Nov 25, 2008

ಕಿರಣ

ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಮನುಷ್ಯನ ಬಳಿ ಸೇರುತ್ತೇವೆ."
-ವಿನೋಬಾ ಭಾವೆ
ಶೂನ್ಯ
ಶೂನ್ಯದಲ್ಲಿ ಮಾತ್ರ ಪರಮಾತ್ಮನ ಅನುಭವ ಸಾಧ್ಯ. ಧ್ಯಾನ ಲಭಿಸುತ್ತದೆ. ಬಿದಿರಿನ ಕೊಳಲು ಟೊಳ್ಳಾಗಿರುವುದರಿ೦ದಲೇ ಅದರಿ೦ದ ಮಧುರ ಗಾನ ಹೊರಹೊಮ್ಮಲು ಸಾಧ್ಯ, ಹಾಡಲು ಸಾಧ್ಯ. ಶೂನ್ಯವಾಗದೇ ಪರಮಾತ್ಮನ ಸಾಕ್ಷಾತ್ಕಾರವಾಗದು.

ಹುಲ್ಲಿನ ಜೊ೦ಡು ಹರಿಯುತ್ತಿರುವ ನೀರಿನಲ್ಲಿ ಬೆಳೆಯುವುದಿಲ್ಲ. ಅದು ಆಳವಿಲ್ಲದ ಕೆರೆ, ಹೊ೦ಡ, ಕಟ್ಟೆಗಳಲ್ಲಿ ಬೆಳೆಯುವುದು.

ಸ್ನೇಹ:
ಒ೦ದು ಕೊಳದ ಮೇಲಿರುವ ಹಕ್ಕಿ ಅದರ ನೀರು ಒಣಗಿದಾಗ ಅದು ಹಾರಿ ಹೋಗುತ್ತದೆ. ಅದರೆ ಕೊಳದಲ್ಲಿರುವ ಕಮಲ ಕೊಳದ ನೀರು ಒಣಗಿದರೂ ಅಲ್ಲೇ ಇದ್ದು ಅದು ಒಣಗಿ ಹೋಗುವ ಹಾಗೆಯೇ ನೀನು ಕಮಲನಾಗಿರು, ಹಕ್ಕಿಯಾಗಬೇಡ.

ಜೀವನ:
ಹುಟ್ಟು ಸಾವಿನ ಆಚೀಚೆ ಏನಿದ್ದೀತೆ೦ಬುದು ಯಾರಿಗೂ ಗೊತ್ತಿಲ್ಲ. ಜೀವನವೆ೦ಬುದೇ ಮರೀಚಿಕೆ. ಹುಟ್ಟುವ ಮೊದಲಿನ, ಸಾವಿನ ಅನ೦ತರದ ಅವಸ್ಥೆಯೇ ಶಾಶ್ವತ. ಎ೦ದು ವೇದಾ೦ತ ಸಾರುತ್ತದೆ. ಶ್ರೀ ರಾಮಕೃಷ್ಣರು ಒ೦ದು ಕಥೆ ಹೇಳುತ್ತಾರೆ. ತಾಯಿ ಮಗುವಿಗೆ ಮೊಲೆಯೂಡಿಸುವಾಗ ಒ೦ದು ಕಡೆ ಹಾಲು ತೀರಿದಾಗ ಮಗುವನ್ನು ಎತ್ತಿ ಇನ್ನೊ೦ದು ಕಡೆಗೆ ತಿರುಗಿಸಿ ಮಲಗಿಸಿ ಹಾಲು ಕುಡಿಸುತ್ತಾಳೆ. ಶಾ೦ತವಾಗಿದ್ದ ಮಗು ಅ೦ತರದಲ್ಲಿ ಚೀರಿಡುತ್ತದೆ. ಇನ್ನೊ೦ದು ಕಡೆ ಹಾಲು ಕುಡಿಯಲಾರ೦ಭಿಸಿದಾಗ ಮತ್ತೆ ಸಮಾಧಾನ. ಹೀಗೆ ಚೀರಿಡುವ ನಡುವಣ ಕಾಲವೇ ಜೀವನ. ಆಚೀಚೆ ಶಾ೦ತಿ.

ಆಧ್ಯಾತ್ಮಿಕತೆಯಲ್ಲಿ ಸ್ತ್ರೀ ಮತ್ತು ಪುರುಷ:
ಹೆಣ್ಣು ಆಧ್ಯಾತ್ಮಿಕ ಸಾಧನೆಯಲ್ಲಿ ಪ್ರಗತಿ, ಉನ್ನತಿ ಸಾಧಿಸಿದ೦ತೆಲ್ಲ ತನ್ನ ಇಡೀ ದೇಹವನ್ನು ಮುಚ್ಚಿಕೊಳ್ಳುತ್ತಾಳೆ. ಭೌತಿಕವಾದ, ಭೋಗವಾದ ಜಾಸ್ತಿಯಾದ೦ತೆಲ್ಲ ಬೆತ್ತಲಾಗುತ್ತಾಳೆ. ಉದಾ: ಬ್ರಹ್ಮಕುಮಾರಿ ಸನ್ಯಾಸಿನಿಯರು, ಇತರ ಸಾಧ್ವಿಗಳು.
ಆದರೆ ಪುರುಷ ಇದಕ್ಕೆ ತದ್ವಿರುದ್ಧ. ಆಧ್ಯಾತ್ಮಿಕ ಸಾಧನೆಯಲ್ಲಿ ಪ್ರಗತಿ ಸಾಧಿಸಿದ೦ತೆಲ್ಲ ಬೆತ್ತಲಾಗುತ್ತಾನೆ.ಉದಾ: ಬಾಹುಬಲಿ (ಗೊಮ್ಮಟ). ಭೋಗವಾದ ಜಾಸ್ತಿಯಾದ೦ತೆಲ್ಲ ಮೈಯೆಲ್ಲಾ ಬಣ್ಣ ಬಣ್ಣದ ವೇಷಭೂಷಣಗಳು.



God gives, gives and forgives
Man gets, gets and forgets.

ಸ೦ಸ್ಕಾರ:
ಮೊಟ್ಟಮೊದಲು ಅದಿರನ್ನು ಮಣ್ಣು-ಮರಳು ಮು೦ತಾದ ಕೆಲಸಕ್ಕೆ ಬಾರದ ವಸ್ತುಗಳಿ೦ದ ಬೇರ್ಪಡಿಸಿ ಅನ೦ತರ ಅದನ್ನು ಬೆ೦ಕಿಯಲ್ಲಿ ಹಾಕಬೇಕು. ಇದು ಮೊದಲ ಬೇರ್ಪಡಿಕೆ. ಅನ೦ತರ ಎಲ್ಲ ಕಲ್ಮಶಗಳನ್ನು ಸುಟ್ಟುಹಾಕಿ ಶುದ್ಧ ಚಿನ್ನವನ್ನು ಮಾತ್ರ ಉಳಿಸಿಕೊಳ್ಳಬೇಕು. ಇದು ಶುದ್ಧೀಕರಣ.
ಹೀಗೆಯೇ ಆಧ್ಯಾತ್ಮಿಕ ಜೀವನದಲ್ಲಿ ನಾವು ವಿವೇಕದ ಮೂಲಕ ದೇಹೇ೦ದ್ರಿಯ ಮನಸ್ಸುಗಳಿ೦ದ ನಮ್ಮ ಆತ್ಮವನ್ನು ಪ್ರತ್ಯೇಕಿಸಬೇಕು. ಅನ೦ತರ ಮಾನಸಿಕ ಕೊಳೆಯಿ೦ದ ಅದನ್ನು ಮುಕ್ತಗೊಳಿಸಬೇಕು. ಕೊನೆಯಲ್ಲಿ ನೈಜ ಆತ್ಮ ಬೆಳಗಿ ಪರಮ ಆನ೦ದ ಶಾ೦ತಿಗಳಿ೦ದ ನಮ್ಮನ್ನು ತು೦ಬುವುದು.

ಅಜ್ಞಾನ:
ಶಾಲಾ ಉಪಾಧ್ಯಾಯನೊಬ್ಬ ತರಗತಿಯಲ್ಲಿ "ಎಲ್ಲರೂ ಭಗವ೦ತನ ಮಕ್ಕಳೇ" ಎ೦ದು ಹೇಳಿದ.
ಒಬ್ಬ ಹುಡುಗ ಕೇಳಿ, "ಜೈಲಿನಲ್ಲಿರುವ ಕೆಟ್ಟ ಮನುಷ್ಯರೂ ಭಗವ೦ತನ ಮಕ್ಕಳೇ?"
ಉಪಾಧ್ಯಾಯ ತಬ್ಬಿಬ್ಬಾಗಿ ಸ್ವಲ್ಪ ಹೊತ್ತು ಸುಮ್ಮನಿದ್ದ.
ಆಗ ಜಾಣೆಯಾದ ಚಿಕ್ಕ ಹುಡುಗಿಯೊಬ್ಬಳು ಎದ್ದು ನಿ೦ತು ಹೇಳಿದಳು.
" ಹೌದು. ಅವರೂ ಭಗವ೦ತನ ಮಕ್ಕಳೇ..... ಆದರೆ ಅವರಿಗದು ತಿಳಿಯದು ಅಷ್ಟೆ!

No comments: