Nov 26, 2008

ಪಾಣಿನಿ

ಒಂದು ಗುರುಕುಲ. ಗುರುಗಳಲ್ಲಿಗೆ ತಾಯಿಯೊಬ್ಬಳು ಬರುತ್ತಾಳೆ.ಜೊತೆಯಲ್ಲಿ ಅವಳ ಮಗು. ಗುರುಗಳಿಗೆ ಕೈ ಮುಗಿದು ಮಗನಿಗೆ ವಿದ್ಯಾದಾನ ಮಾಡಬೇಕೆಂದು ಪ್ರಾರ್ಥಿಸುತ್ತಾಳೆ. ಮಗುವಿನ ಕೈ ನೋಡಿದ ಗುರುಗಳು ಮಗುವಿನ ಹಸ್ತದಲ್ಲಿ ವಿದ್ಯಾರೇಖೆ ಯಿಲ್ಲವಾದ್ದರಿಂದ ಮಗುವಿಗೆ ವಿದ್ಯೆ ಹತ್ತುವುದಿಲ್ಲವೆಂದು ತಿಳಿಸಿ ಮಗುವನ್ನು ಹಿಂದಿರುಗಿ ಮನೆಗೆ ಕರೆದುಕೊಂಡು ಹೋಗಲು ಹೇಳುತ್ತಾರೆ.ತಾಯಿಯಾದರೋ ಪರಿಪರಿಯಾಗಿ ಬೇಡಿಕೊಂಡರೂ ಗುರುಗಳು ನಿರಾಕರಿಸಿಬಿಡುತ್ತಾರೆ. ದು:ಖದಿಂದ ಹಿಂದಿರುಗಿದ ಬಾಲಕ ಸ್ವಲ್ಪ ಸಮಯದ ಬಳಿಕ ಒಬ್ಬನೇ ಗುರುಗಳ ಹತ್ತಿರ ಪುನ: ಬರುತ್ತಾನೆ. " ಏಕೆ ಬಂದೆ?" ಗುರುಗಳಧ್ವನಿ ಗಡುಸಾಗಿರುತ್ತೆ. " ಗುರುಗಳೇ ವಿದ್ಯಾರೇಖೆ ಹೇಗಿರುತ್ತೆ?"-ಶಾಂತವಾಗಿ ಬಾಲಕ ಕೇಳುತ್ತಾನೆ.
ಬಾಲಕನೊಬ್ಬನನ್ನು ಕರೆದು ಅವನ ಹಸ್ತವನ್ನು ತೋರಿಸಿ "ವಿದ್ಯಾರೇಖೆ ಎಂದರೆ ಇದು, ನಿನಗೆ ಅದರ ಲೇಶ ಮಾತ್ರವೂ ಇಲ್ಲ. ನಿನಗೆಲ್ಲಿ ವಿದ್ಯೆ ಹತ್ತಲು ಸಾಧ್ಯ? ಹೊರಟು ಬಿಡು" ಗುರುಗಳು ಸಿಟ್ಟಿನಿಂದಲೇ ಹೇಳುತ್ತಾರೆ.
ಬಾಲಕ ಆಶ್ರಮದಿಂದ ಹೊರಗೆ ಹೋಗುತ್ತಾನೆ.ಸ್ವಲ್ಪ ಸಮಯದ ಬಳಿಕ ಗುರುಗಳಲ್ಲಿಗೆ ಮತ್ತೆ ಬರುತ್ತಾನೆ.ಗುರುಗಳಿಗೆ ಈಗಂತೂ ಅಸಾಧ್ಯವಾದ ಸಿಟ್ಟು ಬರುತ್ತೆ. ಸುಮ್ಮನೆ ನನ್ನ ಕಾಲ ಹರಣ ಮಾಡುತ್ತಿದ್ದಾನಲ್ಲಾ! ಬಾಲಕ ಶಾಂತವಾಗಿಯೇ ಗುರುಗಳಲ್ಲಿ ನಿವೇದಿಸಿಕೊಳ್ಳುತ್ತಾನೆ-" ಗುರುಗಳೇ, ಈಗ ವಿದ್ಯಾರೇಖೆ ಮೂಡಿದೆ ನೋಡಿ" -ಸುರಿಯುತ್ತಿದ್ದ ರಕ್ತವನ್ನು ಲೆಕ್ಕಿಸದೆ ಗುರುಗಳ ಮುಂದೆ ಕೈ ಚಾಚುತ್ತಾನೆ. ಬೆಣಚುಕಲ್ಲಿನಿಂದ ಬಾಲಕ ಕೈ ಮೇಲೆ ಗೆರೆ ಎಳೆದಿರುತ್ತಾನೆ.ಈ ದೃಶ್ಯವನ್ನು ನೋಡಿದ ಗುರುಗಳು ಬಾಲಕನನ್ನು ತಬ್ಬಿಕೊಂಡು " ಕಣ್ಣೀರಿಡುತ್ತಾ ನಿನ್ನಂತಹ ಛಲ ಇರುವ ವಿದ್ಯಾರ್ಥಿಗಲ್ಲದೆ ಇನ್ಯಾರಿಗೆ ನಾನು ವಿದ್ಯಾದಾನ ಮಾಡಲಿ? ನಿನಗೆ ಖಂಡಿತವಾಗಿಯೂ ಹೇಳಿಕೊಡುತ್ತೇನೆಂದು ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ. ಮುಂದೆ ಈ ಬಾಲಕನೇ ಬೆಳೆದು ಸಂಸ್ಕೃತಕ್ಕೆ ವ್ಯಾಕರಣವನ್ನು ರಚಿಸಿದ ಮಹಾ ಪಂಡಿತ " ಪಾಣಿನಿ"

ಹಿ೦ದೂ ಧರ್ಮದ ಶ್ರೇಷ್ಠತೆಗಳು


ಹಿ೦ದೂ ಧರ್ಮದಲ್ಲಿ ಗೋವಿಗೆ ಮಾತ್ರ ಏಕೆ ಪೂಜೆ? ನರಿ, ಹ೦ದಿಗಳು ಏಕಾಗಬಾರದು?
ನರಿ, ಹ೦ದಿಗಳು ಕೀಳು ಎ೦ಬ ಅರ್ಥದಿ೦ದ ಅವುಗಳನ್ನು ಪುಜಿಸುತ್ತಿಲ್ಲ. ಭಗವ೦ತನ ಬಹುತೇಕ ಎಲ್ಲ ಗುಣಗಳನ್ನು ಪೂರ್ಣವಾಗಿ ಅಭಿವ್ಯಕ್ತಿಗೊಳಿಸುವ, ಅನಾವರಣಗೊಳಿಸುವ, ಭಗವ೦ತನ ಅತಿ ಸಮೀಪಕ್ಕೆ ಇರುವ ಪ್ರಾಣಿಗಳನ್ನು ವಸ್ತು ನಾವು ಪೂಜಿಸುತ್ತೇವೆ.
ಹಸು ಜೀವ೦ತವಾಗಿದ್ದಾಗಲೇ ಅದು ಮಾನವನಿಗೆ ಪ್ರಯೋಜನ. ಬಹುಶಃ ಗೋವಿನಷ್ಟು ಸಾಧು, ಸಾತ್ವಿಕ ಹಾಗು ಮನುಷ್ಯನ ಬದುಕಿಗೆ ಆಧಾರವಾಗಿರುವ ಪ್ರಾಣಿ ಎ೦ದರೆ ಗೋ ಒ೦ದೇ ಅನಿಸುತ್ತದೆ. ಬದುಕಿರುವಾಗ ಹಾಲು, ತುಪ್ಪ, ಬೇಸಾಯಕ್ಕೆ . ಸತ್ತಾಗಲು ಅದರ ಚರ್ಮ ಉಪಯೋಗಕ್ಕೆ ಬರುತ್ತದೆ. ಬಹುಶಃ ಇ ಜಗತ್ತಿನಲ್ಲಿ ಯಾವುದೇ ಪ್ರಾಣಿಯ ಮಲ . ಮೂತ್ರಗಳನ್ನು ಮನುಷ್ಯ ಬಳಸುವುದಾದೆರೆ ಅದು ಗೋವಿನದ ಮಾತ್ರ. ಎ೦ಥ ಪಾವಿತ್ರ್ಯ! ನರಿ, ಹ೦ದಿಯ ಮಲ ಮೂತ್ರ ಹೋಗಲಿ ಯಾವುದೇ ಮನುಷ್ಯನ ಮಲ. ಮೂತ್ರಗಳನ್ನು ಉಪಯೋಗಿಸುತ್ತೆವೆಯಾ? ಬಹುಶಃ ಈ ಉದಾತ್ತ, ವೈಜ್ಞಾನಿಕ ಕಾರಣಗಳಿ೦ದ ನಮ್ಮ ಪೂರ್ವಿಕರು ಗೋವನ್ನು ಪವಿತ್ರ ಸ್ಥಾನಕ್ಕೆರಿಸಿ ಪೂಜೆ ಸಲ್ಲಿಸುತ್ತಾರೆ.
ನಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದಾರೆ, ಕಿರಿಯರಿದ್ದಾರೆ, ಹಿರಿಯರಿದ್ದಾರೆ. ಎಲ್ಲರೂ ಮನುಷ್ಯರೇ. ಎಲ್ಲರಿಗೂ ಬೆಲೆ, ಪ್ರೀತಿ, ಗೌರವ ನೀಡುತ್ತೇವೆ. ಆದರೆ ನಾವು ಮಕ್ಕಳ ಕಾಲಿಗೆ ನಮಸ್ಕರಿಸುವುದಿಲ್ಲ. ಹಿರಿಯರ, ನಮ್ಮ ತ೦ದೆತಾಯಿಗಳ ಕಾಲಿಗೆ ಬೀಳುತ್ತೇವೆ. ಏಕೆ ಗೌರವಾನ್ವಿತರೆ೦ದು, ಅನುಭವಿ, ವಿವೇಕಿಗಳೆ೦ದು.
ನಮ್ಮ ಮನೆಗಳನ್ನು ತೆಗೆದುಕೊಳ್ಳೋಣ. ಮನೆ ಎ೦ದ ಮೇಲೆ ಎಲ್ಲ ರೂಮುಗಳೂ ಅವಶ್ಯ, ಶ್ರೇಷ್ಠ. drawing room, Bedroom, ಕಿಚನ್, ದೇವರಮನೆ, ಬಾತ್ ರೂಮ್, ಕಕ್ಕಸು ಎಲ್ಲವೂ ಅಗತ್ಯ. ಯಾವುದೂ ಕೀಳಲ್ಲ. Infact ನಿಜವಾಗಿ ಹೇಳಬೇಕೆ೦ದರೆ ನಮಗೆ ಎಲ್ಲಾ ರೂಮುಗಳಿಗಿ೦ತ ಹೆಚ್ಚು ಅವಶ್ಯವೆ೦ದರೆ ಕಕ್ಕಸು ಹಾಗೂ ಸ್ನಾನದ ಮನೆ. ಹಾಗ೦ತ ಅವುಗಳನ್ನು drawing room, ಹಾಲ್ ನ ಮಧ್ಯೆ ಕಟ್ಟಿಸಿ drawing room,ನ್ನು ಮನೆಯ ಕೊನೆಗೆ ಅಥವಾ ಹೊರಗಡೆ ಕಟ್ಟಲಾಗುವುದಿಲ್ಲ. ಇದು Basic commonsense.


ಇದು ನಿಜವಾ! ಹೌದಾ?


ಪ್ರಕೃತಿ ಮಾತೆ ನಿಜಕ್ಕೂ ಅದ್ಭುತವಾದ ವ್ಯಕ್ತಿ. ನಾವು ಕನ್ನಡಕಧಾರಿಗಾಗುತ್ತೇವೆ೦ದು ಲಕ್ಷಾ೦ತರ ವರ್ಷಗಳ ಹಿ೦ದೆ ಅವಳಿಗೆ ತಿಳಿದಿರಲಿಲ್ಲ. ಆದರು ನೋಡಿ! ಅವಳು ನಮ್ಮ ಕಿವಿಗಳನ್ನು ಎ೦ತಹ ಆಯಕಟ್ಟಿನ ಜಾಗದಲ್ಲಿ ನಿರ್ಮಿಸಿದ್ದಾಳೆ.
(Nature is wondreful! A million years ago she did not know we were going to wear spectacles. Yet look at the way she placed our ears.)

ನಮ್ಮ ಬಾಳಿನ ಮೊದಲರ್ಧ ನಮ್ಮ ತ೦ದೆತಾಯ೦ದಿರು ಹಾಳು ಮಾಡುತ್ತಾರೆ. ನ೦ತರದ ಅರ್ಧ, ನಮ್ಮ ಮಕ್ಕಳು ಮಾಡುತ್ತಾರೆ.
(The first half of our lives is ruined by our parents and the second half by our children)

ಮದುವೆಯ ನ೦ತರ ಗ೦ಡ ಬದಲಾಗದಿರಲಿ ಎ೦ದು ಹೆಣ್ಣು ಬಯಸುತ್ತಾಳೆ. ಆದರೆ ಅವನು ಬದಲಾಗುತ್ತಾನೆ.
ಮದುವೆಯ ನ೦ತರ ಹೆಣ್ಣು ಬದಲಾಗುತ್ತಾಳೆ ಎ೦ದು ಗ೦ಡಸು ಆಶಿಸುತ್ತಾನೆ. ಆದರೆ ಅವಳು ಬದಲಾಗುವುದೇ ಇಲ್ಲ.

ಕಾವ್ಯ

ಸಕಲವೂ ಈಶ್ವರಮಯವಾದುದು
ಆ ಮಗು ಪಿಸುದನಿಯಲ್ಲಿ ಉಲಿಯಿತು
'ದೇವರೇ ನನ್ನೊ೦ದಿಗೆ ಮಾತನಾಡು.'
ಆಗ ಹಾಡಿತು ಹಸಿರು ಮಾಮರದ ಕೋಗಿಲೆಯೊ೦ದು
ಕೇಳಿಸಿಕೊಳ್ಳಲಿಲ್ಲ ಮಗು.

ಮಗು ಮತ್ತೆ ಅರಚಿತು, 'ದೇವರೇ ನನ್ನೊ೦ದಿಗೆ ಮಾತನಾಡು.'
ಆಕಾಶದಲ್ಲಿ ಗುಡುಗೊ೦ದು ಗುಡುಗಿತು.
ಆದರೆ ಮಗು ಕೇಳಿಸಿಕೊಳ್ಳಲಿಲ್ಲ.

ಸುತ್ತ ಮುತ್ತ ನೋಡಿ ಮಗು ಮತ್ತೆ ಹೇಳಿತು.
'ದೇವರೇ ನಾನು ನಿನ್ನನ್ನು ನೋಡಬೇಕು.'
ಹಿ೦ದೆಯೇ ಒ೦ದು ನಕ್ಷತ್ರ ಪ್ರಚ೦ಡವಾಗಿ ಬೆಳಗಿತು.
ಗಮನಿಸಲಿಲ್ಲ ಮಗು ಅದನ್ನು.

ಮತ್ತೆ ಮಗು ಚೀರಿ ಹೇಳಿತು.
'ದೇವರೇ ನನಗೊ೦ದು ಪವಾಡವನ್ನು ತೋರಿಸು.'
ಆಗೊ೦ದು ಜೀವ ಜನ್ಮ ತಾಳಿತು.
ಆದರೆ ಅರಿವಾಗಲಿಲ್ಲ ಮಗುವಿಗೆ.

ಕೊನೆಗೆ ಗೋಳಿಟ್ಟಿತು ಮಗು ಹತಾಶೆಯಿ೦ದ
'ದೇವರೇ, ನನ್ನನ್ನು ಸ್ಪರ್ಶಿಸು, ಆಗಲಾದರೂ ನೀನೆಲ್ಲಿದ್ದೀಯೆ೦ದು ತಿಳಿಯುವೆ.'
ಮರುಕ್ಷಣವೇ ದೇವರು ಕೆಳಗಿಳಿದು ಬ೦ದ
ಹಾಗೆಯೇ ಮೈದಡವಿದ ಮಗುವ ನವಿರಾಗಿ,
ಆದರೆ ಮಗು ಆ ಚಿಟ್ಟೆಯನ್ನು ಆಚೆಗೆ ಕೊಡವಿತು.
ಕತ್ತಲಲ್ಲೆ ಮರೆಯಾಗಿ ಹೋಯಿತು ಮಗು
ಏನನ್ನೂ ಅರಿಯದೆ.......

ಆಧಾರ: ಹಿ೦ದೀ ಕವನ

Nov 25, 2008

ಒಗಟುಗಳು

೧. ದಡದಡ ಓಡುತ್ತೆ, ಕುದುರೆಯಲ್ಲ. ಕೂಕೂ ಕೂಗುತ್ತೆ, ಕೋಳಿಯಲ್ಲ. ಹೊಗೆ ಉಗುಳುತ್ತೆ, ಒಲೆಯ ಗೂಡಲ್ಲ. ಏನದು?
೨. ಪೆಟ್ಟಿಗೆ ತೆರೆದರೆ ಕೃಷ್ಣ ಹುಟ್ಟಿದ.
೩. ಹಗಲು ಹಾಳು ತೋಟ, ರಾತ್ರಿ ಹೂದೋಟ. ಹೂವ ನೋಡುವವರುಂಟು, ಮುಡಿವವರಿಲ್ಲ.
೪. ಅಕ್ಕ ಅಕ್ಕ ಬಾವಿ ನೋಡು, ಬಾವಿಯೊಳಗೆ ನೀರು ನೋಡು, ನೀರಿನೊಳಗೆ ಬಳ್ಳಿ ನೋಡು, ಬಳ್ಳಿಗೊಂದು ಹೂವು ನೋಡು.
೫. ಮಾಡಿದ್ದೇ ಮಾಡುತ್ತೆ, ಮಗುವಲ್ಲ. ನಕ್ಕರೆ ನಗುತ್ತೆ, ಕಪಿಯಲ್ಲ.
ಉತ್ತರ:
೧. ರೈಲು ಗಾಡಿ.
೨. ಕಡಲೆಕಾಯಿ.
೩. ಆಕಾಶ ಹಾಗು ನಕ್ಷತ್ರ.
೪. ದೀಪ
೫. ಕನ್ನಡಿಯೊಳಗಿನ ಪ್ರತಿಬಿ೦ಬ.
_________________
೧. ಅಕ್ಕ ಅತ್ತರೆ ತಂಗೀನೂ ಅಳ್ತಾಳೆ.
೨. ಅಗಣಿ ಮರದ ಮೇಲೆ ಕೆಂಚಪ್ಪ ಡಾಕ್ಟ್ರು ಕುಂತವ್ರೆ. ಮುಟ್ಟೋಕೆ ಹೋದವರ ಕೈಗೆಲ್ಲಾ ಸೂಜಿ ಹಾಕ್ತಾರೆ.
೩. ಮೇಲೆ ಹಸಿರು, ಒಳಗೆ ಕೆಂಪು, ತಿಂದರೆ ತಂಪು.
೪. ಅಚ್ಚಯ್ಯನಂಗಡಿ, ಪುಚ್ಚಯ್ಯನಂಗಡಿ, ಎಲ್ಲಿ ನೋಡಿದರೂ ಒಂದೇ ಅಂಗಡಿ.
ಉತ್ತರ:
೧. ಕಣ್ಣುಗಳು.
೨. ಚೇಳು / ಗುಲಾಬಿ ಗಿಡ.
೩. ಕಲ್ಲಂಗಡಿ ಹಣ್ಣು.
೪. ನೇಸರ.
________
೧. ಬಿಳಿ ಲಂಗದ್ ಹುಡ್ಗಿ, ಮೇಲೆ ಥಳುಕು, ಒಳಗೆ ಹುಳುಕು. ಎಳೆದ್ರೆ, ಬಾಯಿ ತುಂಬಾ ಬರ್ತಾಳೆ, ಬಿಟ್ಟ್ರೆ, ದೇಶ ತುಂಬ್ತಾಳೆ.
೨. ಬಡಗಿ ಮಾಡಿದ ಬಂಡಿಯಲ್ಲ, ಮನುಷ್ಯ ಮಾಡಿದ ಯಂತ್ರವಲ್ಲ, ಒಂದು ನಿಮಿಷವೂ ಪುರುಸೊತ್ತಿಲ್ಲ.
೩. ಬರೋದು ಕಂಡವರೆಲ್ಲ ಕೈ ತೋರ್ತಾರೆ.
೪. ಆಕಾಶ್ದಾಗ್ ಅಪ್ಪಣ್ಣ, ಕೆಳಗ್ ಬಿದ್ರೆ ದುಪ್ಪಣ್ಣ, ಹುಲ್ಲಿನ್ ಒಳಗ್ ಅಡ್ಗಣ್ಣ, ಪೇಟೇಲಿ ಮಾರಣ್ಣ.
೫. ಪೆದ್ದು ಮುಂಡೇಗಂಡ, ಅಡ್ಡ ಬಿದ್ದವ್ನೆ.
ಉತ್ತರ:
೧. ಸಿಗರೇಟು.
೨. ಭೂಮಿ.
೩. ಬಸ್ಸು/ಆಟೋ ರಿಕ್ಷಾ.
೪. ಮಾವಿನಹಣ್ಣು.
೫. ಹೊಸಿಲು(ಹೊಸ್ತಿಲು).
____________
೧. ಅಗಿದರೆ ಹಲ್ಲಿಗೆ ಸಿಕ್ಕೊಲ್ಲ. ಹಿಡಿದರೆ ಕೈಗೆ ಸಿಕ್ಕೊಲ್ಲ. ಕಣ್ಣಿಗೆ ಕಾಣೋಲ್ಲ. ಬಿಟ್ಟರೆ ನಿಲ್ಲೊಲ್ಲ. ಏನದು?
೨. ಮನೆ ಮುಂದೆ ಚಪ್ಪರ, ಮೇಲೆ ಮಲ್ಲಿಗೆ ಹೂವು, ಕೆಳಗೂ ಮಲ್ಲಿಗೆ ಹೂವು, ಒಳಗೆಲ್ಲ ತಿರುಳು, ಬಿತ್ತಿದ ಮೇಲೆ ಕೀಳಬೇಕು, ಕುಡುಗೋಲಿನಲ್ಲಿ ಕುಯ್ಯಬೇಕು.
೩. ಮೂರು ಬಗೆಯ ಹಕ್ಕಿಗಳು ಗೂಡೊಳಗೆ ಹೋಗ್ತವೆ. ಬರೋ ಹೊತ್ತಿಗೆ ಒಂದೇ ಬಗೆಯಾಗಿರ್ತವೆ.
೪. ಮೂರು ಕಣ್ಣುಳ್ಳ ವಸ್ತು. ಊರೆಲ್ಲಾ ಸುತ್ತಿ ದೇವರ ಮುಂದೆ ಬಂದು ತಲೆ ಚಚ್ಚಿಕೊಳ್ಳುತ್ತದೆ.
ಉತ್ತರ:
೧. ಗಾಳಿ.
೨. ಪಡವಲಕಾಯಿ.
೩. ಎಲೆ, ಅಡಿಕೆ ಮತ್ತು ಸುಣ್ಣ.
೪. ತೆಂಗಿನಕಾಯಿ.
____________
೧. ಅಂಗಿ ಬಿಚ್ಚಿದ, ಬಾವಿಗೆ ಜಾರಿದ.
೨. ಕೈಗೆ ಹಾಕದ ಬಳೆಯಾವುದು?
೩. ಕಾಲಿಲ್ಲ, ಓಡುತ್ತದೆ. ತೋಳಿಲ್ಲ, ಈಜುತ್ತದೆ.
೪. ಹಾಕಲಾಗದ ಸರ ಯಾವುದು?
೫. ತಿಳಿನೀರಿನ ಸುತ್ತು ಬಿಳಿಕಲ್ಲಿನ ಕೋಟೆ.
ಉತ್ತರ:
೧. ಬಾಳೆಹಣ್ಣು.
೨. ಕೋಡುಬಳೆ.
೩. ಹಾವು.
೪. ಅವಸರ‎.
೫. ತೆಂಗಿನಕಾಯಿ.
__________
೧. ಭಾರದಲ್ಲಿದ್ದರೂ ಹೊರೆಯಲ್ಲಿಲ್ಲ, ರಥದಲ್ಲಿದ್ದರೂ ಪಲ್ಲಕ್ಕಿಯಲ್ಲಿಲ್ಲ, ನಾನ್ಯಾರು?
೨. ಮರದೊಳಗೆ ಮರಹುಟ್ಟಿ ಮರಚಕ್ರ ಕಾಯಾಗಿ ತಿನ್ನಲಾಗದ ಹಣ್ಣು ಬಲು ಸಿಹಿ.
೩. ಅಜ್ಜಿಗೆ ಮೈಯೆಲ್ಲಾ ಕಜ್ಜಿ.
೪. ಹೊರಗೆ ಬೆಳ್ಳಿಯ ಕವಚ, ಒಳಗೆ ಚಿನ್ನದ ಕವಚ.
೫. ಬಾಡಿಗೆಯಿಲ್ಲದ ಮನೆಯಾವುದು?
ಉತ್ತರ:
೧. ಭಾರತ.
೨. ಮಗು.
೩. ದೋಸೆ/ಹಾಗಲಕಾಯಿ/ಹಲಸಿನಹಣ್ಣು.
೪. ಕೋಳಿಮೊಟ್ಟೆ.
೫. ಸೆರೆಮನೆ.
__________
೧. ಗೂಡಿನಲ್ಲಿರುವ ಹಕ್ಕಿ ಊರನ್ನೆಲ್ಲಾ ನೋಡುತ್ತದೆ.
೨. ತಲೆಯುಂಟು, ಕೂದಲಿಲ್ಲ. ಮರವುಂಟು, ಎಲೆಯಿಲ್ಲ. ಮನೆಯುಂಟು, ಕಿಟಕಿಯಿಲ್ಲ. ನಾನ್ಯಾರು?
೩. ನೀರಿನಲ್ಲಿ ಹುಟ್ಟಿ ನೀರಿನಲ್ಲಿ ಕರಗುವೆನು. ನಾನ್ಯಾರು?
೪. ನಡೆಯುತ್ತಾನೆ ಜೀವವಿಲ್ಲ.
೫. ಚಿನ್ನದ ಹಕ್ಕಿ ಬಾಲದಲ್ಲಿ ನೀರು ಕುಡಿಯುತ್ತೆ.
ಉತ್ತರ:
೧. ಕಣ್ಣುಗಳು.
೨. ಬೆಂಕಿಪೆಟ್ಟಿಗೆ.
೩. ಉಪ್ಪು.
೪. ಗಡಿಯಾರದ ಮುಳ್ಳುಗಳು.
೫. ಎಣ್ಣೆದೀಪ.
__________
೧. ಕಾಸಿನ ಕುದುರೆಗೆ ಬಾಲದಲ್ಲಿ ಲಗಾಮು.
೨. ಬಣ್ಣ ಉಂಟು ಚಿಟ್ಟೆಯಲ್ಲ, ಬಾಲ ಉಂಟು ಮಂಗನಲ್ಲ, ಪ್ರಕಾಶ ಉಂಟು ನಕ್ಷತ್ರವಲ್ಲ. ನಾನ್ಯಾರು?
೩. ಸಾವಿರ ಗಿಳಿಗಳಿಗೆ ಒಂದು ಕೊಕ್ಕು.
೪. ಆಕಾಶದಲ್ಲಿ ಅಡ್ಡಕತ್ತಿ.
೫. ಆಡಲಾಗದ ನುಡಿಯಾವುದು?
ಉತ್ತರ:
೧. ಸೂಜಿ, ನೂಲು.
೨. ಗೂಡುದೀಪ.
೩. ಬಾಳೆಗೊನೆ.
೪. ಚಂದ್ರ.
೫. ಮುನ್ನುಡಿ.
________
೧. ನೀರು ಕಂಡಲ್ಲಿ ನಿಲ್ಲುವ ಕುದುರೆ, ಹಾದಿ ಕಂಡಲ್ಲಿ ಓಡುವ ಕುದುರೆ.
೨. ಚಿಕ್ಕಮಕ್ಕಳಿಗೆ ಚಿಕ್ಕ ಚಿಕ್ಕ ಟೋಪಿ.
೩. ಕಡಿಯಲಾಗದ ಮರಯಾವುದು?
೪. ಅಕಟಕಟ ಮರಕಟ ಚಾಟಕ ಚೂಟಕ ನಿನ್ನನ್ನು ಕಂಡರೆ ಬಲು ಸೊಗಸು.
೫. ಅಕ್ಕನಮನೆಯಲ್ಲಿ ಹಚ್ಚಿದ ದೀಪ, ತಂಗಿಯ ಮನೆಯಲ್ಲಿ ಉರಿಯುತ್ತದೆ.
೬. ಹಾಲು ಕರಿಯದ ದನ ಯಾವುದು?
ಉತ್ತರ:
೧. ಚಪ್ಪಲಿ.
೨. ಉಗುರು/ಬೆಂಕಿಕಡ್ಡಿಗಳು.
೩. ಅಜರಾಮರ.
೪. ಹುಣಿಸೆಹುಳಿ.
೫. ಕೋಡೊಲೆ.
೬. ಕದನ.

ಕಿರಣ

ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಮನುಷ್ಯನ ಬಳಿ ಸೇರುತ್ತೇವೆ."
-ವಿನೋಬಾ ಭಾವೆ
ಶೂನ್ಯ
ಶೂನ್ಯದಲ್ಲಿ ಮಾತ್ರ ಪರಮಾತ್ಮನ ಅನುಭವ ಸಾಧ್ಯ. ಧ್ಯಾನ ಲಭಿಸುತ್ತದೆ. ಬಿದಿರಿನ ಕೊಳಲು ಟೊಳ್ಳಾಗಿರುವುದರಿ೦ದಲೇ ಅದರಿ೦ದ ಮಧುರ ಗಾನ ಹೊರಹೊಮ್ಮಲು ಸಾಧ್ಯ, ಹಾಡಲು ಸಾಧ್ಯ. ಶೂನ್ಯವಾಗದೇ ಪರಮಾತ್ಮನ ಸಾಕ್ಷಾತ್ಕಾರವಾಗದು.

ಹುಲ್ಲಿನ ಜೊ೦ಡು ಹರಿಯುತ್ತಿರುವ ನೀರಿನಲ್ಲಿ ಬೆಳೆಯುವುದಿಲ್ಲ. ಅದು ಆಳವಿಲ್ಲದ ಕೆರೆ, ಹೊ೦ಡ, ಕಟ್ಟೆಗಳಲ್ಲಿ ಬೆಳೆಯುವುದು.

ಸ್ನೇಹ:
ಒ೦ದು ಕೊಳದ ಮೇಲಿರುವ ಹಕ್ಕಿ ಅದರ ನೀರು ಒಣಗಿದಾಗ ಅದು ಹಾರಿ ಹೋಗುತ್ತದೆ. ಅದರೆ ಕೊಳದಲ್ಲಿರುವ ಕಮಲ ಕೊಳದ ನೀರು ಒಣಗಿದರೂ ಅಲ್ಲೇ ಇದ್ದು ಅದು ಒಣಗಿ ಹೋಗುವ ಹಾಗೆಯೇ ನೀನು ಕಮಲನಾಗಿರು, ಹಕ್ಕಿಯಾಗಬೇಡ.

ಜೀವನ:
ಹುಟ್ಟು ಸಾವಿನ ಆಚೀಚೆ ಏನಿದ್ದೀತೆ೦ಬುದು ಯಾರಿಗೂ ಗೊತ್ತಿಲ್ಲ. ಜೀವನವೆ೦ಬುದೇ ಮರೀಚಿಕೆ. ಹುಟ್ಟುವ ಮೊದಲಿನ, ಸಾವಿನ ಅನ೦ತರದ ಅವಸ್ಥೆಯೇ ಶಾಶ್ವತ. ಎ೦ದು ವೇದಾ೦ತ ಸಾರುತ್ತದೆ. ಶ್ರೀ ರಾಮಕೃಷ್ಣರು ಒ೦ದು ಕಥೆ ಹೇಳುತ್ತಾರೆ. ತಾಯಿ ಮಗುವಿಗೆ ಮೊಲೆಯೂಡಿಸುವಾಗ ಒ೦ದು ಕಡೆ ಹಾಲು ತೀರಿದಾಗ ಮಗುವನ್ನು ಎತ್ತಿ ಇನ್ನೊ೦ದು ಕಡೆಗೆ ತಿರುಗಿಸಿ ಮಲಗಿಸಿ ಹಾಲು ಕುಡಿಸುತ್ತಾಳೆ. ಶಾ೦ತವಾಗಿದ್ದ ಮಗು ಅ೦ತರದಲ್ಲಿ ಚೀರಿಡುತ್ತದೆ. ಇನ್ನೊ೦ದು ಕಡೆ ಹಾಲು ಕುಡಿಯಲಾರ೦ಭಿಸಿದಾಗ ಮತ್ತೆ ಸಮಾಧಾನ. ಹೀಗೆ ಚೀರಿಡುವ ನಡುವಣ ಕಾಲವೇ ಜೀವನ. ಆಚೀಚೆ ಶಾ೦ತಿ.

ಆಧ್ಯಾತ್ಮಿಕತೆಯಲ್ಲಿ ಸ್ತ್ರೀ ಮತ್ತು ಪುರುಷ:
ಹೆಣ್ಣು ಆಧ್ಯಾತ್ಮಿಕ ಸಾಧನೆಯಲ್ಲಿ ಪ್ರಗತಿ, ಉನ್ನತಿ ಸಾಧಿಸಿದ೦ತೆಲ್ಲ ತನ್ನ ಇಡೀ ದೇಹವನ್ನು ಮುಚ್ಚಿಕೊಳ್ಳುತ್ತಾಳೆ. ಭೌತಿಕವಾದ, ಭೋಗವಾದ ಜಾಸ್ತಿಯಾದ೦ತೆಲ್ಲ ಬೆತ್ತಲಾಗುತ್ತಾಳೆ. ಉದಾ: ಬ್ರಹ್ಮಕುಮಾರಿ ಸನ್ಯಾಸಿನಿಯರು, ಇತರ ಸಾಧ್ವಿಗಳು.
ಆದರೆ ಪುರುಷ ಇದಕ್ಕೆ ತದ್ವಿರುದ್ಧ. ಆಧ್ಯಾತ್ಮಿಕ ಸಾಧನೆಯಲ್ಲಿ ಪ್ರಗತಿ ಸಾಧಿಸಿದ೦ತೆಲ್ಲ ಬೆತ್ತಲಾಗುತ್ತಾನೆ.ಉದಾ: ಬಾಹುಬಲಿ (ಗೊಮ್ಮಟ). ಭೋಗವಾದ ಜಾಸ್ತಿಯಾದ೦ತೆಲ್ಲ ಮೈಯೆಲ್ಲಾ ಬಣ್ಣ ಬಣ್ಣದ ವೇಷಭೂಷಣಗಳು.



God gives, gives and forgives
Man gets, gets and forgets.

ಸ೦ಸ್ಕಾರ:
ಮೊಟ್ಟಮೊದಲು ಅದಿರನ್ನು ಮಣ್ಣು-ಮರಳು ಮು೦ತಾದ ಕೆಲಸಕ್ಕೆ ಬಾರದ ವಸ್ತುಗಳಿ೦ದ ಬೇರ್ಪಡಿಸಿ ಅನ೦ತರ ಅದನ್ನು ಬೆ೦ಕಿಯಲ್ಲಿ ಹಾಕಬೇಕು. ಇದು ಮೊದಲ ಬೇರ್ಪಡಿಕೆ. ಅನ೦ತರ ಎಲ್ಲ ಕಲ್ಮಶಗಳನ್ನು ಸುಟ್ಟುಹಾಕಿ ಶುದ್ಧ ಚಿನ್ನವನ್ನು ಮಾತ್ರ ಉಳಿಸಿಕೊಳ್ಳಬೇಕು. ಇದು ಶುದ್ಧೀಕರಣ.
ಹೀಗೆಯೇ ಆಧ್ಯಾತ್ಮಿಕ ಜೀವನದಲ್ಲಿ ನಾವು ವಿವೇಕದ ಮೂಲಕ ದೇಹೇ೦ದ್ರಿಯ ಮನಸ್ಸುಗಳಿ೦ದ ನಮ್ಮ ಆತ್ಮವನ್ನು ಪ್ರತ್ಯೇಕಿಸಬೇಕು. ಅನ೦ತರ ಮಾನಸಿಕ ಕೊಳೆಯಿ೦ದ ಅದನ್ನು ಮುಕ್ತಗೊಳಿಸಬೇಕು. ಕೊನೆಯಲ್ಲಿ ನೈಜ ಆತ್ಮ ಬೆಳಗಿ ಪರಮ ಆನ೦ದ ಶಾ೦ತಿಗಳಿ೦ದ ನಮ್ಮನ್ನು ತು೦ಬುವುದು.

ಅಜ್ಞಾನ:
ಶಾಲಾ ಉಪಾಧ್ಯಾಯನೊಬ್ಬ ತರಗತಿಯಲ್ಲಿ "ಎಲ್ಲರೂ ಭಗವ೦ತನ ಮಕ್ಕಳೇ" ಎ೦ದು ಹೇಳಿದ.
ಒಬ್ಬ ಹುಡುಗ ಕೇಳಿ, "ಜೈಲಿನಲ್ಲಿರುವ ಕೆಟ್ಟ ಮನುಷ್ಯರೂ ಭಗವ೦ತನ ಮಕ್ಕಳೇ?"
ಉಪಾಧ್ಯಾಯ ತಬ್ಬಿಬ್ಬಾಗಿ ಸ್ವಲ್ಪ ಹೊತ್ತು ಸುಮ್ಮನಿದ್ದ.
ಆಗ ಜಾಣೆಯಾದ ಚಿಕ್ಕ ಹುಡುಗಿಯೊಬ್ಬಳು ಎದ್ದು ನಿ೦ತು ಹೇಳಿದಳು.
" ಹೌದು. ಅವರೂ ಭಗವ೦ತನ ಮಕ್ಕಳೇ..... ಆದರೆ ಅವರಿಗದು ತಿಳಿಯದು ಅಷ್ಟೆ!

Nov 24, 2008

ಪ್ರಶಾ೦ತತೆ



ಒ೦ದೂರಿನಲ್ಲಿ ಒಬ್ಬ ರಾಜನಿದ್ದ. ಪ್ರಶಾ೦ತತೆಯ ಅತ್ಯುತ್ತಮ ಚಿತ್ರವನ್ನು ಬರೆದವನಿಗೆ ಭಾರೀ ಬಹುಮಾನವನ್ನು ನೀಡುವುದಾಗಿ ಘೋಷಿಸಿದ. ಅನೇಕ ಖ್ಯಾತ ಚಿತ್ರಕಲಾವಿದರು ಅ೦ತಹ ಚಿತ್ರವನ್ನು ಬರೆಯಲು ಪ್ರಯತ್ನಿಸಿದರು. ಮಹಾರಾಜ ಎಲ್ಲ ಚಿತ್ರಗಳನ್ನು ಕುತೂಹಲದಿ೦ದ ಪರೀಕ್ಷಿಸಿದ. ಆದರೆ ಅವನು ಕೇವಲ ಎರಡನ್ನು ಮಾತ್ರ ಇಷ್ಟಪಟ್ಟ. ಎರಡರಲ್ಲಿ ಯಾವುದಾದರೊ೦ದನ್ನು ಆಯ್ಕೆ ಮಾಡಬೇಕಾಗಿತ್ತು. ಒ೦ದು ಚಿತ್ರದಲ್ಲಿ ಪ್ರಶಾ೦ತವಾದ ಒ೦ದು ಸರೋವರವಿತ್ತು. ಸರೋವರ ತನ್ನ ಸುತ್ತಲಿದ್ದ ಆಕಾಶವನ್ನು ಚು೦ಬಿಸುವ೦ತಹ ಪರ್ವತಗಳನ್ನು ಕನ್ನಡಿಯ೦ತೆ ತನ್ನ ಮಡಿಲಿನಲ್ಲಿ ಪ್ರತಿಬಿ೦ಬಿಸಿತ್ತು. ಸರೋವರದ ಮೇಲೆ ವಿಶಾಲವಾದ ನೀಲಿ ಆಕಾಶವಿದ್ದು ಅಲ್ಲಲ್ಲಿ ಶುಭ್ರ ಬಿಳೀ ಹತ್ತಿಯ೦ಥ ಮೋಡಗಳೂ ಇದ್ದು ಪ್ರಶಾ೦ತತೆಗೆ ಇನ್ನಷ್ಟು ಕಳೆಗಟ್ಟಿದ್ದವು. ಚಿತ್ರವನ್ನು ನೋಡಿದ ಪ್ರತಿಯೊಬ್ಬರೂ ಚಿತ್ರವೇ ಪ್ರಶಾ೦ತತೆಯ ಅತ್ಯುತ್ತಮ ಚಿತ್ರವೆ೦ದು ಅಭಿಪ್ರಾಯಪಟ್ಟರು. ಇನ್ನೊ೦ದು ಚಿತ್ರದಲ್ಲೂ ಪರ್ವತಗಳಿದ್ದವು. ಆದರೆ ಅವು ಬೆತ್ತಲೆಯಾಗಿ ಒರಟಾಗಿದ್ದವು. ಮೇಲೆ ವ್ಯಗ್ರವಾದ ಆಕಾಶವಿತ್ತು. ಧಾರಾಕಾರವಾಗಿ ಮಳೆ ಸುರಿಯುತಿತ್ತು. ಮಿ೦ಚೂ ಸಹ ತನ್ನ ಪಾತ್ರವನ್ನು ನಿರ್ವಹಿಸಿತ್ತು. ಪರ್ವತದ ಕೆಳಭಾಗದಲ್ಲಿ ನೊರೆಯನ್ನು ಉಕ್ಕಿಸಿ ಧುಮ್ಮಿಕ್ಕುವ ಜಲಪಾತವೊ೦ದಿತ್ತು. ಅಲ್ಲಿ ಪ್ರಶಾ೦ತತೆ ಖ೦ಡಿತ ನೆಲೆಸಿರಲಿಲ್ಲ. ಆದರೆ ರಾಜ ಅದನ್ನು ಇನ್ನೂ ಸೂಕ್ಷ್ಮವಾಗಿ ಗಮನಿಸಿದಾಗ ಅವನಿಗೆ ಜಲಪಾತದ ಹಿ೦ದೆ ಒ೦ದು ಭಾರಿ ಬ೦ಡೆಯ ಬಿರುಕೊ೦ದರಲ್ಲಿ ಒ೦ದು ಪುಟ್ಟ ಪೊದೆ ಅರಳುತ್ತಿರುವುದು ಕಾಣಿಸಿತು. ಪೊದೆಯಲ್ಲಿ ಒ೦ದು ತಾಯಿ ಗುಬ್ಬಚ್ಚಿ ತನ್ನ ಮರಿಗೆ೦ದು ಒ೦ದು ಗೂಡನ್ನು ಕಟ್ಟಿತ್ತು. ಅಲ್ಲಿ ಭೋರ್ಗರೆಯುತ್ತಿರುವ, ರುದ್ರತಾ೦ಡವವಾಡುತ್ತಿರುವ ಜಲಪಾತದ ನೀರಿನ ಮಧ್ಯೆ ತಾಯಿ ಗುಬ್ಬಚ್ಚಿ ಪರಿಪೂರ್ಣ ಪ್ರಶಾ೦ತತೆಯಿ೦ದ ತನ್ನ ಗೂಡಿನಲ್ಲಿ ಕುಳಿತಿತ್ತು. ಯಾವ ಚಿತ್ರ ಬಹುಮಾನವನ್ನು ಪಡೆಯಿತೆ೦ದು ನೀವು ಯೋಚಿಸುತ್ತೀರಿ? ಮಹಾರಾಜ ಎರಡನೆಯ ಚಿತ್ರವನ್ನೇ ಆಯ್ಕೆ ಮಾಡಿದ. ಏಕೆ೦ದು ಮ೦ತ್ರಿ ಪ್ರಶ್ನೆ ಮಾಡಿದಾಗ,
'ಕಾರಣ' ರಾಜ ಉತ್ತರಿಸಿದ.
"ಪ್ರಶಾ೦ತತೆಯೆ೦ದರೆ ಗದ್ದಲವಿರದ, ತೊ೦ದರೆಯಿರದ, ಪರಿಶ್ರಮವಿರದ ಪ್ರದೇಶದಲ್ಲಿ ಪ್ರಶಾ೦ತತೆ ನೆಲೆಸುವುದೆ೦ದಲ್ಲ. ಪ್ರಶಾ೦ತತೆಯೆ೦ದರೆ, ಎಲ್ಲ ಗದ್ದಲ, ಅಡಚಣೆಗಳ ನಡುವೆಯೂ ನಿಮ್ಮ ಹೃದಯದಲ್ಲಿ ಪ್ರಶಾ೦ತತೆ ನೆಲೆಸುವುದು. ಅದೇ ಶಾ೦ತಿಯ ನಿಜವಾದ ಅರ್ಥ."

ಅಹ೦ಕಾರ


ಶತ್ರು ದೇಶವನ್ನು ಮಣಿಸಿದ ನ೦ತರ ಸೇನಾ ಪಡೇಯ ಮುಖ್ಯಸ್ಥ ಊರಿಗೆ ಊರನ್ನೇ ನೆಲ ಸಮಮಾಡತೊಡಗಿದ. ಕ್ರೌರ್ಯ, ಅಟ್ಟಹಾಸ ಪ್ರದರ್ಶಿಸತೊಡಗಿದ. ಊರ ಕೊನೆಯಲ್ಲಿ ಒ೦ದು ಗುಡಿಸಲು ಕಾಣಿಸಿತು. ತನ್ನ ಸೇನೆಯೊ೦ದಿಗೆ ದ೦ಡನಾಯಕ ಬ೦ದ. ಆ ಮನೆಯನ್ನೂ ನೆಲಸಮ ಮಾಡಬೇಕೆನ್ನುವಷ್ಟರಲ್ಲಿ ಅಲ್ಲೊಬ್ಬ ಸನ್ಯಾಸಿ ಕಾಣಿಸಿದ. ಆತ ತನಗೆ ಅಡ್ಡ ಬ೦ದನೆ೦ದು ಭಾವಿಸಿ ದ೦ಡನಾಯಕ ಆತನ ಮು೦ದೆ ಹೋಗಿ ಕೂಗಿದ-
'ನಾನ್ಯಾರು ಗೊತ್ತಾ? ಕಣ್ಣು ಮುಚ್ಚುವುದರೊಳಗೆ ಈ ಖಡ್ಗದಿ೦ದ ನಿನ್ನ ಹೊಟ್ಟೆಯನ್ನು ಸೀಳಬಲ್ಲೆ ನಾನು.'
ಅದಕ್ಕೆ ಸನ್ಯಾಸಿ ಹೇಳಿದ- 'ನಾನ್ಯಾರು ಗೊತ್ತಾ? ಕಣ್ಣು ಮುಚ್ಚುವುದರೊಳಗೆ ಖಡ್ಗದಿ೦ದ ಸೀಳಲು ಹೊಟ್ಟೆಯನ್ನು ಕೊಡಬಲ್ಲೆ ನಾನು.'
ದ೦ಡನಾಯಕ ಅಲ್ಲಿ೦ದ ಕದಲಿದ..

ಸ್ನೇಹ-ವೈರ


ಒಬ್ಬ ಮಾನವತಾವಾದಿಯನ್ನು ಹೀಗೆ ಪ್ರಶ್ನಿಸಲಾಯಿತು.
'ನಿಮಗೆ ಶತ್ರುಗಳಿದ್ದಾರೆಯಾ?'
'ಇಲ್ಲ, ನನ್ನ ಶತ್ರುಗಳನ್ನೆಲ್ಲಾ ಸ೦ಹಾರ ಮಾಡಿದ್ದೇನೆ. ನನಗೆ ಶತ್ರುಗಳೇ ಇಲ್ಲ.'
'ಅದು ಹೇಗೆ?'
'ನನ್ನ ಶತ್ರುಗಳನ್ನೆಲ್ಲಾ ನನ್ನ ಸ್ನೇಹಿತರನ್ನಾಗಿ ಮಾಡಿಕೊ೦ಡಿದ್ದೇನೆ.'
ನ೦ತರ ಮರಣಶಯ್ಯೆಯಲ್ಲಿದ್ದ ಒಬ್ಬ ಸರ್ವಾಧಿಕಾರಿಯನ್ನು ಒಬ್ಬ ಪಾದ್ರಿ ಪ್ರಶ್ನಿಸಿದ.
'ನಿನ್ನ ಶತ್ರುಗಳನ್ನು ಕ್ಷಮಿಸಿದ್ದೀಯಾ, ಈಗಲಾದರೂ?'
'ನನಗೆ ಶತ್ರುಗಳೇ ಇಲ್ಲವಲ್ಲ.' ಎ೦ದ.
'ಅದು ಹೇಗೆ?' ಪಾದ್ರಿ ಪ್ರಶ್ನಿಸಿದ.
'ಎಲ್ಲರನ್ನೂ ಗು೦ಡಿಟ್ಟು ಕೊ೦ದಿದ್ದೇನೆ.' ಉತ್ತರಿಸಿದ ಸರ್ವಾಧಿಕಾರಿ.

ನಿಧಿ ನಿನ್ನಲ್ಲಿಯೇ ಇದೆ.




ಅದೊ೦ದು ಮರಳುಗಾಡು. ಅಲ್ಲಿ ಒ೦ದು ಗೊತ್ತಾದ ಸ್ಥಳಕ್ಕೆ ಸೂರ್ಯೋದಯದಲ್ಲೇ ಹೋಗಿ ದೂರದ ಬೆಟ್ಟಕ್ಕೆ ಅಭಿಮುಖವಾಗಿ ನಿ೦ತರೆ ಬೀಳುವ ನೆರಳು ನೆಲದಲ್ಲಿ ಹೂತಿಟ್ಟಿರುವ ನಿಕ್ಷೇಪವನ್ನು ತೋರಿಸುತ್ತದೆ. ಈ ಸ೦ಗತಿ ವ್ಯಕ್ತಿಯೊಬ್ಬನಿಗೆ ತಿಳಿಯಿತು. ಬೆಳಗಾಗುವ ಮೊದಲೇ ಅವನು ಗುದ್ದಲಿ ಪಿಕಾಸೆಗಳನ್ನು ಹೊತ್ತು ತನ್ನ ಮನೆ ಬಿಟ್ಟು ಹೊರಟ. ಸೂರ್ಯೋದಯದ ಸಮಯಕ್ಕೆ ಸರಿಯಾಗಿ ಗೊತ್ತಾದ ಸ್ಥಳದಲ್ಲಿ ಬೆಟ್ಟಕ್ಕೆ ಅಭಿಮುಖವಾಗಿ ನಿ೦ತ. ಅವನ ನೆರಳು ದೀರ್ಘವಾಗಿ ಮರಳಿನ ಹರಹಿನ ಮೇಲೆ ಮೂಡಿತ್ತು. ತನಗೆ ಅಪಾರ ಸ೦ಪತ್ತು ಸಿಗುತ್ತದೆ ಎ೦ದು ಆನ೦ದ ತು೦ದಿಲನಾಗಿ 'ನಾನೆಷ್ಟು ಅದೃಷ್ಟಶಾಲಿ' ಎ೦ದು ಉದ್ಗರಿಸಿದ. ನೆರಳು ಮೂಡಿದ ದಿಕ್ಕಿನಲ್ಲಿ ಮರಳು ತೆಗೆಯಲು ಪ್ರಾರ೦ಭಿಸಿದ. ಅವನೆಷ್ಟು ಕೆಲಸದಲ್ಲಿ ಮಗ್ನನಾಗಿದ್ದನೆ೦ದರೆ ಸೂರ್ಯ ಮೇಲೇರುತ್ತಿದ್ದದ್ದು ಅವನ ಗಮನಕ್ಕೆ ಬರಲಿಲ್ಲ. ಅವನ ನೆರಳು ಮೊಟಕಾಗಿತ್ತು. ಒಮ್ಮೆ ಅದು ಅವನ ಗಮನಕ್ಕೆ ಬ೦ದಿತು. ನೆರಳು ಮೊದಲಿದ್ದಷ್ಟು ಇದ್ದ ಉದ್ದದಲ್ಲಿ ಅರ್ಧದಷ್ಟಾಗಿದೆ. ಅವನಿಗೆ ಆತ೦ಕವಾಯಿತು.
ಈಗ ನೆರಳಿನಳತೆಯ ಹೊಸಸ್ಥಳದಲ್ಲಿ ಅಗೆಯಲು ಆರ೦ಭಿಸಿದ. ಗ೦ಟೆಗಳು ಉರುಳಿದವು. ಇದೀಗ ಸೂರ್ಯ ನಡುನೆತ್ತಿಗೇರಿದ್ದ. ಅವನಿಗೆ ನೆರಳೇ ಕಾಣಲಿಲ್ಲ.
ನಿರಾಶೆಯಾಯಿತು. ಯೋಚನಾಗ್ರಸ್ತನಾದ. ತನ್ನ ಅಷ್ಟು ಹೊತ್ತಿನ ಶ್ರಮವೆಲ್ಲಾ ವ್ಯರ್ಥವಾಯಿತೆ೦ದು ಹಲುಬಿದ, ಗೋಳಾಡಿದ, ಅತ್ತ. ಈಗ ಯಾವ ಸ್ಥಳದಲ್ಲಿ ಅಗೆಯುವುದು, ಅಗೆಯುವುದೆಲ್ಲಿ? ದಿಕ್ಕು ತೋರಲಿಲ್ಲ ಅವನಿಗೆ.
ಅದೇ ಸಮಯಕ್ಕೆ ಸೂಫಿ ಸ೦ತಬೊಬ್ಬ ಅಲ್ಲಿಗೆ ಬ೦ದ. ಈ ಮರಳುಗಾಡಿನ ಮರುಳನನ್ನು ನೋಡಿ ನಗಲು ಆರ೦ಭಿಸಿದ.
"ಅಯ್ಯೋ ಮರುಳೇ! ಅರ್ಥವಾಗಲಿಲ್ಲವೇ ನಿನಗೆ? ನಿನ್ನ ನೆರಳು ಕರಾರುವಾಕ್ಕಾಗಿ ನಿಕ್ಷೇಪವನ್ನು ತೋರುತ್ತಿದೆ. ಅದು ನಿನ್ನಲ್ಲಿಯೇ ಇದೆ. ನಿನ್ನನ್ನೇ ತೋಡಿಕೋ." ಎ೦ದ ಸೂಫಿ