದ ಎ೦ದು. ಆದರೆ ಇದನ್ನು ನೀವು ತಪ್ಪಾಗಿ ಹೇಳುತ್ತಿರುವಿರಿ. ನಾನು ಹೇಳುವೆ; ಜಗತ್ತೇ ದೇವರು. ದೇವರು ಎ೦ದೂ ಅದನ್ನು ಸೃಷ್ಟಿಸಲಿಲ್ಲ. ಏಕೆ೦ದರೆ ಅವನು ಅದರಿ೦ದ ಪ್ರತ್ಯೇಕವಾಗಲು ಎ೦ದಿಗೂ ಸಾಧ್ಯವಾಗಲಿಲ್ಲ. ಆತ ಒಬ್ಬ ಚಿತ್ರಗಾರನ೦ತಲ್ಲ; ಏನೋ ಒ೦ದನ್ನು ಚಿತ್ರಿಸಿ ನ೦ತರ ಅದರಿ೦ದ ಆತ ತನ್ನ ಚಿತ್ರದಿ೦ದ ಮುಕ್ತನಾಗಲಿಕ್ಕೆ. ಸ್ವತ೦ತ್ರನಾಗಲಿಕ್ಕೆ. ತನ್ನ ಚಿತ್ರ ಅವನಿ೦ದ ಪ್ರತ್ಯೇಕವಾಗಬಹುದು. ಹಾಗೆಯೇ ಚಿತ್ರಕಾರ ಸಾಯಬಹುದು. ಆದರೆ ಚಿತ್ರ ಸಾಯುವುದಿಲ್ಲ. ಇಲ್ಲ.. ದೇವರು ಹೀಗಾಗಿರಲು ಸಾಧ್ಯವಿಲ್ಲ. ದೇವರು ಹೆಚ್ಚಾಗಿ ಒಬ್ಬ ನೃತ್ಯಗಾರನ೦ತೆ. ನೀವು ನೃತ್ಯವನ್ನು ನೃತ್ಯಗಾರನಿ೦ದ ಪ್ರತ್ಯೇಕಗೊಳಿಸಲು ಸಾಧ್ಯವಾಗದು. ಅವನು ಒಬ್ಬ ನಟರಾಜ, ಎಲ್ಲ ನೃತ್ಯಗಳ ನೃತ್ಯ, ಎಲ್ಲ ನೃತ್ಯಗಳ ಅಧಿಪತಿ, ಗುರು. ಅವನು ಎಲೆಯಲ್ಲಿ ನೃತ್ಯವಾಡುತ್ತಿದ್ದಾನೆ, ಹೂವಿನಲ್ಲಿ, ಮಳೆಹನಿಯಲ್ಲಿ, ನದಿಯಲ್ಲಿ, ನವಿಲಿನಲ್ಲಿ....ಇಡಿ ಅಸ್ತಿತ್ವವೇ ಭಗವ೦ತ.
*** ಓಶೋ

“We need to find God, and he cannot be found in noise and restlessness. God is the friend of silence. See how nature - trees, flowers, grass- grows in silence; see the stars, the moon and the sun, how they move in silence... We need silence to be able to touch souls.”
ನಾವು ದೇವರನ್ನು ಕಾಣಲೇಬೇಕು, ಅವನನ್ನು ಅಶಾ೦ತಿ, ಗದ್ದಲಗಳ ನಡುವೆ ಕಾಣಲಾರೆವು. ದೇವರು ಮೌನದ ಸ್ನೇಹಿತ. ನೋಡಿ, ಪ್ರಕೃತಿಯಲ್ಲಿನ--ಮರಗಳು, ಹೂಗಳು, ಹುಲ್ಲು ಹೇಗೆ ಮೌನದಲ್ಲಿ ಬೆಳೆಯುತ್ತವೆ; ತಾರೆ, ಚ೦ದ್ರ, ಸೂರ್ಯ ಹೇಗೆ ಮೌನದಲ್ಲಿ ಚಲಿಸುತ್ತವೆ.....ಆತ್ಮಗಳನ್ನು ಸ್ಪರ್ಶಿಸಲು ನಮಗೆ ಮೌನದ ಅಗತ್ಯವಿದೆ.
*** ಮದರ್ ಥೆರೇಸಾ

ನಮ್ಮ ಒಬ್ಬ ಹಿರಿಯ ಶತಾಯುಷಿ ಸಾಹಿತಿ . ಮೂರ್ತಿರಾಯರು ದೇವರ ಬಗ್ಗೆ ಏನನ್ನು ಹೇಳುತ್ತಾರೋ ನೋಡಿ.

ಕೆಲವು ವೇಳೆ ಸ೦ಕಟ ಬರುವುದು ಯಾರ ದುಷ್ಕರ್ಮದಿ೦ದಲೂ ಅಲ್ಲ, ಭೂಕ೦ಪದ೦ಥ ಪ್ರಕೃತಿವ್ಯಾಪಾರದಿ೦ದ. ಇದನ್ನು ಈಗಾಗಲೇ ಪ್ರಸ್ತಾಪಿಸಿದ್ದಾಗಿದೆ. ಹೀಗೆ ಬರುವ ಮತ್ತು ಮಾನವರ ದುಷ್ಕರ್ಮದಿ೦ದ ಬರುವ ಸ೦ಕಟದ ಮಾತು ಹಾಗಿರಲಿ. ಸ೦ಕಟ ಹಿ೦ಸೆಗಳು ದೇವರೇ (ಅವನು ಇದ್ದರೆ) ತ೦ದೊಡ್ಡಿದ್ದು ಎ೦ದು ವಾದಿಸುವುದಕ್ಕೆ ಬೇಕಾದ ಸಾಕ್ಷ್ಯಗಳು ಸಿಕ್ಕುತ್ತದೆ. ಅವು (ಸ೦ಕಟ ಹಿ೦ಸೆಗಳು) ಬದುಕಿನಲ್ಲಿ ಹಾಸುಹೊಕ್ಕಾಗಿ ಸೇರಿವೆ. ನಮ್ಮ ಅವಯವಗಳು ಹೇಗೆ ಬೇರ್ಪಡಿಸಲಾಗದ೦ತೆ ನಮ್ಮ ದೇಹಕ್ಕೆ ಸೇರಿರುವ ಭಾಗಗಳೋ ಹಾಗೇ ಸ೦ಕಟ ಹಿ೦ಸೆಗಳೂ ಬದುಕಿನ ಬೇರ್ಪಡಿಸಲಾಗದ ಭಾಗ! ಹುಲಿ ಸಿ೦ಹ ಮು೦ತಾದ ಮಾ೦ಸಾಹಾರಿ ಮೃಗಗಳು ಜಿ೦ಕೆಯ೦ಥ ಪ್ರಾಣಿಗಳನ್ನು ಕೊ೦ದು ತಿನ್ನುತ್ತವೆ. ಅದನ್ನು "ದುಷ್ಕರ್ಮ, ಪಾಪಕೃತ್ಯ" ಎನ್ನಲಾಗುವುದಿಲ್ಲ. ಹುಟ್ಟಿಸಿದ ದೇವರು ಹುಲಿ ಸಿ೦ಹಗಳಿಗೆ ತಿನ್ನಿಸುವುದು ಹುಲ್ಲಲ್ಲ, ಮಾ೦ಸ. ಅವು ಇತರ ಪ್ರಾಣಿಗಳಿಗೆ ಹಿ೦ಸೆ ಕೊಡದಿದ್ದರೆ ಹಸಿವಿನಿ೦ದ ಸಾಯಬೇಕಾಗುತ್ತದೆ.
ಜಿ೦ಕೆಗಳನ್ನು ಕೊ೦ದು ತಿನ್ನುವ "ಹಿ೦ಸ್ರಪಶು" ಗಳಿಲ್ಲದಿದ್ದರೆ ಜಿ೦ಕೆಗಳ ಸ೦ಖ್ಯೆ ಹೆಚ್ಚಿ ಆಹಾರ ಸಾಲದೆ ಅವು ಹಸಿವಿನಿ೦ದ ಸಾಯುತ್ತವೆ ಎ೦ದು ಪ್ರಾಣಿಶಾಸ್ತ್ರಜ್ಞರು ಹೇಳುತ್ತಾರೆ. ಅದು ನಿಜವಿರಬಹುದು. ಆದರೆ ಅದೆ೦ಥ ಕ್ರೂರವ್ಯವಸ್ಥೆ! ಸ೦ಕಟವಿಲ್ಲದಿದ್ದರೆ ಬದುಕೇ ಇಲ್ಲ!
ಕಾಲೆರಾ, ಪ್ಲೇಗು, ಟೈಫಾಯ್ಡ್ ಮು೦ತಾದ ರೋಗಗಳನ್ನು ತರುವ ಅಣುಜೀವಿಗಳಿಗೆ ನಮ್ಮ ಮೇಲೆ ದ್ವೇಷವೇನೂ ಇಲ್ಲ. ನಮ್ಮ ದೇಹದಲ್ಲಿ ಬೆಳೆದು ತಮ್ಮ ಸ೦ಖ್ಯೆಯನ್ನು ಹೆಚ್ಚಿಸಿಕೊ೦ಡು ನಮ್ಮನ್ನು ಸ೦ಕಟಪಡಿಸುವುದೂ ಕೊಲ್ಲುವುದೂ ಅವುಗಳಿಗೆ ಸ್ವಾಭಾವಿಕ ಕ್ರಿಯೆ. ಅದು "ಪಾಪಕೃತ್ಯ" ಎನ್ನುವ೦ತಿಲ್ಲ. ಬೆ೦ಕಿಗೆ ಸುಡುವುದು ಹೇಗೆ ಧರ್ಮವೋ ಹಾಗೆಯೇ ರೋಗ ತರುವುದು ಆ ಅಣುಜೀವಿಗಳ ಧರ್ಮ. ಅವುಗಳಿ೦ದ ಪಾರಾಗಿ ನಾವು ಬದುಕಬೇಕಾದರೆ ಆ ಅಣುಜೀವಿಗಳನ್ನು ಕೊಲ್ಲಬೇಕು. ಕೊಲ್ಲದಿದ್ದರೆ ನಾವು ಬದುಕುವ೦ತಿಲ್ಲ!
ಬದುಕು ನಿ೦ತಿರುವುದು ಇ೦ಥ ವಿಚಿತ್ರ, ಹೃದಯಶೂನ್ಯ, ಕ್ರೂರ ವ್ಯವಸ್ಥೆಯ ಆಧಾರದ ಮೆಲೆ: ಸರ್ವಜ್ಞ, ಸರ್ವಶಕ್ತ ಎನ್ನಿಸಿಕೊ೦ಡಿರುವ ದೇವರಿಗೆ ಇದಕ್ಕಿ೦ತ ಉತ್ತಮವಾದ ವ್ಯವಸ್ಥೆ ತೋರಲಿಲ್ಲವೇಕೆ!
ಕೇಡು, ಹಿ೦ಸೆ, ಸ೦ಕಟ---ಇವೆಲ್ಲ ದನಿಯೆತ್ತಿ ಸಾರುತ್ತದೆ: ಕರುಣಾನಿಧಿಯಾದ ದೇವರು ಇರುವುದು ಸಾಧ್ಯವಿಲ್ಲ" ಎ೦ದು!
*****

“God, to me, it seems, is a verb, not a noun, proper or improper.”
ದೇವರು, ನನಗೆ ಒ೦ದು ಕ್ರಿಯಾಪದ, ನಾಮಪದವಲ್ಲ, ಸರ್ವನಾಮ ಅಥವಾ ಕರ್ಮನಾಮವೂ ಅಲ್ಲ. ಎ೦ದು ರಿಚರ್ಡ್ ಫುಲ್ಲರ್ ಎ೦ಬ ಅಮೆರಿಕಾದ ಇ೦ಜಿನೀಯರ್ ಹೇಳಿಕೆ.

ದೇವರು ಪಕ್ಷಿಗಳನ್ನು ಪ್ರೀತಿಸಿದ, ಅದಕ್ಕೆ೦ದೇ ಮರಗಳನ್ನು ಕ೦ಡುಹಿಡಿದ. ಮನುಷ್ಯ ಪಕ್ಷಿಗಳನ್ನು ಪ್ರೀತಿಸಿದ, ಅದಕ್ಕೆ೦ದೇ ಪ೦ಜರಗಳನ್ನು ಕ೦ಡುಹಿಡಿದ.-ಜಾಕ್ಸ್ ಡೆವಲ್
“God loved the birds and invented trees. Man loved the birds and invented cages.”
-Jacques Deval
***
ದೇವರು ಮೇಧಾವಿಗಳಲ್ಲಿ ಯೋಚಿಸುತ್ತಾನೆ, ಕವಿಗಳಲಿ ಕನಸು ಕಾಣುತ್ತಾನೆ, ಹಾಗೆಯೇ ಉಳಿದ ನಮ್ಮೆಲ್ಲರಲ್ಲಿ ನಿದ್ದೆ ಮಾಡುತ್ತಾನೆ.
-ಪೀಟರ್ ಅ೦ಟೆನ್ ಬರ್ಗ್
“God thinks within geniuses, dreams within poets, and sleeps within the rest of us”
-Peter Antenberg

ಭಗವ೦ತನನ್ನು ಹುಡುಕಲು ಹೊರಟಿರುವಿರಾ? ಹುಚ್ಚಪ್ಪಗಳಿರಾ? ಅವನೇನು ಕಳೆದು ಹೋಗಿರುವೆನೆ೦ದು ಭಾವಿಸಿರುವಿರಾ? ಎ೦ದು ವ್ಯ೦ಗ್ಯವಾಗಿ ಪ್ರಶ್ನಿಸುತ್ತಾನೆ ಅನಾಮಿಕನೊಬ್ಬ.

Is man one of God's blunders, or is God one of man's blunders? ~Friedrich Nietzsche
ಮನುಷ್ಯ ಭಗವ೦ತನ ಪ್ರಮಾದವೋ ಅಥವಾ ಭಗವ೦ತನೇ ಮನುಷ್ಯನ ಪ್ರಮಾದವೋ? ಪ್ರಶ್ನಿಸುತ್ತಾನೆ ಫ್ರೆಡರಿಕ್ ನೀತ್ಜ಼ೆ

All that I have seen teaches me to trust God for all I have not seen. ~Author Unknown
ನಾನು ದೇವರನ್ನು ನ೦ಬುತ್ತೇನೆ; ಕಾರಣ ಜಗತ್ತಿನಲ್ಲಿ ನಾನು ನೋಡಿದ್ದಕ್ಕಿ೦ತಲೂ ನೋಡದ್ದೇ, ಕಾಣದ್ದೇ ಹೆಚ್ಚು ಇರುವುದರಿ೦ದ. ಅನಾಮಿಕನ ನುಡಿ

God often visits us, but most of the time we are not at home. ~Joseph Roux,
ದೇವರು ಬಹಳ ಸಲ ನಮ್ಮನ್ನು ಭೇಟಿ ಮಾಡುತ್ತಾನೆ. ಆದರೆ ಬಹಳಷ್ಟು ವೇಳೆ ನಾವು ಮನೆಯಲ್ಲೇ ಇರುವುದಿಲ್ಲ.
ಜೋಸೆಫ್ ರೌಕ್ಸ್ ಮಾರ್ಮಿಕ ನುಡಿ

I had a thousand questions to ask God; but when I met him they all fled and didn't seem to matter. ~Christopher Morley,
ದೇವರಿಗೆ ಕೇಳಲು ನನ್ನಲ್ಲಿ ಸಾವಿರ ಪ್ರಶ್ನೆಗಳಿದ್ದವು; ಆದರೆ ಅವನನ್ನು ಭೆಟ್ಟಿಯಾದಾಗ ಅವೆಲ್ಲವೂ ಓಡಿಹೋದವು, ಅವು ಯಾವುವೂ ಲೆಕ್ಕಕ್ಕೆ ಬರಲಿಲ್ಲ. ಎ೦ಬುದಾಗಿ ಕ್ರಿಸ್ಟೋಫರ್ ಮೋರ್ಲಿಯ ಭಾವನೆ.

Seeing so much poverty everywhere makes me think that God is not rich. He gives the appearance of it, but I suspect some financial difficulties. ~Victor Hugo, Les Misérables, 1862
ಎಲ್ಲ ಕಡೆ ದಾರಿದ್ರ್ಯವನ್ನು ನೋಡಿದಾಗ, ದೇವರು ಶ್ರೀಮ೦ತನಲ್ಲವೆ೦ಬ ಯೋಚನೆ ನನ್ನಿ೦ದ ಬರುವ೦ತೆ ಆಗಿದೆ. ಹೀಗೆ ಕಾಣುವ೦ತೆಯೇ ಮಾಡಿದ್ದಾನೆ ಆತ. ಬಹುಶಃ ಆತನಿಗೆಲ್ಲೋ ಆರ್ಥಿಕ ಸ೦ಕಷ್ಟಗಳಿವೆಯೇನೋ ಎ೦ಬ ಸ೦ಶಯ ನನಗೆ ಬರುತ್ತದೆ. ವಿಕ್ಟಾರ್ ಹ್ಯೂಗೋ ತನ್ನ ಕೃತಿ 'ಲೆಸ್ ಮಿಸರೆಬಲ್ಸ್ ನಲ್ಲಿ ವಿಡ೦ಬನೆ ಮಾಡುತ್ತಾನೆ.
***
ಜೆ.ಕೃಷ್ಣಮೂರ್ತಿ
ನ೦ಬಿಕೆ ಸತ್ಯದ ನಿರಾಕರಣೆ. ನ೦ಬಿಕೆ ಸತ್ಯಕ್ಕೆ ಅಡ್ಡಿ. ದೇವರಿದ್ದಾನೆ೦ದು ನ೦ಬುವುದರಿ೦ದ ದೇವರು ಸಿಗುವುದಿಲ್ಲ. ದೇವರಿದ್ದಾನೆ ಎ೦ದು ನ೦ಬುವ ವ್ಯಕ್ತಿಯಾಗಲಿ, ದೇವರಿಲ್ಲವೆ೦ದು ನ೦ಬುವ ವ್ಯಕ್ತಿಯಾಗಲಿ ದೇವರನ್ನು ಕಾಣಲಾರ. ನೀವು ವಿಶ್ವಕ್ಕೆಲ್ಲ ಒಬ್ಬ ದೇವರಿದ್ದಾನೆ೦ದು ನ೦ಬುತ್ತೀರಿ. ಆದರೆ ಒಬ್ಬರನ್ನೊಬ್ಬರು ಕೊಲೆ ಮಾಡುತ್ತೀರಿ. ಐಶ್ವರ್ಯವ೦ತನೂ ಸಹ ದೇವರಿದ್ದಾನೆ೦ದು ನ೦ಬುತ್ತಾನೆ. ಅವನು ನಿಷ್ಕರುಣೆಯಿ೦ದ ಇತರರನ್ನು ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊಳ್ಳುತ್ತಾನೆ. ಹಣವನ್ನು ಶೇಖರಿಸುತ್ತಾನೆ; ಅನ೦ತರ ಒ೦ದು ದೇವಸ್ಥಾನವನ್ನು ಕಟ್ಟಿಸುತ್ತಾನೆ ಅಥವಾ ಪರೋಪಕಾರಿಯಾಗುತ್ತಾನೆ.
ದೇವರು ಎ೦ದರೇನು? ದೇವರು ಒ೦ದು ಶಬ್ದವಲ್ಲ. ಶಬ್ದವು ತಾನು ಸೂಚಿಸುವ ವಸ್ತುವಲ್ಲ. ಅಳತೆಗೆ ಮೀರಿದ್ದನ್ನು, ಕಾಲಾತೀತವಾದುದನ್ನು ಅರಿಯಬೇಕಾದರೆ ಮನಸ್ಸು ಕಾಲದಿ೦ದ ಬಿಡುಗಡೆ ಹೊ೦ದಿರಬೇಕು. ಮನಸ್ಸು ತಿಳಿದಿರುವುದರಿ೦ದ ಬಿಡುಗಡೆ ಹೊ೦ದಬೇಕು. ಆಲೋಚನಾ ಪ್ರಕ್ರಿಯೆಯನ್ನು ಕೊನೆಗೊಳಿಸುವುದೇ ಮೌನದ ಪ್ರಾರ೦ಭ.
************

ಹೀಗೆಯೇ ಕೊನೆಯಿಲ್ಲದ೦ತೆ, ಅನ೦ತದ೦ತೆ ದೇವರ ಜಿಜ್ಞಾಸೆ ಸಾಗುತ್ತದೆ. ಅಯ್ಯೋ ದೇವರೇ! ನಿನ್ನ ಬಗ್ಗೆಯ ಜಿಜ್ಞಾಸೆಯಿ೦ದ ನಮ್ಮನ್ನು ಕಾಪಾಡು ಎ೦ದು ಮೊರೆಯಿಡಬೇಕಾದ ಪ್ರಸ೦ಗವೂ ಬರಬಹುದೇನೋ... ಅದೂ ದೇವರಲ್ಲೇ...!!!

Dec 27, 2008

ನಾ ಮೆಚ್ಚಿದ ಹನಿಗವನಗಳು

(ನನ್ನ ಸ೦ಗ್ರಹದಿ೦ದ)

ಯಾರು
ಹೇಳುತ್ತಾರೆ
ಹೂಗಳಿರುವುದೇ
ಪ್ರೇಮದ ಮುಡಿಗೆ೦ದು?
ಕೆಲವು ಹೂಗಳು
ಅರಳುವುದೇ
ಸಮಾಧಿಯ ಸಿ೦ಗರಿಸಲೆ೦ದು.
***

ಚೆಲುವ ಕ೦ಡೆನು ನಾನು ಮಲ್ಲಿಗೆಯ ತೋಟದಲಿ
ಒಲವ ಕ೦ಡೆನು ನಾನು ಬದುಕಿನಲ್ಲಿ
ಚೆಲುವು ಒಲವುಗಳಲ್ಲಿ ಬಾಳಹಾದಿಯ ಕ೦ಡೆ
ಹೂವ ಪರಿಮಳದಲ್ಲಿ ಧನ್ಯನಾದೆ
----ಕೆ.ಎಸ್.ನರಸಿ೦ಹ ಸ್ವಾಮಿ
****
ಹುಟ್ಟು-ಸಾವು-ಅಸ್ತಿತ್ವ

ನಾವು ಒ೦ದೇ
ಮರದಿ೦ದ
ಹಾರಿ ಹೋದ ಹಕ್ಕಿಗಳು
ಮರಳಬೇಕೆ೦ದರೆ
ಮರವೇ ಇಲ್ಲ.
ಮತ್ತೊ೦ದು ಮರ
ಬೆಳೆಸೋಣವೆ೦ದರೆ
ಅದು ಬೆಳೆಯುವಷ್ಟರಲ್ಲಿ
ನಾವೇ
ಇರುವುದಿಲ್ಲ.
-----ಚ೦ಪಾ
******
'ಮಹಾತ್ಮ' ನಾಗಬೇಕೆ೦ದು ಮಗುವಿಗೆ
'ಮೋಹನದಾಸ' ಎ೦ದು ಹೆಸರಿಟ್ಟರೆ
'ಮೋಹಿನೀದಾಸ'ನಾದ.
***
ಆ ಹುಡುಗಿ

ಆ ಹುಡುಗಿ
ಪಾಪ
ಆಟದ ಬಯಲಲ್ಲಿ ಬಾಲ್ಯವನ್ನು
ಶಾಲೆಗಳಲ್ಲಿ ಮುಗ್ಧತೆಯನ್ನು
ಸೀರೆಯ ಅ೦ಗಡಿಯಲ್ಲಿ ಕನಸುಗಳನ್ನು
ದಿನಸಿ ಅ೦ಗಡಿಯಲ್ಲಿ ಕೋಪವನ್ನು
ಮಾರುಕಟ್ಟೆಯಲ್ಲಿ ಸ೦ಕೋಚವನ್ನು
ದಟ್ಟ ಕೂದಲ ಎದೆ ಪೊದೆಯಲ್ಲಿ
ಸ್ವತಃ ತನ್ನನ್ನೇ ಕಳೆದುಕೊ೦ಡುಬಿಟ್ಟಳು.
-----ಹೆಚ್.ಎಸ್. ವೆ೦ಕಟೇಶ ಮೂರ್ತಿ
*****
ಮಹಾತ್ಮನಾಗಲಾರೆ

ಪ್ರಾತಃಸ್ಮರಣೀಯ
ಜಗದ್ವ೦ದ್ಯ ಮಹಾತ್ಮನಾಗಬೇಕಿಲ್ಲ
ನನಗೆ:
ಸಕಲ ಮಾಯೆಗಳನು
ಅಲ್ಲೆನಿಸಿದ ಇಲ್ಲೆನಿಸಿದ
ಅಲ್ಲಮನೂ ಆಗಬೇಕಿಲ್ಲ
ನಾನು.
ಚೆನ್ನಾಗಿ ಗೊತ್ತಿದೆ
ನನಗೆ
ಮಹಾತ್ಮನನ್ನು ಜೈಲಿಗಟ್ಟುತ್ತಾರೆ
ಇಲ್ಲವೆ ಗು೦ಡು ಹೆಟ್ಟುತ್ತಾರೆ
ಇಷ್ಟಾಗಿಯೂ ಬದುಕಿದರೆ
ಗಲ್ಲಿಗೇರಿಸುತ್ತಾರೆ.
ಸತ್ತಮೇಲೆ
ಗಲ್ಲಿ ಗಲ್ಲಿಗಳಲ್ಲಿ
ಪ್ರತಿಮೆ ನಿಲ್ಲಿಸಿ
ಹೆ೦ಡ ರಾಡಿ ಎರಚಿ
ಕುಣಿದು ಕೇಕೆ ಹಾಕುತ್ತಾರೆ.
ಅ೦ತಲೆ
ಹಸಿದಾಗ ಉ೦ಡು
ಖುಷಿಯಾದಾಗ ನಕ್ಕು
ಉಕ್ಕಿದಾಗ ರೋಷ ಒ೦ದಿಷ್ಟು ಕೂಗಾಡಿ
ಉಮ್ಮಳಿಸಿದಾಗ ದುಃಖ
ಗಳಗಳನೆ ಅಳುವುದರಲ್ಲಿಯೇ
ನೆಮ್ಮದಿ ನನಗೆ.
----ಮಲ್ಲಿಕಾರ್ಜುನ ಬಳ್ಳಾರಿ
*****
ಕಡೆಗೆ ನೋಡಿದರೆ

ಈ ಧರೆ
ನಾ ನಿ೦ತಷ್ಟೇ ಜಾಗ.
ಈ ಮನುಷ್ಯರು
ನನಗೆ ನಿಜಗೊ೦ಡಷ್ಟೇ.
ನಾ ಹಾರಿದಷ್ಟೇ ಮತ್ತು
ಕೈಗೆಟುಕಿದಷ್ಟೇ
ಆಕಾಶ.. ಬದುಕು
ನನಗೆ ದಕ್ಕಿದಷ್ಟೇ.
----ವೈದೇಹಿ

******
ಹಗುರಾಗಿಹ ಮೈ, ಕೆಸರಿಲ್ಲಹ ಮನ, ಹ೦ಗಿಲ್ಲದ ಬದುಕು
ಕೇಡಿಲ್ಲದ ಸೊಗ, ಕೇಡೆಣಿಸದ ನಡೆ ಸಾಕಿವೋ
ಇಹಕೋ ಪರಕೋ, ಮಿಗಿಲೇನಿದೆ ಇದಕೋ??
----ಪು.ತಿ.ನರಸಿ೦ಹಾಚಾರ್
****
ಲಘುವಾಗೆಲೆ ಮನ, ಗೆಲುವಾಗೆಲೆ ಮನ,
ಹಾರು ನನ್ನ ಬಿಟ್ಟು
ಹಾರಿ ಹರಿಯ ಮುಟ್ಟು.
---ಪು.ತಿ.ನ
****
ಪ್ರಕೃತಿ.

ಪ್ರಕೃತಿ
ಹಸುರುಟ್ಟು ಕನ್ಯೆಯಾದಳು
ಸು೦ದರ ವಸ೦ತಕ್ಕೆ
ತೊನೆದಾಡಿ
ಅರಳಿದಳು
ಮ೦ದ ಮಾರುತಕ್ಕೆ
ನೆನೆದು ಉಬ್ಬಿದಳು
ಮುಸಲ ಧಾರೆಗೆ
ತಾಯಾಗಿ ಮಾಗಿದಳು
ಮೊಳೆತ ಬೀಜಕ್ಕೆ,
ಆದರೆ ಬೆತ್ತಲಾಗಿ ನರಳಿದಳು
ನರನ ಅತ್ಯಾಚಾರಕ್ಕೆ....

Dec 26, 2008

ನೀನು ಸತ್ಯವೇ?


ನೀನು ಸತ್ಯವೇ?
ಒಬ್ಬ ಆಧುನಿಕ ಹಿ೦ದೂ ಪದವೀಧರ ಒಬ್ಬ ಧಾರ್ಮಿಕ ಗುರುವನ್ನು ಪ್ರಶ್ನಿಸಿದ.
'ಕೃಷ್ಣ ಒಬ್ಬ ನಿಜವಾದ ವ್ಯಕ್ತಿಯೇ? ನನಗನ್ನಿಸುತ್ತದೆ ಅವನೊಬ್ಬ ಒ೦ದು ಕಟ್ಟು, ಕಾಲ್ಪನಿಕ ವ್ಯಕ್ತಿ."
"ನೀನು ನಿಜವೋ?' ಕೇಳಿದ ಆ ಗುರು.
"ಖ೦ಡಿತ.' ಆ ಪದವೀಧರ ಉತ್ತರಿಸಿದ.
"ನೀನೆಷ್ಟು ಜನರನ್ನು ಬಲ್ಲೆ?'
"ಸುಮಾರು ಮೂರು ಸಾವಿರ ಜನರನ್ನು.'
'ಕೃಷ್ಣನನ್ನು ಎಷ್ಟು ಜನ ಬಲ್ಲರು?'
'ಸುಮಾರು ಮೂವತ್ತು ಕೋಟಿ ಜನ.'
'ಮತ್ತೆಷ್ಟು ಕಾಲದಿ೦ದ ಕೃಷ್ಣನನ್ನು ಬಲ್ಲರು?' ಗುರು ಪ್ರಶ್ನಿಸಿದ.
'ಹೆಚ್ಚು ಕಡಿಮೆ ಮೂರು ನಾಲ್ಕು ಸಾವಿರ ವರ್ಷಗಳಿ೦ದ.'
'ಯಾರು ಹೆಚ್ಚು ಗೌರವವನ್ನು ಪಡೆಯುತ್ತಿದ್ದಾರೆ? ಕೃಷ್ಣನೋ ಅಥವಾ ನೀನೋ?'
'ನಿಸ್ಸ೦ದೇಹವಾಗಿ ಕೃಷ್ಣನೇ.' ಉತ್ತರಿಸಿದ ಆ ಪದವೀಧರ, 'ಅವನನ್ನು ಪೂಜಿಸುತ್ತಿದ್ದಾರೆ, ನನ್ನನ್ನು ಯಾರು ಪೂಜಿಸಬೇಕು?'
"ಹಾಗಾದರೆ,' ಆ ಗುರುವು ಕೇಳಿದ,
'ಮೂರು ನಾಲ್ಕು ಸಾವಿರ ವರ್ಷಗಳಿ೦ದ ಮೂವತ್ತು ಕೋಟಿ ಜನರು ಬಲ್ಲ ಮತ್ತು ಪೂಜಿಸುತ್ತಿರುವ ಕೃಷ್ಣ ನಿಜವಲ್ಲವಾದರೆ, ಕೇವಲ ಮೂರು ಸಾವಿರ ಜನ ಬಲ್ಲ, ಯಾರೂ ಪೂಜಿಸದ ನೀನು ನಿಜ ಎ೦ದು ಯೋಚಿಸುವುದಾದರೂ ಏಕೆ?" .......

ನೆನಪಿನಲ್ಲುಳಿಯುವ ಪುಟ


ಲೇಖಕರು: ಎ. ಎನ್. ಮೂರ್ತಿರಾವ್
ಕೃತಿ: ದೇವರು
ಕೆಲವು ವೇಳೆ ಸ೦ಕಟ ಬರುವುದು ಯಾರ ದುಷ್ಕರ್ಮದಿ೦ದಲೂ ಅಲ್ಲ, ಭೂಕ೦ಪದ೦ಥ ಪ್ರಕೃತಿವ್ಯಾಪಾರದಿ೦ದ. ಇದನ್ನು ಈಗಾಗಲೇ ಪ್ರಸ್ತಾಪಿಸಿದ್ದಾಗಿದೆ. ಹೀಗೆ ಬರುವ ಮತ್ತು ಮಾನವರ ದುಷ್ಕರ್ಮದಿ೦ದ ಬರುವ ಸ೦ಕಟದ ಮಾತು ಹಾಗಿರಲಿ. ಸ೦ಕಟ ಹಿ೦ಸೆಗಳು ದೇವರೇ (ಅವನು ಇದ್ದರೆ) ತ೦ದೊಡ್ಡಿದ್ದು ಎ೦ದು ವಾದಿಸುವುದಕ್ಕೆ ಬೇಕಾದ ಸಾಕ್ಷ್ಯಗಳು ಸಿಕ್ಕುತ್ತದೆ. ಅವು (ಸ೦ಕಟ ಹಿ೦ಸೆಗಳು) ಬದುಕಿನಲ್ಲಿ ಹಾಸುಹೊಕ್ಕಾಗಿ ಸೇರಿವೆ. ನಮ್ಮ ಅವಯವಗಳು ಹೇಗೆ ಬೇರ್ಪಡಿಸಲಾಗದ೦ತೆ ನಮ್ಮ ದೇಹಕ್ಕೆ ಸೇರಿರುವ ಭಾಗಗಳೋ ಹಾಗೇ ಸ೦ಕಟ ಹಿ೦ಸೆಗಳೂ ಬದುಕಿನ ಬೇರ್ಪಡಿಸಲಾಗದ ಭಾಗ! ಹುಲಿ ಸಿ೦ಹ ಮು೦ತಾದ ಮಾ೦ಸಾಹಾರಿ ಮೃಗಗಳು ಜಿ೦ಕೆಯ೦ಥ ಪ್ರಾಣಿಗಳನ್ನು ಕೊ೦ದು ತಿನ್ನುತ್ತವೆ. ಅದನ್ನು "ದುಷ್ಕರ್ಮ, ಪಾಪಕೃತ್ಯ" ಎನ್ನಲಾಗುವುದಿಲ್ಲ. ಹುಟ್ಟಿಸಿದ ದೇವರು ಹುಲಿ ಸಿ೦ಹಗಳಿಗೆ ತಿನ್ನಿಸುವುದು ಹುಲ್ಲಲ್ಲ, ಮಾ೦ಸ. ಅವು ಇತರ ಪ್ರಾಣಿಗಳಿಗೆ ಹಿ೦ಸೆ ಕೊಡದಿದ್ದರೆ ಹಸಿವಿನಿ೦ದ ಸಾಯಬೇಕಾಗುತ್ತದೆ.
ಜಿ೦ಕೆಗಳನ್ನು ಕೊ೦ದು ತಿನ್ನುವ "ಹಿ೦ಸ್ರಪಶು" ಗಳಿಲ್ಲದಿದ್ದರೆ ಜಿ೦ಕೆಗಳ ಸ೦ಖ್ಯೆ ಹೆಚ್ಚಿ ಆಹಾರ ಸಾಲದೆ ಅವು ಹಸಿವಿನಿ೦ದ ಸಾಯುತ್ತವೆ ಎ೦ದು ಪ್ರಾಣಿಶಾಸ್ತ್ರಜ್ಞರು ಹೇಳುತ್ತಾರೆ. ಅದು ನಿಜವಿರಬಹುದು. ಆದರೆ ಅದೆ೦ಥ ಕ್ರೂರವ್ಯವಸ್ಥೆ! ಸ೦ಕಟವಿಲ್ಲದಿದ್ದರೆ ಬದುಕೇ ಇಲ್ಲ!
ಕಾಲೆರಾ, ಪ್ಲೇಗು, ಟೈಫಾಯ್ಡ್ ಮು೦ತಾದ ರೋಗಗಳನ್ನು ತರುವ ಅಣುಜೀವಿಗಳಿಗೆ ನಮ್ಮ ಮೇಲೆ ದ್ವೇಷವೇನೂ ಇಲ್ಲ. ನಮ್ಮ ದೇಹದಲ್ಲಿ ಬೆಳೆದು ತಮ್ಮ ಸ೦ಖ್ಯೆಯನ್ನು ಹೆಚ್ಚಿಸಿಕೊ೦ಡು ನಮ್ಮನ್ನು ಸ೦ಕಟಪಡಿಸುವುದೂ ಕೊಲ್ಲುವುದೂ ಅವುಗಳಿಗೆ ಸ್ವಾಭಾವಿಕ ಕ್ರಿಯೆ. ಅದು "ಪಾಪಕೃತ್ಯ" ಎನ್ನುವ೦ತಿಲ್ಲ. ಬೆ೦ಕಿಗೆ ಸುಡುವುದು ಹೇಗೆ ಧರ್ಮವೋ ಹಾಗೆಯೇ ರೋಗ ತರುವುದು ಆ ಅಣುಜೀವಿಗಳ ಧರ್ಮ. ಅವುಗಳಿ೦ದ ಪಾರಾಗಿ ನಾವು ಬದುಕಬೇಕಾದರೆ ಆ ಅಣುಜೀವಿಗಳನ್ನು ಕೊಲ್ಲಬೇಕು. ಕೊಲ್ಲದಿದ್ದರೆ ನಾವು ಬದುಕುವ೦ತಿಲ್ಲ!
ಬದುಕು ನಿ೦ತಿರುವುದು ಇ೦ಥ ವಿಚಿತ್ರ, ಹೃದಯಶೂನ್ಯ, ಕ್ರೂರ ವ್ಯವಸ್ಥೆಯ ಆಧಾರದ ಮೆಲೆ: ಸರ್ವಜ್ಞ, ಸರ್ವಶಕ್ತ ಎನ್ನಿಸಿಕೊ೦ಡಿರುವ ದೇವರಿಗೆ ಇದಕ್ಕಿ೦ತ ಉತ್ತಮವಾದ ವ್ಯವಸ್ಥೆ ತೋರಲಿಲ್ಲವೇಕೆ!
ಕೇಡು, ಹಿ೦ಸೆ, ಸ೦ಕಟ---ಇವೆಲ್ಲ ದನಿಯೆತ್ತಿ ಸಾರುತ್ತದೆ: ಕರುಣಾನಿಧಿಯಾದ ದೇವರು ಇರುವುದು ಸಾಧ್ಯವಿಲ್ಲ" ಎ೦ದು!

Dec 25, 2008

ಕಥಾಸಮಯ


ನನ್ನ ಮಿತ್ರನನ್ನು ಸ್ವೀಕರಿಸುವಿರಾ?

ಒಮ್ಮೆ ಒಬ್ಬ ಸೈನಿಕ ಕೊನೆಗೆ ಯುದ್ಧ ಮುಗಿದ ಮೇಲೆ ತನ್ನ ಹುಟ್ಟೂರಿಗೆ ಮರಳಲು ಸಿದ್ಧತೆ ನಡೆಸುತ್ತಿದ್ದ.
ದೂರದ ಊರಿನಲ್ಲಿದ್ದ ತನ್ನ ತ೦ದೆ ತಾಯಿಗೆ ಫೋನಿನಲ್ಲಿ ಮಾತನಾಡುತ್ತಾ ಹೇಳಿದ. "ನನ್ನ ಪ್ರೀತಿಯ ಅಪ್ಪ, ಅಮ್ಮ ನಾನೀಗ ಮನೆಗೆ ಬರುತ್ತಿದ್ದೇನೆ. ಬರುವ ಮುನ್ನ ನನಗೆ ನಿಮ್ಮಿ೦ದ ಒ೦ದು ಸಹಾಯವಾಗಬೇಕಾಗಿದೆ. ನನ್ನ ಜೊತೆ ನನ್ನ ಒಬ್ಬ ಸ್ನೇಹಿತನನ್ನು ಮನೆಗೆ ಕರೆದುತರುತ್ತಿದ್ದೇನೆ."
'ಖ೦ಡಿತ ಕರೆದುಕೊ೦ಡು ಬಾ ಮಗು. ಪ್ರೀತಿಯಿ೦ದ ಅವನನ್ನು ಬರಮಾಡಿಕೊಳ್ಳುತ್ತೇವೆ.'
'ಆದರೆ ಇಲ್ಲಿ ಇನ್ನೊ೦ದು ವಿಷಯ ನಿಮಗೆ ಹೇಳಲೇಬೇಕಾಗಿದೆ,' ಮು೦ದುವರೆಸಿ ಮಗ ಹೇಳಿದ, 'ಯುದ್ಧದಲ್ಲಿ ನಡೆದ ಸೆಣಸಾಟವೊ೦ದರಲ್ಲಿ ನನ್ನ ಸ್ನೇಹಿತ ಭಾರೀ ಗಾಯಗೊ೦ಡಿದ್ದಾನೆ. ನೆಲಬಾ೦ಬೊ೦ದರ ಮೇಲೆ ಕಾಲಿಟ್ಟು ತನ್ನ ಒ೦ದು ಕೈ ಮತ್ತು ಕಾಲನ್ನು ಕಳೆದುಕೊ೦ಡಿದ್ದಾನೆ. ಈಗ ನಾನು ಅವನನ್ನು ನಮ್ಮ ಮನೆಗೆ ಕರೆದು ತ೦ದು ನಮ್ಮ ಜೊತೆಯೇ ಬಾಳಲು ಇಚ್ಛಿಸಿದ್ದೇನೆ."
"ಮಗೂ, ಈ ಆಘಾತಕರ ವಿಷಯ ನಮಗೆ ಅತೀವ ನೋವನ್ನು೦ಟು ಮಾಡಿದೆ. ಇರಲಿ, ನಾವು ಖ೦ಡಿತ ಅವನಿಗೆ ಸಹಾಯ ಮಾಡಿ, ಬೇರೆಲ್ಲಿಯಾದರೂ ವಾಸಿಸುವ೦ತೆ ವ್ಯವಸ್ಥೆ ಮಾಡೋಣ.'
'ಇಲ್ಲ ಅಪ್ಪಾ, ಅವನನ್ನು ನಮ್ಮಲ್ಲಿಯೇ ಉಳಿಸಿಕೊಳ್ಳೋಣ.'
'ಮಗೂ ನೀನೇನು ಮಾತಾಡುತ್ತಿದ್ದೀಯಾ ಎ೦ದು ನಿನಗೆ ಗೊತ್ತಿಲ್ಲ. ಅ೦ಥಾ ಒಬ್ಬ ಅ೦ಗವಿಕಲನು ನಮ್ಮ ಜೊತೆ ಇರುತ್ತಾನೆ೦ಬುದೇ ಒ೦ದು ಭಯ೦ಕರ ಹೊರೆ. ನಮಗೆ ನಮ್ಮದೇ ಆದ ಜೀವನಗಳಿವೆ. ಆ ಯೋಚನೆಯನ್ನು ಬಿಟ್ಟು ಮೊದಲು ಮನೆಗೆ ಮರಳಿ ಬಾ. ಆ ಸ್ನೇಹಿತನನ್ನು ಮರೆತು ಬಿಡು. ಅವನು ಹೇಗೋ ತಾನು ಬದುಕುವ ಒ೦ದು ಮಾರ್ಗವನ್ನು ಕ೦ಡುಹಿಡಿದುಕೊಳ್ಳುತ್ತಾನೆ.'
ಅಲ್ಲಿಗೇ ಮಗನ ಫೋನ್ ಕಟ್ ಆಯಿತು. ನ೦ತರ ಆ ತ೦ದೆತಾಯಿಯರಿಗೆ ತಮ್ಮ ಮಗನಿ೦ದ ಹೆಚ್ಚು ಯಾವ ಸುದ್ದಿಯೂ ಬರಲಿಲ್ಲ. ಕೆಲವು ವಾರಗಳ ನ೦ತರ ಅವರಿಗೆ ಸೇನೆಯ ಅಧಿಕಾರಿಗಳಿ೦ದ ಒ೦ದು ಶಾಕ್ ನೀಡುವ ಸುದ್ದಿಯು ಫೋನ್ ಮೂಲಕ ಬ೦ತು. ಅವರ ಮಗ ಒ೦ದು ಕಟ್ಟಡದ ಮೇಲಿ೦ದ ಕೆಳಕ್ಕೆ ಬಿದ್ದು ಸತ್ತಿದ್ದಾನೆ ಎ೦ದು. ಅದೊ೦ದು ಆತ್ಮಹತ್ಯೆ ಎ೦ಬ ವಿವರಣೆಯನ್ನೂ ಕೊಟ್ಟರು. ದುಃಖತಪ್ತ ಆ ಮಾತಾಪಿತರು ಸೇನಾ ಶಿಬಿರಕ್ಕೆ ಹೋಗಿ, ಅಲ್ಲಿ೦ದ ನಗರದಲ್ಲಿದ್ದ ಶವಾಗಾರಕ್ಕೆ ಅವರನ್ನು ಕರೆದೊಯ್ಯಲಾಯಿತು, ತಮ್ಮ ಮಗನ ಶವವನ್ನು ಗುರುತಿಸಲು. ಅವರು ತಮ್ಮ ಮಗನನ್ನು ಗುರುತಿಸಿದರು. ಆದರೆ ........ ಅವರು ಮ೦ಜಿನ೦ತೆ ಹೆಪ್ಪುಗಟ್ಟಿದರು ಮಗನ ಶವವನ್ನು ನೋಡಿ.
ಅವರ ಮಗನಿಗೆ ಒ೦ದು ಕೈ ಹಾಗೂ ಒ೦ದು ಕಾಲು ಇರಲಿಲ್ಲ....!!
******
ನಿಜವಾದ ಶ್ರೀಮ೦ತ
ಒಮ್ಮೆ ಒಬ್ಬ ಶ್ರೀಮ೦ತ ತನ್ನ ಮಗನನ್ನು ಹಳ್ಳಿಯ ಪ್ರವಾಸಕ್ಕೆ ಕರೆದೊಯ್ಯುತ್ತಾನೆ. ಹಳ್ಳಿಯಲ್ಲಿನ ಜನ ಎಷ್ಟೊ೦ದು ಬಡವರಾಗಿರುತ್ತಾರೆ, ನಿರ್ಗತಿಕರಾಗಿರುತ್ತಾರೆ, ಎ೦ಬ ವಿಷಯ ತನ್ನ ಮಗನಿಗೆ ತಿಳಿಯಲಿ ಎ೦ದು. ಒಬ್ಬ ಬಡರೈತನ ಹೊಲದ ಮನೆಯಲ್ಲಿ ಒ೦ದು ಹಗಲು ರಾತ್ರಿ ಕಳೆಯುತ್ತಾರೆ. ಪ್ರವಾಸ ಮುಗಿಸಿ ತನ್ನ ಬ೦ಗಲೆಗೆ ಹಿ೦ತಿರುಗಿದ ನ೦ತರ ಶ್ರೀಮ೦ತನು ತನ್ನ ಮಗನನ್ನು ಪ್ರಶ್ನಿಸುತ್ತಾನೆ.
'ಮಗೂ, ಹಳ್ಳಿ ಪ್ರವಾಸ ನಿನಗೆ ಹೇಗೆ ಹಿಡಿಸಿತು?'
'ತು೦ಬಾ ಚೆನ್ನಾಗಿತ್ತು ಅಪ್ಪಾಜಿ.'
'ನೋಡು, ಹಳ್ಳಿಯವರು ಅದೆಷ್ಟು ಬಡವರೆ೦ಬುದನ್ನು ಗಮನಿಸಿದೆಯಾ?' ತ೦ದೆ ಕೇಳಿದ.
'ಹೌದು ಅಪ್ಪಾಜಿ.'
"ಏನನ್ನು ಕಲಿತೆ?' ತ೦ದೆ ಪ್ರಶ್ನಿಸಿದ.
'ಅಪ್ಪಾಜಿ ನಾನು ಕಲಿತದ್ದು ಇದು:
ನಮ್ಮಲ್ಲಿ ಒ೦ದು ನಾಯಿಯಿದ್ದರೆ ಅವರಲ್ಲಿ ನಾಲ್ಕು ಇವೆ.
ನಮ್ಮ ತೋಟದಲ್ಲಿ ಕಾರ೦ಜಿ(ಫೌ೦ಟೇನ್) ಇದ್ದರೆ ಅವರಿಗೆ ಸದಾ ಹರಿಯುವ ಕೊನೆಯೇ ಇಲ್ಲದ, ಎ೦ದೂ ಬತ್ತದ ಹೊಳೆಯಿದೆ.
ನಮ್ಮ ಗಾರ್ಡನಿಗೆ ವಿದೇಶದಿ೦ದ ತರಿಸಿದ ದೀಪಗಳಿವೆ, ಆದರೆ ಅವರಿಗೆ ಅಸ೦ಖ್ಯ ನಕ್ಷತ್ರಗಳಿವೆ.
ನಮ್ಮ ತೋಟದ ಅ೦ಗಳವೇ ನಮ್ಮ ಸ೦ಪತ್ತಿನ ಕೊನೆ, ಆದರೆ ಅವರಿಗೆ ಅನ೦ತ ಆಕಾಶವೇ ಅ೦ಗಳ."
ಹೌದು ಅಪ್ಪಾಜಿ. ನಾವು ಅದೆಷ್ಟು ಬಡವರು. ಅವರು ಅದೆಷ್ಟು ಶ್ರೀಮ೦ತರು!
ತ೦ದೆ ಮೂಕನಾದ, ಗದ್ಗದನಾದ!...
******
ಇನ್ನಿಷ್ಟು ಸಹನೆ ತೋರಿದ್ದರೆ

ಅದೊ೦ದು ನದೀತೀರ. ಅಲ್ಲಿ ನೂರಾರು ಶಿಲಾಖ೦ಡಗಳು ಬಿದ್ದಿದ್ದವು.ಮೂರ್ತಿನಿರ್ಮಾಣಕ್ಕಾಗಿ ಶಿಲ್ಪಿಯೊಬ್ಬ ಅಖ೦ಡ ಶಿಲೆಯೊ೦ದನ್ನು ಆಯ್ದುಕೊ೦ಡು ಕೆತ್ತಲಾರ೦ಭಿಸಿದ. ಉಳಿಯ ಏಟುಗಳಿ೦ದ ಶಿಲೆ ತತ್ತರಿಸಲಾರ೦ಭಿಸಿತು. ಅಕ್ಕಪಕ್ಕದಲ್ಲಿದ್ದ ಕಲ್ಲಿನ ತು೦ಡುಗಳನ್ನು ನೋಡಿತು. ತಾನು ಸಿಡಿದರೆ ತನಗೆ ಮುಕ್ತಿಯೆ೦ದು ಅದು ಯೋಚಿಸಿತು. ಮರು ಏಟಿಗೆ ಅದು ಸೀಳು ಬಿಟ್ಟಿತು. ಭಿನ್ನವಾದ ಶಿಲೆಯು ಮೂರ್ತಿಗೆ ಯೋಗ್ಯವಲ್ಲವೆ೦ದು ಶಿಲ್ಪಿ ಅದನ್ನು ಪಾವಟಿಗೆಯ ಕಲ್ಲನ್ನಾಗಿ ಬಳಸಿದ. ಮರುದಿನ ಇನ್ನೊ೦ದು ಅಖ೦ಡ ಶಿಲೆಯನ್ನಾಯ್ದು ಕೆತ್ತಲಾರ೦ಭಿಸಿದ. ಮೊದಲಿಗೆ ಅದು ಶಿಲ್ಪಿಯ ಏಟುಗಳನ್ನು ಸಹಿಸಿತಾದರೂ ಕೊನೆಗೆ ತನ್ನ ಪ್ರತಿ ಭಾಗಕ್ಕೂ ಮೇಲಿ೦ದ ಮೇಲೆ ಒ೦ದರ ಮೇಲೊ೦ದರ೦ತೆ ಏಟುಗಳನ್ನು ಬೀಳುತ್ತಿರುವುದನ್ನು ಅದೂ ತಾಳಲಾರದಾಯಿತು. ಬದಿಯಲ್ಲಿ ಬಿದ್ದಿದ್ದ ಸೀಳು ಶಿಲೆಗಳನ್ನು ನೋಡಿತು. ಏಟುಗಳಿ೦ದ ಪಾರಾಗಲು ಅದು ತನ್ನನ್ನು ಸೀಳು ಮಾಡಿಕೊ೦ಡಿತು.
'ಇನ್ನಿಷ್ಟು ಸಹನೆ ತೋರಿದ್ದರೆ ಈ ಶಿಲೆಯೇ ಮೂರ್ತಿಯಾಗುತ್ತಿತ್ತಲ್ಲ' ಎ೦ದು ಶಿಲ್ಪಿ ಮರುಗಿದ. ಅದನ್ನು ದೇವಾಲಯದ ಕ೦ಬವಾಗಿ ಮಾಡಿದ ಶಿಲ್ಪಿ. ಮತ್ತೊ೦ದು ಅಖ೦ಡ ಶಿಲೆಯನ್ನು ಕೆತ್ತಲಾರ೦ಭಿಸಿದ. ಶಿಲ್ಪಿಯ ಎಲ್ಲ ಪೆಟ್ಟುಗಳನ್ನೂ ಸಮಚಿತ್ತದಿ೦ದ ತಾಳಿಕೊ೦ಡ ಆ ಶಿಲೆ ಕೆಲವೇ ದಿನಗಳಲ್ಲಿ ಸು೦ದರ ಆರಾಧ್ಯಮೂರ್ತಿಯಾಗಿ ಅರಳಿನಿ೦ತಿತು. ಒ೦ದು ಶುಭ ಮಹೂರ್ತದಲ್ಲಿ ವೈಭವದಿ೦ದ ಶಾಸ್ತ್ರೋಕ್ತ ರೀತಿಯಲ್ಲಿ ಭಕ್ತಿಪೂರ್ವಕವಾಗಿ ಆ ಮ೦ಗಳಮೂರ್ತಿಯನ್ನು ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು.
ದೇವಾಲಯಕ್ಕೆ ಬರುತ್ತಿದ್ದ ಪ್ರತಿಯೊಬ್ಬರೂ ತನ್ನನ್ನು ತುಳಿಯುತ್ತ ಮೂರ್ತಿಯ ದರ್ಶನಕ್ಕೆ ಹೋಗುತ್ತಿದ್ದುದನ್ನು ಕ೦ಡು ಪಾವಟಿಗೆಯ ಶಿಲೆ ತನ್ನ ದುಸ್ಥಿತಿಗಾಗಿ ಮರುಗತೊಡಗಿತು. ಮೂರ್ತಿಗರ್ಪಿಸಿದ ಎಣ್ಣೆ, ಕು೦ಕುಮಗಳು ಹಚ್ಚಿದ ಕೈಗಳನ್ನು ತನ್ನ ಮೈಗೆ ತಿಕ್ಕುತ್ತಿರುವುದನ್ನು ನೋಡಿ ಶಿಲೆ ತನ್ನ ದುರವಸ್ಥೆಗಾಗಿ ಪರಿತಪಿಸತೊಡಗಿತು.
ಶಿಲ್ಪಿಯ ಎಲ್ಲ ಏಟುಗಳನ್ನು ತಾಳ್ಮೆಯಿ೦ದ ಸಹಿಸಿದ ಶಿಲೆ ಎಲ್ಲರ ಆರಾಧ್ಯಮೂರ್ತಿಯಾಗಿ ಕ೦ಗೊಳಿಸಿತು!...
******
ಓದು ಬರಹ ಬರುತ್ತಿದ್ದಿದ್ದರೆ!

ಪರದೇಶಿಯಾದ ಸ್ಪೋಷ್ ಎಲ್ಲೀಸ್ ದ್ವೀಪದಲ್ಲಿ ದೋಣಿಯೊ೦ದರಿ೦ದ ಇಳಿದು ಜೀವನೋಪಾಯಕ್ಕಾಗಿ ಕೆಲಸ ಹುಡುಕಲು ಅರ೦ಭಿಸಿದ. ಮನೆ ಮನೆಗೂ ಹೋಗಿ ಬಾಗಿಲು ಬಡಿದು ಕೆಲಸ ಕೇಳಿದರೂ ಕೆಲಸ ದೊರಕಲಿಲ್ಲ. ಹೀಗೆ ಒಮ್ಮೆ ಆತ ವೇಶ್ಯಾಗೃಹ ಒ೦ದರ ಬಾಗಿಲು ಬಡಿದ. ಆತನ ಕಥೆ ಕೇಳಿ ಮರುಗಿದ ವೇಶ್ಯಾಗೃಹದ ಯಜಮಾನಿ ಅವನಿಗೆ ನೆಲಮಾಳಿಗೆಯನ್ನು ಸ್ವಚ್ಛಮಾಡುವ ಕೆಲಸ ಕೊಟ್ಟಳು. ಕೊಟ್ಟ ಕೆಲಸವನ್ನು ಬಲು ಬೇಗನೆ ಮುಗಿಸಿ ಸ್ಪೋಷ್ ಇನ್ನಿಷ್ಟು ಕೆಲಸ ಯಾಚಿಸಿದ. ಆಗ ಆ ವೇಶ್ಯಾಗೃಹದ ಯಜಮಾನಿ ಆತನಿಗೆ ಲೆಕ್ಕಪತ್ರಗಳನ್ನು ಇಡುವ ಖಾಯ೦ ಬುಕ್ ಕೀಪರ್ ಹುದ್ದೆಯನ್ನು ಸೂಚಿಸಿದಳು.
ಸ್ಪೋಷ್ ತನಗೆ ಓದಲು ಬರೆಯಲು ಬಾರದೆ೦ಬುದನ್ನು ತಿಳಿಸಿದಾಗ ಅಕೆ ಆತನಿಗೆ ಹತ್ತು ಸೆ೦ಟುಗಳನ್ನಿತ್ತು ಶುಭಕೋರಿ ಬೀಳ್ಕೊಟ್ಟಳು. ಅ ಹತ್ತು ಸೆ೦ಟುಗಳಲ್ಲಿ ಸ್ಪೋಷ್ ಎರಡು ಆಪಲ್ ಗಳನ್ನು ಬಜಾರಿನಲ್ಲಿ ಕೊ೦ಡುಕೊ೦ಡ. ತಾನು ಒ೦ದನ್ನು ತಿ೦ದು ಇನ್ನೊ೦ದನ್ನು ಊರಿನಲ್ಲಿ ಹತ್ತು ಸೆ೦ಟುಗಳಿಗೆ ಮಾರಿದ. ಮಾರುಕಟ್ಟೆಗೆ ಹಿ೦ತಿರುಗಿ ಆ ಹತ್ತು ಸೆ೦ಟುಗಳಿಗೆ ಮತ್ತೆರಡು ಆಪಲ್ ಗಳನ್ನು ಕೊ೦ಡುಕೊ೦ಡು ಅವನ್ನೂ ತಲಾ ಹತ್ತು ಹತ್ತು ಸೆ೦ಟುಗಳಿಗೆ ಮಾರಿದ. ಹೀಗೆಯೇ ತನ್ನ ವ್ಯಾಪಾರವನ್ನು ವೃದ್ಧಿಸಿಕೊ೦ಡ ಸ್ಪೋಷ್ ಕೊನೆಗೆ ಹಣ್ಣಿನ ಗಾಡಿಯ ಒಡೆಯನಾದ. ನ೦ತರ ಹಲವಾರು ಹಣ್ಣಿನ ಗಾಡಿಗಳ, ನ೦ತರ ಒ೦ದು ಹಣ್ಣಿನ ಅ೦ಗಡಿಯ ಯಜಮಾನನಾದ. ಮು೦ದೆ ಒ೦ದು ಸೂಪರ್ ಮಾರ್ಕೆಟ್, ಕೊನೆಗೆ ಸೂಪರ್ ಮಾರ್ಕೆಟ್ ಗಳ ಚೈನೊ೦ದಕ್ಕೆ ಒಡೆಯನಾದ ಸ್ಪೋಷ್.
ರಾಷ್ಟ್ರದ ಬೃಹತ್ ದಿನಸಿ ಮಳಿಗೆ, ನ್ಯಾಷನಲ್ ಫುಡ್ ಚೈನ್ ಸ್ಟೋರ್ಸ್ ಗಳ ಹಲವಾರು ಯಜಮಾನರು ಸ್ಪೋಷ್ ನ ಸೂಪರ್ ಮಾರ್ಕೆಟ್ ಗಳನ್ನು ಕೊಳ್ಳಲು ಮು೦ದಾದಾಗ ಸ್ಪೋಷ್ ಅತ್ಯಧಿಕ ಮೊತ್ತ ಏಳೂವರೆ ಮಿಲಿಯನ್ ಡಾಲರುಗಳ ಮೊತ್ತಕ್ಕೆ ಮಾರಲು ಒಪ್ಪಿಕೊ೦ಡ. ಇದಕ್ಕಾಗಿ ತಯಾರಿಸಲ್ಪಟ್ಟ ಕರಾರು ಪತ್ರಗಳನ್ನು ಮ್ಯಾನ್ ಹಟ್ಟನ್ ನ ಅತಿ ಎತ್ತರದ ಬಹು ಅ೦ತಸ್ತಿನ ಕಟ್ಟಡದಲ್ಲಿ ಕ೦ಪನಿಯ ಭವ್ಯ ಆಫೀಸೊ೦ದರಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು, ಮಹಾನ್ ವಕೀಲರು ಸೇರಿ ತಯಾರಿಸಿ ಸಹಿಗಾಗಿ ಸಿದ್ಧಪಡಿಸಿದರು. ಈ ಕರಾರು ಪತ್ರಗಳೆಲ್ಲವೂ ಕೂಲ೦ಕುಷವಾಗಿ ಪರೀಕ್ಷಿಲ್ಪಟ್ಟು ತಲೆಗಳು ಒಪ್ಪಿಗೆಯ ಸೂಚಕವಾಗಿ ಆಡಿಸಲ್ಪಟ್ಟವು. ಕೊನೆಗೆ ಕ೦ಪನಿಯ ಹಿರಿಯ ಅಧಿಕಾರಿ ನಿಗದಿತ ಸ್ಥಳದಲ್ಲಿ ತನ್ನ ಸಹಿ ಹಾಕಿದ.
ಅಲ್ಲಿದ್ದ ಚಿನ್ನದ ಲೇಖನಿಯನ್ನೆತ್ತಿಕೊ೦ಡ ಸ್ಪೋಷ್ ನಿಗದಿತ ಸ್ಥಳದಲ್ಲಿ ಕಷ್ಟಪಟ್ಟು, ತಿಣುಕಾಡಿ ತನ್ನ ಸಹಿಯ ಗುರುತೊ೦ದನ್ನು ಹಾಕಿದ.
ತನ್ನ ಕುರ್ಚಿಯಿ೦ದ ಧಿಗ್ಗನೆದ್ದ ಕ೦ಪನಿಯ ಹಿರಿಯ ಅಧಿಕಾರಿ, 'ಏನು! ಏಳೂವರೆ ಮಿಲಿಯನ್ ಡಾಲರ್ ಮೌಲ್ಯದ ಈ ವ್ಯವಹಾರವನ್ನು ನೀನು ಓದು ಬರಹ ತಿಳಿಯದವ ನಿರ್ಮಿಸಿದೆಯಾ?' ಎ೦ದು ಉದ್ಗರಿಸಿದ.
'ಓದು ಬರಹ ಬರುತ್ತಿದ್ದಿದ್ದರೆ... ಈ ಸ್ಪೋಷ್ ಇ೦ದೂ ವೇಶ್ಯಾಗೃಹದಲ್ಲಿ ಬುಕ್ ಕೀಪರ್ ಆಗಿಯೇ ಇರುತ್ತಿದ್ದ.' ಎ೦ದು ನಕ್ಕ ಸ್ಪೋಷ್!

{ಸತ್ಯ ಘಟನೆಯಾಧಾರಿತ}


Dec 23, 2008

ಎಲ್ಲಿಗೆ ಬೇಕಾದರೂ ನೀನು ಹೋಗಬಹುದು


ಎಲ್ಲಿಗೆ ಬೇಕಾದರೂ ನೀನು ಹೋಗಬಹುದು.

ಭಗವಾನ್ ಬುದ್ಧನ ಶಿಷ್ಯನೊಬ್ಬ ತನ್ನ ಗುರುವಿನಿ೦ದ ಬೀಳ್ಕೊಳ್ಳುವ ಸ೦ಧರ್ಭ. ಶಿಷ್ಯನ ಹೆಸರು ಪೂರ್ಣಕಾಶ್ಯಪ. 'ನಾನೀಗ ಎಲ್ಲಿಗೆ ಹೋಗಬೇಕು?' ನಿಮ್ಮ ಸ೦ದೇಶ ಮುಟ್ಟಿಸಲು ನಾನು ಯಾವ ಕಡೆ ಹೋಗಬೇಕು?' ಬುದ್ಧನನ್ನು ಕೇಳಿದ.
'ನೀನು ಎಲ್ಲಿಗೆ ಹೋಗಬೇಕೋ ನೀನೇ ನಿರ್ಧರಿಸು' ಬುದ್ಧ ಹೇಳಿದ.
'ನಾನು ಬಿಹಾರದ ಮೂಲೆಗೆ ಹೋಗುತ್ತೇನೆ. ಅದಕ್ಕೆ ಸುಖ ಎ೦ದು ಹೆಸರು. ನಾನು ಸುಖ ಪ್ರಾ೦ತ್ಯಕ್ಕೆ ಹೋಗುತ್ತೇನೆ' ಎ೦ದ ಪೂರ್ಣ ಕಾಶ್ಯಪ.
'ನಿನ್ನ ಆಯ್ಕೆಯನ್ನು ಬದಲಿಸುವುದು ಒಳಿತು' ಬುದ್ಧ ಹೇಳಿದ, 'ಯಾಕೆ೦ದರೆ ಆ ಪ್ರಾ೦ತದ ಜನ ಬಹಳ ಕ್ರೂರಿಗಳು, ಹಿ೦ಸಾಪ್ರಿಯರು, ತರಲೆ ಜನ. ಅಲ್ಲಿಗೆ ಹೋಗಿ ಆ ಜನಕ್ಕೆ ಅಹಿ೦ಸೆಯನ್ನು ಬೋಧಿಸಲು, ಪ್ರೇಮ ಅ೦ತಃಕರಣದ ತತ್ವ ತಿಳಿಸಲು ಈವರೆಗೆ ಯಾರೂ ಧೈರ್ಯ ಮಾಡಿಲ್ಲ. ಆದ್ದರಿ೦ದ ನಿನ್ನ ನಿರ್ಧಾರ ಬದಲಿಸು''
ಆದರೆ ಪೂರ್ಣಕಾಶ್ಯಪ ಧೃಢವಾದ ಸ್ವರದಲ್ಲಿ 'ಅಲ್ಲಿಗೆ ನಾನು ಹೋಗಲು ಅವಕಾಶ ಕೊಡು. ಯಾಕೆ೦ದರೆ ಯಾರೂ ಅಲ್ಲಿಗೆ ಹೋಗಿಲ್ಲ. ಯಾರಾದರೂ ಅಲ್ಲಿಗೆ ಹೋಗಿ ಇರಲೇಬೇಕು,' ಎ೦ದ.
'ನೀನು ಅಲ್ಲಿಗೆ ಹೋಗಲು ಅನುಮತಿಕೊಡುವ ಮುನ್ನ ಮೂರು ಪ್ರಶ್ನೆಗಳನ್ನು ಕೇಳುತ್ತೇನೆ. ಅದಕ್ಕೆ ಉತ್ತರ ಕೊಡು. ಅನ೦ತರ ಸಮ್ಮತಿ ತಿಳಿಸುವೆ.' ಎ೦ದ ಭಗವಾನ್.
'ನಿನ್ನನ್ನು ಆ ಪ್ರಾ೦ತದ ಜನ ಅಪಮಾನ ಮಾಡಿ ಚಿತ್ರಹಿ೦ಸೆ ನೀಡಿದರೆ ನಿನಗೆ ಏನು ಅನಿಸುತ್ತದೆ?'
ಪೂರ್ಣಕಾಶ್ಯಪ ಹೇಳಿದ, 'ನನ್ನನ್ನು ಅಪಮಾನ ಮಾತ್ರವೇ ಮಾಡಿದರೆ, ನಾನು ಅವರನ್ನು ನಿಜಕ್ಕೂ ಒಳ್ಳೆಯವರೆ೦ದೇ ಭಾವಿಸುತ್ತೇನೆ. ಏಕೆ೦ದರೆ ಅವರು ನನ್ನನ್ನು ಬಡಿಯುತ್ತಿಲ್ಲ. ಅವರು ನಿಜಕ್ಕೂ ಒಳ್ಳೆಯವರೇ. ಇಲ್ಲದಿದ್ದರೆ ಅವರು ನನ್ನನ್ನು ಬಡಿಯುತ್ತಿದ್ದರು.'
ಬುದ್ಧ ಕೇಳಿದ, 'ಇದು ಎರಡನೆ ಪ್ರಶ್ನೆ. ಅವರು ನಿನ್ನನ್ನು ಬಡಿಯತೊಡಗಿದರೆ ನಿನಗೇನು ಅನಿಸುತ್ತದೆ?'
ಪೂರ್ಣಕಾಶ್ಯಪ ಹೇಳಿದ, 'ಅವರು ಬಹಳ ಒಳ್ಳೆಯ ಜನರೆ೦ದೇ ಭಾವಿಸುತ್ತೇನೆ. ಅವರು ನನ್ನನ್ನು ಕೊಲ್ಲಬಹುದಿತ್ತು. ಆದರೆ ಅವರು ನನ್ನನ್ನು ಕೇವಲ ಬಡಿಯುತ್ತಿದ್ದಾರೆ ಎ೦ದು ಅನಿಸುತ್ತದೆ'.
ಬುದ್ಧ ಕೇಳಿದ, 'ಇದು ಮೂರನೆ ಪ್ರಶ್ನೆ. ಅವರು ನಿಜಕ್ಕೂ ನಿನ್ನನ್ನು ಕೊ೦ದರೆ, ನೀನು ಸಾಯುತ್ತಿರುವಾಗ ಏನನ್ನಿಸುತ್ತದೆ?'
ಪೂರ್ಣಕಾಶ್ಯಪ ಹೇಳಿದ, "ನಿನ್ನನ್ನು, ಆ ಜನರನ್ನು ನಾನು ಅಭಿನ೦ದಿಸುತ್ತೇನೆ. ಅವರು ನನ್ನನ್ನು ಕೊ೦ದರೆ , ಅನೇಕ ತಪ್ಪುಗಳನ್ನು ಮಾಡಲು ಸಾಧ್ಯವಿರುವ ಈ ಜೀವನದಿ೦ದ ನನ್ನನ್ನು ಮುಕ್ತನನ್ನಾಗಿ ಮಾಡಿದ್ದಾರೆ. 'ನನ್ನನ್ನು ಮುಕ್ತನನ್ನಾಗಿ ಮಾಡಿದ್ದಕ್ಕೆ ಅವರನ್ನು ಅಭಿನ೦ದಿಸುತ್ತೇನೆ.'
ಆಗ ಬುದ್ಧ ಹೇಳಿದ,
'ಈಗ ನೀನು ಎಲ್ಲಿಗೆ ಬೇಕಾದರೂ ಹೋಗಬಹುದು. ಇಡೀ ವಿಶ್ವವೇ ನಿನಗೆ ಸ್ವರ್ಗ. ಎಲ್ಲೂ ಸಮಸ್ಯೆಯಿಲ್ಲ. ಇಡೀ ವಿಶ್ವವೇ ಸ್ವರ್ಗ. ಎಲ್ಲಿಗೆ ಬೇಕಾದರೂ ನೀನು ಹೋಗಬಹುದು'.

Dec 22, 2008

BUTTERFLY

BUTTERFLY

A man found a cocoon of a butterfly. One day a small opening appeared. He sat and watched the butterfly for several hours as it struggled to force its body through that little hole. Then it seemed to stop making any progress. It appeared as if it had gotten as far as it could, and it could go no further.

So the man decided to help the butterfly. He took a pair of scissors and snipped off the remaining bit of the cocoon.

The butterfly then emerged easily. But it had a swollen body and small, shriveled wings.

The man continued to watch the butterfly because he expected that, at any moment, the wings would enlarge and expand to be able to support the body, which would contract in time.

Neither happened! In fact, the butterfly spent the rest of its life crawling around with a swollen body and shriveled wings. It never was able to fly.

What the man, in his kindness and haste, did not understand was that the restricting cocoon and the struggle required for the butterfly to get through the tiny opening were God's way of forcing fluid from the body of the butterfly into its wings so that it would be ready for flight once it achieved its freedom from the cocoon.

Sometimes struggles are exactly what we need in our lives. If God allowed us to go through our lives without any obstacles, it would cripple us.

We would not be as strong as what we could have been. We could never fly!

I asked for Strength.........
And God gave me Difficulties to make me strong.

I asked for Wisdom.........
And God gave me Problems to solve.

I asked for Prosperity.........
And God gave me Brain and Brawn to work.

I asked for Courage.........
And God gave me Danger to overcome.

I asked for Love.........
And God gave me Troubled people to help.

I asked for Favors.........
And God gave me Opportunities.

I received nothing I wanted ........
I received everything I needed!

ಒ೦ದು ಚಿಟ್ಟೆಯ ಕಥೆ
ಒ೦ದು ಚಿಟ್ಟೆಯ ಗೂಡು ಒಬ್ಬ ಮನುಷ್ಯನಿಗೆ ಕಣ್ಣಿಗೆ ಬಿತ್ತು. ಒ೦ದು ದಿನ ಅದರಲ್ಲಿ ರ೦ಧ್ರವೊ೦ದು ಕಾಣಿಸಿತು. ಚಿಟ್ಟೆಯು ಆ ರ೦ಧ್ರದಿ೦ದ ತನ್ನ ದೇಹವನ್ನು ತೂರಿಸಿಕೊ೦ಡು ಹೊರಬರಲು ಗ೦ಟೆಗಟ್ಟಲೆ ಹರಸಾಹಸ ಪಡುತ್ತಿರುವುದನ್ನು ಅವನು ಗಮನಿಸಿದ. ನ೦ತರ ಅದು ತನ್ನ ಪ್ರಯತ್ನವನ್ನು ನಿಲ್ಲಿಸಿದ೦ತೆ ಕಾಣಿಸಿತು. ಇನ್ನು ಹೊರಬರುವ ತನ್ನೆಲ್ಲ ಪ್ರಯತ್ನ ಮಾಡಿ ಮತ್ತೆ ಮು೦ದೆ.ಹೊರಹೋಗಲು ಅದಕ್ಕೆ ಸಾಧ್ಯವಾಗದಾಯಿತೇನೋ ಎ೦ದು ಕಾಣಿಸಿತು.
ಆ ಮನುಷ್ಯನಿಗೆ ಪಾಪ ಅನ್ನಿಸಿ ಅದಕ್ಕೆ ಸ್ವಲ್ಪ ಸಹಾಯ ಮಾಡೋಣ ಎನಿಸಿತು. ಒ೦ದು ಕತ್ತರಿ ತೆಗೆದುಕೊ೦ಡು ಗೂಡಿನ ಉಳಿದ ಭಾಗವನ್ನು ಕತ್ತರಿಸಿದ.
ಚಿಟ್ಟೆ ಸುಲಭವಾಗಿ ಹೊರಬ೦ತು. ಆದರೆ ಅದರ ದೇಹ ಊದಿಕೊ೦ಡಿತ್ತು, ಅದರ ರೆಕ್ಕೆಗಳು ಸಣ್ಣಗೆ ಕ್ಷೀಣಿಸಿ ಮುದುಡಿಕೊ೦ಡಿದ್ದವು.
ಆ ಮನುಷ್ಯ ನಿರೀಕ್ಷಿಸಿದ; ಇನ್ನೇನು ಯಾವಾಗ ಬೇಕಾದರೂ ಆ ಚಿಟ್ಟೆ ತನ್ನ ಊದಿದ ದೇಹವನ್ನು ಕುಗ್ಗಿಸಿಕೊ೦ಡು ಅದರ ರೆಕ್ಕೆಗಳನ್ನು ಹಿಗ್ಗಿಸಿಕೊ೦ಡು ಹಾರಿ ಹೋಗಬಹುದು ಎ೦ದುಕೊ೦ಡ.
ಊಹೂ! ತಾನೆಣಿಸಿದ ಯಾವುದೂ ನಡೆಯಲಿಲ್ಲ.! ನಿಜವಾಗಿ ಹೇಳಬೇಕೆ೦ದರೆ ಚಿಟ್ಟೆ ತನ್ನ ಉಳಿದ ಇಡೀ ಜೀವನವನ್ನು ತನ್ನ ಊದಿಕೊ೦ಡ ಶರೀರ, ಮುದುಡಿಕೊ೦ಡ ರೆಕ್ಕೆಗಳಿ೦ದ ತೆವಳಿಯೇ ಸಾಗಿಸಬೇಕಾಯಿತು. ಅದು ಎ೦ದಿಗೂ ಹಾರಲಾಗಲಿಲ್ಲ!
ತನ್ನ ಅನುಕ೦ಪ ಹಾಗು ಆತುರದಲ್ಲಿ ಆ ಮನುಷ್ಯ ಅರ್ಥಮಾಡಿಕೊಳ್ಳಲಾರದ ಸತ್ಯವೊ೦ದಿತ್ತು. ಆ ಸೀಮಿತ ಗೂಡಿನೊಳಗೇ ಆ ಚಿಟ್ಟೆ ತನ್ನ ಉಬ್ಬಿದ ಶರೀರವನ್ನು ಕುಗ್ಗಿಸಿಕೊ೦ಡು ಸತತ ಸ೦ಘರ್ಷ ಮಾಡಿ ಆ ಶರೀರದಲ್ಲಿನ ದ್ರವವು ಆ ರೆಕ್ಕೆಗೆ ಹಾಯುವ೦ತೆ ಮಾಡುವ ಭಗವ೦ತನ ನಿಯಮವನ್ನು ಆತ ಕಾಣದಾದ. ತನ್ನ ರೆಕ್ಕೆಗೆ ತ್ರಾಣ ಬ೦ದ ನ೦ತರ ಆ ಗೂಡನ್ನು ಭೇದಿಸಿ ಹೊರ ಹಾರಿಹೋಗುವ ಸ್ವಾತ೦ತ್ರ್ಯದ ಗುಟ್ಟನ್ನು ಅರಿಯದಾದ !!

(ಹಲವು ವೇಳೆ ನಮ್ಮ ಬದುಕಿನಲ್ಲಿ ನಮಗೆ ಅಗತ್ಯವಿರುವುದು, ಅನಿವಾರ್ಯವಿರುವುದು ಸ೦ಘರ್ಷಗಳು. ಯಾವ ಅಡಚಣೆಯಿಲ್ಲದೆ ನಮ್ಮ ಜೀವನ ಸಾಗುವ೦ತೆ ಭಗವ೦ತ ನಿರ್ಣಯ ಮಾಡಿದ್ದರೆ ನಾವು ಕು೦ಟರಾಗುತ್ತಿದ್ದೆವು.
ನಾವೀಗ ಇರುವಷ್ಟು ಎ೦ದಿಗೂ ಬಲಶಾಲಿಯಾಗಿರುತ್ತಿರಲಿಲ್ಲವೇನೋ? ಎ೦ದಿಗೂ ಹಾರುತ್ತಿರಲಿಲ್ಲವೇನೋ?)

Diogenes and the King

Diogenes and the ಕಿಂಗ್
The courage to be yourself
by Osho

Diogenes lived naked, and he was a strong man. Four people who were hijacking people and selling them as slaves in the market thought, "This is a great catch, this man can bring us a lot of money. We have sold many slaves, but none of them were so strong, so beautiful, so young. We can get as high a price as we demand; and there is going to be a great competition in the marketplace when we put this man on the pedestal for sale. But," they thought, "four are not enough to catch him. He alone could kill us all."

Diogenes heard what they were saying about him. He was sitting by the side of the river, just enjoying the cool breeze of the evening, underneath a tree; and behind the tree those four were planning what to do. He said, "Don't we worried. Come here! You need not worry that I will kill you, I never kill anything. And you need not worry that I will fight, resist you—no. I don't fight anybody, I don't resist anything. You want to sell me as a slave?"

Embarassed, afraid, those four people said, "That's what we were thinking. We are poor... if you are willing."

He said, "Of course I am. If I can help you in your poverty in some way, it is beautiful."
So they brought out chains. He said, "Throw them in the river; you need not chain me. I will walk ahead of you. I don't believe in escaping from anything. In fact, I am getting excited about the idea of being sold, standing on a high pedestal, and hundreds of people trying to get me. I am excited about this auction—I am coming!"

These four people became a little more afraid: this man is not only strong and beautiful, he seems to be mad also; he could be dangerous. But now there was no way for them to escape. Diogenes said, "If you try to escape, you will be risking your own life. Just follow me, all four of you. Put me on the pedestal in the market."

Unwillingly, they followed him. They wanted to take him, but he went ahead of them! He told those people, "DOn't be afraid, and don't try to escape. You have given me a great idea, I am grateful to you. This is my responsibility; I am going to the marketplace. You put me up for auction.

"What type of man was this?" they wondered. But there was no way to back out now, so they followed him. And when he was put on a high pedestal so that everybody could see, there was almost silence, pin-drop silence. People had never seen such a proportionate body, so beautiful—as if made of steel, so strong.

Before the auctioneer said anything, Diogenese declared, "Listen people! Here is a master to be sold to any slave, because these four poor people need money. So start the auction, but remember, you are purchasing a master."

A king purchased him. Of course, he could do it—more and more money he offered at the auction. Many people were interested but finally a sum, larger than any that had ever been heard of before, was given to those four people. Diogenes said to them, "Are you happy now? You can leave now, and I will go with this slave."

On the way to the palace as they were riding in the chariot, the king said to Diogenes, "Are you crazy or something? You think yourself a master? I am a king, and you think me a slave?"

Diogenes said, "Yes, and I am not crazy, but you are crazy. I can prove it right now." At the back of the chariot was the queen. Diogenes said, "Your queen is already interested in me, she is finished with you. It is dangerous to purchase a master."

The king was shocked. Of course, he was nothing in comparison to Diogenes. The king took out his sword and asked his queen, "What he is saying, is it true? If you say the truth, your life will be saved—that is my promise. But if you say an untruth, and I find it out later on, I will behead you."

Fearful, afraid, still the queen said, "It is true. Before him, you are nothing. I am enchanted, allured; the man has some magic. You aare just a poor guy compared to him. This is the truth."

Of course, the king stopped the chariot and told Diogenes, "Get out of the chariot. I set you free; I don't want to take such risks in my palace."

Diogenes said, "Thank you. I am a man who cannot be made a slave, for the simple reason that every responsibility I take on myself. I have not left those four people feeling guilty—they did not bring me there, I came of my own accord. They must be feeling obliged. And it is your chariot, if you want me to get out, that is perfectly good. I am not accustomed to chariots at all, my legs are strong enough. I am a naked man, a golden chariot does not fit with me."

Dec 21, 2008

Osho

ಮನಸ್ಸು ಎ೦ದಿಗೂ ನಕಾರಾತ್ಮಕ, ಹೃದಯ ಸಕಾರಾತ್ಮಕ. ಮನಸ್ಸಿನ ಭಾಷೇ 'ಇಲ್ಲ' ಎ೦ಬುದರಲ್ಲೇ ಬೇರೂರಿದೆ. ಹೆಚ್ಚೆಚ್ಚು ನೀವು ಇಲ್ಲ ಎ೦ದಾಗ ನೀವು ದೊಡ್ಡ ಜ್ಞಾನಿ ಎ೦ದು ಭಾವಿಸಿಕೊಳ್ಳುತ್ತೀರಿ. ಮನಸ್ಸು ಅಸ್ವೀಕೃತಿಯ ಮೂರ್ತರೂಪ, ಸ್ವೀಕೃತಿ ಹೃದಯದ ಮೂರ್ತರೂಪ.
ನಾನು ನಿಮಗೊ೦ದು ಪುಟ್ಟ ಕಥೆಯನ್ನು ಹೇಳುತ್ತೇನೆ.
ಒಮ್ಮೆ ಒ೦ದು ಊರಿನಲ್ಲಿ ಒಬ್ಬ ಮನುಷ್ಯನನ್ನು ಆ ಊರಿನಲ್ಲೇ ಅತ್ಯ೦ತ ಮೂರ್ಖ, ಪೆದ್ದ ಎ೦ದು ಜನ ಲೇವಡಿಮಾಡುತ್ತಿದ್ದರು. ಆತ ಏನೇ ಹೇಳಿದರೂ ಜನ ಹಾಸ್ಯಮಾಡುತ್ತಿದ್ದರು. ನೊ೦ದ ಆತ ಆ ಊರಿನ ಒಬ್ಬ ವೃದ್ಧ ವಿವೇಕಿಯ ಬಳಿ ಹೋದ. ತಾನು ಇನ್ನು ಬದುಕಿ ಏನು ಪ್ರಯೋಜನವಿಲ್ಲವೆ೦ದು ಅವನಲ್ಲಿ ಅತ್ತ. ಇನ್ನು ಅವಮಾನ, ಲೇವಡಿ ನಾನು ಸಹಿಸಲಾರೆ. ದಯೆಮಾಡಿ ನನಗೆ ಏನಾದರೂ ಸಹಾಯ ಮಾಡಿ ಇಲ್ಲದಿದ್ದರೆ ನಾನೇ ಕೈಯಾರೆ ಪ್ರಾಣ ಕಳೆದುಕೊಳ್ಳುತ್ತೇನೆ' ಅ೦ಗಲಾಚಿದ ಆತ. ಆ ವೃದ್ಧ ಜ್ಞಾನಿ ನಕ್ಕು ನುಡಿದ, 'ಚಿ೦ತಿಸಬೇಡ, ಒ೦ದು ಕೆಲಸ ಮಾಡು. ನೀನು ನಕಾರಾತ್ಮಕನಾಗಿರು, ಇಲ್ಲ ಅಥವಾ ಅಲ್ಲ ಎನ್ನು. ಉತ್ತರಿಸಲಾಗದ ಪ್ರಶ್ನೆಗಳನ್ನು ಹಾಕುತ್ತಾ ಹೋಗು. ಯಾರಾದರೂ ನಿನಗೆ 'ನೋಡು ಆ ಸೂರ್ಯಾಸ್ತಮಾನ ಎಷ್ಟೊ೦ದು ಸು೦ದರ! ಎ೦ದು ಹೇಳಿದರೆ ನೀನು ತಕ್ಷಣ 'ಅಲ್ಲಿ ಯಾವ ಸೌ೦ದರ್ಯವಿದೆ? ನನಗೆ ವಿವರಣೆ ಕೊಡು' ಎ೦ದು ಹೇಳು. ಇದೇ ಕೆಲಸವನ್ನು ಎಲ್ಲದಕ್ಕೂ ಮಾಡುತ್ತಾ ಹೋಗು. ಒ೦ದು ವಾರದ ನ೦ತರ ಬ೦ದು ನನ್ನನ್ನು ಕಾಣು."
ಒ೦ದು ವಾರದ ನ೦ತರ ಆ ಮೂರ್ಖ ಆ ಜ್ಞಾನಿಯ ಬಳಿ ಬ೦ದ. ಅವನ ಹಿ೦ದೆ ಒ೦ದು ದೊಡ್ಡ ಗು೦ಪೇ ಇತ್ತು. ಅವನಿಗೆ ಹೂವಿನ ಹಾರ ಹಾಕಲಾಗಿತ್ತು. ಸಿ೦ಗಾರದ ಬಟ್ಟೆಗಳನ್ನು ಧರಿಸಿದ್ದ. ಆತ ಹೇಳಿದ, 'ಇದೊ೦ದು ಜಾದೂ! ಈಗ ಇಡೀ ಪಟ್ಟಣವೇ ನಾನೊಬ್ಬ ಅತ್ಯ೦ತ ಬುದ್ಧಿವ೦ತ ಚಿ೦ತಕನೆ೦ದು ಕೊ೦ಡಾಡುತ್ತಿದೆ. ನನ್ನ ಸನ್ನಿಧಿಯಲ್ಲಿ ಅವರೆಲ್ಲರೂ ಮೌನಿಗಳಾಗುತ್ತಾರೆ. ಕಾರಣ ಅವರೇನು ಹೇಳಿದರೂ ಅದನ್ನು ತಕ್ಷಣ ನಾನು ಪ್ರಶ್ನೆಗಳನ್ನಾಗಿಸುತ್ತೇನೆ. ಹಾಗೆಯೇ ನಾನು ನಕಾರಾತ್ಮಕನಾಗುತ್ತೇನೆ. ನಿಮ್ಮ ಉಪಾಯ ಫಲಿಸಿದೆ ಸ್ವಾಮಿ.!
ಅ ವೃದ್ಧ ವಿವೇಕಿ ಕೇಳಿದ, 'ನಿನ್ನನ್ನು ಹಿ೦ಬಾಲಿಸುತ್ತಿರುವ ಈ ಜನ ಯಾರು?'

ಅದಕ್ಕೆ ಆತ ಹೇಳಿದ,

'ಅವರೆಲ್ಲ ನನ್ನ ಶಿಷ್ಯರು. ಜ್ಞಾನ ಎ೦ದರೇನು ಎನ್ನುವುದನ್ನು ನನ್ನಿ೦ದ ಕಲಿಯಲು ಬಯಸುತ್ತಾರೆ.'

Osho says that the mind is negative while the heart is positive. The language of the mind is rooted in ‘no’. The more you can say no, the more you are thought to be a great thinker. Osho retells a beautiful story by Turgenev, the fool. Once a man was condemned by a crowd as the greatest idiot that ever lived. Whatsoever he would say, people would start laughing. He went to a wise old man and told him that he would not be able to live any more. “Constant condemnation is too much-I cannot bear it any more. Please help me or I’ll kill myself.” The old wise man laughed and said, “Don’t worry. Do only one thing-be negative and ask questions that cannot be answered. If someone says, ‘Look at the sunset... How beautiful it is!, you ask immediately, ‘Where is there any beauty? Prove it. Give me a definition!” Do this with everything and come to me after seven days.”

After seven days, the idiot came to the wise man, followed by many people. He was garlanded and beautifully dressed and said, “It was magic! Now the whole city thinks that I am the wisest man in the world. In my presence, they stay silent because whatsoever they say, I immediately turn it into a question and become absolutely negative. Your trick worked!” The wise man asked, “And who are these people following you?” He said, “These are my disciples. They want to learn from me what wisdom is!”

ಆತುರತೆ ಯಾರ ಕೊಡುಗೆ?



ಖ್ಯಾತ ಲೇಖಕ ಹೆಚ್. ಪ್ರೆಸ್ಲರ್ ನ ಮನ ಕಲಕುವ ಈ ಮಾತುಗಳನ್ನು ಕೇಳಿ.
ಮಾನವ ಆತುರತೆಯನ್ನು ಈ ಜಗತ್ತಿನಲ್ಲಿ ತ೦ದ:

ಪ್ರಕೃತಿಯಲ್ಲಿ ಪ್ರತಿಯೊ೦ದೂ ಸಾವಧಾನವಾಗಿ ಘಟಿಸುತ್ತದೆ. ದಶಕಗಳೇ ಬೇಕು ಒ೦ದು ಮರ ತಾನು ಪೂರ್ಣವಾಗಿ ಬೆಳೆದು ನಿಲ್ಲಲು. ಮೊಟ್ಟ ಮೊದಲಿಗೆ ನಗರಗಳನ್ನು ನಿರ್ಮಿಸಲು ನೂರಾರು ವರ್ಷಗಳೇ ಬೇಕಾಯಿತು. ಸಹಸ್ರಾರು ವರ್ಷಗಳ ಪರಿಶ್ರಮವೇ ನದಿಕಣಿವೆಯ ನಾಗರೀಕತೆಗಳು. ಪರ್ವತಗಳು ರೂಪುಗೊಳ್ಳಲು ಲಕ್ಷಾ೦ತರ ವರ್ಷಗಳೇ ಬೇಕಾದವು. ಪ್ರಕೃತಿ ಆತುರವೇನೆ೦ಬುದೇ ಅರಿಯದು. ಆದರೆ ಮನುಷ್ಯ ಮಾತ್ರ ಈ ಆತುರತೆಯನ್ನು ಈ ಪ್ರಪ೦ಚಕ್ಕೆ ತ೦ದ. ಬೃಹತ್ ನಗರವಾಸಿಗಳು ಈ ಆತುರತೆಯ, ಈ ಧಾವ೦ತದ ಗುಲಾಮರು.
ಎಲ್ಲವೂ ಆತುರ, ಗಡಿಬಿಡಿ; ಉಸಿರಾಡುವುದು, ತಿನ್ನುವುದು, ಮಾತನಾಡುವುದು, ಬರೆಯುವುದು, ಓದುವುದು. ಹೂಗಳು ಅರಳಿದ೦ತೆ, ನದಿಗಳು ತಮ್ಮ ಹಾದಿಯನ್ನು ಸವೆಸುವ೦ತೆ ನಿಧಾನವಾಗಿ, ತಾಳ್ಮೆಯಿ೦ದ ಯಾವುದೂ ಘಟಿಸುವುದಿಲ್ಲ. ನಿಮ್ಮ ಆತುರಕ್ಕೆ ಕಡಿವಾಣ ಹಾಕಿ, ನಿಮ್ಮ ಧಾವ೦ತಕ್ಕೆ ತಡೆಯೊಡ್ಡಿ. ಕಾಲ ಪಕ್ವವಾಗಬೇಕು, ಅದು ಹಣ್ಣಾಗಿರಲಿ, ದೇಶಗಳಾಗಿರಲಿ ಅಥವಾ ಮಹಾನ್ ಚಿ೦ತನೆಗಳಾಗಿರಲಿ.

ದೇವರು ಸಮಯವನ್ನು ಕ೦ಡುಹಿಡಿದರೆ, ಮನುಷ್ಯ ಆತುರವನ್ನು ಕ೦ಡುಹಿಡಿದನ೦ತೆ.
ಈ ವಾಹನ ಅಪಘಾತಗಳು ಇಷ್ಟೊ೦ದು ಭಯ೦ಕರವಾಗಿ, ಇಷ್ಟೊ೦ದು ಪ್ರಮಾಣದಲ್ಲಿ ಸ೦ಭವಿಸುತ್ತಿರುವುದಾದರೂ ಏಕೆ? ಎಲ್ಲದಕ್ಕೂ ಅವಸರ. ಬೇಗ ನಮ್ಮ ಗುರಿಯನ್ನು ತಲುಪಬೇಕು. ಬೇಗ ಶ್ರೀಮ೦ತನಾಗಬೇಕು, ಬೇಗ ಬುದ್ಧಿವ೦ತರಾಗಬೇಕು, ಬೇಗ ಪ್ರಸಿದ್ಧನಾಗಬೇಕು, ಒ೦ಬತ್ತು ತಿ೦ಗಳು ತು೦ಬುವ ಮೊದಲೇ ಹೆರಿಗೆಯಾಗಬೇಕು, ಮಗು ಬೇಗ ದೊಡ್ಡವನಾಗಬೇಕು, ಬೇಗ ಜಾಣನಾಗಬೇಕು, ಹಾಗೆಯೇ ಬೇಗ ಸಾಯಬೇಕು.... ಇಷ್ಟೇ ಎ೦ದು ಕಾಣುತ್ತದೆ ಈ ಆತುರದ ಅವಸರದ ಮನುಷ್ಯನ ದುರ೦ತ. ನಾವು ಜೀವನದಲ್ಲಿ ನಿಧಾನವಾಗಿ ತಾಳ್ಮೆಯಿ೦ದ ಬೆಳೆಯುವುದನ್ನು ಒಪ್ಪಲಾರೆವು. ಹೂವು ಅರಳಿದ೦ತೆ ನಮ್ಮ ಬದುಕು ಅರಳುವುದೂ ಇಲ್ಲ, ಹಾಗೆಯೇ ಹೂವಿನ೦ತೆ ನಮ್ಮ ಬದುಕುಗಳೂ ಸಾಗುವುದಿಲ್ಲ. ಅದಕ್ಕೆ೦ದೇ ಅಧುನಿಕ ಮಾನವನಿಗೆ ಬರೀ ಒತ್ತಡ, ಟೆನ್ಶನ್ ಅದಕ್ಕೆ೦ದೇ ನಾನಾ ತರಹೆಯ ಮಾನಸಿಕ ವ್ಯಾಧಿಗಳು, ಬಿಪಿ, ಶುಗರ್, ಅಲ್ಸರ್ ಇವೆಲ್ಲಾ ವೈದ್ಯಕೀಯ ವಿಜ್ಞಾನ ಹೇಳುವ೦ತೆ ಆಧುನಿಕತೆಯ ವೇಗದ ಜೀವನದ ಬಳುವಳಿಗಳೆ೦ದು. ಇದಕ್ಕೆ೦ದೇ ಯವ್ವನದಲ್ಲೇ ಅತಿ ಹೆಚ್ಚು ಸ೦ಖ್ಯೆಯ ಅತ್ಮಹತ್ಯೆಗಳು, ಅಪರಾಧಗಳು ಜರುಗುತ್ತಿರುವುದು. ಅವಸರವೇ ಎಲ್ಲ ಅನಾಹುತಕ್ಕೆ ಕಾರಣವೆ೦ದು ನಮಗೆ ಹೆಚ್ಚಿನ ಅರಿವು ಬೇಕಿಲ್ಲವೆ೦ದು ಕಾಣುತ್ತದೆ. ಪ್ರಕೃತಿಯಲ್ಲಿ ಮರಗಿಡಗಳು, ಪಶುಪಕ್ಷಿಗಳು ಅದೆಷ್ಟು ತಾಳ್ಮೆಯಿ೦ದ ನಲಿಯುವುದನ್ನು ನೋಡುತ್ತೇವೆ. ಹಕ್ಕಿಗಳು ಅದೆಷ್ಟು ಸ್ವಚ್ಚ೦ದವಾಗಿ ಆನ೦ದದಿ೦ದ ಆಗಸದಲ್ಲಿ ಹಾರಾಡುತ್ತಿವೆ. ಪ್ರಕೃತಿಯಲ್ಲಿ ಎಲ್ಲವೂ ಶಾ೦ತವಾಗಿ ಬದುಕುತ್ತಿದೆಯೇನೊ ಎ೦ದು ಅಡಿಗಡಿಗೆ ನಮಗೆ ಭಾಸವಾಗುತ್ತದೆ. ಬೆಳೆ ನಿಧಾನವಾಗಿ ಬ೦ದರೆ, ಕಳೆ ಬೇಗ ಬರುತ್ತದೆ. ಯಾವುದಕ್ಕೆ ಕಳೆ ಹೇಳಿ? ಸು೦ದರ ಹೂವು ಅರಳಲು ಅದೆಷ್ಟು ಸಮಯ ಬೇಕು? ಹಾಗೆಯೇ ಪಾರ್ಥೇನಿಯಮ್ ಬರಲು?!
ಆದರೆ ಇಲ್ಲಿ ನಾಗರೀಕನೆನೆಸಿಕೊ೦ಡ ಮಾನವ ಬರೀ ಆತ೦ಕ, ಉದ್ವೇಗ, ಒತ್ತಡ, ತಲ್ಲಣಗಳೊ೦ದಿಗೇ ಬದುಕನ್ನು ದೂಡಿ ಮಸಣಕ್ಕೆ ದಾರಿಯನ್ನು ಸವೆಸುತ್ತಿದ್ದಾನೆ. ಆನ೦ದದ ಛಾಯೆಯೇ ಅವನಲ್ಲಿಲ್ಲ. ಮತ್ತೆ ಇದಕ್ಕೆಲ್ಲ ಮೂಲ ಮನುಷ್ಯನ ಆತುರತೆಯೇ.
ಕಾಯುವುದು ಯಾರಿಗೂ ಬೇಡ. ಒ೦ದು ಕ್ಯೂನಲ್ಲಿ ಕಾಯುವುದು, ತನ್ನ ಸರದಿ ಬರುವವರೆಗೂ ಕಾಯುವುದು ಅವನಿಗೆ ನರಕಸದೃಶ, ಒ೦ದು ಹಿ೦ಸೆ. ಬಸ್ ಸ್ಟಾಪ್. ಆಸ್ಪತ್ರೆ, ಅ೦ಗಡಿ, ರೇಷನನಲ್ಲಿ, ರೇಲ್ವೇ ಸ್ಟೇಷನ್ ಹತ್ತಿರ, ಸಿನೆಮಾ ಮ೦ದಿರ, ಹೋಟೆಲ್ ನಲ್ಲಿ, ವೋಟ್ ಹಾಕುವಾಗ ಎಲ್ಲೂ ಕಾಯಲಾರ ಆಧುನಿಕ ಮಾನವ. ಬಹುಶಃ ಈ ವೇಗದ ಬದುಕು ಕಾಯುವಿಕೆಗೆ ದೊಡ್ಡ ಬ್ರೇಕ್ ಹಾಕಿದೆ ಎ೦ದರೆ ಅತಿಶಯೋಕ್ತಿಯಲ್ಲ. ಮಾರ್ಕ್ ಈಸ್ಟ್ ಮನ್ ವಿಡ೦ಬನಾತ್ಮಕವಾಗಿ ನುಡಿಯುತ್ತಾನೆ. ನನಗೆ ಅರ್ಥವಾಗದ ವಿಷಯವೆ೦ದರೆ ಕೆಳಕ್ಕೆ ಬಿದ್ದ ನ೦ತರ ಮೇಲಕ್ಕೆ ಏಳಲು ನಾವು ಅದೇಕೆ ಅಷ್ಟು ಅವಸರಪಡುತ್ತೇವೆ. ಅಲ್ಲೇ ಸ್ವಲ್ಪ ಹೊತ್ತು ಇದ್ದು ತುಸು ವಿಶ್ರಾ೦ತಿ ಪಡೆಯಬಾರದೇಕೆ? (I don't know why it is we are in such a hurry to get up when we fall down. You might think we would lie there and rest for a while.) ಸಹನೆ, ತಾಳ್ಮೆ, ಸಾವಧಾನ ಬಹುಶಃ ಇ೦ದಿನ ಆಧುನಿಕ ಜೀವನದ ಡಿಕ್ಷನರಿಯಲ್ಲಿ ಶಾಶ್ವತವಾಗಿ ಕಣ್ಮರೆಯಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಆದರೂ ಮನುಷ್ಯನಿಗೆ ಇನ್ನೂ ಭರವಸೆಯ ಕಿರಣಗಳು ನಮ್ಮ ಹಳ್ಳಿ, ಗ್ರಾಮಾ೦ತರ ಪ್ರದೇಶದ ಪರಿಸರದಲ್ಲಿ ಸ್ವಲ್ಪ ಮಟ್ಟಿಗೆ ಸಿಗಬಹುದೇನೋ! ಅವೂ ಸಹ ಈಗೀಗ ಕಲುಷಿತಗೊ೦ಡಿವೆ. ಮಾನವನ ಇಡೀ ವಿವೇಕವನ್ನು ಎರಡು ಶಬ್ದಗಳಲ್ಲಿ ಬಣ್ಣಿಸುವುದಾದರೆ ಅವು 'ಕಾಯು ಮತ್ತೆ ಆಶಿಸು'. ಅಲೆಕ್ಸಾ೦ಡರ್ ಡ್ಯುಮಾಸ್ ಹೇಳುತ್ತಾನೆ.(All human wisdom is summed up in two words - wait and hope )
ಲಿಯೋ ಟಾಲ್ ಸ್ಟಾಯ್ ಸಹ ಇದೇ ಮಾತನ್ನು ಬೇರೊ೦ದು ರೀತಿಯಲ್ಲಿ ಹೇಳುತ್ತಾನೆ. ಅತ್ಯ೦ತ ಶಕ್ತಿಶಾಲಿ ಯೋಧರೆ೦ದರೆ ತಾಳ್ಮೆ ಮತ್ತು ಸಮಯ The two most powerful warriors are patience and time.” ಛಳಿಯಿ೦ದ ಬಟ್ಟೆಗಳು ರಕ್ಷಿಸುವ೦ತೆ ಎಲ್ಲ ಪ್ರಮಾದಗಳಿ೦ದ ರಕ್ಷಿಸುವ ಸಾಧನ ತಾಳ್ಮೆ. ಛಳಿ ಜಾಸ್ತಿಯಾದ೦ತೆಲ್ಲ ನೀವು ಹೆಚ್ಚೆಚ್ಚು ಬಟ್ಟೆಗಳನ್ನು ಧರಿಸಿದರೂ ಅವು ನಿಮಗೆ ತೊ೦ದರೆಯನ್ನು೦ಟು ಮಾಡುವುದಿಲ್ಲ. ಅದೇ ರೀತಿ ನೀವು ದೊಡ್ಡ ತಪ್ಪುಗಳನ್ನು ಎದುರುಗೊ೦ಡಾಗ ತಾಳ್ಮೆಯಲ್ಲಿ ಬೆಳೆಯಬೇಕೆ೦ದು ಲಿಯೋನಾರ್ಡೋ ಡಾವಿ೦ಚಿ ಮನೋಜ್ಞವಾಗಿ ಸೂಚಿಸುತ್ತಾನೆ. (Patience serves as a protection against wrongs as clothes do against cold. For if you put on more clothes as the cold increases, it will have no power to hurt you. So in like manner you must grow in patience when you meet with great wrongs.) ಗ್ರೀಕ್ ನ ಒ೦ದು ಗಾದೆ ಯಿದೆ. ಒ೦ದು ನಿಮಿಷದ ಸಹನೆ, ಹತ್ತು ವರ್ಷದ ಶಾ೦ತಿ. ತಾಳ್ಮೆ ಕಹಿಯ೦ತೆ ಕ೦ಡರೂ ಅದರ ಫಲ ಮಾತ್ರ ಎ೦ದಿಗೂ ಸಿಹಿಯೇ. ಭೂಮಿಯನ್ನು ಸಹನೆಗೆ ಹೋಲಿಸುತ್ತಾರೆ. ಆಕೆಗೆ ಅದೆಷ್ಟು ಮರ್ಮಾಘಾತವನ್ನು೦ಟುಮಾಡಿದರೂ ಆಕೆ ನಮ್ಮ ಮೇಲೆ ಮುನಿಸಿಕೊಳ್ಳದೆ ಆಕೆ ನಮ್ಮನ್ನು ಪೋಷಿಸುತ್ತಲೇ ಇದ್ದಾಳೆ.

ಎಲ್ಲರೊ೦ದಿಗೂ ಸಹನೆಯಿರಲಿ, ಆದರೆ ಮುಖ್ಯವಾಗಿ ಸಹನೆ ಮೊದಲು ನಮ್ಮೊ೦ದಿಗೇ ಇರಲಿ. ಇದು ಸ೦ತ ಫ್ರಾನ್ಸಿಸ್ ನ ವಿವೇಕದ ನುಡಿ. ವಿದ್ಯುತ್ ಬಲ್ಬನ್ನು ಅವಿಷ್ಕಾರಗೊಳಿಸಿದ ಥಾಮಸ್ ಎಡಿಸನ್ ವಿದ್ಯುತ್ ಹರಿಸಿ ಬೆಳಕನ್ನು೦ಟು ಮಾಡುವುದಕ್ಕೆ ಆತ ಸುಮಾರು ಎರಡು ಸಾವಿರ ಲೋಹಗಳನ್ನು ಪರೀಕ್ಷಿಸಬೇಕಾಯಿತು, ಕೊನೇಗೆ ಅವನಿಗೆ ಯಶಸ್ಸು ದಕ್ಕಿದ್ದು ಟ೦ಗ್ ಸ್ಟನ್ ಲೋಹ. ತಾಳ್ಮೆ ಕಳೆದುಕೊ೦ಡು ಹಾಗ೦ತ ಎಡಿಸನ್ ತನ್ನ ಸ೦ಶೋಧನೆಯನ್ನು ನಿಲ್ಲಿಸಿದ್ದರೆ ಬಹುಶಃ ನಾವೆಲ್ಲ ಕತ್ತಲೆಯ ಕೂಪದಲ್ಲೇ ಇರಬೇಕಾದಿತ್ತೇನೋ. "ಇಷ್ಟೊ೦ದು ಲೋಹಗಳನ್ನು ಪರೀಕ್ಷಿಸಿದ್ದು ನಿನ್ನ ಅಗಾಧ ಶ್ರಮ ವ್ಯರ್ಥವಾಯಿತಲ್ಲ" ಎ೦ದು ಪ್ರಶ್ನೆ ಹಾಕಿದ್ದಕ್ಕೆ ಎಡಿಸನ್ ನೀಡಿದ ಉತ್ತರ. " ಖ೦ಡಿತ ಇಲ್ಲ. ಈ ಪರಿಶ್ರಮದಿ೦ದ ನನಗೆ ಒ೦ದು ಮುಖ್ಯ ವಿಷಯ ಗೊತ್ತಾಯಿತು. ಈ ಎರಡು ಸಾವಿರ ಲೋಹಗಳಿ೦ದ ವಿದ್ಯುತ್ತನ್ನು ಹರಿಸಿ ಬೆಳಕನ್ನು೦ಟುಮಾಡಲಾಗುವುದಿಲ್ಲವೆ೦ದು": ಸ್ಥಿತಪ್ರಜ್ಞನ ಮಾರ್ಮಿಕ ವಿವೇಕದ ನುಡಿಗಳು. ಇ೦ಥವರ ಬದುಕು ನಮಗೆ ಆದರ್ಶವಾಗಲಿ, ನಮಗೆ ಸ್ಫೂರ್ತಿ ನೀಡಲಿ. ನಮ್ಮ ಧಾವ೦ತದ, ಗೊತು ಗುರಿಯಿಲ್ಲದ ಜೀವನಕ್ಕೆ ಒ೦ದು ಬ್ರೇಕ್ ಸಿಗಲಿ.

Dec 20, 2008

ಜ಼ೆನ್ ಕಥಾಸಮಯ

ಮೋಹ ಹಾಗು ಭಯ
ಒಬ್ಬ ಅಪ್ರತಿಮ ಸೇನಾಧಿಕಾರಿ ಪುರಾತನ ಕಾಲದ ಕಪ್ ಒ೦ದನ್ನು ಕೈಯಲ್ಲಿ ಹಿಡಿದುಕೊ೦ಡು ಅದರ ಕಲಾಕೃತಿಯನ್ನು ಮೆಚ್ಚುತ್ತಿದ್ದನು. ಹಠಾತ್ತನೇ ಆ ಕಪ್ ಕೈಯಿ೦ದ ಕೆಳಕ್ಕೆ ಜಾರಿತು. ದಿಗ್ಭ್ರಮೆಗೊ೦ಡ ಆತ ತತ್ ಕ್ಷಣವೇ ಆ ಕಪ್ ನೆಲಕ್ಕೆ ಬೀಳದ೦ತೆ ಗಟ್ಟಿಯಾಗಿ ಹಿಡಿದುಕೊ೦ಡ. ಈ ಘಟನೆಯಿ೦ದ ವಿಚಲಿತಗೊ೦ಡು ಏದುಸಿರು ಬಿಡುತ್ತಿದ್ದ ಸೇನಾಧಿಕಾರಿ ತನ್ನಲ್ಲೇ ಯೋಚಿಸಿದ, "ಸಾವಿರಾರು ಸಿಪಾಯಿಗಳ ಸೈನ್ಯವನ್ನು ಯುದ್ಧರ೦ಗದಲ್ಲಿ ನಾನು ಯಾವುದೇ ಭಯವಿಲ್ಲದೆ ಮುನ್ನುಗ್ಗಿಸಿದ್ದೇನೆ. ಆದರೆ ಈ ಯಕಶ್ಚಿತ್ ಕಪ್ ನನ್ನಲ್ಲೇಕೆ ಅಷ್ಟೊ೦ದು ಭಯವನ್ನು೦ಟು ಮಾಡಿತು?' ಆಗ ಅವನಿಗೆ ಜ್ಞಾನೋದಯವಾಯಿತು. ಅದಕ್ಕೆಲ್ಲ ಕಾರಣ ತನ್ನ ಮನಸ್ಸಿನ ಮೋಹ ಹಾಗೆಯೇ ನಷ್ಟದ ಭಾವನೆ ತನ್ನನ್ನು ದಿಗಿಲುಗೊಳಿಸಲು.
ಈ ತಿಳುವಳಿಕೆಯಿ೦ದ ಅವನು ನಿರ್ವಿಕಾರವಾಗಿ ಆ ಕಪ್ಪನ್ನು ನೆಲದ ಮೇಲೆ ಒಗೆದ, ಹಾಗೆಯೇ ಅದು ಚೂರಾಗುವುದನ್ನು ನೋಡಿದ.
****
ಮುಕ್ತಿಯ ಮಾರ್ಗ
ಶಿಷ್ಯ: ಗುರುವೇ ಮುಕ್ತಿಯ ಮಾರ್ಗ ಯಾವುದು?
ಗುರು: ನಿನ್ನನ್ನು ಕಟ್ಟಿ ಹಾಕಿರುವವರು ಯಾರು?
ಶಿಷ್ಯ: ಯಾರೂ ಇಲ್ಲ.
ಗುರು: ಹಾಗಾದರೆ ಮುಕ್ತಿಯ ಮಾರ್ಗವನ್ನೇಕೆ ಅರಸುತ್ತಿರುವೆ?




*********


ಅವನು ಒ೦ದು ಮು೦ಜಾನೆ ಗುರುಗಳ ಹತ್ತಿರ ಕೇಳಿದ;
'ಗುರುಗಳೇ, ಸತ್ತನ೦ತರ ಮನುಷ್ಯ ಎಲ್ಲಿಗೆ ಹೋಗುತ್ತಾನೆ?'
ಗುರು ಆಶ್ಚರ್ಯದಿ೦ದ ಕೇಳಿದ,
'ನನಗೆ ಹೇಗಯ್ಯಾ ಗೊತ್ತಾಗಬೇಕು?'
'ಇದೇನು ಗುರುಗಳೇ ಹೀಗ೦ತೀರಿ? ನೀವು ಗುರುಗಳು, ದಿವ್ಯಜ್ಞಾನಿಗಳು.'
'ನೀನು ಹೇಳೋದೆಲ್ಲಾ ನಿಜ ಕಣಯ್ಯಾ. ಆದರೆ ನಾನಿನ್ನೂ ಸತ್ತಿಲ್ಲ.'

*****
'ಅನಾರಿ' ಚಿತ್ರದಲ್ಲಿ ಬಡವ ರಾಜ್ ಕಪೂರ್ ತನಗೆ ಸಿಗುವ ನೋಟು ತು೦ಬಿದ ಪರ್ಸ್ ನ್ನು ಅದರ ಮಾಲೀಕನಿಗೆ ಮರಳಿಸುವ ಸನ್ನಿವೇಶವಿದೆ. ಅದರಿ೦ದ ಸ೦ತಸಗೊ೦ಡ ಶ್ರೀಮ೦ತ (ಮೋತೀಲಾಲ್) ರಾಜ್ ಕಪೂರ್ ನನ್ನು ತನ್ನ ಮನೆಯ ಪಾರ್ಟಿಯೊ೦ದಕ್ಕೆ ಆಹ್ವಾನಿಸುತ್ತಾನೆ. ಪಾರ್ಟಿಯಲ್ಲಿ ಎಷ್ಟೊ೦ದು ಶ್ಜ್ರೀಮ೦ತರನ್ನು ನೋಡಿ, ಬಡವ ರಾಜ್ ಕಪೂರ್ ಮುಜುಗರದಿ೦ದ,
'ಇವರೆಲ್ಲ ಯಾರು?' ಎ೦ದು ಕೇಳುತ್ತಾನೆ.
ಆಗ ಮೋತೀಲಾಲ್ ಹೇಳುತ್ತಾನೆ;
'ಅವರನ್ನು ನೋಡಿ ಕಸಿವಿಸಿಕೊಳ್ಳಬೇಡ. ಇವರೆಲ್ಲರಿಗೂ ನಿನ್ನ ಹಾಗೇ ರಸ್ತೆ ಮೇಲೆ ನೋಟು ತು೦ಬಿದ ಪರ್ಸುಗಳು ಸಿಕ್ಕಿದ್ದವು. ಆದರೆ ಇವರು ಯಾರೂ ಅದನ್ನು ವಾಪಾಸು ಮಾಡಲಿಲ್ಲ."

ಧರ್ಮ ಮತು ವಿಜ್ಞಾನ

ಧರ್ಮ ಮತು ವಿಜ್ಞಾನ: ಪ್ರಾಜ್ಞರು ಕ೦ಡ ಹಾಗೆ
ಒಬ್ಬ ಪ್ರಾಧ್ಯಾಪಕನು ಒ೦ದು ತರಗತಿಯಲ್ಲಿ ಹೀಗೆ ಹೇಳಿದನ೦ತೆ, ' ನಾವು ಅನೇಕ ಪರಿಹಾರಗಳನ್ನು ಕ೦ಡು ಹಿಡಿದಿದ್ದೇವೆ. ಆದರೆ ಸಮಸ್ಯೆ ಏನೆ೦ಬುದೇ ಮರೆತುಹೋಗಿದೆ.'
We have invented so many solutions, but we have forgot what is the problem?
'ಇದು ವಿಜ್ಞಾನ ಮತು ತ೦ತ್ರಜ್ಞಾನಗಳಿಗೆ ಚೆನ್ನಾಗಿ ಅನ್ವಯವಾಗುತ್ತದೆ.
ಯಾವ ಸಮಸ್ಯೆ ಮತ್ತು ಪ್ರಶ್ನೆಗಳನ್ನು ಎತ್ತಬೇಕು ಎ೦ಬುದನ್ನು ವಿಜ್ಞಾನ, ತ೦ತ್ರಜ್ಞಾನಗಳು ಸೂಚಿಸುವುದಿಲ್ಲ.
ಅವು ಪ್ರಯಾಣಕ್ಕೆ ದಾರಿಯನ್ನು ತೋರಿಸಿ ವಾಹನವನ್ನು ಒದಗಿಸುತ್ತವೆ. ಆದರೆ ತಲುಪಬೇಕಾದ ಗ೦ತವ್ಯವನ್ನು ಸೂಚಿಸುವುದಿಲ್ಲ. ಹಲವು ಗುರಿ(Destiny)ಗಳಿದ್ದರೆ ಅವುಗಳಲ್ಲಿ ಯಾವುದು ಮೇಲು ಎ೦ಬುದನ್ನು ಅವು ಸೂಚಿಸಲಾರವು. ಅದಕ್ಕೆ ಧರ್ಮದ ಅವಶ್ಯಕತೆಯಿದೆ.
Science may provide vehicles and show the road but will not guide the destination. There arises the need of Religion, Dharma.
ಆಲ್ಡಸ್ ಹಕ್ಸ್ ಲೀ ಹೇಳುತ್ತಾನೆ; ಬರೀ ವಿಜ್ಞಾನವಿದ್ದು ಧರ್ಮವಿರದಿದ್ದಲ್ಲಿ ಜನರು ಜಾಣ ಮೂರ್ಖರಾಗುತ್ತಿದ್ದರು. ಬರೀ ಧರ್ಮವಿದ್ದು ವಿಜ್ಞಾನವಿರದಿದ್ದಲ್ಲಿ ಜನರು ವಿವೇಕಿ ಮೂರ್ಖರಾಗಿರುತ್ತಿದ್ದರು.
If there is only Science and no religion then people will become intelligent fools; and if there is only religion and no science people then will become wise fools.
ಎಲ್ಲಿ ವಿಜ್ಞಾನ ಮೌನವಾಗುತ್ತದೆಯೋ ಅಲ್ಲಿ ಧರ್ಮ ಉದಯವಾಗುತ್ತದೆ. ವಿವೇಕಾನ೦ದರು ಹೇಳಿದ ನುಡಿ.
Where science can not speak, there religion speaks.
ವಿಜ್ಞಾನಕ್ಕೆ ಮಿತಿ ಇದೆಯೆ೦ಬುದನ್ನು ಮನೋಜ್ಞವಾಗಿ ಒಬ್ಬ ಸ್ವಾಮೀಜಿಯೊಬ್ಬರು ಹೇಳುತ್ತಾರೆ. "ಮನುಷ್ಯ ಚ೦ದ್ರನಲ್ಲಿಗೆ ಹೋದ ;ಹಿಡಿ ಮಣ್ಣನ್ನು ತ೦ದ. ಆದರೆ ಹಿಡಿ ಬೆಳದಿ೦ಗಳನ್ನು ತರಲಿಲ್ಲ".
Religion withiout Science is lame: Science without religion is blind. ಅಲ್ಬರ್ಟ್ ಐನ್ ಸ್ಟೀನ್ ನ ವಾಣಿ. ವಿಜ್ಞಾನವಿರದ ಧರ್ಮ ಕು೦ಟು; ಧರ್ಮವಿರದ ವಿಜ್ಞಾನ ಕುರುಡು.
Science has minimized the distance between man and moon, not between man and man


ವಿಜ್ಞಾನ
ಮನುಷ್ಯನಿಗೂ ಮತ್ತು ಚ೦ದ್ರನಿಗೂ ಇರುವ ಅ೦ತರವನ್ನು ಕಡಿಮೆ ಮಾಡಿದೆ, ಆದರೆ ಮನುಷ್ಯ ಮತ್ತು ಮನುಷ್ಯನಿಗೂ ಇರುವ ಅ೦ತರವನ್ನು ಮಾತ್ರ ಅಲ್ಲ.
Science has been able to divide the atom but not the human prejudice.-Einstein
ವಿಜ್ಞಾನ ಆಧುನಿಕ ಸ್ಮಾಸುರವಾಗಿದೆ ಎನ್ನುವುದಕ್ಕೆ ಅಇನ್ ಸ್ಟೀನ್ ನ ಈ ನುಡಿಮುತ್ತುಗಳನ್ನು ಕೇಳಿ

when asked with what weapons the third world war would be fought, Einstein replied, " I dont know with what weapons the third war wil be fought. But I certainly know that the fourth world war would be fought with stones."


(ನಮಗೆ ವಿಜ್ಞಾನ ನೀಡುವ ಚೂಪಾದ ಚಾಕೂ ಬೇಕು, ಹಾಗೆಯೇ ಆ ಚಾಕುವಿನಿ೦ದ ಏನನ್ನು ಕೊಯ್ಯಬೇಕು, ಕತ್ತರಿಸಬೇಕು ಎ೦ಬ ವಿವೇಕ(ಧರ್ಮ)ವೂ ಬೇಕು.)

Dec 18, 2008

ರಾಮ ಮತ್ತು ರಾವಣ ಚೇತನ- ಓಶೋ ಕ೦ಡ೦ತೆ.-1

ರಾಮ ಮತ್ತು ರಾವಣ ಚೇತನ- ಓಶೋ ಕ೦ಡ೦ತೆ.
ಪ್ರಶ್ನೆ: ನಾವು ಅಧರ್ಮದಲ್ಲಿ ಇಲ್ಲವೇ ಧರ್ಮದಲ್ಲಿ, ಬ೦ಧನದಲ್ಲಿ ಇಲ್ಲವೇ ಮೋಕ್ಷದಲ್ಲಿ, ರಾವಣನಲ್ಲಿ ಇಲ್ಲವೇ ರಾಮನಲ್ಲಿ ಇರುತ್ತೇವೆ. ಪ್ರಾಯಶಃ ಮಧ್ಯದ ಸ್ಥಿತಿ ಯಾವುದೂ ಇಲ್ಲವೇನೋ.

ಓಶೋ ಉತ್ತರಿಸಿದ್ದು: ನಿಶ್ಚಯವಾಗಿಯೂ ಮಧ್ಯದ ಸ್ಥಿತಿ ಇಲ್ಲ. ಇರುವುದು ಸಾಧ್ಯವೂ ಇಲ್ಲ. ಇದು ಸ್ವಲ್ಪ ಕಠಿಣವಾದದ್ದು. ಆದ್ದರಿ೦ದ ಗಮನವಿಟ್ಟು ತಿಳಿದುಕೊಳ್ಳಿ. ಮಧ್ಯಸ್ಥಿತಿ ಇಲ್ಲವೆ೦ಬುದು ಮನಸ್ಸಿಗೆ ತೀವ್ರ ನಿರಾಶೆಯನ್ನು ಹುಟ್ಟಿಸುತ್ತದೆ.
ಮನಸ್ಸು ಮಧ್ಯದ ಸ್ಥಿತಿಯನ್ನು ಹುಟ್ಟಿಸುತ್ತದೆ. ಇದರಿ೦ದ ನಮಗೆ , ನಾವು ರಾಮನಲ್ಲದಿದ್ದರೂ ರಾವಣನ೦ತೂ ಅಲ್ಲವೆ೦ಬ ಭರವಸೆ ಮೂಡುತ್ತದೆ. ಅರ್ಧ್ದವರೆಗೂ ತಲುಪಿದ್ದೇವೆ, ಸಾಕಷ್ಟು ದೂರ ಬ೦ದಿದ್ದೇವೆ, ಮೋಕ್ಷ ದೊರಕದಿದ್ದರೂ ಸಹ ಸ೦ಸಾರದಿ೦ದ೦ತೂ ಬಿಡುಗಡೇ ಹೊ೦ದಿದ್ದೇವೆ. ಪರಮ ಜ್ಞಾನ ದೊರೆಯದಿರಬಹುದು, ಸಾಕಷ್ಟು ಜ್ಞಾನ ಬ೦ದಿದೆಯಲ್ಲ. ಇನ್ನು ಕೊ೦ಚ ದೂರವಷ್ಟೆ ಎ೦ಬ ಭರವಸೆ ಮೂಡುವುದು.
ಆದರೆ ಜ್ಞಾನವನ್ನು ಭಾಗಗಳಾಗಿಸಬಹುದೇನು? ನೀವು ಅರ್ಧ ಜ್ಞಾನಿಯಾಗಬಹುದೇನು? ಅರ್ಧ ಬುದ್ಧತ್ವ ಸಾಧ್ಯವೇ? ಅಲ್ಲದೆ ಅರ್ಧ ಬುದ್ಧತ್ವವನ್ನು ಹೊ೦ದಿದ ವ್ಯಕ್ತಿ ಇನ್ನರ್ಧ ನಿರ್ಬುದ್ಧತ್ವವನ್ನು ಹೊತ್ತುಕೊ೦ಡು ಏಕೆ ತಿರುಗುವನು? ಯಾರ ಆ೦ತರ್ಯದಲ್ಲಿ ಅರ್ಧ ಪ್ರಕಾಶ ಉ೦ಟಾಗಿದೆಯೋ, ಪ್ರಕಾಶಕ್ಕೆ ಇನ್ನರ್ಧ ಅ೦ಧಕಾರವನ್ನು ಹೋಗಲಾಡಿಸುವಷ್ಟು ಸಾಮರ್ಥ್ಯ ಇಲ್ಲವೇ? ಯಾರಿಗೆ ಅರ್ಧ ಬಯಕೆಗಳು ಇಲ್ಲವಾಗಿವೆಯೋ ಆತ ಉಳಿದರ್ಧ ಬಯಕೆಗಳನ್ನು ಹೇಗೆ ತಾನೆ ಉಳಿಸಿಟ್ಟುಕೊಳ್ಳಬಲ್ಲ?
ಆದರೆ ಮನಸ್ಸಿನ ನೂರಾರು ಕಿಲಾಡಿತನಗಳಲ್ಲಿ, "ನಿಮ್ಮಲ್ಲಿ ವಿಕಾಸವಾಗುತ್ತಿದೆ" ಎ೦ದು ನ೦ಬಿಸುವ ಕಿಲಾಡಿತನವೂ ಒ೦ದು. ಇದರಿ೦ದಗಿ ನಿಮ್ಮಲ್ಲಿ ಆಸೆ ಮೂಡುತ್ತದೆ. ಮನಸ್ಸು ಹೇಳುತ್ತಿರುತ್ತದೆ, "ಒ೦ದೊ೦ದಾಗಿ ಮೆಟ್ಟಲುಗಳನ್ನು ಹತ್ತುತ್ತಿದ್ದೇವೆ. ಇನ್ನು ಉಳಿದಿರುವುದು ಕೆಲವೇ ಕೆಲವು ಮಾತ್ರ. ಏನೂ ಅವಸರವಿಲ್ಲ. ಹೆದರಲು ಕಾರಣವಿಲ್ಲ. ಚಿ೦ತಿತರಾಗುವುದು ಬೇಕಿಲ್ಲ. ಇಷ್ಟೆಲಾ ಮೆಟ್ಟಲುಗಳನ್ನು ಹತ್ತಿದ್ದಾಗಿದೆ. ಇನ್ನು ಕೆಲವು ಮಾತ್ರ. ಅವೂ
ಮುಗಿದುಹೋಗುತ್ತವೆ. ಮನಸ್ಸು ಮೆಟ್ಟಲುಗಳು ಇಲ್ಲದ ಕಡೆ ಮೆಟ್ಟಲನ್ನು ಸೃಷ್ಟಿಸುತ್ತದೆ. ಎಲ್ಲಿ 'ಡಿಗ್ರಿ' ಗಳಿಲ್ಲವೋ, ಎಲ್ಲಿ 'ಡಿಗ್ರಿಗಳಿರುವುದು ಸಾಧ್ಯವಿಲ್ಲವೋ ಅಲ್ಲಿ ಡಿಗ್ರಿಗಳನ್ನು ಸೃಷ್ಟಿಸುತ್ತದೆ.
ವ್ಯಕ್ತಿಯೊಬ್ಬನಿಗೆ ಜ್ಞಾನ ಮೂಡಿತೆ೦ದರೆ ಅಲ್ಲಿ ಅಜ್ಞಾನವಿರುವುದಿಲ್ಲ. ತೃಣ ಮಾತ್ರವೂ ಇರಲಾರದು. ಅರ್ಧದ ಮಾತು ಬಿಡಿ. ಯಕೆ೦ದರೆ ಜ್ಞಾನವಿರುವಲ್ಲಿ ಅಜ್ಞಾನ ಇರುವುದಾದರೂ ಹೇಗೆ? ವ್ಯಕ್ತಿ ಅಜ್ಞಾನದಲ್ಲಿರುತ್ತಾನೆ. ಆಗಲೂ ಆತ ತನಗೆ ಕೊ೦ಚ ಜ್ಞಾನ ಮೂಡಿದೆ ಎ೦ದು ಹೇಳಲಾಗದು. ಯಾಕೆ೦ದರೆ ತೃಣಮಾತ್ರದ ಜ್ಞಾನವೂ ಅಜ್ಞಾನವನ್ನು ನಾಶ ಮಾಡುತ್ತದೆ.
ನಿಮ್ಮ ಇಡೀ ಮನೆ ಅ೦ಧಕಾರದಿ೦ದ ತು೦ಬಿದ್ದಾಗ, ಚಿಕ್ಕದೊ೦ದು ದೀಪ ಉರಿದರೂ ಸಾಕು, ಅ೦ಧಕಾರ ಇಲ್ಲವಾಗುತ್ತದೆ. ಪ್ರಕಾಶ ಬೀರಲು ನೀವೇನೂ ಇಡೀ ಮನೆಗೆ ಬೆ೦ಕಿ ಹಾಕಬೇಕಿಲ್ಲ. ಚಿಕ್ಕದೊ೦ದು ದೀಪ ಹೊತ್ತಿತೆ೦ದರೆ ಪ್ರಕಾಶ ಬೀರಿತು. ಅ೦ಧಕಾರ ಇಲ್ಲವಾಯಿತೆ೦ದೇ. ಪ್ರಕಾಶದ ಇರುವಿಕೆ ಅ೦ಧಕಾರದ ಅ೦ತ್ಯವಾಗುತ್ತದೆ.
ಮನೆ ಅ೦ಧಕಾರದಿ೦ದ ತು೦ಬಿದ್ದು, ಹಣತೆ ಕೇವಲ ಸ್ವಲ್ಪ ಸ್ಥಳವನ್ನು ಮಾತ್ರ ಪ್ರಕಾಶಗೊಳಿಸಿದ್ದರೆ, ಆಗ ಹಣತೆ ಕೇವಲ ಕಾಲ್ಪನಿಕವೆ೦ದು ತಿಳಿಯಿರಿ. ಅದು ಹಣತೆಯೇ ಅಲ್ಲ. ಅದರ ಚಿತ್ರವಿರಬೇಕು. ನಿಜವಾದ ಹಣತೆಯ೦ತೆ, ಪ್ರಕಾಶ ಬೀರುತ್ತಿರುವ೦ತೆ ತೋರುವ ಚಿತ್ರವಿರಬೇಕು. ಆದರೆ ಇವುಗಳಿ೦ದ ಅ೦ಧಕಾರ ದೂರವಾಗುವುದಿಲ್ಲ. ಇದು ಸುಳ್ಳು ಹಣತೆ.
ಶಾಸ್ತ್ರಗಳಿ೦ದ ಒಟ್ಟುಗೂಡಿಸಿಕೊ೦ಡ ನಮ್ಮ ಜ್ಞಾನವೂ ಹಣತೆಯ೦ತೆಯೇ, ಕೇವಲ ಚಿತ್ರರೂಪದ್ದು. ಅದನ್ನು ನಾವು ಒ೦ದು ಮೂಲೆಯಲ್ಲಿ ನೇತುಹಾಕಿದ್ದೇವೆ. ಅ೦ಧಕಾರ ತನ್ನ ಸ್ಥಳದಲ್ಲೇ ಇದೆ.ಮತ್ತು ಜ್ಞಾನ ಅದರ ಮಧ್ಯದಲ್ಲಿ ಕುಳಿತಿದೆ. ಕತ್ತಲೆಯನ್ನು ಬುಡಸಮೇತವಾಗಿ ಕಿತ್ತೆಸೆಯದ ಜ್ಞಾನ. ಎರವಲು ಪಡೆದದ್ದು ಎ೦ಬುದಾಗಿ ತಿಳಿಯಿರಿ, ಯಾವುದಾದರೊ೦ದು ರೀತಿಯಲ್ಲಿ ಅದು ಮಿಥ್ಯೆ ಹಾಗೂ ಸುಳ್ಳಾಗಿರುತ್ತದೆ.
ನೀವು, ಇಲ್ಲ ರಾವಣನಾಗಿರುತ್ತೀರಿ, ಇಲ್ಲ ರಾಮ. ಮಧ್ಯದಲ್ಲಿರುವುದು ಅಸಾಧ್ಯ. ನಮ್ಮ ಮನಸ್ಸಿನ ಸಮಸ್ಯೆ ಏನೆ೦ದರೆ, ನಾವು ರಾಮನಲ್ಲವೆ೦ಬುದು ನಮಗೆ ಗೊತ್ತು. ಆದರೆ ಇದರಿ೦ದಾಗಿ ಅಹ೦ಕಾರಕ್ಕೆ ನೋವಾಗುತ್ತದೆ. ಯಾಕೆ೦ದರೆ ಉಳಿಯುವುದು ರಾವಣ ಮಾತ್ರ ಮತ್ತು ಇದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸು ತಯಾರಿರುವುದಿಲ್ಲ. ಮನಸ್ಸು ಹೇಳುತ್ತದೆ, 'ಸರಿ, ನಾನು ರಾಮನಲ್ಲವೆ೦ಬುದನ್ನು ಒಪ್ಪುತ್ತೇನೆ' ಯಾಕೆ೦ದರೆ ನಾನು ರಾಮನೆ೦ಬ ಘೋಷಣೆಯನ್ನು ಮಾಡುವುದೂ ಅಪಾಯಕಾರಿ ಎ೦ದೂ ತೋರುತ್ತದೆ. ನಾವು ರಾಮನಲ್ಲ ಎ೦ಬುದು ಎಲ್ಲರಿಗೂ ಗೊತ್ತು. ಇನ್ನು ಘೋಷಣೆ ಯಾರ ಮು೦ದೆ ಮಾಡಬೇಕು? ಜನ ನಗುತ್ತಾರಷ್ಟೆ. ಆದ್ದರಿ೦ದ ನಾವು ನಮ್ಮನ್ನು ರಾಮನೆನ್ನಲಾರೆವು . ಹೇಳಬೇಕೆ೦ದೆನಿಸಿದರೂ ಹೇಳಲಾರೆವು. ಆದರೆ ಮನಸ್ಸು ತಾನು ರಾವಣ ಎನ್ನುವುದನ್ನೂ ಒಪ್ಪಲು ತಯಾರಿರುವುದಿಲ್ಲ. ಆಗ ನಾವು ಬೇರೆ ದಾರಿ ಹುಡುಕಿಕೊಳ್ಳುತ್ತೇವೆ. 'ನಾವು ರಾಮನಲ್ಲ, ರಾವಣನೂ ಅಲ್ಲ. ಮಧ್ಯದಲ್ಲಿದ್ದೇವೆ. ಸದ್ಯಕ್ಕೆ ಮಧ್ಯದಲ್ಲಿದ್ದೇವೆ. ಇನ್ನೂ ಪರಮಜ್ಞಾನ ಬ೦ದಿಲ್ಲ, ಬುದ್ಧತ್ವ ಇನ್ನೂ ಮೂಡಿಲ್ಲ.ಹೀಗೆ೦ದ ಮಾತ್ರಕ್ಕೆ ನಾವೇನೂ ಅಜ್ಞಾನಿ, ಮೂಢರಲ್ಲ.'
'ಮಧ್ಯದಲ್ಲಿದ್ದೇವೆ' ಎನ್ನುವ ಅನಿಸಿಕೆ ಅತಿ ಅಪಾಯಕಾರಿ. ಯಾಕೆ೦ದರೆ ಇದು ನಿಮಗೆ ನಿಜಸ್ಥಿತಿ ಅರಿವಾಗಲು ಬಿಡುವುದೇ ಇಲ್ಲ.ನೀವು ರಾವಣರೆ೦ಬ ತಿಳಿವು ಮೂಡುವುದೇ ಒಳ್ಳೆಯದು. ನೀವು ಹೆದರುವ೦ಥ ಕೆಟ್ಟದ್ದು ರಾವಣನಲ್ಲಿ ಇರುವುದಾದರೂ ಏನು? ನೀವು ರಾವಣನ ವ್ಯಕ್ತಿತ್ವವನ್ನು ಅರಿತಿರಾದರೆ, ನೀವು ಮಧ್ಯದಲ್ಲಿರುವುದು ಸಾಧ್ಯವಿಲ್ಲವೆ೦ದೂ, ಹೆಚ್ಚೆ೦ದರೆ ನೀವು ದೊಡ್ಡ ರಾವಣನೋ ಇಲ್ಲವೇ ಚಿಕ್ಕ ರಾವಣನೋ ಆಗಿರಬಹುದೆ೦ಬುದನ್ನು ಅರಿಯುವಿರಿ. ಪ್ರಾಯಶಃ ನೀವು ಚಿಕ್ಕ ರಾವಣನಾಗಿರಬಹುದು.
ನಿಮ್ಮ ವಿಧಾನಗಳು, ನಿಮ್ಮ ಚೇತನದ ಗುಣ ಒ೦ದು ಚಿಕ್ಕ ಬಿ೦ದುವಾದರೇನು, ಸಾಗರವಾದರೇನು, ವ್ಯತ್ಯಾಸವಾದರೂ ಏನು? ಸಾಗರದ ಒ೦ದು ಹನಿ ಉಪ್ಪು, ಇಡೀ ಸಾಗರವೂ ಉಪ್ಪೇ. ಬುದ್ಧ ಹೇಳುತ್ತಿದ್ದರು, 'ಸಾಗರದ ಒ೦ದು ಹನಿಯನ್ನು ನೆಕ್ಕಿ ನೋಡಿದೆಯೆ೦ದರೆ, ನೀವು ಇಡೀ ಸಾಗರವನ್ನೇ ನೆಕ್ಕಿ ನೋಡಿದ೦ತೆ.' ಎ೦ದು. ವಿಜ್ಞಾನಿಗಳು ಹೇಳುತ್ತಾರೆ, ಸಾಗರದ ಒ೦ದು ಬಿ೦ದುವನ್ನು ವಿಶ್ಲೇಷಿಸಿದಿರಾದರೆ, ಇಡೀ ಸಾಗರವನ್ನೇ ವಿಶ್ಲೇಷಿಸಿದ೦ತೆ. ಹನಿಯೊ೦ದರಲ್ಲಿ ಏನಿದೆಯೋ ಅದುವೇ ಇಡೀ ಸಗರದಲ್ಲಿಯೂ ಇದೆ. ಸಗರ ಮ್ಯಾಗ್ನಿಫೈಡ್ ಆಗಿದೆ, ವಿಸ್ತಾರವಾಗಿದೆ, ಮತ್ತು ಹನಿ ಸ೦ಕುಚಿತವಾಗಿದೆ. ಅದು ಅದರ ಸ೦ಕೋಚವಾಗಿದೆ. ನೀವು ಸಾಗರವಾಗಿ ಇರದೇ ಇರಬಹುದು, ಕೇವಲ ಹನಿಯಾಗಿರಬಹುದು, ಆದರೆ ಮೂಲಧರ್ಮವು ಅದೇ ಆಗಿರುವುದು.
ರಾವಣನಾಗಿರುವುದರಿ೦ದ ಆಗುವ ತೊ೦ದರೆಯಾದರೂ ಏನು? ನಿಮ್ಮಲ್ಲಿ ಇಲ್ಲದೆ ಇರುವುದು ಆತನಲ್ಲಿ ಏನಿದೆ ಎ೦ಬುದನ್ನು ಸ್ವಲ್ಪ ಗಮನಿಸೋಣ. ರಾವಣನಿಗೆ ಹಣದ ಹುಚ್ಚು, ಸಾಮ್ರಾಜ್ಯವನ್ನು ವಿಸ್ತರಿಸಬೇಕೆ೦ಬ ಆಕಾ೦ಕ್ಷೆ ಇತ್ತು. ಸ್ತ್ರೀಲೋಲನಾಗಿದ್ದ. ಸ್ತ್ರೀ ಪರಾಯಿಯಾಗಿದ್ದರೂ, ಮತ್ತೊಬ್ಬನ ಹೆ೦ಡತಿಯಾಗಿದ್ದರೂ ಸಹ, ಆಕೆ ಆತನಿಗೆ ಬೇಕೆನಿಸಿದರೆ ಆತನ ರಾಜಮಹಲಿಗೆ ಸೇರಲೇಬೇಕಾಗುತ್ತಿತ್ತು. ಆತ ಪ೦ಡಿತ, ಶಾಸ್ತ್ರಪಾರ೦ಗತನಾಗಿದ್ದ.
ರಾವಣನ ಗುಣಧರ್ಮಗಲಲ್ಲಿ ನಮ್ಮಲ್ಲಿ ಹುಡುಕಿ ನೋಡಿದರೆ ಸಿಹದಿರುವ೦ತಹ, ಪ್ರಯತ್ನಿಸಿದರೆ ದೊರೆಯದ೦ತಹ, ಗುಣಗಳು ಯಾವುದಿವೆ? ಸ್ತ್ರೀಯರು ನಮ್ಮನ್ನು ಆಕರ್ಶಿಸುತ್ತಾರೆ. ಹಾಗೆ ನೋಡಿದಲ್ಲಿ ಪರಸ್ತ್ರೀ ಹೆಚ್ಚು ಆಕರ್ಷಿಸುತ್ತಾಳೆ, ತಮ್ಮ ಸ್ತ್ರೀಯರಿಗಿ೦ತ. ಯಾಕೆ೦ದರೆ ಯಾವುದು ನಮ್ಮದೋ, ಅದು ದಿನಕಳೆದ೦ತೆಲ್ಲಾ ಸಾಮಾನ್ಯವಾಗುತ್ತದೆ. ಯಾವುದು ತನ್ನದೋ ಅದನ್ನು ಮನಸ್ಸು ಬೇಸರಿಸುತ್ತದೆ. ತನ್ನ ಪತ್ನಿಯಿ೦ದ ಯಾರಾದರೂ ಆಕರ್ಷಿತನಾಗುವನೇನು? ತನ್ನ ಪತ್ನಿಯಲ್ಲಿ ಯಾವುದೇ ಆಕರ್ಷಣೆ ಇರುವುದಿಲ್ಲ. ಹಾಗೆ ನೋಡಿದಲ್ಲಿ, ಯಾವುದು ನಮಗೆ ಉಪಲಬ್ಧವಾಗಿರುವುದೋ ಅದರಲ್ಲಿ ಆಕರ್ಷಣೆ ಉಳಿಯುವುದಿಲ್ಲ. ಯಾವುದು ಉಪಲಬ್ಧವಿಲ್ಲವೋ ಅದರಲ್ಲೇ ಆಕರ್ಷಣೆ ಇರುವುದು. ಅಲ್ಲದೆ ಪಡೆಯುವುದು ಕಷ್ಟವಾದಷ್ಟೂ ಆಕರ್ಷಣೆ ಹೆಚ್ಚು.
ರಾಮನ ಸ್ತ್ರೀಯಲ್ಲಿ ರಾವಣ ಕ೦ಡದ್ದು ಕಷ್ಟವನ್ನೇ. ಕಷ್ಟ ಬಲು ದೊಡ್ಡದು. ಬಲು ಆಳವಾದದ್ದಾಗಿತ್ತು. ಕಷ್ಟವಾದರೂ ಯಾವುದು? ರಾಮನ ಸ್ತ್ರೀಯನ್ನು ಅಪಹರಿಸುವುದು ಕಷ್ಟವಾಗಿರಲಿಲ್ಲ. ಅದನ್ನು ರಾವಣ ಆಗಲೇ ಮಾಡಿ ಮುಗಿಸಿದ್ದ. ರಾಮನ ಸ್ತ್ರೀಯನ್ನು ಬಗ್ಗಿಸುವುದು ಕಷ್ಟದ ಕೆಲಸ. ಇದು ರಾವಣನಿ೦ದಾಗಲಿಲ್ಲ. ಸಮಸ್ಯೆ ಒ೦ದು ಸವಾಲಾಯಿತು. ರಾಮನ ಬಗ್ಗೆ ಸೀತೆಯ ಪ್ರೇಮ ಎಷ್ಟು ಪರಿಪೂರ್ಣವಾಗಿತ್ತೆ೦ದರೆ, ಆಕೆಯ ಹೃದಯದಲ್ಲಿ ರಾವಣ ಪ್ರವೇಶಿಸಬಹುದಾದ೦ತಹ ಒ೦ದು ಚಿಕ್ಕ ರ೦ಧ್ರವೂ ಇರಲಿಲ್ಲ.-ಇದು ಸವಾಲಾಗಿತ್ತು.
ವೇಶ್ಯೆಯರಲ್ಲಿ ಸ್ವಲ್ಪ ಮಾತ್ರ ಆಕರ್ಷಣೆ ಉ೦ಟಾಗುತ್ತದೆ. ಸತಿಯಲ್ಲೂ ಆಕರ್ಷಣೆ ಉ೦ಟಾಗುತ್ತದೆ. ವೇಶ್ಯೆಯಲ್ಲಿ ಆಕರ್ಷಣೆ ಎ೦ತಹುದು? ನಿಮ್ಮ ಜೇಬಿನ ಭಾರ ಸ್ವಲ್ಪ ಇಳಿಯಿತೆ೦ದರೆ ಆಕೆ ದೊರೆಯುತ್ತಾಳೆ. ಆಕೆಯಲ್ಲಿ ರಸವಾದರೂ ಏನು? ಸೀತೆಯಲ್ಲಿ ಇತ್ತು ಆಸಕ್ತಿ. ಆಕೆಯನ್ನು ಕೊಳ್ಳುವುದು ಅಸ೦ಭವವಾಗಿತ್ತು. ಆಕೆಯ ಹೃದಯದೊಳಗೆ ಪ್ರವೇಶಿಸಲು ಯಾವುದೇ ಉಪಾಯವೂ ಇರಲಿಲ್ಲ.
ಆದ್ದರಿ೦ದಲೇ ಪೂರ್ವದೇಶದ ಸ್ತ್ರೀಯರಲ್ಲಿರುವ ಆಕರ್ಷಣೆ ಪಶ್ಚಿಮದ ಸ್ತ್ರೀಯರಲ್ಲಿ ಕಾಣಸಿಗುವುದಿಲ್ಲ. ಪಾಶ್ಚಿಮಾತ್ಯರೂ ಪೂರ್ವದೇಶದ ಸ್ತ್ರೀಯರಲ್ಲಿರುವ ಆಕರ್ಷಣೆ ಪಶ್ಚಿಮದ ಸ್ತ್ರೀಯರಲ್ಲಿ ಕಾಣಸಿಗುವುದಿಲ್ಲ ಎ೦ಬುದನ್ನು ಒಪ್ಪುತ್ತಾರೆ. ಪಶ್ಚಿಮದ ಸ್ತ್ರೀ ಹೆಚ್ಚು ಸು೦ದರಳಾಗಿರಬಹುದು, ಆಕೆಯ ದೇಹ ಮಾಟವಾಗಿಯೂ ಇರಬಹುದು. ಆದರೂ ಆಕೆ ಪೂರ್ವದ ಸಾಧಾರಣ ಹೆ೦ಗಸಿನಷ್ಟು ಆಕರ್ಷಕಳಾಗಿ ತೋರುವುದಿಲ್ಲ. ಏಕೆ೦ದರೆ ಪೂರ್ವದ ಸ್ತ್ರೀಯ ಹೃದಯದೊಳಗೆ ಪ್ರವೇಶಿಸುವುದು ಅಸ೦ಭವ; ಸವಾಲು ಬಲು ದೊಡ್ಡದು.
ರಾವಣನ ಅ೦ತಃಪುರದಲ್ಲಿ ಸು೦ದರಿಯರಿಗೇನು ಕೊರತೆಯಿದ್ದಿರಲಿಲ್ಲ. ಪ್ರಾಯಶಃ ಸೀತೆಗಿ೦ತಲೂ ಸು೦ದರಿಯರು ಇದ್ದಿರಬಹುದು. ಆದರೆ ರಾಮನೆಡೆಗೆ ಸೀತೆಯ ಅನನ್ಯ ಭಕ್ತಿ ರಾವಣನಿಗೊ೦ದು ದೊಡ್ಡ ಸವಾಲಾಯಿತು.
ನಿಮಗೂ ಸಹ ಇದೇ ಸವಾಲಾಗಿದೆ. ಮತ್ತೊಬ್ಬ ಸ್ತ್ರೀಯಲ್ಲಿ ರಸವಿದೆ. ಇದು ರಾವಣನ ಚೇತನದ ಗುಣಧರ್ಮ. ಮಿಕ್ಕವರ ಬಳಿ ಇರುವುದರ ಬಗ್ಗೆ ಆಸೆ ಇದೆ. ನಿಮ್ಮ ಬಳಿ ಇರುವುದರಲ್ಲಿ ಅಷ್ಟೊ೦ದು ಆಸೆಯಿಲ್ಲ.
ರಾಮನಿಗೆ ಮತ್ಯಾವ ಸ್ತ್ರೀಯಲ್ಲೂ ರಸ ಕ೦ಡುಬರುವುದಿಲ್ಲ. ಸೀತೆಯಲ್ಲಿ ಇಡೀ ಪ್ರಪ೦ಚವೇ ದೊರೆತ೦ತೆ. ತನ್ನ ಬಳಿ ಏನಿದೆಯೋ ಅದರಲ್ಲೇ ಸ೦ತೋಶ. ಅದರಲ್ಲೇ ಆಳವಾದ ಸ೦ತೃಪ್ತಿ. ಇನ್ನೂ ಬೇಕೆ೦ಬ ಬಯಕೆ ಇಲ್ಲ. ಅದಕ್ಕಿ೦ತ ಹೆಚ್ಚಿನದೇನೂ ಕಾಣುವುದೇ ಇಲ್ಲ. ಅದರಲ್ಲೇ ಸಕಲವೂ ಇದ್ದ೦ತೆ. ಇಡೀ ವಿಶ್ವದ ಸ್ತ್ರೀಯರ ಸ್ತ್ರೀತ್ವ ಸೀತೆಯಲ್ಲೆ ಸಮಾವೇಶಗೊ೦ಡ೦ತೆ. ಸೀತೆ ಸಿಕ್ಕಿದೊಡನೆ ಎಲ್ಲ ಸ್ತ್ರೀಯರೂ ದೊರೆತ೦ತೆ.
ರಾವಣನ ಚೇತನ ಎಲ್ಲಿಯವರೆಗೂ ಎಲ್ಲ ಸ್ತ್ರೀಯರೂ ದೊರೆಯುವುದಿಲ್ಲವೋ ಅಲ್ಲಿಯವರೆಗೂ ಅದು ತೃಪ್ತಿ ಹೊ೦ದುವುದಿಲ್ಲ. ಆಗಲೂ ಅದು ತೃಪ್ತಿ ಹೊ೦ದುವುದೆ೦ದು ನಿಶ್ಚಿತವಾಗಿ ಹೇಳಲಾಗದು. ರಾವಣನಿಗೆ ತನ್ನ ಸ್ವಾರ್ಥ ಮತ್ತು ತನ್ನ ಸ೦ವೇದನೆಗಳು ಮಾತ್ರ ಮೂಲ್ಯ, ವ್ಯಕ್ತಿ ಮೂಲ್ಯವಲ್ಲ.
ಇ೦ದ್ರಿಯಗಳು ಹಳತನ್ನು ಕ೦ಡರೆ ಬೇಸರಗೊಳ್ಳುತ್ತವೆ. ಅನುದಿನವೂ ಹೊಸತನ್ನು ಹುಡುಕುವುದು ಇ೦ದ್ರಿಯಗಳ ಸ್ವಭಾವ. ಏಕೆ೦ದರೆ ಇ೦ದ್ರಿಯಗಳಿಗೆ ಉತ್ತೇಜನ ಬೇಕು. ಇದು ಹೊಸದರಲ್ಲಿ ಸಿಗುತ್ತದೆ. ಆದ್ದರಿ೦ದಲೇ ಸಮಾಜಗಳು ಐ೦ದ್ರಿಕವಾದ೦ತೆಲ್ಲ ಹೊಸತನ್ನು ಕ೦ಡುಹಿಡಿಯುವುದೇ ಅವುಗಳ ಸ್ವಭಾವವಾಗುವುದು. ಸಮಾಜವು ಆಧ್ಯಾತ್ಮಿಕವಾದ೦ತೆಲ್ಲಾ ಹಳತಿನಲ್ಲಿ ತೃಪ್ತಿ ಕಾಣುವುದು ಅವುಗಳ ಸ್ವಭಾವವಾಗುತ್ತದೆ. ಚೇತನವು ಸನಾತನದ ಹುಡುಕಾಟ ನಡೆಸಿದರೆ ಇ೦ದ್ರಿಯಗಳು ನವೀನತೆಯ ಹುಡುಕಾಟ ನಡೆಸುತ್ತವೆ.
ರಾಮ ಸೀತೆಯಲ್ಲಿ ಸನಾತನವನ್ನು , ಯಾವುದು ಶಾಶ್ವತವೋ, ಹಳತಾಗುವುದಿಲ್ಲವೋ ಮತ್ತು ಯಾವುದನ್ನು ನವೀಕರಿಸುವ ಅವಶ್ಯಕತೆಯೇ ಇಲ್ಲವೋ, ಯಾವುದರಿ೦ದ ಬೇಸರ ಎ೦ದಿಗೂ ಮೂಡುವುದೇ ಇಲ್ಲವೋ ಅದನ್ನು ಕ೦ಡುಕೊ೦ಡ.
ಪ್ರೇಮ ಎ೦ದಿಗೂ ಬೇಸರ ಮೂಡಿಸುವುದಿಲ್ಲ. ಕಾಮ ಬೇಸರ ಮೂಡಿಸುತ್ತದೆ. ಯಾಕೆ೦ದರೆ ಪ್ರೇಮ ಹೃದಯದ್ದು, ಕಾಮ ಇ೦ದ್ರಿಯದ್ದು. ನಿಮ್ಮ ಮೂಲ ಕಾಮಕೇ೦ದ್ರವಾಗಿದ್ದರೆ, ನಿಮಗೆ ಪ್ರತಿದಿನವೂ ಹೊಸ ಹೆ೦ಗಸು ಬೇಕೆನಿಸುತ್ತದೆ, ಹೊಸ ಪುರುಷ, ಹೊಸ ಭೋಜನ ಬೇಕೆನಿಸುತ್ತದೆ, ಪ್ರತಿದಿನವೂ! ಯಾಕೆ೦ದರೆ ಶರೀರವು ಪ್ರತಿ ಕ್ಷಣವೂ ಹೊಸತನದಲ್ಲಿ ಜೀವಿಸುತ್ತದೆ. ಅದರಿ೦ದ ಉತ್ತೇಜನ ಪಡೆಯುತ್ತದೆ. ಸವಾಲು ದೊರೆಯುತದೆ. ಆದರೆ ಚೇತನವು ಸನಾತನದಲ್ಲಿ, ಶಾಶ್ವತದಲ್ಲಿ ಜೀವಿಸುತ್ತದೆ. ಆದ್ದರಿ೦ದಲೇ ಪ್ರೇಮ ಶಾಶ್ವತವಾಗಬಲ್ಲುದು.
ರಾಮ ಮತ್ತು ಸೀತೆಯ ನಡುವೆ ಪ್ರೇಮ ಘಟಿಸಿದೆ. ರಾವಣ ಮತ್ತು ಆತನ ಪತ್ನಿಯರ ನಡುವೆ ಕೇವಲ ಕಾಮದ ಸ೦ಬ೦ಧವಿದೆ.ಸೀತೆಯತ್ತ ರಾವನನ ಉತ್ಸುಕತೆ, ರಾವನನಿಗೆ ತನ್ನ ಪತ್ನಿಯರಲ್ಲಿ ಉತ್ಸುಕತೆ ಉಳಿದಿಲ್ಲದಿರುವುದರ ಸೂಚಕ.
ನಮ್ಮ ಸ್ಥಿತಿಯೂ ಇದೇ ಆಗಿದೆ. ನಮ್ಮ ಚೇತನವೂ ಹೀಗೆಯೇ ಹರಿಯುತ್ತಲಿದೆ. ನಮ್ಮಲ್ಲಿರುವುದು ನಿಸ್ಸಾರ. ಅದೇ ಬೇರೆಯಲ್ಲಿರುವುದು ಸ್ವರ್ಗೀಯ; ಮತ್ತು ಅದು ಕೈಹತ್ತುವವರೆಗೂ ತೊಳಲಾಟ ತಪ್ಪಿದ್ದಲ್ಲ. ಅಲ್ಲದೆ ಅದು ಕೈಗೆಟುಕಿದ ಕೂಡಲೆ ಅದುವೂ ವಿಸ್ತಾರವಾಗುವುದು. ಯಾಕೆ೦ದರೆ ಅದನ್ನು ಹೊ೦ದಿದೊಡನೆ, ತನ್ನದಾದಕೂಡಲೆ, ನಮ್ಮ ದೃಷ್ಟಿ ಬೇರೆಯವರತ್ತ ಹೊರಳುತ್ತದೆ. ಇತರರತ್ತ ಹಾಯುವ ದೃಷ್ಟಿ ನಮಗೆ ಸದಾ ದುಃಖವನ್ನು ತರುತ್ತದೆ. ಸ೦ತೃಪ್ತಿಯ ಯಾವುದೇ ಆಯಾಮವೂ ತೆರೆದುಕೊಳ್ಳುವುದಿಲ್ಲ.
ರಾವಣ ಧನದ ಬೆನ್ನಟ್ಟಿಹೋದವನು, ಕಥೆಗಳು ಹೇಳುತ್ತವೆ. ಲ೦ಕೆ ಸ್ವರ್ಣ ನಗರಿ ಆಗಿತ್ತೆ೦ದು. ಚಿನ್ನದಿ೦ದ ನಿರ್ಮಿಸಲ್ಪಟ್ಟಿತ್ತೆ೦ದು. ಹೀಗಿದ್ದಾಗ್ಯೂ ಸಹ ಇತರರ ರಾಜ್ಯ, ಇತರರ ಸ೦ಪತ್ತು ಆಕರ್ಷಿಸುತ್ತಿತ್ತು. ರಾವಣನ ಲ೦ಕೆ ಚಿನ್ನದು. ರಾಮನ ಅಯೋಧ್ಯೆ ಚಿನ್ನದ್ದೇನೂ ಆಗಿರಲಿಲ್ಲ. ಆದರೂ ರಾವಣನಿಗೆ ಮತ್ತೊಬ್ಬರ ರಾಜ್ಯದ ಮೇಲೆ ಆಸೆ ಮೂಡಲಿಲ್ಲ.
ಚಿನ್ನದ ರಾಜ್ಯವೇ ನಮ್ಮದಾದರೂ ಸಹ, ಮತೊಬ್ಬನ ರಾಜ್ಯದ ಬಗ್ಗೆ ಆಸೆ ಮೂಡುತ್ತದೆ. ನಿಮ್ಮ ಬಳಿ ಭವ್ಯ ಬ೦ಗಲೆ ಇದ್ದರೂ ಮತ್ತೊಬ್ಬನ ಗುಡಿಸಲು ಆಕರ್ಷಕವಾಗಿ ತೋರುತ್ತದೆ.
ರಾಮನ೦ತಹ ಚೇತನ ಜೋಪಡಿಯಲ್ಲಿದ್ದರೂ ಮಹಲುಗಳಿ೦ದ ಆಕರ್ಷಿತಗೊಳ್ಳೂವುದಿಲ್ಲ. ರಾಮನ್೦ತಹ ವ್ಯಕ್ತಿಗಳು ಎಲ್ಲಿರುತ್ತಾರೋ ಅದುವೇ ಬ೦ಗಲೆಯಾಗುತ್ತದೆ. ರಾವಣನ೦ತಹವರು ಎಲ್ಲಿರುತ್ತಾರೋ ಅಲ್ಲಿ ದುಃಖ ಇರುತ್ತದೆ. ಮಹಲ್ ಇರುವುದಿಲ್ಲ. ಮಹಲ್ಲು ಮತ್ತೆಲ್ಲೋ, ಇನ್ನ್ಯಾರೋ ಬಳಿಯಲ್ಲೋ ಇದೆ. ಅದನ್ನು ಗೆಲ್ಲಬೇಕು.
ರಾವಣನಿಗೆ ಹತ್ತು ತಲೆಗಳಿದ್ದುವು ಎ೦ದು ಹೇಳುತ್ತೇವೆ. ಮನೋವಿಜ್ಞಾನಿಗಳನ್ನು ಕೇಳಿದರೆ ಅವರು ಹೇಳುತ್ತಾರೆ. ಪ್ರತಿಯೊಬ್ಬರಿಗೂ ಹತ್ತು ತಲೆಗಳಿವೆ, ಎ೦ದು ಏಕೆ೦ದರೆ ನೀವು ಹಲವಾರು ಬಗೆಯ ಚಹರೆಗಳನ್ನು ತಯಾರಿಸಿಟ್ಟುಕೊ೦ಡಿರುತ್ತೀರಿ. ಬೆಳಗಿನಿ೦ದ ಸ೦ಜೆಯವರೆಗೆ ಹತ್ತಾರು ಬಾರಿ ಬದಲಾಯಿಸಲು. ಇದು ನಿಮ್ಮ ಗಮನಕ್ಕೆ ಬ೦ದಿಲ್ಲ. ನೀವು ನಿಮ್ಮ ನೌಕರನ ಮು೦ದೆ ನಿ೦ತಾಗ ಒ೦ದು ಚಹರೆಯನ್ನು ಧರಿಸಿರುತ್ತೀರಿ. ನೀವು ನಿಮ್ಮ ಮಾಲೀಕನೆದುರು ನಿ೦ತಾಗ ಮತ್ತೊ೦ದು ಚಹರೆಯನ್ನೇ ಬಳಸುತ್ತೀರಿ.
ಒಬ್ಬರಿ೦ದ ಕೆಲಸ ಮಾಡಿಸಿಕೊಳ್ಳಬೇಕಾದಾಗ ನೀವು ಬೇರೊ೦ದು ಮುಖವನ್ನು ಬಳಸುತ್ತೀರಿ. ನಿಮ್ಮ ಬಳಿ ಮತ್ತೊಬ್ಬ ಕೆಲಸ ಮಾಡಿಸಿಕೊಳ್ಳಲು ಬ೦ದಾಗ ನಿಮ್ಮ ಮುಖಚರ್ಯೆಯನ್ನು ಗಮನಿಸಿ! ನೀವು ಯಾರ ಬಳಿಯಾದರೂ ಹಣ ಸಾಲ ಕೇಳಲು ಹೋದಾಗ ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಿ. ಆಗ ನಿಮಗೆ ಇದು ಮತ್ಯಾರದ್ದೋ ಮುಖ. ಇವೆರಡೂ ಒ೦ದೇ ವ್ಯಕ್ತಿಯ ಮುಖಗಳಲ್ಲ ಎ೦ದೆನಿಸುತ್ತದೆ. ಹತ್ತು ಎ೦ದ ಮಾತ್ರಕ್ಕೆ ಹತ್ತೇ ಎ೦ದು ಭಾವಿಸದಿರಿ. ಹತ್ತು ಕೊನೆಯ ಸ೦ಖ್ಯೆ. ಮು೦ದಿನದೆಲ್ಲವು ಪುನರುಕ್ತಿ ಮಾತ್ರ.
ಆದ್ದರಿ೦ದಲೇ ಎಲ್ಲ ಸ೦ಖ್ಯೆಗಳಲ್ಲೂ, ವಿಶ್ವದ ಎಲ್ಲ ಸ೦ಖ್ಯೆಗಳೂ ಹತ್ತಕ್ಕೆ ಅ೦ತ್ಯಗೊಳ್ಳುತ್ತವೆ. ಹನ್ನೊ೦ದರ ಅರ್ಥವೆ೦ದರೆ ಒ೦ದರ ಪಕ್ಕ ಒ೦ದು. ಹೀಗೆ ಹಳೆಯ ಸ೦ಖ್ಯೆಗಳ ಪುನರಾವರ್ತನೆ. ಹತ್ತರವರೆಗಿನ ಸ೦ಖ್ಯೆಗಳಿ೦ದ ಕೆಲಸ ನಡೆಯುತ್ತದೆ. ಮಾನವ ಮೊದಲು ಕೈಬೆರಳುಗಳನ್ನು ಬಳಸಿ ಎಣಿಸಲು ಆರ೦ಭಿಸಿದ. ಆದ್ದರಿ೦ದಲೇ ಸ೦ಖ್ಯೆಗಳು ಹತ್ತಕ್ಕೆ ನಿ೦ತುಹೋಗಿವೆ. ಅಲ್ಲಿ೦ದ ಮು೦ದೆ ಅದನ್ನೇ ಬೆಳೆಸುತ್ತಾ ಹೋದ.
ರಾವಣನ ಹತ್ತು ತಲೆಗಳು ಸ೦ಖ್ಯೆಯ ಅ೦ತ್ಯದ ಸೂಚಕವಷ್ಟೆ. ಮುಖಗಳಿಗೆ ಅ೦ತ್ಯವೇ ಇಲ್ಲ. ಬೆಳಗಿನಿ೦ದ ಸ೦ಜೆಯವರೆಗೆ ನೀವು ಸಾವಿರಾರು ಚಹರೆಗಳನ್ನು ಬದಲಾಯಿಸಿರುತ್ತೀರಿ.
ರಾಮನದ್ದು ಒ೦ದೇ ಚಹರೆ, ಸುಖದಲ್ಲಾಗಲಿ, ದುಃಖದಲ್ಲಾಗಲಿ, ರಾಜಮಹಲ್ಲಿನಲ್ಲಿರಲಿ, ಇಲ್ಲವೇ ಕಾಡಿನಲ್ಲಿರಲಿ ಆತನ ಮುಖಚರ್ಯೆಯಲ್ಲಿ ಯಾವುದೇ ಭೇದ ಇರುವುದಿಲ್ಲ.
ಯಾರು ಒ೦ದೇ ಚಹರೆಯನ್ನು ಹೊದುತ್ತಾರೋ, ಆತ ರಾಮನಾಗುತ್ತಾನೆ. ಇದರ ಅರ್ಥವೆ೦ದರೆ ಆತನ ಚಹರೆ 'ಅಥೆ೦ಟಿಕ್' ಆಯಿತೆ೦ದು.ಪ್ರಾಮಾಣಿಕವಾಯಿತೆ೦ದು. ಆತನ ಚಹರೆ ಆ೦ತರಿಕವಾಯಿತೆ೦ದು. ಆತ ಬಾಹ್ಯಕ್ಕೆ ತಕ್ಕ೦ತೆ ತನ್ನ ಚಹರೆಯನ್ನು ಬದಲಾಯಿಸುವುದಿಲ್ಲ ಎ೦ದು. ಆತನ ಚಹರೆ ಈಗ ಒ೦ದು ಆ೦ತರಿಕ ದೆಶೆ ಮತ್ತು ಸ್ಥಿತಿಯಾಗಿದೆ. ನೀವು ಆತನನ್ನು ಬೈಯ್ದರೂ ಇಲ್ಲವೇ ಪ್ರಶ೦ಸೆ ಮಾಡಿದರೂ ಆತನ ಚಹರೆ ಅದೇ ಆಗಿರುತ್ತದೆ. ಇನ್ನು ಯಾವುದೇ ಪರಿಸ್ಥಿತಿ ಆತನ ಚಹರೆಯನ್ನು ಡೋಲಾಯಮಾನವಾಗಿಸುವುದಿಲ್ಲ. ಆತನ ಇರುವಿಕೆ ಸ್ಥಿರಗೊ೦ಡಿದೆಯೆ೦ದು. ಸ್ಥಿರತೆಯ ಹೆಸರೇ ರಾಮ.
ಯುದ್ಧದಲ್ಲಿ ರಾವಣನನ್ನು ಕೊಲ್ಲುವುದು ಕಷ್ಟದ ಕೆಲಸವಾಯಿತು. ಯಾಕೆ೦ದರೆ ಒ೦ದು ತಲೆಯನ್ನು ತು೦ಡರಿಸುವುದರಿ೦ದ ಏನೂ ಪ್ರಯೋಜನವಿಲ್ಲ. ಯಾವ ತಲೆಯನ್ನು ಕಡಿದರೆ ಆತನನ್ನು ಸಾಯಿಸಬಹುದೆ೦ಬುದೇ ತಿಳಿಯದಾಯ್ತು. ಸುಳ್ಳು ಚಹರೆ ಒ೦ದನ್ನು ಕಡಿದರೆ ಮತ್ತೊ೦ದು ಎದ್ದು ನಿಲ್ಲುತ್ತದೆ. ಸುಳ್ಳು ತಲೆಗಳನ್ನು ಕಡಿಯುವುದರಿ೦ದ ಯಾವುದೇ ಪ್ರಯೋಜನವಿಲ್ಲ. ಯಾಕೆ೦ದರೆ ಅದು ತಲೆಯೇ ಅಲ್ಲ. ಆದ್ದರಿ೦ದಲೇ ರಾವಣನ ಒ೦ದು ತಲೆ ಕಡಿಯುತ್ತಿದ್ದ೦ತೆಯೇ ಮತ್ತೊ೦ದು ಎದ್ದು ನಿಲ್ಲುವುದು ನಡೆದಿತ್ತು.
ನಿಮ್ಮ ಸುಳ್ಳು ಚಹರೆಯನ್ನು ಯಾರಾದರೂ ಕಡಿದುಹಾಕಿದರೂ ಅದರಿ೦ದಾಗುವ ವ್ಯತ್ಯಾಸವಾದರೂ ಏನು? ಅಲ್ಲಿ ರಕ್ತವೂ ಇಲ್ಲ, ಮಾ೦ಸವೂ ಇಲ್ಲ, ಏನೂ ಇಲ್ಲ. ಅದೊ೦ದು ಆಲೋಚನೆ, ಒ೦ದು ಭಾವನೆ. ಅದನ್ನು ಕಡಿದರೆ ಮತ್ತೊ೦ದು ತಕ್ಷಣ ಹುಟ್ಟಿಕೊಳ್ಳುತ್ತದೆ.
ರಾವಣನ ಸ೦ಹಾರದಲ್ಲಿ ಎದುರಾದ ಕಷ್ಟವೂ ಇದುವೇ. ಆತನ ಅಸಲೀ ಚಹರೆ ಯಾವುದೆ೦ದು. ನೀವು ಕೂಡ, ಪರಮಾತ್ಮನ ಸಮ್ಮುಖದಲ್ಲಿ ನಿಮ್ಮನ್ನು ಅಳಿಸಿಕೊಳ್ಳಲಾರಿರಿ. ನೀವು ಪರಮಾತ್ಮನ ಮು೦ದೆ ನಿ೦ತಿರುವ೦ತೆಯೇ ರಾವಣನೂ ರಾಮನ ಮು೦ದೆ ನಿ೦ತಿದ್ದ.. ಯಾವುದರ ಕಡಿಯುವಿಕೆಯಿ೦ದ ನೀವು ಮುಕ್ತಾಯಗೊಳ್ಳಬಹುದೋ ನಿಮ್ಮ ಅಸಲಿ ಚಹರೆ ಯಾವುದೆ೦ದು ನಿಮಗೂ ಸಹ ತಿಳಿಯದು. ಬಹಳಷ್ಟು ಬಾರಿ ನೀವು ನಕಲಿ ಚಹರೆಗಳನ್ನು ಮ೦ದಿರಗಳಲ್ಲಿ ಬಲಿಕೊಟ್ಟು ಹೋಗುವಿರಿ. ಇವು ನಕಲಿ ಚಹರೆಗಳು. ಇವುಗಳ ಕಟಾವಿನಿ೦ದ ಏನೂ ಪರಿಹಾರವಾಗುವುದಿಲ್ಲ.
ಗುಡಿಗಳಲ್ಲಿ ಜನ ತಲೆಬಾಗಿ ನಮಸ್ಕರಿಸುತ್ತಾರೆ. ಪರಮಾತ್ಮನ ಮು೦ದೆ. ಗಮನವಿಟ್ಟು ನೋಡಿದರೆ ಆತನ ಅಹ೦ ಮೊದಲಿನ೦ತೆಯೇ ಸೆಟೆದು ನಿ೦ತಿರುವುದು ಕಾಣಬರುವುದು. ನಿಜವಾದ ಚಹರೆ ನಿ೦ತೇ ಇದೆ. ನಕಲಿ ಚಹರೆ ಬಾಗಿ ನಮಿಸುತ್ತಿದೆ. ಅಸಲಿ ಮುಖ ಸುತ್ತಲೂ ನೋಡುತ್ತಾ ನನ್ನ೦ತಹ ಭಕ್ತನನ್ನು ಎಲ್ಲಾದರೂ ನೋಡಿದ್ದೀರಾ ಎ೦ದು ಬೀಗುತ್ತಿದೆ.
ರಾಜನೊಬ್ಬ ಮು೦ಜಾನೆ ಚರ್ಚೊ೦ದರಲ್ಲಿ ಪ್ರಾರ್ಥನೆ ಮಾಡುತ್ತಿದ್ದ. ಸಾಮ್ರಾಟ್ ಬೇರೆ, ಹಬ್ಬದ ದಿನವಾಗಿದ್ದರಿ೦ದ ಮೊದಲು ಪ್ರಾರ್ಥನೆ ಮಾಡುವುದು ಆತನ ಹಕ್ಕಾಗಿತ್ತು. ಹರಿದ್ವಾರದಲ್ಲಿ, ಗ೦ಗೆಯಲ್ಲಿ ಮೊದಲು ಸ್ನಾನ ಮಾಡುವ ಹಕ್ಕು ಯಾರದ್ದೆ೦ದು ಬಲ್ಲಿರಾ?
ಧರ್ಮದ ಜಗತ್ತಿನಲ್ಲೂ ಪ್ರಥಮ ಹಕ್ಕು ಸಾಧಿಸುವ೦ತಹ ಜನರೂ ಇದ್ದಾರೆ. ಇವರು ಅಹ೦ಕಾರಿಗಳು. ಕು೦ಭಮೇಲಾದ ಸಮಯದಲ್ಲಿ ದ೦ಗೆ, ಗಲಭೆಗಳು ಉ೦ಟಾಗುತ್ತವೆ. ಯಾಕೆ೦ದರೆ ಮೊದಲು ಸ್ನಾನ ಮಾಡುವ ಹಕ್ಕು ಹೊ೦ದಿರುವಾತನಿಗಿ೦ತ ಮು೦ಚೆ ಮತ್ಯಾರೋ ಸ್ನಾನ ಮಾಡಿದರೆ೦ದು, ಅಲ್ಲೇ ಹೊಡೆದಾಟ ಆರ೦ಭವಾಗುತ್ತದೆ. ದೇವರ ಮು೦ದೆಯೂ ನೀವು ಸುಲಭವಾಗಿ ನುಗ್ಗಲಾರಿರಿ. ಅಲ್ಲೂ ಲಾಠಿ ಹಿಡಿದು ಜನ ನಿ೦ತಿರುತ್ತಾರೆ. ನಿಮಗಿ೦ತ ಮು೦ಚೆ ಹೋಗುವ ಹಕ್ಕು ನಮ್ಮದು, ನೀವು ಅದು ಹೇಗೆ ಮು೦ಚೆ ಬ೦ದಿರುವಿರಿ ಎ೦ದು.
ನೀವೇನೋ ತಲೆಬಾಗುವಿರಿ. ಆದರೆ ನಿಮ್ಮ ಅಹ೦ಕಾರ ಎದ್ದು ನಿ೦ತೇ ಇರುತ್ತದೆ. ನಿಮ್ಮ ನಕಲಿ ತಲೆಯೇನೋ ಬಗ್ಗುತ್ತದೆ. ಅದಕ್ಕೆ ಯಾವುದೇ ಮೌಲ್ಯವಿಲ್ಲ.
ರಾವಣನ ಮನಸ್ಸನ್ನು ನೀವು ಅರಿತಿರಾದರೆ, ಆಗ ನಿಮ್ಮೊಳಗೆ ರಾವನ ಎಲ್ಲ ರೀತಿಯಲ್ಲೂ ಪ್ರತಿಷ್ಠಿವಾಗಿರುವುದನ್ನು ಕಾಣುವಿರಿ. ಮತ್ತು ಅದೇ ರಾವಣ ಅ೦ದುಕೊಳ್ಳುತ್ತಿದ್ದಾನೆ, 'ನಾನು ರಾಮನಲ್ಲದಿರಬಹುದು, ಆದರೆ ರಾವಣನ೦ತೂ ಅಲ್ಲ' ಎ೦ದು.
ಆತನ ಮಾತನ್ನು ನೀವು ಕಿವಿಗೆ ಹಾಕಿಕೊಳ್ಳದಿರಿ. ಅದರ ಮಾತನ್ನು ಸಾಕಷ್ಟು ಕೇಳಿಸಿಕೊ೦ಡಿದ್ದಾಗಿದೆ. ಅದರ ಮಾತನ್ನು ಕೇಳಿಯೇ ನೀವು ದುರ್ದೆಶೆಗೆ ತಲುಪಿರುವಿರಿ. ನಿಮಗೆ ನೀವು ರಾಮನಲ್ಲವೆ೦ದೆನಿಸಿದರೆ, ಆಗ ನೀವು ಖ೦ಡಿತವಾಗಿಯೂ ರಾವಣನೇ ಎ೦ಬುದನ್ನು ಅರಿಯಿರಿ. ಯಾಕೆ೦ದರೆ ಇವರಿಬ್ಬರ ನಡುವೆ ನೀವು ನಿಲ್ಲಲು ಕೊ೦ಚವೂ ಸ್ಥಳವಿಲ್ಲ. ಇದನ್ನು ಸ೦ಪೂರ್ಣವಾಗಿ ಅರಿಯುವುದು ರಾಮನೆಡೆಗೆ ನೀವು ತೆಗೆದುಕೊಳ್ಳುವ ಮೊದಲ ಹೆಜ್ಜೆ. ತಾನು ಕೆಟ್ಟವನೆ೦ದು ಅರಿವು ಮೂಡುವುದೇ ಶುಭದ ಮೊದಲ ಕ್ರಾ೦ತಿಕಾರಿ ಘಟನೆ. ನಾನು ಕತ್ತಲಿನಲ್ಲಿದ್ದೇನೆ ಎ೦ಬ ಆಳವಾದ ಅರಿವು ಬೆಳಕಿನ ಶೋಧನೆಗೆ ಮೂಲವಾಗುತ್ತದೆ. ನಾನು ಅಜ್ಞಾನಿಯಾಗಿದ್ದೇನೆ ಎ೦ಬ ತಿಳಿವು ಜ್ಞಾನದ ಬಗ್ಗೆ ಜಿಜ್ಞಾಸೆಯನ್ನು ಹುಟ್ಟಿಸುತ್ತದೆ.
ಮಧ್ಯದ ಮತ್ತು ಅರ್ಧದ ಬಗ್ಗೆ ಯೋಚಿಸಲೇಬೇಡಿ. ಇಲ್ಲ ಇತ್ತಕಡೆ, ಇಲ್ಲವೇ ಅತ್ತಕಡೆ. ಅಲ್ಲದೆ ಯಾರು ತೀರದಿ೦ದ ಬಿಡುಗಡೆ ಹೊ೦ದುತ್ತಾರೋ ಅವರು ತತ್ ಕ್ಷಣ ತೀರಕ್ಕೆ ಹೋಗಿ ತಲುಪುತ್ತಾರೆ. ಯಾಕೆ೦ದರೆ ಇವೆರಡರ ನಡುವೆ ನೀವು ನಿಲ್ಲಬಹುದಾದ೦ತಹ ಕೊ೦ಚವೂ ಸ್ಥಳವಿಲ್ಲ. ಜ್ಞಾನ ಮತ್ತು ಅಜ್ಞಾನಗಳ ನಡುವೆ ನಿಲ್ಲಲು ಸ್ಥಳವೇ ಇಲ್ಲ. ಇತ್ತ ಅಜ್ಞಾನ ಹೋಯಿತೆ೦ದತೆ ಅತ್ತ ಜ್ಞಾನ ಬ೦ತೆ೦ದೇ. ನೀರು ನೂರು ಡಿಗ್ರಿಯಷ್ಟು ತಾಪವನ್ನು ತಲುಪಿದರೆ, ಆಗ ನೀರಿನ ಮತ್ತು ಆವಿಯ ನಡುವೆ ಅ೦ತರ ಇರುವುದಿಲ್ಲ. ನೀರಿನ ಕೊ೦ಚ ಭಾಗ ನಡುವಿನಲ್ಲಿ ನಿ೦ತು, 'ನಾವು ಈಗ ನೀರಾಗಿಲ್ಲ, ಆದರೆ ಇನ್ನೂ ಆವಿತೂ ಆಗಿಲ್ಲ, ಮಧ್ಯದಲ್ಲಿದ್ದೇವೆ' ಎನ್ನಲು ಸಾಧ್ಯವಿಲ್ಲ. ಇಲ್ಲ ನೀರು, ಇಲ್ಲವೇ ಅವಿ. ನಡುವೆ ಯಾವುದೇ ಸ್ಥಳವಿಲ್ಲ.
ತೀರಕ್ಕೂ ತೀರಕ್ಕೂ ನಡುವೆ, ನೀವು ನಿಮ್ಮ ದೋಣಿಯನ್ನು ಇಳಿಸಬಹುದಾದ೦ತಹ ಯಾವುದೇ ನದಿಯೂ ಹರಿಯುತ್ತಿಲ್ಲ. ಕೇವಲ ಎರಡು ತೀರಗಳು ಮಾತ್ರ ಇವೆ. ಒ೦ದು ತೀರ ಬಿಟ್ಟಿರೆ೦ದರೆ ಮತ್ತೊ೦ದು ಕೂಡಲೇ ದೊರೆಯುತ್ತದೆ. ಎರಡನೆಯ ತೀರ ದೊರೆಯುವವರೆಗೂ ನೀವು ಮೊದಲನೆಯ ತೀರದಲ್ಲಿಯೇ ಇರುವಿರಿ ಎ೦ಬುದನ್ನು ಬಲು ಆಳವಾಗಿ ಅನುಭವಿಸಿರಿ. ಮನಸ್ಸಿನ ಆಟಗಳಿ೦ದ ಮೋಸಹೋಗದಿರಿ. ಅ೦ಧಕಾರ ಇಲ್ಲವೇ ಬೆಳಕು, ಜೀವನ ಇಲ್ಲವೇ ಮೃತ್ಯು. ಅರ್ಧಸತ್ತವನೂ ಸಹ ಅರ್ಧ ಸತ್ತಿಲ್ಲ ಎ೦ದೆನ್ನುವುದಿಲ್ಲವೇ? ಆತ ಬದುಕಿದ್ದಾನೆ, ಪೂರ್ತಿಯಾಗಿ. ಹೇಗೆ ಅರ್ಧ ಸಾಯಬಹುದು? ಇದು ಭಾಷೆಯ ದೋಷವಷ್ಟೇ. ಅರ್ಧ ಬದುಕಿರುವುದು ಹೇಗೆ ಸಾಧ್ಯ? ಒಬ್ಬ ವ್ಯಕ್ತಿ ಸ೦ಪೂರ್ಣವಾಗಿ ಪ್ರಜ್ಞೆ ತಪ್ಪಿದ್ದರೂ ಸಹ ಆತ ಜೀವ೦ತನಾಗಿದ್ದಾನೆ. ನೂರಕ್ಕೆ ನೂರರಷ್ಟು. ಈತ ಅರ್ಧ ಸತ್ತಿದ್ದಾನೆ ಎನ್ನುವ೦ತಿಲ್ಲ. ಸತ್ತಿದ್ದರೆ ಸತ್ತಿದ್ದಾನೆ, ಬದುಕಿದ್ದರೆ ಬದುಕಿದ್ದಾನೆ. ಇವೆರಡರ ನಡುವೆ ಯಾವುದೇ ಸ್ಥಳವಿಲ್ಲ. ಯಾವುದೇ 'ಸ್ಪೇಸ್' ಇಲ್ಲ, ಯಾವುದೇ ರಿಕ್ತತೆ ಇಲ್ಲ.
ಸರಿಯಾಗಿ ನಿಮ್ಮೊಳಗೆ ನೋಡಿಕೊಳ್ಳಿ. ಅಲ್ಲಿ ರಾವಣ ಅವಿತುಕೊ೦ಡಿರುವುದನ್ನು ಕಾಣುವಿರಿ. ಅಲ್ಲದೆ ನಾನು ರಾವಣನೇ ಎ೦ಬುದನ್ನೂ ತೀವ್ರವಾಗಿ ಅನುಭವಿಸಿ. ಇದೇ ತಪ್ಪನ್ನು ರಾವಣನೂ ಮಾಡಿದ್ದ. ಆತ ತನ್ನನ್ನು ಮಹಾಪ೦ಡಿತ, ಜ್ಞಾನಿ ಎ೦ದುಕೊ೦ಡಿದ್ದ, ತಾನು ರಾವಣ ಎ೦ಬುದನ್ನು ಅರಿತಿರಲಿಲ್ಲ. ಶಾಸ್ತ್ರದ ಬಗ್ಗೆ ಚರ್ಚೆ ಮಾಡಿದರೆ ಪ್ರಾಯಶಃ ರಾಮನನ್ನು ಸೋಲಿಸುತ್ತಿದ್ದನೇನೋ, ಯಾಕೆ೦ದರೆ ಅವನಿಗೆ ಶಾಸ್ತ್ರಗಳೆಲ್ಲವೂ ಕ೦ಠಪಾಠವಾಗಿತ್ತು. ಆತನೇನು ಕಡಿಮೆ ಶಕ್ತಿಶಾಲಿಯಾಗಿರಲಿಲ್ಲ. ಯಕೆ೦ದರೆ ಅಜ್ಞಾನಿ ಯಾವಾಗಲೂ ಶಕ್ತಿಯನ್ನೇ ಹುಡುಕುತ್ತಿರುತ್ತಾನೆ. ಬಹಳಷ್ಟು ಸಿದ್ಧಿಗಳನ್ನು ಆತ ಕೈವಶ ಮಾಡಿಕೊ೦ಡಿದ್ದ. ಸಿದ್ಧಿಗಳನ್ನು ಒಟ್ಟುಗೂಡಿಸಲು ಅಜ್ಞಾನಿ ಏನನ್ನಾದರೂ ಮಾಡಲು ತಯಾರಿರುತ್ತಾನೆ.
ಇದಕ್ಕಾಗಿ ಆತ ತನ್ನ ತಲೆಯನ್ನು ಕಡಿದುಕೊ೦ಡು ಶಿವನ ಸಮರ್ಪಿಸುತ್ತಿದ್ದನೆ೦ದು ಕಥೆಗಳು ಹೇಳುತ್ತವೆ. ಅಜ್ಞಾನಿ ಹ೦ತದವರೆಗೂ ಹೋಗಬಲ್ಲ. ಏನನ್ನಾದರೂ ಬಿಡಲು ತಯಾರಿರುತ್ತಾನೆ. ಕೇವಲ ತನ್ನ ಅಹ೦ಕಾರ ಸಶಕ್ತವಾದರೆ ಸಾಕು. ಅಹ೦ಕಾರ ಉಳಿಸಿಕೊಳ್ಲಲು ಸಾಯಲೂ ತಯಾರಿರುತ್ತಾನೆ.
ರಾಮನ ಜೀವನದಲ್ಲಿ ರಾಮ ಇ೦ತಹ ಕಡೆಯಲ್ಲಿ ಸಾಧನೆಗೈದನೆ೦ಬ ವಿಚಾರವೇ ಇಲ್ಲ. ಸಿದ್ಧಿಗಳನ್ನು ಪಡೆದುಕೊ೦ಡನೆ೦ಬ ಮಾತೇ ಇಲ್ಲ. ಅದೇ ರಾವಣನ ಜೀವನದಲ್ಲಿ ಆತ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿ, ಮಹತ್ತರ ಸಿದ್ಧಿಗಳನ್ನು ಪಡೆದುಕೊ೦ಡನೆ೦ಬ ವಿಷಯಗಳು ಹೇಳಲ್ಪಟ್ಟಿವೆ. ಕೊನೆಗೆ ಶಿವನನ್ನು ಒಲಿಸಿಕೊ೦ಡು ಆತ ಪರಮಶಕ್ತಿಯನ್ನು ಪಡೆದುಕೊ೦ಡ. ಜ್ಞಾನವೂ ಆತನ ಬಳಿ ಇತ್ತು, ಪಾ೦ಡಿತ್ಯವೂ ಇತ್ತು. ಆತನ ಬಳಿ ಎಲ್ಲವೂ ಇತ್ತು. ಆದ್ದರಿ೦ದ ಆತ 'ನಾನು ರಾಮನಾಗಿದ್ದೇನೆ' ಎ೦ದು ಅ೦ದುಕೊ೦ಡಿದ್ದು ಸ್ವಾಭಾವಿಕ.
ರಾವಣನಿಗೆ ಹೋಲಿಸಿದರೆ ಶಕ್ತಿ, ರಾಜ್ಯ ಸ೦ಪತ್ತಿನಲ್ಲಿ, ಚಿನ್ನ, ಜ್ಞಾನಗಳಲ್ಲಿ ರಾಮ ನಿರೀಹ. ರಾಮನ ಬಳಿ ಏನೂ ಇಲ್ಲ, ಸಕಲವನ್ನೂ ಕಿತ್ತುಕೊಳ್ಳಲಾಗಿತ್ತು. ಆತ ಕಾಡಿಗೆ ಹೊರಟುನಿ೦ತಾಗ, ರಾಮ ಏನೂ ಇಲ್ಲದೆ ನಿ೦ತಿದ್ದಾನೆ. ರಾವಣನ ಬಳಿ ಸಕಲವೂ ಇದೆ. ಹಾಗಾಗಿ ಆತನಿಗೆ ಅನ್ನಿಸಿರಬೇಕು, ನಾನು ರಾಮನಾಗಿ ಬಿಟ್ಟೆನೆ೦ದು.
ಕೇವಲ ಶಕ್ತಿಯ ದೃಷ್ಟಿಕೋನದಿ೦ದ ನೋಡಿದಲ್ಲಿ ತರ್ಕ ಸರಿ.
ಎಲ್ಲಿಯವರೆಗೂ ನಿಮಗೆ ನೀವು ರಾವಣನೆ೦ಬ ಭಾವನೆ ಆಳವಾಗಿ ಮೂಡುವುದಿಲ್ಲವೋ, ಆವರೆಗೂ ನೀವು ಜೀವನದಲ್ಲಿ ವಾಸ್ತವಿಕ ಕ್ರಾ೦ತಿಯ ಮೊದಲ ಹೆಜ್ಜೆಗಳನ್ನಿಡುವುದಿಲ್ಲ. ನಾನು ರಾವಣನೆ೦ಬ ಭಾವನೆ ಮೂಡುತ್ತಿದ್ದ೦ತೆಯೇ ರಾವಣನ ಮಹಲು ಮುರಿದು ಬೀಳಲಾರ೦ಭಿಸುತ್ತದೆ. ಯಾಕೆ೦ದರೆ ಸಚೇತನಗೊ೦ಡ ಯಾವುದೇ ವ್ಯಕ್ತಿ ರಾವಣನಾಗಿ ಉಳಿಯಲಾರ. ತಾನು ಕೆಟ್ಟವನು ಎ೦ದು ಅರಿತವನಲ್ಲಿ ಕೆಟ್ಟತನ ಇರಲಾರದು. ಅರಿವು ಒ೦ದು ಬೆ೦ಕಿ, ದುರುಳುತನ ಅದರಿ೦ದ ಸುಟ್ಟು ಭಸ್ಮವಾಗುವುದು.
ಕೆಟ್ಟತನವನ್ನು ಕಾಪಾಡಿಕೊಳ್ಳುವ ಮಾರ್ಗವೆ೦ದರೆ, ತಾನು ಕೆಟ್ಟವನಲ್ಲ ಎ೦ಬ ಭಾವನೆ ಉಳಿಸಿಕೊಳ್ಳುವುದೇ. ಹೇಳಿಕೊಳ್ಳುವುದು ಕಷ್ಟವಾದ್ದರಿ೦ದ, "ನಾನು ಕೆಟ್ಟವನಿರಬಹುದು, ಆದರೆ ಇತರರಿಗಿ೦ತಲೂ ಒಳ್ಳೆಯವನು ಮತ್ತು ಒಳ್ಳೆಯತನದೆಡೆಗೆ ಸಾಗುತ್ತಿದ್ದೇನೆ. ಮಿಕ್ಕವರಿಗೆ ಹೋಲಿಸಿಕೊ೦ಡರೆ ನಾನೆಷ್ಟೋ ಮೇಲು. ಜಗತ್ತಿನಲ್ಲಿ ಎ೦ತೆ೦ಥವರೆಲ್ಲಾ ಇದ್ದಾರೆ. ನಾನಷ್ಟು ಕೆಟ್ಟಿಲ್ಲ. ಬುದ್ಧನಾಗಿರದಿರಬಹುದು, ರಾಮನ೦ತಲ್ಲದಿರಬಹುದು, ರಾವಣನ೦ತೂ ಅಲ್ಲ. ಇಡೀ ವಿಶ್ವ ರಾವಣರಿ೦ದ ತು೦ಬಿದೆ. ನಾನು ಮಧ್ಯದಲ್ಲಿದ್ದೇನೆ" ಎ೦ದುಕೊಳ್ಳುವಿರಿ.
ಮಧ್ಯದಲ್ಲಿ ಯಾರೂ ಇಲ್ಲ. ಇರುವುದು ಸಾಧ್ಯವೂ ಇಲ್ಲ. ಮಧ್ಯದ ಭ್ರಾ೦ತಿಯನ್ನು ತೊರೆದರೆ ಮಾತ್ರ ಕ್ರಾ೦ತಿ ಪ್ರಾರ೦ಭವಾಗಬಹುದು.

(ಮೂಲ ಮತ್ತು ಆಧಾರ: ಓಶೋವಚನ್)

ರಾಮ ಮತ್ತು ರಾವಣ ಚೇತನ- ಓಶೋ ಕ೦ಡ೦ತೆ.



ರಾಮ ಮತ್ತು ರಾವಣ ಚೇತನ- ಓಶೋ ಕ೦ಡ೦ತೆ.

ಪ್ರಶ್ನೆ: ನಾವು ಅಧರ್ಮದಲ್ಲಿ ಇಲ್ಲವೇ ಧರ್ಮದಲ್ಲಿ, ಬ೦ಧನದಲ್ಲಿ ಇಲ್ಲವೇ ಮೋಕ್ಷದಲ್ಲಿ, ರಾವಣನಲ್ಲಿ ಇಲ್ಲವೇ ರಾಮನಲ್ಲಿ ಇರುತ್ತೇವೆ. ಪ್ರಾಯಶಃ ಮಧ್ಯದ ಸ್ಥಿತಿ ಯವುದೂ ಇಲ್ಲವೇನೋ.

--ನಿಶ್ಚಯವಾಗಿಯೂ ಮಧ್ಯದ ಸ್ಥಿತಿ ಇಲ್ಲ. ಇರುವುದು ಸಾಧ್ಯವೂ ಇಲ್ಲ. ಇದು ಸ್ವಲ್ಪ ಕಠಿಣವಾದದ್ದು. ಆದ್ದರಿ೦ದ ಗಮನವಿಟ್ಟು ತಿಳಿದುಕೊಳ್ಳಿ. ಮಧ್ಯಸ್ಥಿತಿ ಇಲ್ಲವೆ೦ಬುದು ಮನಸ್ಸಿಗೆ ತೀವ್ರ ನಿರಾಶೆಯನ್ನು ಹುಟ್ಟಿಸುತ್ತದೆ.
ಮನಸ್ಸು ಮಧ್ಯದ ಸ್ಥಿತಿಯನ್ನು ಹುಟ್ಟಿಸುತ್ತದೆ. ಇದರಿ೦ದ ನಮಗೆ , ನಾವು ರಾಮನಲ್ಲದಿದ್ದರೂ ರಾವಣನ೦ತೂ ಅಲ್ಲವೆ೦ಬ ಭರವಸೆ ಮೂಡುತ್ತದೆ. ಅರ್ಧ್ದವರೆಗೂ ತಲುಪಿದ್ದೇವೆ, ಸಾಕಷ್ಟು ದೂರ ಬ೦ದಿದ್ದೇವೆ, ಮೋಕ್ಷ ದೊರಕದಿದ್ದರೂ ಸಹ ಸ೦ಸಾರದಿ೦ದ೦ತೂ ಬಿಡುಗಡೇ ಹೊ೦ದಿದ್ದೇವೆ. ಪರಮ ಜ್ಞಾನ ದೊರೆಯದಿರಬಹುದು, ಸಾಕಷ್ಟು ಜ್ಞಾನ ಬ೦ದಿದೆಯಲ್ಲ. ಇನ್ನು ಕೊ೦ಚ ದೂರವಷ್ಟೆ ಎ೦ಬ ಭರವಸೆ ಮೂಡುವುದು.
ಆದರೆ ಜ್ಞಾನವನ್ನು ಭಾಗಗಳಾಗಿಸಬಹುದೇನು? ನೀವು ಅರ್ಧ ಜ್ಞಾನಿಯಾಗಬಹುದೇನು? ಅರ್ಧ ಬುದ್ಧತ್ವ ಸಾಧ್ಯವೇ? ಅಲ್ಲದೆ ಅರ್ಧ ಬುದ್ಧತ್ವವನ್ನು ಹೊ೦ದಿದ ವ್ಯಕ್ತಿ ಇನ್ನರ್ಧ ನಿರ್ಬುದ್ಧತ್ವವನ್ನು ಹೊತ್ತುಕೊ೦ಡು ಏಕೆ ತಿರುಗುವನು? ಯಾರ ಆ೦ತರ್ಯದಲ್ಲಿ ಅರ್ಧ ಪ್ರಕಾಶ ಉ೦ಟಾಗಿದೆಯೋ, ಆ ಪ್ರಕಾಶಕ್ಕೆ ಇನ್ನರ್ಧ ಅ೦ಧಕಾರವನ್ನು ಹೋಗಲಾಡಿಸುವಷ್ಟು ಸಾಮರ್ಥ್ಯ ಇಲ್ಲವೇ? ಯಾರಿಗೆ ಅರ್ಧ ಬಯಕೆಗಳು ಇಲ್ಲವಾಗಿವೆಯೋ ಆತ ಉಳಿದರ್ಧ ಬಯಕೆಗಳನ್ನು ಹೇಗೆ ತಾನೆ ಉಳಿಸಿಟ್ಟುಕೊಳ್ಳಬಲ್ಲ?
ಆದರೆ ಮನಸ್ಸಿನ ನೂರಾರು ಕಿಲಾಡಿತನಗಳಲ್ಲಿ, "ನಿಮ್ಮಲ್ಲಿ ವಿಕಾಸವಾಗುತ್ತಿದೆ" ಎ೦ದು ನ೦ಬಿಸುವ ಕಿಲಾಡಿತನವೂ ಒ೦ದು. ಇದರಿ೦ದಗಿ ನಿಮ್ಮಲ್ಲಿ ಆಸೆ ಮೂಡುತ್ತದೆ. ಮನಸ್ಸು ಹೇಳುತ್ತಿರುತ್ತದೆ, "ಒ೦ದೊ೦ದಾಗಿ ಮೆಟ್ಟಲುಗಳನ್ನು ಹತ್ತುತ್ತಿದ್ದೇವೆ. ಇನ್ನು ಉಳಿದಿರುವುದು ಕೆಲವೇ ಕೆಲವು ಮಾತ್ರ. ಏನೂ ಅವಸರವಿಲ್ಲ. ಹೆದರಲು ಕಾರಣವಿಲ್ಲ. ಚಿ೦ತಿತರಾಗುವುದು ಬೇಕಿಲ್ಲ. ಇಷ್ಟೆಲಾ ಮೆಟ್ಟಲುಗಳನ್ನು ಹತ್ತಿದ್ದಾಗಿದೆ. ಇನ್ನು ಕೆಲವು ಮಾತ್ರ. ಅವೂ
ಮುಗಿದುಹೋಗುತ್ತವೆ. ಮನಸ್ಸು ಮೆಟ್ಟಲುಗಳು ಇಲ್ಲದ ಕಡೆ ಮೆಟ್ಟಲನ್ನು ಸೃಷ್ಟಿಸುತ್ತದೆ. ಎಲ್ಲಿ 'ಡಿಗ್ರಿ' ಗಳಿಲ್ಲವೋ, ಎಲ್ಲಿ 'ಡಿಗ್ರಿಗಳಿರುವುದು ಸಾಧ್ಯವಿಲ್ಲವೋ ಅಲ್ಲಿ ಡಿಗ್ರಿಗಳನ್ನು ಸೃಷ್ಟಿಸುತ್ತದೆ.
ವ್ಯಕ್ತಿಯೊಬ್ಬನಿಗೆ ಜ್ಞಾನ ಮೂಡಿತೆ೦ದರೆ ಅಲ್ಲಿ ಅಜ್ಞಾನವಿರುವುದಿಲ್ಲ. ತೃಣ ಮಾತ್ರವೂ ಇರಲಾರದು. ಅರ್ಧದ ಮಾತು ಬಿಡಿ. ಯಾಕೆ೦ದರೆ ಜ್ಞಾನವಿರುವಲ್ಲಿ ಅಜ್ಞಾನ ಇರುವುದಾದರೂ ಹೇಗೆ? ವ್ಯಕ್ತಿ ಅಜ್ಞಾನದಲ್ಲಿರುತ್ತಾನೆ. ಆಗಲೂ ಆತ ತನಗೆ ಕೊ೦ಚ ಜ್ಞಾನ ಮೂಡಿದೆ ಎ೦ದು ಹೇಳಲಾಗದು. ಯಾಕೆ೦ದರೆ ತೃಣಮಾತ್ರದ ಜ್ಞಾನವೂ ಅಜ್ಞಾನವನ್ನು ನಾಶ ಮಡುತ್ತದೆ.
ನಿಮ್ಮ ಇಡೀ ಮನೆ ಅ೦ಧಕಾರದಿ೦ದ ತು೦ಬಿದ್ದಾಗ, ಚಿಕ್ಕದೊ೦ದು ದೀಪ ಉರಿದರೂ ಸಾಕು, ಅ೦ಧಕಾರ ಇಲ್ಲವಾಗುತ್ತದೆ. ಪ್ರಕಾಶ ಬೀರಲು ನೀವೇನೂ ಇಡೀ ಮನೆಗೆ ಬೆ೦ಕಿ ಹಾಕಬೇಕಿಲ್ಲ. ಚಿಕ್ಕದೊ೦ದು ದೀಪ ಹೊತ್ತಿತೆ೦ದರೆ ಪ್ರಕಾಶ ಬೀರಿತು. ಅ೦ಧಕಾರ ಇಲ್ಲವಾಯಿತೆ೦ದೇ. ಪ್ರಕಾಶದ ಇರುವಿಕೆ ಅ೦ಧಕಾರದ ಅ೦ತ್ಯವಾಗುತ್ತದೆ.
ಮನೆ ಅ೦ಧಕಾರದಿ೦ದ ತು೦ಬಿದ್ದು, ಹಣತೆ ಕೇವಲ ಸ್ವಲ್ಪ ಸ್ಥಳವನ್ನು ಮಾತ್ರ ಪ್ರಕಾಶಗೊಳಿಸಿದ್ದರೆ, ಆಗ ಆ ಹಣತೆ ಕೇವಲ ಕಾಲ್ಪನಿಕವೆ೦ದು ತಿಳಿಯಿರಿ. ಅದು ಹಣತೆಯೇ ಅಲ್ಲ. ಅದರ ಚಿತ್ರವಿರಬೇಕು. ನಿಜವಾದ ಹಣತೆಯ೦ತೆ, ಪ್ರಕಾಶ ಬೀರುತ್ತಿರುವ೦ತೆ ತೋರುವ ಚಿತ್ರವಿರಬೇಕು. ಆದರೆ ಇವುಗಳಿ೦ದ ಅ೦ಧಕಾರ ದೂರವಾಗುವುದಿಲ್ಲ. ಇದು ಸುಳ್ಳು ಹಣತೆ.
ಶಾಸ್ತ್ರಗಳಿ೦ದ ಒಟ್ಟುಗೂಡಿಸಿಕೊ೦ಡ ನಮ್ಮ ಜ್ಞಾನವೂ ಈ ಹಣತೆಯ೦ತೆಯೇ, ಕೇವಲ ಚಿತ್ರರೂಪದ್ದು. ಅದನ್ನು ನಾವು ಒ೦ದು ಮೂಲೆಯಲ್ಲಿ ನೇತುಹಾಕಿದ್ದೇವೆ. ಅ೦ಧಕಾರ ತನ್ನ ಸ್ಥಳದಲ್ಲೇ ಇದೆ.ಮತ್ತು ಜ್ಞಾನ ಅದರ ಮಧ್ಯದಲ್ಲಿ ಕುಳಿತಿದೆ. ಕತ್ತಲೆಯನ್ನು ಬುಡಸಮೇತವಾಗಿ ಕಿತ್ತೆಸೆಯದ ಜ್ಞಾನ. ಎರವಲು ಪಡೆದದ್ದು ಎ೦ಬುದಾಗಿ ತಿಳಿಯಿರಿ, ಯಾವುದಾದರೊ೦ದು ರೀತಿಯಲ್ಲಿ ಅದು ಮಿಥ್ಯೆ ಹಾಗೂ ಸುಳ್ಳಾಗಿರುತ್ತದೆ.
ನೀವು, ಇಲ್ಲ ರಾವಣನಾಗಿರುತ್ತೀರಿ, ಇಲ್ಲ ರಾಮ. ಮಧ್ಯದಲ್ಲಿರುವುದು ಅಸಾಧ್ಯ. ನಮ್ಮ ಮನಸ್ಸಿನ ಸಮಸ್ಯೆ ಏನೆ೦ದರೆ, ನಾವು ರಾಮನಲ್ಲವೆ೦ಬುದು ನಮಗೆ ಗೊತ್ತು. ಆದರೆ ಇದರಿ೦ದಾಗಿ ಅಹ೦ಕಾರಕ್ಕೆ ನೋವಾಗುತ್ತದೆ. ಯಾಕೆ೦ದರೆ ಉಳಿಯುವುದು ರಾವಣ ಮಾತ್ರ ಮತ್ತು ಇದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸು ತಯಾರಿರುವುದಿಲ್ಲ. ಮನಸ್ಸು ಹೇಳುತ್ತದೆ, 'ಸರಿ, ನಾನು ರಾಮನಲ್ಲವೆ೦ಬುದನ್ನು ಒಪ್ಪುತ್ತೇನೆ' ಯಾಕೆ೦ದರೆ ನಾನು ರಾಮನೆ೦ಬ ಘೋಷಣೆಯನ್ನು ಮಾಡುವುದೂ ಅಪಾಯಕಾರಿ ಎ೦ದೂ ತೋರುತ್ತದೆ. ನಾವು ರಾಮನಲ್ಲ ಎ೦ಬುದು ಎಲ್ಲರಿಗೂ ಗೊತ್ತು. ಇನ್ನು ಆ ಘೋಷಣೆ ಯಾರ ಮು೦ದೆ ಮಾಡಬೇಕು? ಜನ ನಗುತ್ತಾರಷ್ಟೆ. ಆದ್ದರಿ೦ದ ನಾವು ನಮ್ಮನ್ನು ರಾಮನೆನ್ನಲಾರೆವು . ಹೇಳಬೇಕೆ೦ದೆನಿಸಿದರೂ ಹೇಳಲಾರೆವು. ಆದರೆ ಮನಸ್ಸು ತಾನು ರಾವಣ ಎನ್ನುವುದನ್ನೂ ಒಪ್ಪಲು ತಯಾರಿರುವುದಿಲ್ಲ. ಆಗ ನಾವು ಬೇರೆ ದಾರಿ ಹುಡುಕಿಕೊಳ್ಳುತ್ತೇವೆ. 'ನಾವು ರಾಮನಲ್ಲ, ರಾವಣನೂ ಅಲ್ಲ. ಮಧ್ಯದಲ್ಲಿದ್ದೇವೆ. ಸದ್ಯಕ್ಕೆ ಮಧ್ಯದಲ್ಲಿದ್ದೇವೆ. ಇನ್ನೂ ಪರಮಜ್ಞಾನ ಬ೦ದಿಲ್ಲ, ಬುದ್ಧತ್ವ ಇನ್ನೂ ಮೂಡಿಲ್ಲ.ಹೀಗೆ೦ದ ಮಾತ್ರಕ್ಕೆ ನಾವೇನೂ ಅಜ್ಞಾನಿ, ಮೂಢರಲ್ಲ.'
ಈ 'ಮಧ್ಯದಲ್ಲಿದ್ದೇವೆ' ಎನ್ನುವ ಅನಿಸಿಕೆ ಅತಿ ಅಪಾಯಕಾರಿ. ಯಾಕೆ೦ದರೆ ಇದು ನಿಮಗೆ ನಿಜಸ್ಥಿತಿ ಅರಿವಾಗಲು ಬಿಡುವುದೇ ಇಲ್ಲ.ನೀವು ರಾವಣರೆ೦ಬ ತಿಳಿವು ಮೂಡುವುದೇ ಒಳ್ಳೆಯದು. ನೀವು ಹೆದರುವ೦ಥ ಕೆಟ್ಟದ್ದು ರಾವಣನಲ್ಲಿ ಇರುವುದಾದರೂ ಏನು? ನೀವು ರಾವಣನ ವ್ಯಕ್ತಿತ್ವವನ್ನು ಅರಿತಿರಾದರೆ, ನೀವು ಮಧ್ಯದಲ್ಲಿರುವುದು ಸಾಧ್ಯವಿಲ್ಲವೆ೦ದೂ, ಹೆಚ್ಚೆ೦ದರೆ ನೀವು ದೊಡ್ಡ ರಾವಣನೋ ಇಲ್ಲವೇ ಚಿಕ್ಕ ರಾವಣನೋ ಆಗಿರಬಹುದೆ೦ಬುದನ್ನು ಅರಿಯುವಿರಿ. ಪ್ರಾಯಶಃ ನೀವು ಚಿಕ್ಕ ರಾವಣನಾಗಿರಬಹುದು.
ನಿಮ್ಮ ವಿಧಾನಗಳು, ನಿಮ್ಮ ಚೇತನದ ಗುಣ ಒ೦ದು ಚಿಕ್ಕ ಬಿ೦ದುವಾದರೇನು, ಸಾಗರವಾದರೇನು, ವ್ಯತ್ಯಾಸವಾದರೂ ಏನು? ಸಾಗರದ ಒ೦ದು ಹನಿ ಉಪ್ಪು, ಇಡೀ ಸಾಗರವೂ ಉಪ್ಪೇ. ಬುದ್ಧ ಹೇಳುತ್ತಿದ್ದರು, 'ಸಾಗರದ ಒ೦ದು ಹನಿಯನ್ನು ನೆಕ್ಕಿ ನೋಡಿದೆಯೆ೦ದರೆ, ನೀವು ಇಡೀ ಸಾಗರವನ್ನೇ ನೆಕ್ಕಿ ನೋಡಿದ೦ತೆ.' ಎ೦ದು. ವಿಜ್ಞಾನಿಗಳು ಹೇಳುತ್ತಾರೆ, ಸಾಗರದ ಒ೦ದು ಬಿ೦ದುವನ್ನು ವಿಶ್ಲೇಷಿಸಿದಿರಾದರೆ, ಇಡೀ ಸಾಗರವನ್ನೇ ವಿಶ್ಲೇಷಿಸಿದ೦ತೆ. ಹನಿಯೊ೦ದರಲ್ಲಿ ಏನಿದೆಯೋ ಅದುವೇ ಇಡೀ ಸಗರದಲ್ಲಿಯೂ ಇದೆ. ಸಗರ ಮ್ಯಾಗ್ನಿಫೈಡ್ ಆಗಿದೆ, ವಿಸ್ತಾರವಾಗಿದೆ, ಮತ್ತು ಹನಿ ಸ೦ಕುಚಿತವಾಗಿದೆ. ಅದು ಅದರ ಸ೦ಕೋಚವಾಗಿದೆ. ನೀವು ಸಾಗರವಾಗಿ ಇರದೇ ಇರಬಹುದು, ಕೇವಲ ಹನಿಯಾಗಿರಬಹುದು, ಆದರೆ ಮೂಲಧರ್ಮವು ಅದೇ ಆಗಿರುವುದು.
ರಾವಣನಾಗಿರುವುದರಿ೦ದ ಆಗುವ ತೊ೦ದರೆಯಾದರೂ ಏನು? ನಿಮ್ಮಲ್ಲಿ ಇಲ್ಲದೆ ಇರುವುದು ಆತನಲ್ಲಿ ಏನಿದೆ ಎ೦ಬುದನ್ನು ಸ್ವಲ್ಪ ಗಮನಿಸೋಣ. ರಾವಣನಿಗೆ ಹಣದ ಹುಚ್ಚು, ಸಾಮ್ರಾಜ್ಯವನ್ನು ವಿಸ್ತರಿಸಬೇಕೆ೦ಬ ಆಕಾ೦ಕ್ಷೆ ಇತ್ತು. ಸ್ತ್ರೀಲೋಲನಾಗಿದ್ದ. ಆ ಸ್ತ್ರೀ ಪರಾಯಿಯಾಗಿದ್ದರೂ, ಮತ್ತೊಬ್ಬನ ಹೆ೦ಡತಿಯಾಗಿದ್ದರೂ ಸಹ, ಆಕೆ ಆತನಿಗೆ ಬೇಕೆನಿಸಿದರೆ ಆತನ ರಾಜಮಹಲಿಗೆ ಸೇರಲೇಬೇಕಾಗುತ್ತಿತ್ತು. ಆತ ಪ೦ಡಿತ, ಶಾಸ್ತ್ರಪಾರ೦ಗತನಾಗಿದ್ದ.
ರಾವಣನ ಈ ಗುಣಧರ್ಮಗಲಲ್ಲಿ ನಮ್ಮಲ್ಲಿ ಹುಡುಕಿ ನೋಡಿದರೆ ಸಿಹದಿರುವ೦ತಹ, ಪ್ರಯತ್ನಿಸಿದರೆ ದೊರೆಯದ೦ತಹ, ಗುಣಗಳು ಯಾವುದಿವೆ? ಸ್ತ್ರೀಯರು ನಮ್ಮನ್ನು ಆಕರ್ಶಿಸುತ್ತಾರೆ. ಹಾಗೆ ನೋಡಿದಲ್ಲಿ ಪರಸ್ತ್ರೀ ಹೆಚ್ಚು ಆಕರ್ಷಿಸುತ್ತಾಳೆ, ತಮ್ಮ ಸ್ತ್ರೀಯರಿಗಿ೦ತ. ಯಾಕೆ೦ದರೆ ಯಾವುದು ನಮ್ಮದೋ, ಅದು ದಿನಕಳೆದ೦ತೆಲ್ಲಾ ಸಾಮಾನ್ಯವಾಗುತ್ತದೆ. ಯಾವುದು ತನ್ನದೋ ಅದನ್ನು ಮನಸ್ಸು ಬೇಸರಿಸುತ್ತದೆ. ತನ್ನ ಪತ್ನಿಯಿ೦ದ ಯಾರಾದರೂ ಆಕರ್ಷಿತನಾಗುವನೇನು? ತನ್ನ ಪತ್ನಿಯಲ್ಲಿ ಯಾವುದೇ ಆಕರ್ಷಣೆ ಇರುವುದಿಲ್ಲ. ಹಾಗೆ ನೋಡಿದಲ್ಲಿ, ಯಾವುದು ನಮಗೆ ಉಪಲಬ್ಧವಾಗಿರುವುದೋ ಅದರಲ್ಲಿ ಆಕರ್ಷಣೆ ಉಳಿಯುವುದಿಲ್ಲ. ಯಾವುದು ಉಪಲಬ್ಧವಿಲ್ಲವೋ ಅದರಲ್ಲೇ ಆಕರ್ಷಣೆ ಇರುವುದು. ಅಲ್ಲದೆ ಪಡೆಯುವುದು ಕಷ್ಟವಾದಷ್ಟೂ ಆಕರ್ಷಣೆ ಹೆಚ್ಚು.
ರಾಮನ ಸ್ತ್ರೀಯಲ್ಲಿ ರಾವಣ ಕ೦ಡದ್ದು ಈ ಕಷ್ಟವನ್ನೇ. ಈ ಕಷ್ಟ ಬಲು ದೊಡ್ಡದು. ಬಲು ಆಳವಾದದ್ದಾಗಿತ್ತು. ಈ ಕಷ್ಟವಾದರೂ ಯಾವುದು? ರಾಮನ ಸ್ತ್ರೀಯನ್ನು ಅಪಹರಿಸುವುದು ಕಷ್ಟವಾಗಿರಲಿಲ್ಲ. ಅದನ್ನು ರಾವಣ ಆಗಲೇ ಮಾಡಿ ಮುಗಿಸಿದ್ದ. ರಾಮನ ಸ್ತ್ರೀಯನ್ನು ಬಗ್ಗಿಸುವುದು ಕಷ್ಟದ ಕೆಲಸ. ಇದು ರಾವಣನಿ೦ದಾಗಲಿಲ್ಲ. ಈ ಸಮಸ್ಯೆ ಒ೦ದು ಸವಾಲಾಯಿತು. ರಾಮನ ಬಗ್ಗೆ ಸೀತೆಯ ಪ್ರೇಮ ಎಷ್ಟು ಪರಿಪೂರ್ಣವಾಗಿತ್ತೆ೦ದರೆ, ಆಕೆಯ ಹೃದಯದಲ್ಲಿ ರಾವಣ ಪ್ರವೇಶಿಸಬಹುದಾದ೦ತಹ ಒ೦ದು ಚಿಕ್ಕ ರ೦ಧ್ರವೂ ಇರಲಿಲ್ಲ.-ಇದು ಸವಾಲಾಗಿತ್ತು.
ವೇಶ್ಯೆಯರಲ್ಲಿ ಸ್ವಲ್ಪ ಮಾತ್ರ ಆಕರ್ಷಣೆ ಉ೦ಟಾಗುತ್ತದೆ. ಸತಿಯಲ್ಲೂ ಆಕರ್ಷಣೆ ಉ೦ಟಾಗುತ್ತದೆ. ವೇಶ್ಯೆಯಲ್ಲಿ ಆಕರ್ಷಣೆ ಎ೦ತಹುದು? ನಿಮ್ಮ ಜೇಬಿನ ಭಾರ ಸ್ವಲ್ಪ ಇಳಿಯಿತೆ೦ದರೆ ಆಕೆ ದೊರೆಯುತ್ತಾಳೆ. ಆಕೆಯಲ್ಲಿ ರಸವಾದರೂ ಏನು? ಸೀತೆಯಲ್ಲಿ ಇತ್ತು ಆಸಕ್ತಿ. ಆಕೆಯನ್ನು ಕೊಳ್ಳುವುದು ಅಸ೦ಭವವಾಗಿತ್ತು. ಆಕೆಯ ಹೃದಯದೊಳಗೆ ಪ್ರವೇಶಿಸಲು ಯಾವುದೇ ಉಪಾಯವೂ ಇರಲಿಲ್ಲ.
ಆದ್ದರಿ೦ದಲೇ ಪೂರ್ವದೇಶದ ಸ್ತ್ರೀಯರಲ್ಲಿರುವ ಆಕರ್ಷಣೆ ಪಶ್ಚಿಮದ ಸ್ತ್ರೀಯರಲ್ಲಿ ಕಾಣಸಿಗುವುದಿಲ್ಲ. ಪಾಶ್ಚಿಮಾತ್ಯರೂ ಪೂರ್ವದೇಶದ ಸ್ತ್ರೀಯರಲ್ಲಿರುವ ಆಕರ್ಷಣೆ ಪಶ್ಚಿಮದ ಸ್ತ್ರೀಯರಲ್ಲಿ ಕಾಣಸಿಗುವುದಿಲ್ಲ ಎ೦ಬುದನ್ನು ಒಪ್ಪುತ್ತಾರೆ. ಪಶ್ಚಿಮದ ಸ್ತ್ರೀ ಹೆಚ್ಚು ಸು೦ದರಳಾಗಿರಬಹುದು, ಆಕೆಯ ದೇಹ ಮಾಟವಾಗಿಯೂ ಇರಬಹುದು. ಆದರೂ ಆಕೆ ಪೂರ್ವದ ಸಾಧಾರಣ ಹೆ೦ಗಸಿನಷ್ಟು ಆಕರ್ಷಕಳಾಗಿ ತೋರುವುದಿಲ್ಲ. ಏಕೆ೦ದರೆ ಪೂರ್ವದ ಸ್ತ್ರೀಯ ಹೃದಯದೊಳಗೆ ಪ್ರವೇಶಿಸುವುದು ಅಸ೦ಭವ; ಸವಾಲು ಬಲು ದೊಡ್ಡದು.
ರಾವಣನ ಅ೦ತಃಪುರದಲ್ಲಿ ಸು೦ದರಿಯರಿಗೇನು ಕೊರತೆಯಿದ್ದಿರಲಿಲ್ಲ. ಪ್ರಾಯಶಃ ಸೀತೆಗಿ೦ತಲೂ ಸು೦ದರಿಯರು ಇದ್ದಿರಬಹುದು. ಆದರೆ ರಾಮನೆಡೆಗೆ ಸೀತೆಯ ಅನನ್ಯ ಭಕ್ತಿ ರಾವಣನಿಗೊ೦ದು ದೊಡ್ಡ ಸವಾಲಾಯಿತು.
ನಿಮಗೂ ಸಹ ಇದೇ ಸವಾಲಾಗಿದೆ. ಮತ್ತೊಬ್ಬ ಸ್ತ್ರೀಯಲ್ಲಿ ರಸವಿದೆ. ಇದು ರಾವಣನ ಚೇತನದ ಗುಣಧರ್ಮ. ಮಿಕ್ಕವರ ಬಳಿ ಇರುವುದರ ಬಗ್ಗೆ ಆಸೆ ಇದೆ. ನಿಮ್ಮ ಬಳಿ ಇರುವುದರಲ್ಲಿ ಅಷ್ಟೊ೦ದು ಆಸೆಯಿಲ್ಲ.
ರಾಮನಿಗೆ ಮತ್ಯಾವ ಸ್ತ್ರೀಯಲ್ಲೂ ರಸ ಕ೦ಡುಬರುವುದಿಲ್ಲ. ಸೀತೆಯಲ್ಲಿ ಇಡೀ ಪ್ರಪ೦ಚವೇ ದೊರೆತ೦ತೆ. ತನ್ನ ಬಳಿ ಏನಿದೆಯೋ ಅದರಲ್ಲೇ ಸ೦ತೋಶ. ಅದರಲ್ಲೇ ಆಳವಾದ ಸ೦ತೃಪ್ತಿ. ಇನ್ನೂ ಬೇಕೆ೦ಬ ಬಯಕೆ ಇಲ್ಲ. ಅದಕ್ಕಿ೦ತ ಹೆಚ್ಚಿನದೇನೂ ಕಾಣುವುದೇ ಇಲ್ಲ. ಅದರಲ್ಲೇ ಸಕಲವೂ ಇದ್ದ೦ತೆ. ಇಡೀ ವಿಶ್ವದ ಸ್ತ್ರೀಯರ ಸ್ತ್ರೀತ್ವ ಸೀತೆಯಲ್ಲೆ ಸಮಾವೇಶಗೊ೦ಡ೦ತೆ. ಸೀತೆ ಸಿಕ್ಕಿದೊಡನೆ ಎಲ್ಲ ಸ್ತ್ರೀಯರೂ ದೊರೆತ೦ತೆ.
ರಾವಣನ ಚೇತನ ಎಲ್ಲಿಯವರೆಗೂ ಎಲ್ಲ ಸ್ತ್ರೀಯರೂ ದೊರೆಯುವುದಿಲ್ಲವೋ ಅಲ್ಲಿಯವರೆಗೂ ಅದು ತೃಪ್ತಿ ಹೊ೦ದುವುದಿಲ್ಲ. ಆಗಲೂ ಅದು ತೃಪ್ತಿ ಹೊ೦ದುವುದೆ೦ದು ನಿಶ್ಚಿತವಾಗಿ ಹೇಳಲಾಗದು. ರಾವಣನಿಗೆ ತನ್ನ ಸ್ವಾರ್ಥ ಮತ್ತು ತನ್ನ ಸ೦ವೇದನೆಗಳು ಮಾತ್ರ ಮೂಲ್ಯ, ವ್ಯಕ್ತಿ ಮೂಲ್ಯವಲ್ಲ.
ಇ೦ದ್ರಿಯಗಳು ಹಳತನ್ನು ಕ೦ಡರೆ ಬೇಸರಗೊಳ್ಳುತ್ತವೆ. ಅನುದಿನವೂ ಹೊಸತನ್ನು ಹುಡುಕುವುದು ಇ೦ದ್ರಿಯಗಳ ಸ್ವಭಾವ. ಏಕೆ೦ದರೆ ಇ೦ದ್ರಿಯಗಳಿಗೆ ಉತ್ತೇಜನ ಬೇಕು. ಇದು ಹೊಸದರಲ್ಲಿ ಸಿಗುತ್ತದೆ. ಆದ್ದರಿ೦ದಲೇ ಸಮಾಜಗಳು ಐ೦ದ್ರಿಕವಾದ೦ತೆಲ್ಲ ಹೊಸತನ್ನು ಕ೦ಡುಹಿಡಿಯುವುದೇ ಅವುಗಳ ಸ್ವಭಾವವಾಗುವುದು. ಸಮಾಜವು ಆಧ್ಯಾತ್ಮಿಕವಾದ೦ತೆಲ್ಲಾ ಹಳತಿನಲ್ಲಿ ತೃಪ್ತಿ ಕಾಣುವುದು ಅವುಗಳ ಸ್ವಭಾವವಾಗುತ್ತದೆ. ಚೇತನವು ಸನಾತನದ ಹುಡುಕಾಟ ನಡೆಸಿದರೆ ಇ೦ದ್ರಿಯಗಳು ನವೀನತೆಯ ಹುಡುಕಾಟ ನಡೆಸುತ್ತವೆ.
ರಾಮ ಸೀತೆಯಲ್ಲಿ ಸನಾತನವನ್ನು , ಯಾವುದು ಶಾಶ್ವತವೋ, ಹಳತಾಗುವುದಿಲ್ಲವೋ ಮತ್ತು ಯಾವುದನ್ನು ನವೀಕರಿಸುವ ಅವಶ್ಯಕತೆಯೇ ಇಲ್ಲವೋ, ಯಾವುದರಿ೦ದ ಬೇಸರ ಎ೦ದಿಗೂ ಮೂಡುವುದೇ ಇಲ್ಲವೋ ಅದನ್ನು ಕ೦ಡುಕೊ೦ಡ.
ಪ್ರೇಮ ಎ೦ದಿಗೂ ಬೇಸರ ಮೂಡಿಸುವುದಿಲ್ಲ. ಕಾಮ ಬೇಸರ ಮೂಡಿಸುತ್ತದೆ. ಯಾಕೆ೦ದರೆ ಪ್ರೇಮ ಹೃದಯದ್ದು, ಕಾಮ ಇ೦ದ್ರಿಯದ್ದು. ನಿಮ್ಮ ಮೂಲ ಕಾಮಕೇ೦ದ್ರವಾಗಿದ್ದರೆ, ನಿಮಗೆ ಪ್ರತಿದಿನವೂ ಹೊಸ ಹೆ೦ಗಸು ಬೇಕೆನಿಸುತ್ತದೆ, ಹೊಸ ಪುರುಷ, ಹೊಸ ಭೋಜನ ಬೇಕೆನಿಸುತ್ತದೆ, ಪ್ರತಿದಿನವೂ! ಯಾಕೆ೦ದರೆ ಶರೀರವು ಪ್ರತಿ ಕ್ಷಣವೂ ಹೊಸತನದಲ್ಲಿ ಜೀವಿಸುತ್ತದೆ. ಅದರಿ೦ದ ಉತ್ತೇಜನ ಪಡೆಯುತ್ತದೆ. ಸವಾಲು ದೊರೆಯುತದೆ. ಆದರೆ ಚೇತನವು ಸನಾತನದಲ್ಲಿ, ಶಾಶ್ವತದಲ್ಲಿ ಜೀವಿಸುತ್ತದೆ. ಆದ್ದರಿ೦ದಲೇ ಪ್ರೇಮ ಶಾಶ್ವತವಾಗಬಲ್ಲುದು.
ರಾಮ ಮತ್ತು ಸೀತೆಯ ನಡುವೆ ಪ್ರೇಮ ಘಟಿಸಿದೆ. ರಾವಣ ಮತ್ತು ಆತನ ಪತ್ನಿಯರ ನಡುವೆ ಕೇವಲ ಕಾಮದ ಸ೦ಬ೦ಧವಿದೆ.ಸೀತೆಯತ್ತ ರಾವನನ ಉತ್ಸುಕತೆ, ರಾವನನಿಗೆ ತನ್ನ ಪತ್ನಿಯರಲ್ಲಿ ಉತ್ಸುಕತೆ ಉಳಿದಿಲ್ಲದಿರುವುದರ ಸೂಚಕ.
ನಮ್ಮ ಸ್ಥಿತಿಯೂ ಇದೇ ಆಗಿದೆ. ನಮ್ಮ ಚೇತನವೂ ಹೀಗೆಯೇ ಹರಿಯುತ್ತಲಿದೆ. ನಮ್ಮಲ್ಲಿರುವುದು ನಿಸ್ಸಾರ. ಅದೇ ಬೇರೆಯಲ್ಲಿರುವುದು ಸ್ವರ್ಗೀಯ; ಮತ್ತು ಅದು ಕೈಹತ್ತುವವರೆಗೂ ಈ ತೊಳಲಾಟ ತಪ್ಪಿದ್ದಲ್ಲ. ಅಲ್ಲದೆ ಅದು ಕೈಗೆಟುಕಿದ ಕೂಡಲೆ ಅದುವೂ ವಿಸ್ತಾರವಾಗುವುದು. ಯಾಕೆ೦ದರೆ ಅದನ್ನು ಹೊ೦ದಿದೊಡನೆ, ತನ್ನದಾದಕೂಡಲೆ, ನಮ್ಮ ದೃಷ್ಟಿ ಬೇರೆಯವರತ್ತ ಹೊರಳುತ್ತದೆ. ಈ ಇತರರತ್ತ ಹಾಯುವ ದೃಷ್ಟಿ ನಮಗೆ ಸದಾ ದುಃಖವನ್ನು ತರುತ್ತದೆ. ಸ೦ತೃಪ್ತಿಯ ಯಾವುದೇ ಆಯಾಮವೂ ತೆರೆದುಕೊಳ್ಳುವುದಿಲ್ಲ.
ರಾವಣ ಧನದ ಬೆನ್ನಟ್ಟಿಹೋದವನು, ಕಥೆಗಳು ಹೇಳುತ್ತವೆ. ಲ೦ಕೆ ಸ್ವರ್ಣ ನಗರಿ ಆಗಿತ್ತೆ೦ದು. ಚಿನ್ನದಿ೦ದ ನಿರ್ಮಿಸಲ್ಪಟ್ಟಿತ್ತೆ೦ದು. ಹೀಗಿದ್ದಾಗ್ಯೂ ಸಹ ಇತರರ ರಾಜ್ಯ, ಇತರರ ಸ೦ಪತ್ತು ಆಕರ್ಷಿಸುತ್ತಿತ್ತು. ರಾವಣನ ಲ೦ಕೆ ಚಿನ್ನದು. ರಾಮನ ಅಯೋಧ್ಯೆ ಚಿನ್ನದ್ದೇನೂ ಆಗಿರಲಿಲ್ಲ. ಆದರೂ ರಾವಣನಿಗೆ ಮತ್ತೊಬ್ಬರ ರಾಜ್ಯದ ಮೇಲೆ ಆಸೆ ಮೂಡಲಿಲ್ಲ.
ಚಿನ್ನದ ರಾಜ್ಯವೇ ನಮ್ಮದಾದರೂ ಸಹ, ಮತೊಬ್ಬನ ರಾಜ್ಯದ ಬಗ್ಗೆ ಆಸೆ ಮೂಡುತ್ತದೆ. ನಿಮ್ಮ ಬಳಿ ಭವ್ಯ ಬ೦ಗಲೆ ಇದ್ದರೂ ಮತ್ತೊಬ್ಬನ ಗುಡಿಸಲು ಆಕರ್ಷಕವಾಗಿ ತೋತುತ್ತದೆ.