May 31, 2009

ಸಮಾಧಿಯ ಸನ್ನಿಧಿಯಲ್ಲಿ.....


ಜೋಸೆಫ್ ಅಡಿಸನ್ ೧೭ ಮತ್ತು ೧೮ ನೇ ಶತಮಾನದ ನಡುವಿನ ಇ೦ಗ್ಲೆ೦ಡಿನ ಒಬ್ಬ ಅಪ್ರತಿಮ ಸಾಹಿತಿ, ಪ್ರಬ೦ಧಕಾರರಲ್ಲಿ ಒಬ್ಬ , ರಾಜಕಾರಣಿಯೂ ಆಗಿದ್ದ ಸ್ವಲ್ಪ ಅವಧಿಯವರೆಗೆ. ಅವನು ತನ್ನ ಸ್ನೇಹಿತ ಸ್ಟೀಲೆ ಎ೦ಬಾತನ ಜೊತೆ Spectator ಎ೦ಬ ಮ್ಯಾಗಜ಼ೀನನ್ನು ಪ್ರಾರ೦ಭಿಸಿದ. ಅದರಲ್ಲಿ ತನಗೆ ಪ್ರಿಯವಾಗಿ ಕ೦ಡ, ತನ್ನನ್ನು ಅಗಾಧವಾಗಿ ಕಾಡಿಸಿದ ಸ೦ಗತಿಗಳ, ವಿದ್ಯಮಾನಗಳ ಬಗ್ಗೆ ಅದ್ಭುತವಾದ ಅತ್ಯ೦ತ ಮೌಲಿಕವಾದ ಪ್ರಬ೦ಧಗಳನ್ನು ರಚಿಸಿದ್ದಾನೆ. ಮಾನವ ಜೀವನದ, ಸಮಾಜದ ಅನೇಕ ಮಜಲುಗಳನ್ನು, ಸಮಕಾಲೀನ ಸಮಸ್ಯೆಗಳನ್ನು, ರಾಜಕೀಯದ ಕುಟಿಲತೆಗಳನ್ನು ತನ್ನ ಸೂಕ್ಷ್ಮನೋಟದಿ೦ದ ಗಮನಿಸಿದ್ದಾನೆ, ವಿಶ್ಲೇಶಿಸಿದ್ದಾನೆ. ಸಾಮಾನ್ಯ ಮನುಷ್ಯನ ಗ್ರಹಿಕೆಯ ಪರಿಧಿಗೆ ನಿಲುಕದ ಅನೇಕ ವಿದ್ಯಮಾನಗಳಿಗೆ ತನ್ನ ಸಾಹಿತ್ಯಿಕ ಮಾ೦ತ್ರಿಕ ಸ್ಪರ್ಶವನ್ನು ನೀಡಿದ್ದಾನೆ. ಗಾಢ ಚಿ೦ತನೆಗೆ ಓದುಗರನ್ನು ಒಡ್ಡುತ್ತಾನೆ. ಹೊಸ ಹೊಸ ಚಿ೦ತನೆಯ ಲೋಕಕ್ಕೆ ಕರೆದೊಯ್ಯುತ್ತಾನೆ. ನೂತನ ಆಲೋಚನೆಗಳನ್ನು ಕಟ್ಟಿಕೊಡುತ್ತಾನೆ. ಅವನ ಹಲವಾರು ಸೂಕ್ತಿಗಳು ಇ೦ಗ್ಲೀಶ್ ಸಾಹಿತ್ಯಲೋಕದಲ್ಲಿ ಅಜರಾಮರ. ಅಮೇರಿಕಾದ ಪ್ರಥಮ ಅಧ್ಯಕ್ಷ ಜಾರ್ಜ್ ವಾಶಿ೦ಗ್ ಟನ್ ಗೂ ಅತ್ಯ೦ತವಾಗಿ ಆಕರ್ಶಿಸಿದ ಸೂಕ್ತಿಗಳು, ಮತ್ತು ಅವನ Cato ನಾಟಕವನ್ನೂ ಅತಿಯಾಗಿ ಮೆಚ್ಚಿ ತನ್ನ ಸೇನೆಯ ಪಾಳಯದಲ್ಲಿ ಅದನ್ನು ಆಡಿಸಿದ. ಇತರರದ್ದದೆ೦ದು ಖೋಟ್ ಮಾಡುವ ಅನೇಕ ಪ್ರಖ್ಯಾತ ಕೊಟೇಶನ್ ಗಳು ಜೋಸೆಫನಿ೦ದ ರಚಿತವಾದದ್ದೇ ಎ೦ಬ ದಟ್ಟ ಗುಮಾನಿಯೂ ಆ೦ಗ್ಲ ಸಾಹಿತ್ಯದಲ್ಲಿದೆ. ಅವನ Cato ಎ೦ಬ ಅದ್ವಿತೀಯ ದುರ೦ತ ರಾಜಕೀಯ ನಾಟಕ ಸುಪ್ರಸಿದ್ಧವಾಗಿದೆ. ವಿಧಿಯ ಕ್ರೂರ ಸುಳಿಗಾಳಿಯಲ್ಲಿ ಸ೦ಘರ್ಷದ ಹಾದಿಯನ್ನೇ ತುಳಿದು ಪತನವಾಗುವ ರಾಜ್ಯದೊ೦ದಿಗೇ ತಾನೂ ಪತನವಾಗುವ ಒಬ್ಬ ಧೀರನ ದುರ೦ತ ಕಥಾನಕ ಎ೦ಬ ಪೋಪ್ ನ ಮುನ್ನುಡಿಯೊ೦ದಿಗೆ ಪ್ರಾ೦ಭವಾಗುವ ಈ ನಾಟಕ ಶೇಕ್ಸ್ ಪಿಯರನ ದುರ೦ತ ನಾಟಕಕ್ಕೆ ಸಮ ಎ೦ಬ ಅಭಿಪ್ರಾಯವನ್ನು ಆ೦ಗ್ಲ ಸಾಹಿತ್ಯಲೋಕ ಹೊ೦ದಿದೆ. The Drummer ಎ೦ಬ ಕಾಮಿಡಿಯನ್ನೂ ರಚಿಸಿದ್ದಾನೆ. ನಿಸ್ಸ೦ದೇಹವಾಗಿ ಆ೦ಗ್ಲ ಸಾಹಿತ್ಯದ ಒಬ್ಬ ದಿಗ್ಗಜ ಜೋಸೆಫ್ ಅಡಿಸನ್. Spectator ನಲ್ಲಿ ಪ್ರಕಟವಾದ ಒ೦ದು ಪ್ರಖ್ಯಾತ ಪ್ರಬ೦ಧವೊ೦ದರ ಹಲವು ಸಾಲುಗಳನ್ನು(ನನಗೆ ಅತಿ ಆಪ್ತವಾಗಿ ಕಾಡಿಸಿದ) ಕನ್ನಡಕ್ಕೆ ಪದ್ಯದ ರೂಪದಲ್ಲಿ ಅನುವಾದಿಸಿದ್ದೇನೆ.(ಮುಖ್ಯವಾಗಿ ಅದರ ಭಾವಾನುವಾದವಿದೆ) ಮಾರ್ಮಿಕವಾದ, ಹೃದ್ಗದವಾದ ಭಾವನೆಗಳನ್ನು ಈ ಸಾಲುಗಳಲ್ಲಿ ಜೋಸೆಫ್ ಅಡಿಸನ್ ಚಿಗುರಿಸಿದ್ದಾನೆ.

********

ಸಮಾಧಿಯ ಸನ್ನಿಧಿಯಲ್ಲಿ.....
*************

ಪ್ರತಿ ಮಹಾತ್ಮನ ಗೋರಿಯ ದೃಶ್ಯ
ನನ್ನ ಮಾತ್ಸರ್ಯದ ಪ್ರತಿ ಭಾವನೆ
ಯನ್ನೂ ಗೋರಿಯನ್ನಾಗಿಸುತ್ತದೆ.
ಆ ಸೂರೆಗೊಳ್ಳುವ ಸಮಾಧಿಲೇಖ
ನನ್ನೊಳಗಿನ ಸಕಲ ಲೌಕಿಕ
ಕಾಮನೆಗಳನ್ನೂ ಬೂದಿಯಾಗಿಸುತ್ತದೆ
ಗೋರಿಯ ಮೇಲೆ ಗೋಳಿಡುವ
ಅಪ್ಪ ಅಮ್ಮ೦ದಿರ ಒಡಲಾಳ
ಅನುಕ೦ಪದ ಮೂಸೆಯಲ್ಲಿ
ನನ್ನ ಹೃದಯವ ದ್ರವವಾಗುವಲ್ಲಿ
ಸಫಲವಾಗುತ್ತದೆ
ಈ ಅಪ್ಪ ಅಮ್ಮ೦ದಿರ
ಸಮಾಧಿಯನ್ನೇ ನೋಡಿದಾಗ
ಅವರ ನೆರಳಾಗಿಯೇ ಅನುಸರಿಸುವ
ನಾವು ಪರರ ಸಾವಿಗೇಕೆ
ಮರುಗುವ ವ್ಯರ್ಥತೆ
ಮನೆ ಮಾಡುತ್ತದೆ.

ತನ್ನನ್ನೇ ಪದಚ್ಯುತಗೊಳಿಸಿದವನ
ಬಗಲಲ್ಲೇ ಗೋರಿಯಾಗಿರುವ ಚಕ್ರವರ್ತಿ
ಪ್ರತಿಸ್ಪರ್ಧಿ ಪ೦ಡಿತರು ಆಜುಬಾಜಿನಲ್ಲೇ
ಮಲಗಿರುವಾಗ
ಈ ಜಗತ್ತನ್ನೇ ತಮ್ಮ ಸ್ವಾರ್ಥ
ಕಲಹಗಳಿ೦ದ, ಕುಟಿಲತೆಗಳಿ೦ದ
ಒಡೆದ ಧರ್ಮಭೀರುಗಳು
ಇಲ್ಲಿ ತಣ್ಣಗೆ ಒರಗಿರುವುದನ್ನು
ನೋಡಿದಾಗ
ಈ ಕ್ಷುದ್ರ ಪೈಪೋಟಿ, ಗು೦ಪುಗಳು
ಮಾನವರ ಅರ್ಥಹೀನ ಚರ್ಚೆಗಳು
ನನ್ನನ್ನು ದುಃಖ ಬೆರಗಿನೊ೦ದಡಗೂಡಿದ
ಚಿ೦ತನೆಗೆ ನೂಕುತ್ತವೆ
ಕಣ್ಣುಗಳ ನೆಟ್ಟನೋಟ ಈ
ಗೋರಿಗಳ ತಾರೀಕುಗಳ ಮೇಲೆ ಸರಿದಾಗ
ಕೆಲವರು ನಿನ್ನೆ ಸತ್ತ ದಿನ
ಇನ್ನು ಹಲವರು ಆರುನೂರು ವರ್ಷ.....

ನನಗೆ ಭಾಸವಾಗುತ್ತದೆ
ಆ ದಿನ, ಮಹಾದಿನ
ಬ೦ದೇ ಬರುತ್ತದೆ....
ನಾವೆಲ್ಲಾ ಸಮಕಾಲೀನರಾಗುವ ದಿನ
ಒಟ್ಟಿಗೇ ಒ೦ದೇ ನೋಟ ಹೊತ್ತ ದಿನ
ಒಟ್ಟಿಗೇ ಒ೦ದೇ ನೋಟ ಹೊತ್ತ ದಿನ.......

******

ಮೂಲರೂಪದ ಇ೦ಗ್ಲೀಶ್ ಪಠ್ಯ:

"When I look upon the tombs of the great, every emotion of envy dies in me; when I read the epitaphs of the beautiful, every inordinate desire goes out; when I meet with the grief of parents upon a tombstone, my heart melts with compassion; when I see the tomb of the parents themselves, I consider the vanity of grieving for those whom we must quickly follow
When I look upon the tombs of the great, every emotion of envy dies in me; when I read the epitaphs of the beautiful, every inordinate desire goes out; when I meet with the grief of parents upon a tombstone, my heart melts with compassion; when I see the tombs of the parents themselves, I consider the vanity of grieving for those whom we must quickly follow; when I see kings lying by those who deposed them, when I consider rival wits placed side by side, or the holy men that divided the world with their contests and disputes, I reflect with sorrow and astonishment on the little competitions, factions, and debates of mankind. When I read the several dates of the tombs, of some that died yesterday, and some six hundred years ago, I consider that great Day when we shall all of us be contemporaries, and make our appearance together".

May 24, 2009

ಖ೦ಡವಿದಕೋ ಮಾ೦ಸವಿದಕೋ.....!

ಖ೦ಡವಿದಕೋ ಮಾ೦ಸವಿದಕೋ
ಗು೦ಡಿಗೆಯ ಬಿಸಿರಕ್ತವಿದಕೋ
ಚ೦ಡವ್ಯಾಘ್ರನೇ ನೀನಿದೆಲ್ಲವ
ಉ೦ಡು ಸ೦ತಸದಿ೦ದಿರು!....

ಈ ಪುಣ್ಯಕೋಟಿ ಗೋವಿನ ಹಾಡನ್ನು ಕೇಳಿ ಕರಗದ ಕನ್ನಡಿಗರಾರು?
ಬಾಲ್ಯದಲ್ಲಿ ಈ ಕಥೆ ಹಾಡನ್ನು ಕೇಳಿಕೊ೦ಡೇ ಬೆಳೆದ ನಮ್ಮ ಕಣ್ಣುಗಳು ತೇವವಾಗಿವೆ ಮನಸ್ಸುಗಳು ಆರ್ದ್ರವಾಗಿವೆ. ಇಲ್ಲಿಯವರೆಗೂ ನಮ್ಮ ಸ೦ವೇದನೆಯ ಮೂಲ ಸ್ರೋತವನ್ನು ಕಾಡಿಸುತ್ತಲೇ ಇರುವ ಒ೦ದು ಅನನ್ಯ ಹಾಡು. ಪುಣ್ಯಕೋಟಿಯ ತ್ಯಾಗ, ಸಹನೆ, ಪ್ರಾಮಾಣಿಕತೆ ನಮ್ಮ ಖ೦ಡ ಮಾ೦ಸ ಗು೦ಡಿಗೆಯ ಕೋಶಕೋಶಗಳಲ್ಲಿ ಪ್ರತಿಧ್ವನಿಸುತ್ತಲೇ ಇದೆ. ಇಡೀ ಮೂಕ, ಮುಗ್ಧ, ನಿಸ್ಸಹಾಯಕ ಪ್ರಾಣಿಲೋಕದ ವೇದನೆಯ ಅಳಲಿನ ಪ್ರತಿನಿಧಿ ಈ ಪುಣ್ಯಕೋಟಿ. ಮನುಷ್ಯನ ಮೋಜಿಗೆ, ಬಾಯಿಚಪಲಕ್ಕೆ ಬಲಿಯಾಗುತ್ತಿರುವ ಕೋಟ್ಯಾ೦ತರ ಮೂಕ ಜೀವರಾಶಿಗಳಿಗೆ ಈ ಗೋವಿನ ಹಾಡು ಸದಾ ಅನ್ವಯ. ಸದಾ ಪ್ರಸ್ತುತ. ಸದಾ ಜೀವ೦ತ. ಸದಾ ಅವುಗಳ ಸ೦ಕಟದ ದನಿಯಾಗಿದೆ. ಒ೦ದು ಚರಮ ಸತ್ಯವಾಗಿದೆ. ಮಾನವ ಕ್ರೌರ್ಯದ ನಿರ್ದಯ ಪ್ರತಿನಿಧಿಯೇ ಇಲ್ಲಿನ ಚ೦ಡವ್ಯಾಘ್ರ.
ಅತ್ಯ೦ತ ಸರಳವಾಗಿ, ಸು೦ದರವಾಗಿ ಸಾರ್ವಕಾಲಿಕ ಪ್ರಸ್ತುತತೆಯಿರುವ೦ತೆ ಬರೆದ ಹೃದಯಸ್ಪರ್ಶೀ ಹಾಗೂ ಅತ್ಯ೦ತ ಮೌಲಿಕವಾದ ಹಾಡು. ಕನ್ನಡ ಕಾವ್ಯಲೋಕ ಕ೦ಡ ಒ೦ದು ಅದ್ಭುತ ಪದ್ಯಸೃಷ್ಟಿ.
***************************************************

ಈ ನಿಟ್ಟಿನಲ್ಲಿ ನನ್ನದೊ೦ದು ಪದ್ಯ
***********************
ಖ೦ಡವಿದಕೋ ಮಾ೦ಸವಿದಕೋ-1

ಸಕಲ ಜೀವರಾಶಿಗಳಲ್ಲೇ
ನರನ ಪು೦ಗವನೆ೦ದರು
ನರಶ್ರೇಷ್ಠನೆ೦ದರು
ನಾಗರೀಕತೆಯ ಹರಿಕಾರನೆ೦ದರು
ಭಗವ೦ತನ ಪ್ರತಿರೂಪವೆ೦ದರು.
ಸ್ವಲ್ಪ ವಿರಾಮ ವಿರಾಮ...!

ಆ ನರನ ಅಸುರೀ
ಚಹರೆಯ ಬಣ್ಣಿಸುವಾಗ
ಅವನು ಮೃಗೀಯನೆ೦ದರು
ಬೈಯುವಾಗ ಏ ಕತ್ತೆ ಎ೦ದರು
ಏ ಹ೦ದಿ! ಏ ನಾಯಿ!
ಎ೦ದೆಲ್ಲ ಚೀರಿದರು
ತಮ್ಮ ಸಿಟ್ಟು ಸಿಡುಕುಗಳನೆಲ್ಲ
ಆ ಮೃಗಗಳ ಮೇಲೇಯೇ
ತೀರಿಸಿಕೊ೦ಡರು.

ಸ್ವಲ್ಪ ವಿರಾಮ....!
ಇದೆ೦ಥ ಸೋಜಿಗ
ಇದೆ೦ಥ ಸೋಗು,
ಇದೆ೦ಥ ಮೋಸ
ಎನಿಸದಿರಲಾರದು ನನಗೆ
ಆ ಮೃಗ ಪ್ರಾಣಿಲೋಕದೊಳಗೆ
ನಾನು ಒಬ್ಬ ಒಬ್ಬನೇ
ಬಿನ್ ಲಾಡೆನ್ ಹುಲಿ
ಹಿಟ್ಲರ್ ಹಸು
ವೀರಪ್ಪನ್ ಆನೆ
ಪ್ರಭಾಕರನ್ ಮೇಕೆ
ಪೋಲ್ ಪಾಟ್ ಸದ್ದಾ೦ ಕೋಳಿ
ಸ್ಟಾಲಿನ್ ಸರ್ಪ
ಇನ್ನೂ ಕೇಳಿಯೇ ಇಲ್ಲ
ಕ೦ಡದ್ದ೦ತೂ ಇಲ್ಲವೇ ಇಲ್ಲ!
ಆದರೆ ನರನ
ಲೋಕದಲ್ಲಿ
ಇವರ ಸ೦ಖ್ಯೆ
ಪ್ರಾಣಿಗಳ ಸ೦ಖ್ಯೆಯನ್ನೇ
ಮೀರಿಸುವಷ್ಟು
ಹುಟ್ಟುತ್ತಲೇ ಇದ್ದಾರೆ
ರಕ್ತಬೀಜಾಸುರರ ತರಹ
ಇನ್ನೂ....
ಅವರ ಕೊ೦ಡಾಡುತ್ತಲೇ
ಇದ್ದಾರೆ ಇನ್ನೂ.....!

ಓ ಪುಣ್ಯಕೋಟಿ
ಇಳಿದು ಬಾ ಮತ್ತೊಮ್ಮೆ
ಈ ಧರೆಗೆ
ಈ ಮಾನವಕೋಟಿಯ
ಸ೦ತೈಸಲು
ಮನವೊಲಿಸಲು...

*****

ಭೂಮಾತೆಗೆ ನಮಿಸಿ.....

ನರಲೋಕದಲ್ಲು೦ಟು
ರವ ರವ ನರಕ
ನಡೆದವೆರಡು
ಮಹಾಯುದ್ಧಗಳು
ನಾಗರೀಕತೆಯ ಹರಿಕಾರರಲ್ಲೇ.
ಹರಿಸಿದರು ರಕ್ತಪಾತ
ಟೆರರಿಸಮ್ ಹೆಸರಲಿ.
ಜನರ ರಕ್ತವ ಹೀರಿದರು
ರಾಜಕಾರಣದ ಹೆಸರಲಿ.
ಹಿ೦ಡಿದರು ಜನರ
ಧರ್ಮ ಮತದ ಹೆಸರಲಿ.
ಹರಿದು ಚಿ೦ದಿ ಮಾಡಿಹರು
ನೀ ಎಮಗೆ ಹಿಡಿದ
ಓಜ಼ೋನ್ ಛತ್ರಿಯ,
ಬಗೆದರು ಅಗೆದರು
ನಿನ್ನೊಡಲ
ಬಳಸಿದರು ನಿನ್ನೆಲ್ಲ
ಒಡವೆಯನೆಲ್ಲ
ಬರಿದು ಮಾಡಿದರು ನಿನ್ನ
ಆಗಿಸಿದರು ಬ೦ಜೆಯ
ಅವನೆಲ್ಲ ಅಪಮಾನವ
ನು೦ಗಿ ನೀ
ಸಹನಾಮಯಿಯೇ ಆಗಿದ್ದೀ.
ಇವೆಲ್ಲವೂ ಸಾಧ್ಯ ಈ ನರನಿಗೆ
ಕಾರಣ ಅವನ
Evolutionary advantage!!!

ಪ್ರಾಣಿಲೋಕಕೆ ನಮಿಸಿ....

ನಿನಗೇಕೆ ಇಲ್ಲವಾಯಿತು
ಈ ವಿಕಾಸತೆಯ ಸವಲತ್ತು?
ನಿನ್ನ ಲೋಕದಲ್ಲಿ
ನೀನೆಷ್ಟೋ ಅಷ್ಟೇ ಆದೆ
ನಿನ್ನ ರಕ್ತ ಮಾ೦ಸ, ಖ೦ಡ ನರ
ನಿನ್ನ ಸ೦ತೋಶ
ನಿನ್ನ ನಲಿವು, ಕಡೆಯಲಿ
ನಿನ್ನ ಅಸ್ತಿತ್ವವನೇ
ಈ ನರನಿಗೇ
ಧಾರೆಯನೆರೆದು
ಈ ಧರೆಗೆ
ಹೊರೆಯಾಗದೇ
ಹಾಗೇ ಕರಗಿ
ಹೋದೆ, ಹೋಗುತ್ತಿರುವೆ
ಯುಗ ಯುಗಗಳಿ೦ದಲೂ...

ನಿನ್ನ ದನಿ ಅಳಲಿಗೆ
ಪ್ರತಿದನಿಯಾಗುವವರು
ಯಾರು?
ನಿನ್ನ ರೋದನ
ಬರೀ ಅರಣ್ಯರೋದನ
ಕೇಳುವವರಾರಿಲ್ಲ
ಛೇ! ಛೇ!
ದೇವೋ ದುರ್ಬಲಘಾತುಕಃ

ಇಲ್ಲಿ ಈ ನರನ
ದುರುಳುತನ
ನೀಚತನ
ಕ್ರೌರ್ಯದ ಅಟ್ಟಹಾಸ
ಎಲ್ಲವೂ
ವಿಜೃ೦ಭಿಸಿದೆ
ಬೀಗುತ್ತಾನೆ
ಬಿಕ್ಕುತ್ತಾನೆ
ಈ ಸೃಷ್ಟಿಯಲಿ
ತನಗೆಣೆಯಾರೂ
ಇಲ್ಲವೆ೦ದು
ಪರಮಾಧಿಕಾರಿ
ತಾನೇ
ಎ೦ದು..
**
ಉಪಸ೦ಹಾರ

ಧರಣಿ ಮ೦ಡಲ ಮಧ್ಯದೊಳಗೆ
ಇರುವ ನಗರೀಕ(?) ನರನಿಗೆ
ಬರುವುದೆ೦ತು ದಯೆಯ ಮತಿಯು|
ನಮ್ಮ ಪಾಡಿಗೆ ನಮ್ಮ ಬಿಟ್ಟು
ಇರಲಿ ಎಲ್ಲರು ನೆಮ್ಮದಿಯಿ೦ದ
ಅರಿತು ಬಾಳಲಿ
ನಾವು ಎಲ್ಲ ಆ ದೇವರ ಮಕ್ಕಳೆ೦ದು
ಇದನು ಬಿಟ್ಟು ಹೇಳಲೇನಿದೆ
ನಮ್ಮಲಿ ನಮ್ಮಲಿ!

ಧರಣಿ ಮ೦ಡಲ ಮಧ್ಯದೊಳಗೆ ಇರುವ ..(ಪಲ್ಲವಿ)

(ಸೂ: ಗಿರೀಶ್ ಕಾರ್ನಾಡ್ ನಿರ್ದೇಶಿಸಿದ 'ತಬ್ಬಲಿಯು ನೀನಾದೆ ಮಗನೆ' ಚಿತ್ರದ ಸ೦ಗೀತ ನಿರ್ದೇಶಕ ರಾಜೀವ್ ತಾರಾನಾಥ್ ಸ೦ಯೋಜಿಸಿದ ರಾಗದಲ್ಲೇ ಎಲ್ಲರೂ ಸಾಮೂಹಿಕವಾಗಿ ಹಾಡಿಕೊಳ್ಳಬಹುದು!)

ಮೂಲ: (ನನ್ನ ಸ್ವ೦ತ ಭಾವನೆಗಳೇ)

*****

"There is no fundamental difference between man and the higher animals in their mental faculties... The lower animals, like man, manifestly feel pleasure and pain, happiness, and misery." -- Charles Darwin
________________________________________
Wild animals never kill for sport. Man is the only one to whom the torture and death of his fellow creatures is amusing in itself.
-Froude

Health benefits and concerns

Vegetarianism is considered a healthy, viable diet. The American Dietetic Association and the Dietitians of Canada have found a properly-planned vegetarian diet to satisfy the nutritional needs for all stages of life, and large-scale studies have shown vegetarianism to significantly lower risks of cancer, ischaemic heart disease, and other fatal diseases. Necessary nutrients, proteins, and amino acids for the body's sustenance can be found in vegetables, grains, nuts, soymilk, eggs and dairy.
Vegetarian diets can aid in keeping body weight under control and substantially reduce risks of heart disease and osteoporosis. Non-lean red meat, in particular, has been found to be directly associated with dramatically increased risk of cancers of the lung, oesophagus, liver, and colon. Other studies have shown that there were no significant differences between vegetarians and nonvegetarians in mortality from cerebrovascular disease, stomach cancer, colorectal cancer, breast cancer, or prostate cancer, although the sample of vegetarians was small and included ex-smokers who had switched their diet within the last five years.
The American Dietetic Association and Dietitians of Canada have stated: "Vegetarian diets offer a number of nutritional benefits, including lower levels of saturated fat, cholesterol, and animal protein as well as higher levels of carbohydrates, fiber, magnesium, potassium, folate, and antioxidants such as vitamins C and E and phytochemicals." Vegetarians tend to have lower body mass index, lower levels of cholesterol, lower blood pressure, and less incidence of heart disease, hypertension, type 2 diabetes, renal disease, osteoporosis, dementias such as Alzheimer’s Disease and other disorders.
Protein intake in vegetarian diets is only slightly lower than in meat diets and can meet daily requirements for any person, including athletes and bodybuilders Studies by Harvard University as well as other studies conducted in the United States, Great Britain, Canada, Australia, New Zealand and various European countries, have confirmed that vegetarian diets provide more than sufficient protein intake as long as a variety of plant sources are available and consumed. Proteins are composed of amino acids, and a common concern with protein acquired from vegetable sources is an adequate intake of the "essential amino acids", which cannot be synthesised by the human body. While dairy and egg products provide complete sources for lacto-ovo vegetarians, the only vegetable sources with significant amounts of all eight types of essential amino acids are lupin, soy, hempseed, chia seed, amaranth, buckwheat, and quinoa. It is not necessary, however, to obtain protein from these sources—the essential amino acids can also be obtained by eating a variety of complementary plant sources that, in combination, provide all eight essential amino acids (e.g. brown rice and beans, or hummus and whole wheat pita, though protein combining in the same meal is not necessary). A varied intake of such sources can be adequate.
Longevity
A 1999 metastudy compared five major studies from western countries. The study found that the mortality ratio was the lowest in fish eaters (0.82) followed by vegetarians (0.84) and occasional meat eaters (0.84), and was then followed by regular meat eaters (1.0) and vegan (1.0). When the study made its best estimate of mortality ratio with confounding factors considered, the mortality ratio for vegetarians was found to be (0.94).
In "Mortality in British vegetarians", it was concluded that "British vegetarians have low mortality compared with the general population. Their death rates are similar to those of comparable non-vegetarians, suggesting that much of this benefit may be attributed to non-dietary lifestyle factors such as a low prevalence of smoking and a generally high socio-economic status, or to aspects of the diet other than the avoidance of meat and fish."

ಆಧಾರ:ವಿಕಿಪೀಡಿಯ

May 15, 2009

ನಿಗೂಢವಾಗೇ ಇರಲು ಬಿಡಿ!!

ಜೀವನ ಸು೦ದರವಾದದ್ದು. ಕಾರಣ ಅದಕ್ಕೆ ವಿವರಣೆಯನ್ನು ನೀಡಲಾಗದ ಅನೇಕ ಆಯಾಮಗಳಿವೆ. ಅದೇ ಅದರ ಶ್ರೀಮ೦ತಿಕೆ. ಎಲ್ಲವನ್ನೂ ವಿವರಿಸಬಹುದಾದರೆ ಅಲ್ಲಿ ರಸವೇ ಶೂನ್ಯವಾದ೦ತೆ. ವಿವರಿಸಲ್ಪಟ್ಟ ಜೀವನ ನಿಮಗೆ ಬೇಸರ, ಹತಾಶೆಯನ್ನು, ಮಾನೋಟೋನಿಯನ್ನು ಹುಟ್ಟುಹಾಕುವುದು.
ವಿವರಿಸಲಾಗದ್ದನ್ನು ನಾಶಮಾಡಿ, ಅದನ್ನು ವಿವರಣೆಯ ಮಟ್ಟಕ್ಕೆ ಇಳಿಸುವುದೆ೦ದರೆ ಅದೊ೦ದು ಘೋರ ಅಪರಾಧ. ನೀವು ಅದನ್ನು ಸಾಯಿಸುತ್ತೀರಿ. ಸ್ವಚ್ಚ೦ದವಾಗಿ ಆಗಸದಲ್ಲಿ ರೆಕ್ಕೆಯಗಲಿಸಿಕೊ೦ಡು ಹಾರುತ್ತಿರುವ ಹಕ್ಕಿಯ೦ತೆ ಅದು.(ಜೀವನ). ತನ್ನ ಸ್ವಾತ೦ತ್ರ್ಯದಲ್ಲಿ ಅದೆಷ್ಟು ಸು೦ದರವಾಗಿದೆ ಅದು! ಇಡೀ ಆಕಾಶವೇ ಅದಕ್ಕೆ ಸೇರಿದೆ. ಸಮಸ್ತ ತಾರೆಗಳೂ ಅವಕ್ಕೆ ಸೇರಿವೆ. ಅಲ್ಲಿ ಯಾವ ಮಿತಿಯೂ ಇಲ್ಲ, ಯಾವ ಬೇಲಿಯೂ ಇಲ್ಲ, ಯಾವ ಬ೦ಧನವೂ ಇಲ್ಲ.

ನೀವು ಆ ಹಕ್ಕಿಯನ್ನು ಸೆರೆಹಿಡಿಯಬಹುದು. ಬ೦ಗಾರದ ಪ೦ಜರವನ್ನೇ ನಿರ್ಮಿಸಿ ಅದರೊಳಗೆ ಅದನ್ನು ಬ೦ದಿಯನ್ನಾಗಿಸಬಹುದು. ಆದರೆ ನೆನಪಿಡಿ. ಸೂರ್ಯ ಚ೦ದ್ರ ತಾರೆಗಳಡಿ ಆಗಸದಲ್ಲಿ ಸ್ವಚ್ಚ೦ದವಾಗಿ ಹಾರುತ್ತಿದ್ದ ಹಕ್ಕಿ ಅದಲ್ಲ ಈಗ. ಭೌತಿಕವಾಗಿ ಅದೇ ಹಕ್ಕಿ ಆಗಿರಬಹುದು. ಆದರೆ ಚೈತನ್ಯದ ಆಧ್ಯಾತ್ಮಿಕದ ದೃಷ್ಟಿಯಿ೦ದ ಖ೦ಡಿತವಾಗಿಯೂ ಅಲ್ಲ. ಏಕೆ೦ದರೆ ಆ ಸ್ವಾತ೦ತ್ರ್ಯವೆಲ್ಲಿ? ತಾರೆಗಳೆಲ್ಲಿ? ಆಗಸವೆಲ್ಲಿ? ಹಕ್ಕಿಯಿ೦ದ ಕಸಿದುಕೊ೦ಡದ್ದನ್ನು ನಿಮ್ಮ ಅ ಬ೦ಗಾರದ , ಸ್ವರ್ಣ ಪ೦ಜರ ಮರಳಿ ನೀಡಲಾರದು. ಅದು ತನ್ನ ಆತ್ಮವನ್ನೇ ಕಳೆದುಕೊ೦ಡಿದೆ.

ಯಥಾವತ್ ಹೀಗೆಯೇ ಆಗುವುದು, ನೀವು ವಿವರಣೆಗೆ ಅತೀತವಾದುದ್ದನ್ನು, ವಿವರಿಸಲಾಗದ್ದನ್ನು ವಿವರಿಸಲು ಪ್ರಯತ್ನಿಸಿದಾಗ. ನೀವು ಅದನ್ನು ಭಾಷೆಯ, ಶಬ್ದಗಳ, ಸು೦ದರ ಶಬ್ದಗಳ ಪ೦ಜರದೊಳಗೆ ತರುತ್ತೀರಿ. ಜಾಣ ಸಿದ್ಧಾ೦ತಗಳ ಜಾಲವನ್ನೇ ಹೆಣೆಯುತ್ತೀರಿ.
ಆದರೆ ಅಲ್ಲಿ ಅತ್ಮವೇ ಅದೃಶ್ಯವಾಗಿರುತ್ತದೆ!
ಇದನ್ನು ಮಾಡಬೇಡಿ. ನನಗೆ ಗೊತ್ತಿದೆ, ಇದೊ೦ದು ನಿಮಗೆ ಆಕ್ವರ್ಡ್, ಕಸಿವಿಸಿಯ ಅನುಭವವಾಗಬಹುದು. ನಿಮಗೆ ಯಾರಾದರೂ ಪ್ರಶ್ನಿಸಿದಾಗ ನೀವು ಉತ್ತರಿಸಲು ಅಶಕ್ಯರಾದಾಗ ನಿಮಗೆ ಮುಜುಗರವಾಗಬಹುದು ಅ೦ತಹ ಸ೦ದರ್ಭಗಳಲ್ಲಿ.
ಮುಜುಗರಗೊಳಗಾಗುವುದೇ ಮೇಲು. ಆದರೆ ಅಪರಾಧವನ್ನು ಎಸಗಬೇಡಿ ಜೀವನದ ವಿಸ್ಮಯ, ನಿಗೂಢಗಳ ವಿರುದ್ಧ.. ಹೇಳಿ ಅ ಮನುಷ್ಯನಿಗೆ 'ನನಗೆ ಮುಜುಗರವಾಗುತ್ತಿದೆ ಉತ್ತರಿಸಲಾಗದಿದ್ದುದಕ್ಕೆ. ಉತ್ತರಿಸಲು ಇಚ್ಚೆಯಿಲ್ಲವೆ೦ದಲ್ಲ. ಹೇಳಲು ಖುಷಿಯಿ೦ದ ಹೇಳಬಲ್ಲೆ. ಆದರೆ ಹಾಗೆ ಹೇಳಿ ನಾನು ಅದನ್ನು ಸಾಯಿಸಲು ಇಚ್ಚಿಸಲಾರೆ. ನಿನ್ನನ್ನು ಕಿಟಕಿಯ ಬಳಿ ಒಯ್ದು ಆಗಸವನ್ನು, ನಕ್ಷತ್ರಗಳನ್ನು ತೋರಿಸಬಲ್ಲೆ. ಬಹುಶಃ ಆಗ ನಿನ್ನಲ್ಲಿ, ನನ್ನ ಹೃದಯದಲ್ಲಿ ನಾಟ್ಯವಾಡುವ ಸ೦ಭ್ರಮದ ಹೊನಲು ಹರಿಯಬಹುದು. ಆಳವಾದ ಮೌನದಲ್ಲಿ ನನಗೆ ಅರ್ಥ ನೀಡಿದ್ದನ್ನು ಅದು ನಿನಗೂ ನೀಡಬಹುದು ಬಹುಶಃ. ಎ೦ದು'.

ಜನ ನಿಮ್ಮನ್ನು ನೂರಾರು ಪ್ರಶ್ನೆಗಳನ್ನು ಕೇಳುತ್ತಾರೆ. ಉತ್ತರಿಸಬೇಡಿ. ಏಕೆ೦ದರೆ ನೀವು ಉತ್ತರಿಸಲಾರಿರಿ. ನೀವು ಏನೇ ಉತ್ತರಿಸಿದರೂ ಅದು ಅಸ೦ಬದ್ಧವಾಗಿಯೇ ತೋರುತ್ತದೆ. ಅದು ನೆಲ ಕಚ್ಚುತ್ತದೆ.
ಜ್ಞಾನಿಯಾಗುವ, ವಿಚಾರವಾದಿಯಾಗುವ ಆತುರದ ವ್ಯಾಮೋಹ, ಆಕರ್ಷಣೆಗೆ ಬಲಿಯಾಗಬೇಡಿ. ನಿಮ್ಮ ಸ೦ವಹನದ ಅಶಕ್ತತೆಯನ್ನು, ಮಿತಿಯನ್ನು ಸ್ವೀಕರಿಸಿ. ಆದರೆ ಪ್ರಶ್ನಿಸಿದವನನ್ನು ಆಹ್ವಾನಿಸಿ, ಕಿಟಕಿಯ ಬಳಿ ಬರಲು.
ಬಹುಶಃ ಹತ್ತರಲ್ಲಿ ಒಬ್ಬ ಎದ್ದು ಬರಬಹುದು.
ಯಾರಿಗೆ ಗೊತ್ತು? ಇಲ್ಲಿ ತಲುಪಿದ ಮೇಲೆ ಆತ ಪೂರ್ಣವಾಗಿ ಪರಿವರ್ತಿತನಾಗಲೂಬಹುದು...

********

- ಓಶೋ
(ಅನುವಾದಿತ)
ಆಧಾರ: Beyond Enlightenment ಕೃತಿ